ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ಗ್ರೇಟ್ ವಾಲ್ ಆಫ್ ಚೀನಾ, ಪ್ರಶ್ನೆಯಲ್ಲೇ ಉತ್ತರವನ್ನು ಇಟ್ಟುಕೊಂಡಿದೆ. ಆದರೆ ಇದನ್ನು ಗುರುತಿಸದೆ ಹೋದ ಯುವತಿಯ ಬುದ್ದಿವಂತಿಕೆಯನ್ನು ಟ್ರೂಲ್ ಮಾಡಲಾಗುತ್ತಿದೆ. ಈಕೆ ಪ್ರಪಂಚದ ಎಂಟನೇ ಅದ್ಭುತ ಎಂದು ಕರೆಯಲು ಶುರು ಮಾಡಿದ್ದಾರೆ.
ನಟ ರಮೇಶ್ ಅರವಿಂದ್ ನಡೆಸಿಕೊಡುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಬಗ್ಗೆ ತಿಳಿದರಬಹುದು. ಇದರಲ್ಲಿ ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ನೀವು ಕೋಟಿ ರೂಪಾಯಿಗಳನ್ನು ಗೆಲ್ಲಬಹುದಾಗಿದೆ. ಇದೇ ಮಾದರಿಯಲ್ಲಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅನೇಕ ಭಾಷೆಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹೀಗೆ ಟರ್ಕಿಯಲ್ಲಿ ನಡೆಯುತ್ತಿರುವ ಹು ವಾಟ್ ಟು ಬಿಯ ಮಿಲಿನಿಯರ್ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಯೊಂದು ವೈರಲ್ ಆಗಿದೆ.
ಟರ್ಕಿ ಭಾಷೆಯ ಹು ವಾಟ್ ಟು ಬಿಯ ಮಿಲಿನಿಯರ್ ಕಾರ್ಯಕ್ರಮದಲ್ಲಿ 26 ವರ್ಷದ ಯುವತಿಯೊಬ್ಬಳು ಗ್ರೇಟ್ ವಾಲ್ ಆಫ್ ಚೀನಾ ಎಲ್ಲಿದೆ..? ಎಂಬ ಪ್ರಶ್ನೆಗಳಿಗೆ ಎರಡು ಲೈಫ್ ಲೈನ್ಗಳನ್ನು ಬಳಸಿಕೊಂಡು ಸರಿಯಾದ ಉತ್ತರವನ್ನು ಹೇಳದೆ ವಿಶ್ವದ 8ನೇ ಅದ್ಬುತ ಎಂದು ಜಾಗತಿಕವಾಗಿ ಟ್ರೂಲ್ ಆಗುತ್ತಿದ್ದಾಳೆ. ಪ್ರಶ್ನೆಯಲ್ಲಿಯೇ ಉತ್ತರ ಇದ್ದರೂ ಸಹ, ಸರಿಯಾಗಿ ಉತ್ತರಿಸಿದರೆ ಸೋಶಿಯಲ್ ಮೀಡಿಯಾಗಳಲ್ಲಿ ಟ್ರೂಲ್ ಆಗುತ್ತಿದ್ದಾಳೆ.