Back
Home » ಇತ್ತೀಚಿನ
'ಪಾರ್ಕರ್' ನೌಕೆ ಸೂರ್ಯನ ಹತ್ತಿರ ತಲುಪಲು ಎಷ್ಟು ವರ್ಷ ಬೇಕು ಗೊತ್ತಾ?
Gizbot | 17th Aug, 2018 09:05 AM
 • ಪಾರ್ಕರ್ ಎಂಬ ಹೆಸರೇಕೆ?

  ಸೂರ್ಯನ ಮೇಲ್ಮೈ ವಾತಾವರಣದ ಸೌರಮಾರುತಗಳನ್ನು ಚಿತ್ರೀಕರಿಸಲು, ಇಲೆಕ್ಟ್ರಿಕ್ ಹಾಗೂ ಮ್ಯಾಗ್ನೆಟಿಕ್, ಪ್ಲಾಸ್ಮಾ, ಇನ್ನಿತರ ವಸ್ತು, ಕಣಗಳನ್ನು ಅಧ್ಯಯನ ನಡೆಸಲು ಹೊರಟಿರುವ ಈ ನೌಕೆಗೆ ವಿಜ್ಞಾನಿ ಯೂಜಿನ್ ಪಾರ್ಕರ್ ಗೌರವಾರ್ಥವಾಗಿ ಅವರ ಹೆಸರನ್ನು ಇಡಲಾಗಿದೆ. ಸೂರ್ಯನ ವಾತಾವರಣದಲ್ಲಿ ಸದಾ ಕಾಲ ಪ್ರಚಂಡ ಬಿರುಗಾಳಿ ಇರುತ್ತದೆ ಎಂದು ಈಜೀನ್ ಪಾರ್ಕರ್ ಎಂಬ ವಿಜ್ಞಾನಿ ಹೇಳಿದ್ದರಿಂದಾಗಿ, ಈ ಗಗನ ನೌಕೆಗೆ ಪಾರ್ಕರ್ ಎಂಬ ಹೆಸರು ಬಂದಿದೆ.


 • ಅತ್ಯಂತ ಹತ್ತಿರಕ್ಕೆ ನೌಕೆ!

  ಈ ಹಿಂದೆ ಹಲವು ಬಾರಿ ಸೂರ್ಯನಲ್ಲಿಗೆ ನಾಸಾ ಶೋಧ ನೌಕೆಗಳನ್ನು ಹಾರಿ ಬಿಟ್ಟಿದೆ. ಆದರೆ, ಇದೇ ಮೊದಲ ಬಾರಿಗೆ ಸೂರ್ಯನಿಗೆ ಅತ್ಯಂತ ಹತ್ತಿರಕ್ಕೆ ಹೋಗುತ್ತಿರುವ ನೌಕೆ ಇದಾಗಿದೆ. ಪಾರ್ಕರ್​ ಉಪಗ್ರಹ ಸೂರ್ಯನಿಂದ ಸುಮಾರು 7 ಲಕ್ಷ ಕಿಲೋಮೀಟರ್​ ಹತ್ತಿರದವರೆಗೆ ಹಾರಲಿದೆ ಎಂದು ನಾಸಾ ತಿಳಿಸಿದೆ. ಈ ನೌಕೆಯು ಸೂರ್ಯನ ಸುತ್ತ ಇರುವ ಕರೋನಾ ವಲಯವನ್ನು ಸುಮಾರು 24 ಬಾರಿ ಹಾದು ಹೋಗುವ ಪಾರ್ಕರ್ ನೌಕೆ


 • ನೌಕೆಯ ಮುಖ್ಯ ಗುರಿ ಏನು?

  ಸೂರ್ಯನ ಮೇಲ್ಮೈನಲ್ಲಿ ಇದ್ದಕ್ಕಿದ್ದಂತೆ ಉಷ್ಣಾಂಶದಲ್ಲಿ ಏರಿಳಿತ ಆಗುವುದೇಕೆ ಎಂಬುದನ್ನು ತಿಳಿಯುವ ಮುಖ್ಯ ಗುರಿಯನ್ನು ಈ 'ಪಾರ್ಕರ್​ ಸೋಲಾರ್​ ಪ್ರೋಬ್' ನೌಕೆ ಹೊಂದಿದೆ. ಆಗಾಗ ಬೀಸುವ ಸೌರ ಮಾರುತಗಳ ಕುರಿತು ಸಹ ಅಧ್ಯಯನ ನಡೆಸಲಿದೆ. ಜತೆಗೆ ಶಕ್ತಿಯ ಕಣಗಳು ಚಲಿಸೋಕೆ ಕಾರಣವಾಗುವ ಅಂಶಗಳು ಯಾವುವು ಎಂಬ ಮಾಹಿತಿ ಕಲೆ ಹಾಕಲಿದೆ.


 • ಹೇಗಿದೆ ನೌಕೆ?

  ಫ್ಲೋರಿಡಾದ ಕೇಪ್​ ಕಾರ್ನವೆರಲ್​ನಿಂದ ಡೆಲ್ಟಾ 4 ನೌಕೆಯ ಮೂಲಕ ಹಾರುತ್ತಿರುವ 'ಪಾರ್ಕರ್​ ಸೋಲಾರ್​ ಪ್ರೋಬ್' ಒಂದು ಕಾರಿನ ಗಾತ್ರದ ಶೋಧ ನೌಕೆಯಾಗಿದೆ. ಈ ಉಪಗ್ರಹದಲ್ಲಿ ಫೀಲ್ಡ್ಸ್​, ಈಸೋಸ್​, ವಿಸ್ಪರ್​, ಸ್ವೀಪ್​, ಹೀಲಿಯೋಸ್ಪ್​​ ಎಂಬ ನಾನಾ ಉಪಕರಣಗಳನ್ನು ಅಳವಡಿಸಲಾಗಿದ್ದು, ಅವೆಲ್ಲವನ್ನು ತನ್ನ ಜತೆ ಒಯ್ಯಲಿದೆ.


 • ಪವರ್ ಹೀಟ್ ಶೀಲ್ಡ್ ಹೊದಿಕೆ!

  ಸೂರ್ಯನ ಅಪಾರ ಶಾಖ ಹಾಗೂ ರೇಡಿಯೇಷನ್​ನಿಂದ ರಕ್ಷಣೆ ನೀಡುವ ಸಲುವಾಗಿ ನೌಕೆಗೆ ಅಲ್ಟ್ರಾ ಪವರ್ ಹೀಟ್ ಶೀಲ್ಡ್ ಅಳವಡಿಕೆ ಮಾಡಲಾಗಿದೆ. ಇದರಿಂದ . ಶೀಲ್ಡ್ ಕೇವಲ 4.5 ಇಂಚು ದಪ್ಪವಾಗಿದೆ. ಎಷ್ಟೇ ಶಾಖ ಇದ್ದರೂ ನೌಕೆಯ ಒಳಭಾಗದಲ್ಲಿ 29 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಲಿದೆ ಎಂದು ನಾಸಾ ಮಾಹಿತಿ ನೀಡಿದೆ.


 • ಫೀಲ್ಡ್ಸ್ ಮತ್ತು ಈಸೋಸ್​

  ನೌಕೆ ಹೊತ್ತಿರುವ ನಾನಾ ಉಪಕರಣಗಳಲ್ಲಿ ಈಸೋಸ್,​ ಶಕ್ತಿಶಾಲಿ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಇತರ ಭಾರದ ಅಯಾನ್​ಗಳ ಕುರಿತು ಅಧ್ಯಯನ ನಡೆಸಲಿದ್ದರೆ, ಫೀಲ್ಡ್ಸ್​​ ಉಪಕರಣ ಸೂರ್ಯನ ವಿದ್ಯುತ್​ ವಲಯ, ಗುರುತ್ವಾಕರ್ಷಣ ಶಕ್ತಿ, ರೇಡಿಯೋ ತರಂಗಗಳ ಕುರಿತು ಸಂಶೋಧನೆ ನಡೆಸಲಿದೆ.


 • ಕರೋನಾ ಸೆರೆಹಿಡಿಯಲಿದೆ.

  ಫೀಲ್ಡ್ಸ್ ಮತ್ತು ಈಸೋಸ್​ ಕಾರ್ಯಗಳು ಮೇಲೆ ತಿಳಿಸಿದಂತಿದ್ದರೆ, ಸೂರ್ಯನ ಮೇಲ್ಮೈ ಅಂದರೆ ಕರೋನಾ ಮತ್ತು ಒಳ ವಾತಾವರಣದ ಚಿತ್ರಗಳನ್ನು ಆಪ್ಟಿಕಲ್​ ಇಮೇಜ್​ ಸೆನ್ಸಾರ್​ ಸೆರೆ ಹಿಡಿಯಲಿದೆ.ಸ್ವೀಪ್​ ಎಲೆಕ್ಟ್ರಾನ್​ಗಳು, ಪ್ರೋಟಾನ್​ಗಳು ಮತ್ತು ಹೀಲಿಯಂ ಅಯಾನ್​ಗಳ ಸಂಖ್ಯೆಯನ್ನು ಲೆಕ್ಕ ಹಾಕಿ ಅವುಗಳ ಸಾಂದ್ರತೆ ಮತ್ತು ಶಾಖದ ಕುರಿತು ಮಾಹಿತಿ ನೀಡಲಿದೆ.
ಸೂರ್ಯನಿಗೆ ಟಾರ್ಚ್ ಹಾಕಲು ಹೊರಟಿರುವ ಅಮೆರಿಕಾದ ನಾಸಾ ನಿರ್ಮಿತ ಗಗನ ನೌಕೆ 'ಪಾರ್ಕರ್' ಇದೇ ಭಾನುವಾರದಂದು ಯಶಸ್ವಿಯಾಗಿ ಮುನ್ನಡೆದಿದೆ. ತನ್ನ ಪಯಣ ಆರಂಭಿಸಿರುವ ಈ ನೌಕೆಯು ಸೂರ್ಯನ ಹೊರ ವಲಯವನ್ನು, ಅಲ್ಲಿನ ವಾತಾವರಣ ಮತ್ತು ಇತರ ವಿದ್ಯಮಾನಗಳ ಕುರಿತು ಅಧ್ಯಯನ ನಡೆಸಿ ಭೂಮಿಗೆ ಮಾಹಿತಿಗಳನ್ನು ಕಳುಹಿಸಿಕೊಡಲಿದೆ.

ಆದರೆ, ಇದೆಲ್ಲಾ ಸಾಧ್ಯವಾಗಬೇಕು ಎಂದರೆ ವಿಜ್ಞಾನಿಗಳು ಅಂದುಕೊಂಡತೆ ಎಲ್ಲವೂ ನಡೆಯಬೇಕು. ಹಾಗೆ, ವಿಜ್ಞಾನಿ ಅಂದುಕೊಂಡಂತೆ ನಡೆಯಬೇಕು ಎಂದರೆ ತನ್ನ ಪಯಣ ಆರಂಭಿಸಿರುವ ಈ ನೌಕೆ ಯಾವುದೇ ತೊಂದರೆ ಇಲ್ಲದೆ 2024ರ ವರೆಗೂ ಚಲಿಸುತ್ತಿರಬೇಕು. ಹೌದು, ನೀವು ಓದಿದ್ದು ನಿಜ.! ಪಾರ್ಕರ್' ಸೂರ್ಯನ ಹತ್ತಿರ ತಲುಪಲು ಇನ್ನು 7 ವರ್ಷಗಳು ಬೇಕಂತೆ.!

ಹೌದು, ಸುಮಾರು 1.5 ಬಿಲಿಯ ಡಾಲರ್ ವೆಚ್ಚದ ಈ ಪಾರ್ಕರ್ ನೌಕೆ ಇದನ್ನು ಸಾಧಿಸುವ ಶಕ್ತಿಯನ್ನು ಹೊಂದಿದೆ ಎಂದು ವಿಜ್ಞಾನಿಗಳು ವಿಶ್ವಾಸ ಹೊಂದಿದ್ದಾರೆ. ಹೊರಗಿನ ಬಿಸಿ ಎಷ್ಟೇ ಇರಲಿ, ನೌಕೆಯ ಒಳಗಿನ ಬಿಸಿಯನ್ನು 29 ಡಿಗ್ರಿ ಸೆಲ್ಶಿಯಸ್‌ನಲ್ಲಿ ಕಾಯ್ದುಕೊಳ್ಳುವ ಶಕ್ತಿ ಈ ನೌಕೆಗಿದೆ. ಹಾಗಾದರೆ, ಈ ನೌಕೆಯ ಮತ್ತಷ್ಟು ವಿಶೇಷತೆಗಳೇನು ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್