Back
Home » ಇತ್ತೀಚಿನ
ಕೇರಳ ಪ್ರವಾಹ ಸಂತ್ರಸ್ತರಿಗೆ ಆನ್‌ಲೈನ್‌ ಮೂಲಕ ನೆರವಿನ ಹಸ್ತ ಚಾಚಿ..!
Gizbot | 17th Aug, 2018 12:31 PM
 • ಪೇಟಿಎಂನಲ್ಲಿ ನೇರವಾಗಿ ಸಹಾಯ ಮಾಡಿ

  ಭಾರತದ ಪ್ರಮುಖ ಮೊಬೈಲ್‌ ಬ್ಯಾಂಕಿಂಗ್ ಹಾಗೂ ಯುಪಿಐ ಪೇಮೆಂಟ್ ಸೇವೆ ನೀಡುತ್ತಿರುವ 99 ಕಮ್ಯೂನಿಕೇಷನ್ ಮಾಲೀಕತ್ವದ ಪೇಟಿಎಂ ಆಪ್‌ನಲ್ಲಿ ಪ್ರತ್ಯೇಕವಾದ ಐಕಾನ್‌ ನೀಡಿದ್ದು, ಕೇರಳ ಪ್ರವಾಹ ಪೀಡಿತರಿಗೆ ನೇರವಾಗಿ ನೆರವಾಗಲು ವೇದಿಕೆಯನ್ನು ಕಲ್ಪಿಸಿದೆ. ಇದರ ಮೂಲಕವು ನೀವು ನೇರವಾಗಿ ಸಹಾಯ ಮಾಡಬಹುದು.


 • ಪೇಟಿಎಂನಲ್ಲಿ ಹೀಗೆ ನೆರವಾಗಿ

  ನಿಮ್ಮದು ಅಪ್‌ಡೇಟೆಡ್‌ ಪೇಟಿಎಂ ಆಪ್‌ ಆಗಿದ್ದರೆ ಡೋನೆಟ್‌ ಕೇರಳ ಪ್ಲೂಡ್‌ ಎಂಬ ಆಯ್ಕೆ ನಿಮಗೆ ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿ. ಅಲ್ಲಿಂದ ನೇರವಾಗಿ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಂಪರ್ಕ ಕಲ್ಪಿಸುವ ವಿಂಡೋ ನಿಮಗೆ ದೊರೆಯುತ್ತದೆ. ನಿಮ್ಮ ಹೆಸರು ನಮೂದಿಸಿ ನೀವು ಸಹಾಯ ಮಾಡಬೇಕಾದಷ್ಟು ಹಣವನ್ನು ನಮೂದಿಸಿ ಮುಂದುವರೆ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನಿಮ್ಮ ಹಣ ಸಂದಾಯವಾಗುತ್ತದೆ.


 • ಅಮೆಜಾನ್‌ನಲ್ಲೂ ಇದೆ ವೇದಿಕೆ

  ಎಲ್ಲರ ಬಳಿಯೂ ಅಮೆಜಾನ್‌ ಆಪ್ ಇದ್ದೇ ಇರುತ್ತದೆ. ಅದರಲ್ಲಿಯೂ ಕೇರಳ ಪ್ರವಾಹ ಪೀಡಿತರಿಗೆ ಸಹಾಯ ಮಾಡಲು ಅಮೆಜಾನ್ ವೇದಿಕೆ ಕಲ್ಪಿಸಿದ್ದು, ಕೇರಳಕ್ಕೆ ನಿಮ್ಮ ಸಹಾಯದ ಅಗತ್ಯವಿದೆ ಎಂಬ ಬ್ಯಾನರ್‌ ವಿಂಡೋ ನೀಡಿದ್ದು, ಅಲ್ಲಿ ಕ್ಲಿಕ್ ಮಾಡಿ ನೀವು ಕೇರಳದ ಜನತೆಗೆ ಸಹಾಯ ಮಾಡಬಹುದು. ಅಮೆಜಾನ್‌ ರಾಜ್ಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಜತೆ ಸಂಪರ್ಕದಲ್ಲಿದ್ದು, ನಿಮ್ಮ ಸಹಾಯ ಅಲ್ಲಿಗೆ ನೇರವಾಗಿ ತಲುಪುತ್ತದೆ.


 • ಅಮೆಜಾನ್‌ನಲ್ಲಿ ಹೇಗೆ ನೆರವಾಗುವುದು..?

  ಅಮೆಜಾನ್‌ ಕೆಲವೊಂದು ಸರ್ಕಾರೇತರ ಸಂಸ್ಥೆಗಳ ಜತೆಗೂಡಿ ಈ ಅಭಿಯಾನ ಆರಂಭಿಸಿದೆ. ಹ್ಯಾಬಿಟಾಟ್ ಫಾರ್ ಹ್ಯೂಮಾನಿಟಿ ಇಂಡಿಯಾ, ವರ್ಲ್ಡ್‌ ವಿಷನ್ ಇಂಡಿಯಾ ಮತ್ತು ಗೂಂಜ್‌ ಎಂಬ ಎನ್‌ಜಿಒಗಳು ಅಮೆಜಾನ್‌ನಲ್ಲಿವೆ. ನಿಮಗೆ ಬೇಕಾದ ಎನ್‌ಜಿಒ ಮೇಲೆ ಕ್ಲಿಕ್ ಮಾಡಿ, ಅಲ್ಲಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿ, ಕಾರ್ಟ್‌ಗೆ ಸೇರಿಸಿ, ನಂತರ ವಿಳಾಸ ನಮೂದಿಸಿ, ಪೇಮೆಂಟ್‌ ಮಾಡಿ. ಆ ಉತ್ಪನ್ನಗಳು ಕೇರಳ ಪ್ರವಾಹ ಸಂತ್ರಸ್ತರಿಗೆ ತಲುಪುತ್ತವೆ.


 • ವೆಬ್‌ಸೈಟ್‌ ಕೂಡ ಇದೆ

  ಕೇರಳ ಸರ್ಕಾರ keralarescue.in ಎಂಬ ವೆಬ್‌ಸೈಟ್‌ ಆರಂಭಿಸಿದ್ದು, ಅಲ್ಲಿಂದಲೂ ನೀವು ಕೇರಳದ ಜನತೆಗೆ ನೆರವಿನ ಹಸ್ತ ಚಾಚಬಹುದು. ಅಲ್ಲಿನ ಸಹಾಯಕ್ಕಾಗಿ ಮನವಿ, ಕೊಡುಗೆ ನೀಡುವುದು, ಜಿಲ್ಲಾ ಅಗತ್ಯತೆ ಹಾಗೂ ಸಂಗ್ರಹ ಕೇಂದ್ರಗಳು, ಸ್ವಯಂಸೇವಕರಾಗಿ ನೊಂದಣಿ, ಮ್ಯಾಪ್‌ಗೆ ಮನವಿ, ಸಂಪರ್ಕ ಮಾಹಿತಿ, ನೊಂದಣಿಯಾದ ಮನವಿಗಳ ಆಯ್ಕೆಯಿದ್ದು, ನಿಮಗೆ ಇಷ್ಟವಾದ ಆಯ್ಕೆಯನ್ನು ಕ್ಲಿಕ್ ಮಾಡಿ ಕೇರಳ ಜನತೆಗೆ ನೆರವಿನ ಹಸ್ತ ಚಾಚಿ.


 • ಹೇಗೆ ಸಹಾಯ ಮಾಡುವುದು..?

  ಕೇರಳ ರೆಸ್ಕ್ಯೂ ವೆಬ್‌ಸೈಟ್‌ನಲ್ಲಿ ಟು ಕಾಂಟ್ರಿಬ್ಯೂಟ್‌ ಆಯ್ಕೆಯನ್ನು ಕ್ಲಿಕ್ ಮಾಡಿ, ಅಲ್ಲಿ ನೀವು ನೆರವನ್ನು ನೀಡಬಹುದು. ಅಲ್ಲಿ ನಿಮಗೆ ಸಹಾಯ ಮಾಡುವ ವಿವರಣೆ ಕುರಿತು ಫಾರ್ಮ್‌ ಇದ್ದು, ವಿವರಗಳನ್ನು ನಮೂದಿಸಿದರೆ ಸಾಕು. ಅಥವಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಆನ್‌ಲೈನ್‌ನಲ್ಲಿ ಡೋನೆಟ್‌ ಮಾಡುವ ಆಯ್ಕೆಯಿದ್ದು, ಕ್ಲಿಕ್ ಮಾಡಿ ನೀವು ನೆರವಿನ ಹಸ್ತ ಚಾಚಬಹುದು.


 • ಆನ್‌ಲೈನ್‌ ಮೂಲಕವು ನೆರವಾಗಬಹುದು..!

  ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೇರವಾಗಿಯೇ ದಾನ ಮಾಡುವ ಆಯ್ಕೆಯಿದ್ದು, ಆನ್‌ಲೈನ್‌ ಪೇಮೆಂಟ್‌ ಆಪ್‌ಗಳ ಮೂಲಕ ನೆರವು ನೀಡಬಹುದು. ಖಾತೆ ವಿವರಗಳು ಹೀಗಿವೆ..
  Account number : 67319948232
  Bank: SBI
  Branch: City Branch, TVM
  IFS Code: SBIN0070028
  ಈ ಮೂಲಕ ನೀವು ಕೇರಳದ ಸಂತ್ರಸ್ತರಿಗೆ ನೆರವಾಗಬಹುದು.
1924ರ ನಂತರ ಬಂದಿರುವ ಭೀಕರ ನೆರೆಯಿಂದ ತತ್ತರಿಸಿರುವ ಕೇರಳಕ್ಕೆ ದೇಶಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದೆ. ಹಲವು ಸ್ವಯಂ ಸೇವಕರು, ಸಂಘಟನೆಗಳು, ನೌಕಾ ಪಡೆ, ವಿಪತ್ತು ನಿರ್ವಹಣಾ ದಳ ಎಲ್ಲವೂ ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡು ಪ್ರವಾಹ ಪೀಡಿತರ ನೆರವಿಗೆ ಧಾವಿಸಿದ್ದಾರೆ. ಹೀಗಾಗಲೇ ಹಲವು ಕಡೆ ಗಂಜಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಅದರಂತೆ ಕೇರಳದ ಪ್ರವಾಹ ಪೀಡಿತರಿಗೆ ಐಟಿ ಜಗತ್ತು ಕೂಡ ಕಂಬನಿ ಮಿಡಿಯುತ್ತಿದ್ದು, ಪೇಟಿಎಂ, ಅಮೆಜಾನ್‌ಗಳು ಕೇರಳ ಜನರ ಸಹಾಯಕ್ಕೆ ಧಾವಿಸಿವೆ. ಎರಡು ವೇದಿಕೆಗಳಲ್ಲಿ ಪ್ರತ್ಯೇಕವಾಗಿ ಕೇರಳ ಪ್ರವಾಹಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಹಾಗೂ ಸಹಾಯ ಮಾಡುವ ಐಕಾನ್‌ಗಳನ್ನು ನೀಡಿ ಪ್ರವಾಹ ಪೀಡಿತರಿಗೆ ನೆರವಾಗಲೂ ಜನರ ಮನವೊಲಿಸುತ್ತಿವೆ.

   
 
ಹೆಲ್ತ್