Back
Home » ಇತ್ತೀಚಿನ
ಸ್ಯಾಮ್‌ಸಂಗ್ ಪ್ರಮೋಷನ್ ನಂಬಿ ಫೋನ್ ಖರೀದಿಸಿದರೆ ಉಂಡೆ ನಾಮ!!
Gizbot | 17th Aug, 2018 03:53 PM
 • ಏನಿದು ವೈರಲ್ ಸುದ್ದಿ?

  ಮೊದಲೇ ಹೇಳಿದಂತೆ 2018 ರಲ್ಲಿ ಬಿಡುಗಡೆಯಾಗಿರುವ ಗ್ಯಾಲಾಕ್ಸಿ A8 ಸ್ಮಾರ್ಟ್‌ಫೋನ್ ಜೊತೆಗೆ 2015 ರಲ್ಲಿಯೇ ಚಿತ್ರಿಸಿದ್ದ ಚಿತ್ರವೊಂದನ್ನು ಪ್ರಕಟಿಸಿದೆ. ಆ ಚಿತ್ರವನ್ನು ನೋಡಿದಾಕ್ಷಣ ಗ್ಯಾಲಾಕ್ಸಿ A8 ಸ್ಮಾರ್ಟ್‌ಫೋನಿನಲ್ಲಿಯೇ ಆ ಚಿತ್ರವನ್ನು ತೆಗೆದಿರುವ ಭಾವನೆ ಮೂಡುತ್ತದೆ. ಆದರೆ, ಆ ಚಿತ್ರ ಮೂರು ವರ್ಷದ ಹಿಂದೆ ಚಿತ್ರಿಸಿದ ಹಳೆಯ ಚಿತ್ರವಾಗಿದೆ.!


 • ಟ್ವಿಟ್ಟಿಗರಿಂದ ಕ್ಲಾಸ್!

  ಗ್ಯಾಲಾಕ್ಸಿ A8 ಸ್ಮಾರ್ಟ್‌ಫೋನ್ ಜೊತೆಗೆ 2015 ರಲ್ಲಿಯೇ ಚಿತ್ರಿಸಿದ್ದ ಸೆಲ್ಫಿ ಚಿತ್ರವನ್ನು ಸ್ಯಾಮ್‌ಸಂಗ್ ಪ್ರಕಟಿಸಿದ ನಂತರ ಟ್ವಿಟ್ಟಿಗರು ಸ್ಯಾಮ್‌ಸಂಗ್ ಕಂಪೆನಿಗೆ ಪಾಠ ಕಲಿಸಿದ್ದಾರೆ. ಈಗ ಪೋಸ್ಟ್ ಮಾಡಿರುವ ಚಿತ್ರ 2015 ರಲ್ಲಿ ಚಿತ್ರಿಸಿದ ಚಿತ್ರ ಎಂಬುದನ್ನು ಟ್ವಿಟ್ಟಿಗರು ಸ್ಯಾಮ್‌ಸಂಗ್ ಕಂಪೆನಿಯ ಗಮನಕ್ಕೆ ತಂದ ನಂತರ ಕಂಪೆನಿ ಸಬೂಬು ಹೇಳಲು ಮುಂದಾಗಿದೆ.


 • ಸ್ಯಾಮ್‌ಸಂಗ್ ಹೇಳಿದ್ದೇನು?

  ನಮ್ಮ ಸ್ಮಾರ್ಟ್‌ಪೋನ್‌ಗಳಿಂದ ಹಲವು ಚಿತ್ರಗಳನ್ನು ಚಿತ್ರಿಸಿದ್ದೇವೆ. ಆದರೆ, ಈ ಚಿತ್ರವನ್ನು ಬಳಸಿರುವುದು ನಮ್ಮನ್ನು ಇಷ್ಟಪಡುವ ಗ್ರಾಹಕರಿಗೆ ಮಾತ್ರ ಎಂದು ಹೇಳಿಕೊಂಡಿದೆ. ಒಂದು ರೀತಿಯಲ್ಲಿ ಸ್ಯಾಮ್‌ಸಂಗ್ ಹೇಳಿದ್ದನ್ನು ನಾವು ಒಪ್ಪಬಹುದಾದರೂ ಇದು ಜನರಿಗೆ ಮತ್ತು ಗ್ರಾಹಕರಿಗೆ ಸ್ಯಾಮ್‌ಸಂಗ್ ಮಾಡುತ್ತಿರುವ ಮೋಸವೇ ಆಗಿದೆ ಎಂದು ಹೇಳಬಹುದು.


 • ಕಣ್ಣು ಮುಚ್ಚಿ ಹಾಲುಕುಡಿದಂತೆ!

  ಒಂದು ಸ್ಮಾರ್ಟ್‌ಪೋನ್ ಬಗೆಗೆ ಜಾಹಿರಾತು ನೀಡುವಾಗ ಅದರ ಬಗ್ಗೆ ನೇರವಾಗಿ ಹೇಳಬೇಕು ಎಂಬುದು ಗ್ರಾಹಕರ ಅಪೇಕ್ಷೆ. ಆದರೆ, ಇಲ್ಲಿ ಮೊಬೈಲ್ ಖರೀದಿಸುವ ಗ್ರಾಹಕ ಆ ಚಿತ್ರವನ್ನು ಗ್ಯಾಲಾಕ್ಸಿ A8 ನಲ್ಲಿ ತೆಗೆದ ಸೆಲ್ಫಿ ಚಿತ್ರ ಎಂದುಕೊಳ್ಳಬೇಕೆ ಅಥವಾ ಸ್ಯಾಮ್‌ಸಂಗ್ ಕಂಪೆನಿಯ ವಿಶಿಷ್ಟ ಜಾಹಿರಾತು ಎಂದುಕೊಳ್ಳಬೇಕೆ ಎಂಬುದು ಈಗ ಪ್ರಶ್ನೆಯಾಗಿ ಉಳಿಸಿದೆ.


 • ಯಾರನ್ನು ನಂಬುವುದು ಹೇಳಿ?

  ಮತ್ತೆ ಮತ್ತೆ ಮೊಬೈಲ್ ಕಂಪೆನಿಗಳ ಬಣ್ಣ ಬಯಲಾಗುತ್ತಿದೆ ಎನ್ನಲು ಈ ಘಟನೆ ಸಾಕ್ಷಿಯಾಗಿದೆ. ಯಾವುದೇ ಒಂದು ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಆ ಕಂಪೆನಿಯನ್ನು ನಂಬಿ ಖರೀದಿಸುವ ಗ್ರಾಹಕರಿಗೆ ನಂಬಿಕೆ ದ್ರೋಹವನ್ನು ಎಸಗುವಂತಹ ಪ್ರಕರಣಗಳಲ್ಲಿ ಇದು ಕೂಡ ಎಂಬುದು ನನ್ನ ಅಭಿಪ್ರಾಯ. ಇದೆಲ್ಲಾ ಬಿಡಿ..ನಾವು ನಂಬಬೇಕಿರುವುದು ಯಾರನ್ನು ಹೇಳಿ.?


 • ಸರಿಯಾಗಿ ಕಾಲೇಜಿಗೆ ಹೋಗದೇ ಇಂಜಿನಿಯರಿಂಗ್ ಮುಗಿಸಿದರೆ ಹೀಗಾಗುತ್ತದೆಯಂತೆ!!

  ವಿಶ್ವದ ಅದ್ಬುತ ಮಾನವ ನಿರ್ಮಿತ ಕಟ್ಟಡಗಳ ಹಿಂದೆ ನಮ್ಮ ನಡುವೆಯೇ ಇರುವ ಸಿವಿಲ್ ಇಂಜಿನಿಯರ್‌ಗಳ ಶ್ರಮವಿರುತ್ತದೆ. ಬುರ್ಜ್ ಖಲಿಫಾದಂತಹ 1 ಕಿಲೋಮೀಟರ್ ಎತ್ತರದ ಕಟ್ಟಡವೇ ಆಗಲಿ ಅಥವಾ ಒಂದು ಚಿಕ್ಕದಾದ ಮನೆಯನ್ನೇ ಆಗಲಿ, ಅವುಗಳನ್ನು ನಿರ್ಮಿಸುವ ಸಿವಿಲ್ ಇಂಜಿನಿಯರ್‌ಗಳ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಬಹುದು.
  ದಿನಗಟ್ಟಲೇ ಕುಳಿತು ಒಂದು ಕಟ್ಟಡದ ವಿನ್ಯಾಸ ಹೇಗೆ ಮೂಡಿಬರಬೇಕು ಎಂದು ತಲೆಯಲ್ಲಿಯೇ ಸ್ಕೆಚ್ ಹಾಕುವ ಇಂತಹ ಕೆಲಸವನ್ನು ಒಂದು ಕಲಾತ್ಮಕತೆ ಎನ್ನಬಹುದು. ಆದರೆ, ಇಂತಹ ಕಲಾತ್ಮಕತೆಯನ್ನು ತೋರುವಲ್ಲಿ ಅವರು ಸೋತರೆ ಏನಾಗಬಹುದು ಎಂದು ವಿಶ್ವದಲ್ಲಿ ಕೆಲ ಇಂಜಿನಿಯರ್‌ಗಳು ಮಾಡಿರುವ ಅತ್ಯಂತ ತಮಾಷೆಯ ವಿಫಲತೆಗಳು ಸಾಕ್ಷಿಯಾಗುತ್ತವೆ.
  ಸರಿಯಾಗಿ ಕಾಲೇಜಿಗೆ ತೆರಳದೇ ಇಂಜಿನಿಯರಿಂಗ್ ಮುಗಿಸಿದರೆ ಹೀಗಾಗುತ್ತದೆ ಎಂದು ಎಂಜಿನಿಯರ್‌ಗಳನ್ನು ಟ್ರೋಲ್ ಮಾಡುವವರಿಗೆ ಆಹಾರವಾಗಿ ಇಂತಹ ಅತ್ಯಂತ ತಮಾಷೆಯ ಇಂಜಿನಿಯರ್‌ಗಳು ವಿಫಲತೆಗಳು ಇವಾಗಿವೆ. ಇವುಗಳನ್ನು ಒಮ್ಮೆ ನೋಡಿ ನೀವು ನಗದೇ ಇದ್ದರೆ, ಖಂಡಿತವಾಗಿ ನೀವು ಕೂಡ ಓರ್ವ ಎಂಜಿನಿಯರ್ ಆಗಿರಬಹುದು.!


 • 1 ಮುಚ್ಚಿದ ರೈಲ್ವೆ ಹಳಿ!

  ಈ ರೈಲ್ವೆ ಹಳಿಯ ಮೂಲಕ ಯಾವುದೇ ರೈಲು ಹಾದುಹೋಗುತ್ತದೆ ಎಂದು ನಾನು ಯೋಚಿಸುವುದಿಲ್ಲ. ನೀವು?


 • 2 ವಾಹನಕ್ಕೆ ಸುರಕ್ಷಿತ ಸ್ಥಳ

  ನಿಮ್ಮ ವಾಹನಗಳನ್ನು ಅತ್ಯಂತ ಸುರಕ್ಷಿತವಾಗಿ ಪಾರ್ಕಿಂಗ್ ಮಾಡಬಹುದಾದ ಜಾಗ ಇದು.ಕಳ್ಳನು ಕಾರನ್ನು ಕದಿಯಲು ಯೋಚಿಸುತ್ತಿದ್ದರೆ, ಅವನು ಕ್ರೇನ್ ಅನ್ನೇ ತರಬೇಕು!


 • 3 ಅತ್ಯಂತ ಸುರಕ್ಷಿತ ಎಟಿಎಂ

  ಕಳ್ಳತನದ ಸಾಧ್ಯತೆಗಳನ್ನು ತಪ್ಪಿಸಲು ಪ್ರತಿ ಬ್ಯಾಂಕು ಈ ರೀತಿಯ ಎಟಿಎಂ ಸ್ಥಾಪಿಸಬೇಕಿದೆ. ಗೋಡೆಯ ಒಳಗೆ ಸೇರಿಕೊಂಡಿರುವ ಈ ಎಟಿಎಂನಲ್ಲಿ ಕುಳಿತುಕೊಂಡು ಹಣ ಪಡೆಯಬೇಕು.!


 • 4 ಮಧ್ಯದಲ್ಲಿ ಸಿಲುಕಿರುವುದು

  ಇನ್ನೇನು ದೊಡ್ಡದೊಂದು ಪ್ರಾಜೆಕ್ಟ್ ಯಶಸ್ವಿಯಾಗಿ ಮುಗಿಯಿತು ಎನ್ನುವಾಗಲೇ ಇಂತಹ ತಪ್ಪು ನಡೆದುಹೋಗಿದೆ. ಎಂಜಿನಿಯರ್ ಮಾಡಿದ ಮಿಲಿಮೀಟರ್‌ನಷ್ಟು ಪ್ಲಾನ್ ಹೀಗಾಗಲು ಕಾರಣವಾಗಿದೆ.


 • 5 ಅರ್ಧ ಟಾಯ್ಲೆಟ್ ವಿನ್ಯಾಸ

  ನಿಮ್ಮ ಮನೆ ವಿನ್ಯಾಸ ಮಾಡುವಾಗ ಈ ಅರ್ಧ ಟಾಯ್ಲೆಟ್ ವಿನ್ಯಾಸ ಚೆನ್ನಾಗಿರಬಹುದು. ಅಷ್ಟಕ್ಕೂ ಈ ಎಂಜಿನಿಯರ್ ತಲೆಯಲ್ಲಿ ಏನಿದೆ?


 • 6 ನಿಷ್ಪ್ರಯೋಜಕ ವಿನ್ಯಾಸ

  ಶೋಕಿಗಾಗಿ ಮನೆಮುಂದೆ ಕಾರುಗಳನ್ನು ನಿಲ್ಲಿಸುವವರನ್ನು ನೋಡಿದ್ದೇವೆ. ಆದರೆ, ಮನೆಗೆ ಯಾವುದೇ ಅವಶ್ಯಕತೆ ಇಲ್ಲದ ಮೆಟ್ಟಿಲುಗಳು ಇವು.!


 • 7 ಮಧ್ಯದಲ್ಲಿ ಪೋಲ್

  ಪಾರ್ಕಿಂಗ್ ಜಾಗದಿಂದ ನೇರವಾಗಿ ಕಾರರು ಹೋಗಲು ರಸ್ತೆ ನಿರ್ಮಿಸಲಾಗಿದೆ. ಆದರೆ, ಆ ಮಧ್ಯದಲ್ಲಿ ಕಂಬ ಇರುವುದು ಕಿರಿ ಕಿರಿ ಎನಿಸುತ್ತಿಲ್ಲವೇ?


 • 8 ಕುಳ್ಳರಿಗೆ ಮಾತ್ರ ಈ ಎಸ್ಕಲೇಟರ್

  ಇದು ಸಂಪೂರ್ಣವಾಗಿ ವಿನ್ಯಾಸಗೊಳಿಸಿರುವ ಎಸ್ಕಲೇಟರ್ ಆಗಿ ಕಾಣುತ್ತದೆಯಾದರೂ, ಸಾಮಾನ್ಯ ಎತ್ತರವಿರುವ ಮನುಷ್ಯ ಅದನ್ನು ಬಳಸಲಾಗುವುದಿಲ್ಲ! ಹಾಗಾಗಿ, ಕುಳ್ಳರಿಗೆ ಮಾತ್ರ ಈ ಎಸ್ಕಲೇಟರ್!


 • 9 ಸೀಲಿಂಗ್‌ಗೆ ಮೆಟ್ಟಿಲುಗಳು

  ಮಹಡಿಗೆ ಮೆಟ್ಟಿಲುಗಳು ಇರಬೇಕು ಎಂಬುದು ನಿಜ. ಆದರೆ, ತೆರಯದಿರುವ ಮನೆಯ ಸೀಲಿಂಗ್‌ಗೆ ಮೆಟ್ಟಿಲುಗಳನ್ನು ನಿರ್ಮಿಸಿದ ಎಂಜಿನಿಯರ್ ಮನಸ್ಸಿನಲ್ಲಿ ಏನಿತ್ತು?


 • 10 ಅಪೂರ್ಣ ಮಾರ್ಗ

  ದೈಹಿಕವಾಗಿ ಸವಾಲಿನ್ನು ಹೊಂದಿರುವ ಜನರಿಗೆ ಈ ಮಾರ್ಗವನ್ನು ವಿನ್ಯಾಸಗೊಳಿಸಲಾಗಿದೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಎಂಜಿನಿಯರ್ ಏಕೆ ಅದನ್ನು ಅಲ್ಲಿಯೇ ಕೊನೆಗೊಳಿಸಿದ್ದಾರೆ?


 • 11 ಪ್ರವೇಶವಿರದ ಕ್ಲಬ್!

  ಈ ಸ್ಥಳದಲ್ಲಿ ಮೊದಲು ಇದ್ದ ಒಂದು ವಿಶೇಷ ಕ್ಲಬ್ ಈಗ ಲಭ್ಯವಿಲ್ಲ. ಇದ್ದರೂ ಪ್ರವೇಶ ದ್ವಾರ ಎಲ್ಲಿದೆ?
ಗ್ರಾಹಕರಿಗೆ ಸುಳ್ಳು ಹೇಳಿ ವಂಚಿಸುತ್ತಾ ಬಂದಿರುವ ಮೊಬೈಲ್ ಕಂಪೆನಿಗಳ ಸಾಲಿಗೆ ಸ್ಯಾಮ್‌ಸಂಗ್ ಕೂಡ ಸೇರಿಕೊಂಡಿತೆ ಎಂಬ ಅನುಮಾನ ಮೂಡಿದೆ. ಸ್ಟಾಕ್ ಚಿತ್ರ ಒಂದನ್ನು ಟ್ವಿಟ್ಟಿಸಿ ಇದು ಗ್ಯಾಲಾಕ್ಸಿ A8 ನಲ್ಲಿ ತೆಗೆದ ಸೆಲ್ಫಿ ಚಿತ್ರ ಎಂಬ ರೀತಿಯಲ್ಲಿ ಸ್ಯಾಮ್‌ಸಂಗ್ ಬ್ರೆಜಿಲ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಸಿಕ್ಕಿಹಾಕಿಕೊಂಡಿರುವ ಸುದ್ದಿ ಈಗ ಮೊಬೈಲ್‌ ಜಗತ್ತಿನಲ್ಲಿ ವೈರಲ್ ಆಗಿದೆ.

ಹೌದು, ಜನರಿಗೆ ತನ್ನ ಸ್ಮಾರ್ಟ್‌ಪೋನ್‌ಗಳ ಬಗ್ಗೆ ಸುಳ್ಳು ಹೇಳಿ ಮಾರಾಟ ಮಾಡುವ ಉದ್ದೇಶವನ್ನು ಹೊಂದಿರುವ ಕಂಪೆನಿಗಳು ಹಲವಿವೆ. ಆದರೆ, ವಿಶ್ವ ಮೊಬೈಲ್ ಟೆಕ್ ದಿಗ್ಗಜನಾಗಿರುವ ಸ್ಯಾಮ್‌ಸಂಗ್‌ನಂತಹ ಕಂಪೆನಿ ಕೂಡ ತನ್ನ ಗ್ರಾಹಕರಿಗೆ ಸುಳ್ಳು ಹೇಳುತ್ತಿದೆ ಎಂಬುದಕ್ಕೆ ಗ್ಯಾಲಾಕ್ಸಿ A8 ಫೋನಿನ ಬಗೆಗೆ ಸ್ಯಾಮ್‌ಸಂಗ್ ಮಾಡಿರುವ ಒಂದು ಟ್ವಿಟ್ ಉದಾಹರಣೆಯಾಗಿದೆ.

ಗ್ಯಾಲಾಕ್ಸಿ A8 (2018) ಮೊಬೈಲ್ ಮಾರಾಟದ ಉದ್ದೇಶದಿಂದಲೇ ಸ್ಯಾಮ್‌ಸಂಗ್ ಆ ಚಿತ್ರವನ್ನು ಪ್ರಕಟಿಸಿದೆ ಎಂಬುದನ್ನು ಯಾರೂ ಬೇಕಾದರೂ ಅರ್ಥೈಸಿಕೊಳ್ಳಬಹುದಾದ ವಿಷಯಕ್ಕೂ ಸಹ ಕಂಪೆನಿ ಸಬೂಬನ್ನು ನೀಡುವ ಪ್ರಯತ್ನ ಮಾಡಿದೆ. ಹಾಗಾದರೆ, ಏನಿದು ಶಾಕಿಂಗ್ ಸ್ಟೋರಿ? ಸ್ಯಾಮ್‌ಸಂಗ್ ಕೂಡ ನಮಗೆ ಮೋಸ ಮಾಡುತ್ತಿದೆಯೇ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್