Back
Home » ಇತ್ತೀಚಿನ
ಕಚೇರಿಗೆ ಪೈಜಾಮದಲ್ಲೇ ತೆರಳಿದ ವಿಶ್ವದ ಶ್ರೀಮಂತ ವ್ಯಕ್ತಿ!..ಏಕೆ ಗೊತ್ತಾ?
Gizbot | 14th Sep, 2018 12:16 PM
 • ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿ ವಿಶ್ವದ ನಂ.1 ಶ್ರೀಮಂತನಾದ ಕಥೆ!!

  ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ. ಹಿಂದೊಮ್ಮೆ ರಸ್ತೆಗಳಲ್ಲಿ ಪುಸ್ತಕ ಮಾರುತ್ತಿದ್ದ ವ್ಯಕ್ತಿಯೋರ್ವರು ಇಂದು ವಿಶ್ವದ ನಂಬರ್ ಒನ್ ಶ್ರೀಮಂತನಾಗಿ ಬೆಳೆದುನಿಂತಿದ್ದಾರೆ. ತಮಗೆ ಬಂದ ಆಲೋಚನೆಗಳಿಂದ ಉದ್ಯೋಗವಾಗಿ ಸೃಷ್ಟಿಸಿ ಇದು ಪರಿಶ್ರಮದಿಂದ ಬೆಳೆದು ಇಂದು 100 ಬಿಲಿಯನ್ ಡಾಲರ್ ಆಸ್ತಿಗೆ ಒಡೆಯನಾಗಿದ್ದಾರೆ.!!

  ಹೌದು, ನಾವು ಹೇಳುತ್ತಿರುವುದು ಇಂದು ವಿಶ್ವದ ಮೊದಲ ಶ್ರೀಮಂತ ಎಂಬ ಹಗ್ಗಳಿಕೆಗೆ ಪಾತ್ರವಾಗಿರುವ ಅಮೆಜಾನ್. ಕಾಮ್ ಇ-ಕಾಮರ್ಸ್ ಅಧಿಪತಿ "ಜೆಫ್ ಬೆಜೊಸ್" ಅವರ ಸಾಧನೆಯ ಹಿನ್ನಲೆಯಲ್ಲಿ ಇಂತಹದೊಂದು ಕರುಣಾಜನಕ ಕಥೆ ಇದೆ.! ಬುದ್ದಿವಂತಿಕೆಯೊಂದಿದ್ದರೆ ಯಾರು ಏನನ್ನಾದರೂ ಸಾಧಿಸಬಹುದು ಎಂಬ ಅಚಲತೆ ಅವರ ಬದುಕಿನಲ್ಲಿದೆ.!!

  ಪುಸ್ತಕ ಮಾರುತ್ತಿದ್ದ ಹುಡುಗ ತನ್ನ ಹೊಸ ಐಡಿಯಾಗಳ ಮೂಲಕ ಪ್ರಪಂಚವೇ ಶ್ಲಾಗಿಸುವ ಹಾಗೆ ಬೆಳೆದಿದ್ಉ, ಹಾಗಾದರೆ, ಪ್ರಸ್ತುತ 100 ಬಿಲಿಯನ್ ಡಾಲರ್ ಆಸ್ತಿ ಹೊಂದಿರುವ "ಜೆಫ್ ಬೆಜೊಸ್" ಅವರ ಹಿಂದಿನ ಬದುಕು ಹೇಗಿತ್ತು? ಅವರು ಪ್ರಪಂಚದ ಶ್ರೀಮಂತ ವ್ಯಕ್ತಿಯಾಗಿ ಬೆಳದದ್ದು ಹೇಗೆ ಎಂಬುದನ್ನು ಮುಂದೆ ತಿಳಿಯಿರಿ.!!


 • ಅಮೆಜಾನ್.ಕಾಮ್!!

  ಇಂದು ಪ್ರಪಂಚದ ಬೃಹತ್ ಕಂಪೆನಿಗಳಲ್ಲಿ ಇ-ವಾಣಿಜ್ಯ ಪೋರ್ಟಲ್ ಅಮೆಜಾನ್ ಎಂದರೆ ಎಲ್ಲರಿಗೂ ಗೊತ್ತು. ಆದರೆ, ಇದೇ ಅಮೆಜಾನ್ ಕಂಪೆನಿ ಶುರು ಮಾಡುವ ಮೊದಲು ಕೇವಲ 10 ಸಾವಿರ ಬಂಡವಾಳದಲ್ಲಿ ಒಂದು ಚಿಕ್ಕ ಗ್ಯಾರೇಜ್‌ನಂತ ಸ್ಥಳದಲ್ಲಿ ಹುಟ್ಟಿಕೊಂಡಿದ್ದು ಎಂದರೆ ನೀವು ನಂಬಲೇಬೇಕು.! ಆದರೆ, ಇದೇ ಕಂಪೆನಿ ಇಂದು ವಿಶ್ವದ ನಂಬರ್ ವ್ಯಕ್ತಿಯನ್ನು ಸೃಷ್ಟಿಸಿದೆ.!!


 • 100 ಬಿಲಿಯನ್ ಡಾಲರ್ ಆಸ್ತಿ!!

  ಇಷ್ಟೇ ಅಲ್ಲದೆ 100 ಬಿಲಿಯನ್ ಡಾಲರ್ ಆಸ್ತಿ ಹೊಂದಿದ ಮೊದಲ ಶ್ರೀಮಂತ ಎಂಬ ದಾಖಲೆ ಸೃಷ್ಟಿಸಿರುವ ಜೆಫ್ ಬೆಜೊಸ್, ಕಳೆದ ಆರು ವರ್ಷಗಳಿಂದ ಬಿಲ್‌ಗೆಟ್ಸ್ ಉಳಿಸಿಕೊಂಡು ಬಂದಿದ್ದ ನಂಬರ್ ಒನ್ ಶ್ರೀಮಂತ ಸ್ಥಾನವನ್ನು ಆಕ್ರಮಿಸಿದ್ದಾರೆ.!! ಬಿಲ್‌ಗೆಟ್ಸ್ ಸೇರಿ ಇನ್ನಿತರ ಯಾರೂ ಕೂಡ 100 ಬಿಲಿಯನ್ ಡಾಲರ್ ಅಂತಸ್ತನ್ನು ಇಲ್ಲಿಯವರೆಗೂ ದಾಟಿಲ್ಲ.!!


 • ಜೆಫ್ ಬೆಜೊಸ್ ಹಿನ್ನಲೆ ಏನು?

  ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದಿರುವ ಜೆಫ್ ಬೆಜೊಸ್ ನಂತರ ಹಲವು ಕಂಪೆನಿಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಎಲ್ಲಿಯೂ ಅವರಿಗೆ ತಮ್ಮ ಕಾರ್ಯದ ಬಗ್ಗೆ ತೃಪ್ತಿ ಸಿಗದೆ ನಂತರ ಪುಸ್ತಕ ಮಾರಾಟಕ್ಕೆ ಇಳಿದಿದ್ದಾರೆ. ಸಣ್ಣ ಅಂಗಡಿಯಲ್ಲಿ ಕುಳಿತು ಮೊದಲು ಪುಸ್ತಕ ಮಾರಾಟ ಮಾಡಿದ್ದಾರೆ.!!


 • ಇಂಟರ್‌ನೆಟ್ ತಿಳಿದಿದ್ದರು ಬೆಜೊಸ್!!

  1994 ರಲ್ಲಿ ಮೊದಲ ಹೂಡಿಕೆ ಕೇವಲ ಹತ್ತು ಸಾವಿರ ಡಾಲರ್‌ಗಳಿಂದ ಅಮೆಜಾನ್ ಡಾಟ್ ಕಾಮ್ ಶುರು ಮಾಡಿದ ಜೆಫ್ ಬೆಜೊಸ್ ಇಂಟರ್ನೆಟ್ ಬಗ್ಗೆ ತಿಳಿದಿದ್ದು ಅವರಿಗೆ ವರವಾಗಿದೆ.! ಇಂಟರ್‌ನೆಟ್ ಜೊತೆಯಲ್ಲಿ ತನ್ನ ಸೃಜನಶೀಲತೆ ಸೇರಿಸಿದ ಜೆಫ್ ಬೆಜೊಸ್ ಅಮೆಜಾನ್ ಅನ್ನು ವಿಶ್ವದ ನಂಬರ್ ಒನ್ ಆನ್‌ಲೈನ್ ಜಾಲತಾಣವಾಗಿ ರೂಪಿಸಿದ್ದಾರೆ.!


 • ಅಮೆಜಾನ್‌ಗೆ ಇಂದು ಸಾಟಿ ಇಲ್ಲ.!!

  ಮೊದಲು ಅಮೆಜಾನ್ ಡಾಟ್ ಕಾಮ್ ಮೂಲಕ ಪುಸ್ತಕ ಮಾರಾಟ ಶುರುಮಾಡಿದ ಜೆಫ್ ಬೆಜೊಸ್ ನಂತರ ನಿಧಾನವಾಗಿ ಎಲ್ಲ ವಸ್ತುಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ. ಇಂದಿನ ಮಾಹಿತಿಯಂತೆ ವಿಶ್ವದಲ್ಲಿ ಮಾರಾಟವಾಗುವ 100ಕ್ಕೆ 99 ರಷ್ಟು ವಸ್ತುಗಳನ್ನು ನೀವು ಅಮೆಜಾನ್ ಮೂಲಕ ಖರೀದಿಸಬಹುದು ಎಂದರೆ ಅವರ ಸಾಧನೆ ಎಷ್ಟಿದೆ ಎಂಬುದನ್ನು ತಿಳಿಯಬಹುದು.!!


 • ಸಾಧನೆಗೆ ಸ್ಪೂರ್ತಿ ಬೆಜೊಸ್!!

  ಆನ್‌ಲೈನ್ ಪ್ರಪಂಚದಲ್ಲಿಯೇ ಅತಿ ಹೆಚ್ಚು ಆದಾಯ ಪಡೆದ ಜೆಫ್ ಬೆಜೊಸ್ ಅಂದು ಒಂದು ಮಾರಾಟಕ್ಕೂ ಕಷ್ಟಪಟ್ಟಿದ್ದರಂತೆ. ಆದರೆ, ನಂಬಿಕೆಯೊಂದನ್ನು ಉಳಿಸಿಕೊಂಡರೆ ಮಾರಾಟ ಎಂಬುದು ತುಂಬಾ ಸರಳ ಎಂದು ಅವರು ಅಂದುಕೊಂಡಿದ್ದಕ್ಕೆ ಇಂದು ಅವರು ವಿಶ್ವದ ನಂಬರ್ ಒನ್ ಶ್ರೀಂತರಾಗಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.!!
120 ಬಿಲಿಯನ್‌ಗಿಂತಲೂ ಹೆಚ್ಚು ಆಸ್ತಿಗೆ ಒಡೆಯನಾಗಿರುವ ವಿಶ್ವದ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಪೈಜಾಮಾದಲ್ಲಿ ಆಫೀಸ್​ಗೆ ಬರುವ ಮೂಲಕ ಗಮನಸೆಳೆದಿದ್ದಾರೆ. ಆನ್​ಲೈನ್ ರಿಟೇಲ್ ದಿಗ್ಗಜ ಅಮೆಜಾನ್ ಕಂಪನಿ ಸಿಇಒ ಆಗಿರುವ ಜೆಫ್ ಬೆಜೋಸ್ ರಾತ್ರಿ ವೇಳೆ ಧರಿಸುವ ಪೈಜಾಮಾ ಮತ್ತು ಚಪ್ಪಲಿ ಧರಿಸಿ ಕಚೇರಿಗೆ ಆಗಮಿಸಿ ಎಲ್ಲರಿಗೂ ಒಮ್ಮೆ ಅಚ್ಚರಿ ಮೂಡಿಸಿದ್ದಾರೆ.

ಬುಧವಾರ ನಡೆದಿರುವ ಆಡಳಿತ ಮಂಡಳಿಯ ಸಭೆಗೆ ಮನೆಯಲ್ಲಿ ಧರಿಸುವ ಪೈಜಾಮಾ ಧರಿಸಿ ಜೆಫ್​ ಬೆಜೋಸ್​ ಪಾಲ್ಗೊಂಡಿದ್ದರು. ಜೆಫ್​ ತಾವು ಪೈಜಾಮಾ ಧರಿಸಿ ಕಚೇರಿಗೆ ತೆರಳಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿದ್ದರು. ಆದರೆ, ಅವರು ಹೀಗೆ ಪೈಜಾಮಾದಲ್ಲಿ ಆಫೀಸ್​ಗೆ ಬಂದಿದ್ದಕ್ಕೆ ಬಲವಾದ ಕಾರಣ ಸಹ ಇರುವುದು ವಿಶೇಷವಾಗಿತ್ತು.

ಹೌದು, ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ ಜೆಫ್ ಬೆಜೋಸ್ ಅವರು ಮಕ್ಕಳ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಅವರು ಹೀಗೆ ಬಂದಿದ್ದರು. ಅಮೆರಿಕದ ಮಕ್ಕಳ ಕ್ಯಾನ್ಸರ್​ ಸಂಸ್ಥೆಯೊಂದಿಗೆ ಸೇರಿ ಮಕ್ಕಳ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಈ ಕಾರ್ಯದ ಮೂಲಕ ಅವರ ಕೀರ್ತಿಯನ್ನು ವಿಶ್ವದಲ್ಲಿ ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಮಕ್ಕಳು ಕ್ಯಾನ್ಸರ್​ ಚಿಕಿತ್ಸೆ ಪಡೆಯುವಾಗ ಹಲವು ತಿಂಗಳುಗಳವರೆಗೆ ಅವರು ಪೈಜಾಮಾದಲ್ಲೇ ಇರಬೇಕಾಗುತ್ತದೆ. ಇತರ ಬಟ್ಟೆಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಲವೆಡೆ ಪೈಜಾಮಾ ಕಾರ್ಯಕ್ರಮವನ್ನು ಆಯೋಜಿಸಿ ಸಂಸ್ಥೆಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ ಎಂದು ಕ್ಯಾನ್ಸರ್​ ಸಂಸ್ಥೆ ತಿಳಿಸಿದೆ. ಇದಕ್ಕಾಗಿಯೇ ಬೆಜೋಸ್ ಪೈಜಾಮದಲ್ಲಿ ಆಫಿಸ್‌ಗೆ ತೆರಳಿದ್ದಾರೆ.

ವಿಶ್ವದೆಲ್ಲೆಡೇ ಮಕ್ಕಳು ಎದುರಿಸುತ್ತಿರುವ ಕ್ಯಾನ್ಸರ್​ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಇಂತಹ ಕಾಶರ್ಯಕ್ರಮಗಳಿಗೆ ದೇಣಿಗೆಯನ್ನು ನೀಡುವ ಹಾಗೂ ಸಂಗ್ರಹಿಸುವ ಕೆಲದಲ್ಲಿಯೂ ಜೆಫ್ ಬೆಜೋಸ್ ಕಾರ್ಯನಿರತರಾಗಿದ್ದಾರೆ. ಹಾಗಾಗಿ, ಈ ರೀತಿಯಲ್ಲಿ ಕ್ಯಾನ್ಸರ್​ನಿಂದ ಬಳಲುತ್ತಿರುವ ಮಕ್ಕಳ ನೆರವಿಗೆ ನಿಲ್ಲುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ.

ಓದಿರಿ: ಜಿಯೋ '4G ಲ್ಯಾಪ್‌ಟಾಪ್‌' ಬಿಡುಗಡೆಗೆ ಸಮಯ ಫಿಕ್ಸ್!!

   
 
ಹೆಲ್ತ್