Back
Home » ಇತ್ತೀಚಿನ
ಐಫೋನ್ ಕೊಳ್ಳಲು ಕ್ಯೂನಲ್ಲಿ ನಿಂತ್ತಿದ್ದವರಿಗೆ ಬಂಪರ್ ಗಿಫ್ಟ್ ಕೊಟ್ಟ ಹುವಾವೆ..!
Gizbot | 21st Sep, 2018 03:19 PM
  • ನಿಮಗೆ ಇದು ಬೇಕು:

    ಐಫೋನ್ Xs ಸೇರಿದಂತೆ ಹೊಸ ಫೋನ್‌ಗಳನ್ನು ಖರೀದಿಸಲು ಕ್ಯೂನಲ್ಲಿ ನಿಂತ್ತಿದ್ದವರಿಗೆ ಹುವಾವೆ, ಉಚಿತವಾಗಿ ತನ್ನ ಪವರ್ ಬ್ಯಾಂಕ್‌ಗಳನ್ನು ನೀಡುತ್ತಾ, ಇದರಲ್ಲಿ 'ಪವರ್ ಬ್ಯಾಂಕ್ ಇದೆ, ನಿಮಗೆ ಇದರ ಅವಶ್ಯಕತೆ ಹೆಚ್ಚಾಗಿದೆ, ಹುವಾವೆ' ಎಂಬ ಘೋಷಣೆಯನ್ನು ಹಾಕುವ ಮೂಲಕ ಆಪಲ್ ಮತ್ತು ಆಪಲ್ ಬಳಕೆದಾರರ ಕಾಲು ಎಳೆಯಲು ಮುಂದಾಗಿದೆ.


  • ಬ್ಯಾಟರಿ ಬಾಳಿಕೆ ಕಡಿಮೆ:

    ಮಾರುಕಟ್ಟೆಯಲ್ಲಿ ಲಾಂಚ್ ಆಗುವ ಐಫೋನ್‌ಗಳ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಆಪಲ್ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್‌ಗೆ ಹೊಲಿಕೆ ಮಾಡಿಕೊಂಡರೆ ಆಪಲ್ ಬ್ಯಾಟರಿ ಬಾಳಿಕೆ ಕಡಿಮೆ. ಈ ಹಿನ್ನಲೆಯಲ್ಲಿ ಹೊಸ ಫೋನ್ ಖರೀಸಿದ ಮೇಲೆ ಹುವಾವೆ ಪವರ್ ಬ್ಯಾಂಕ್ ಬಳಕೆ ಮಾಡಿ ಎಂದು ಪ್ರಮೋಟ್ ಮಾಡುತ್ತಿದೆ.




ಪ್ರತಿ ಕಂಪನಿಗಳು ತಮ್ಮ ಬ್ರಾಂಡ್ ಅನ್ನು ಪ್ರಮೋಟ್ ಮಾಡಿಕೊಳ್ಳಲು ಮತ್ತು ತಮ್ಮ ಸಮೀಪದ ಪ್ರತಿ ಸ್ಪರ್ಧಿಯ ಕಾಲು ಎಳೆಯಲು ಸಮಯ ಸಿಕ್ಕಾಗ ಪ್ರಯತ್ನಿಸುತ್ತಲೇ ಇರುತ್ತವೆ. ಇದೇ ಮಾದರಿಯಲ್ಲಿ ಮಾರುಕಟ್ಟೆಗೆ ಮತ್ತೊಂದು ದುಬಾರಿ ಬೆಲೆಯ ಐಫೋನ್ ಅನ್ನು ಲಾಂಚ್ ಮಾಡುವ ಮೂಲಕ ಸದ್ದು ಮಾಡುತ್ತಿರುವ ಆಪಲ್‌ಗೆ, ಪ್ರತಿ ಸ್ಪರ್ಧಿ ಹುವಾವೆ ಭಾರೀ ಟಾಂಗ್ ಕೊಟ್ಟಿದೆ.

ಈಗಾಗಲೇ ಐಫೋನ್ ಹವಾ ಹೆಚ್ಚಾಗಿದ್ದು, ಸೆಪ್ಟೆಂಬರ್ 21 ರಂದು ಮಾರುಕಟ್ಟೆಯಲ್ಲೊ ಮೊದಲ ಬಾರಿಗೆ ಸೇಲ್‌ ಆಗಲಿದ್ದು, ಇದನ್ನು ಖರೀದಿಸುವ ಸಲುವಾಗಿ ಆಪಲ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಸಿಂಗಾಪುರದ ಆಪಲ್ ಸ್ಟೋರಿನ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಕ್ಯೂ ನಿಲ್ಲುವುದಲ್ಲದೇ, ರಸ್ತೆಯಲ್ಲಿ ರಾತ್ರಿಯಿಡಿ ಜಾಗರಣೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸರಿಯಾಗಿ ಬಳಸಿಕೊಂಡ ಹುವಾವೆ ಯಶಸ್ಸಿಯಾಗಿ ಆಪಲ್ ಮತ್ತು ಆಪಲ್ ಬಳಕೆದಾರರ ಕಾಲು ಎಳೆಯಲು ಮುಂದಾಗಿದೆ.

   
 
ಹೆಲ್ತ್