Back
Home » ಆರೋಗ್ಯ
ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು!
Boldsky | 29th Sep, 2018 11:47 AM
 • ಆತಂಕ

  ಹಸ್ತಮೈಥುನ ಮಾಡಿಕೊಳ್ಳುತ್ತಿರುವವರು ತುಂಬಾ ಆರಾಮದಾಯಕ ಪರಿಸ್ಥಿತಿಯಲ್ಲಿ ಇರುವರು. ಆದರೆ ಸಂಗಾತಿ ಜತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಕಾದ ಸಮಯದಲ್ಲಿ ಗಾತ್ರ, ಶಕ್ತಿ ಮತ್ತು ತೃಪ್ತಿ ನೀಡುವಂತಹ ಆತಂಕ ಕಾಡಬಹುದು. ಲೈಂಗಿಕ ಕ್ರಿಯೆಯಲ್ಲಿನ ಪ್ರದರ್ಶನವು ಹಸ್ತಮೈಥುನ ಮಾಡಿಕೊಳ್ಳುವಂತವರಲ್ಲಿ ತುಂಬಾ ಆತಂಕ ಉಂಟು ಮಾಡುವುದು. ಈ ಅಭ್ಯಾಸವನ್ನು ಹೊಂದಿರುವಂತಹ ಪುರುಷರು ಹಾಗೂ ಮಹಿಳೆಯರಿಗೆ ಲೈಂಗಿಕ ಬಳಲಿಕೆ ಮತ್ತು ಮರುಕಳಿಸುವ ಜನನಾಂಗದ ಸೋಂಕು ಕಾಣಿಸಬಹುದು.

  Most Read: ಈ 4 ರಾಶಿಚಕ್ರದವರು ನಾಯಕತ್ವ ಗುಣದಲ್ಲಿ ಎತ್ತಿದ ಕೈ!


 • ದೀರ್ಘಕಾಲದ ಆಯಾಸ

  ಹಸ್ತಮೈಥುನದಿಂದಾಗಿ ಸ್ಟಿರಾಯ್ಡ್ ಹಾರ್ಮೋನು ಮತ್ತು ಕೊರ್ಟಿಸಾಲ್ ಉತ್ತತ್ತಿಯಾಗಲು ಪ್ರೇರೇಪಿಸುವುದು. ಇದು ಚಯಾಪಚಯ ಕ್ರಿಯೆಯ ಗತಿ ಹೆಚ್ಚಿಸುವುದು ಮತ್ತು ಇದು ಬಳಲಿಕೆ ಮತ್ತು ಆಯಾಸವಾಗಬಹುದು.


 • ಬೆನ್ನು ನೋವು ಅಥವಾ ತೊಂದರೆ

  ಹಸ್ತಮೈಥುನವು ಆಕ್ಸಿಟಾಸಿನ್, ಡಿಎಚ್ ಇಎ, ಟೆಸ್ಟೊಸ್ಟೆರಾನ್ ಮತ್ತು ಡಿಎಚ್ ಟಿಯ ಉತ್ಪತ್ತಿಯನ್ನು ತಗ್ಗಿಸುವುದು. ಈ ನರಸಂಬಂಧಿ ರಾಸಾಯನಿಕಗಳು ಕುಗ್ಗುವ ಪರಿಣಾಮಾವಿ ಉರಿಯೂತದ ಹಾರ್ಮೋನು ಪ್ರೊಸ್ಟಗ್ಲಾನ್ಡಿನ್ ಇ2 ಬಿಡುಗಡೆಯಾಗುವುದು. ಇದರಿಂದ ಬೆನ್ನು ನೋವು ಕಾಣಿಸುವುದು.


 • ತೊಡೆ ಅಥವಾ ವೃಷಣದ ಭಾಗದಲ್ಲಿ ಕಿರಿಕಿರಿ ಅಥವಾ ನೋವು

  ಪಿಟ್ಯುಟರಿ-ಅಡ್ರೀನಲ್-ವೃಷಣ ಗ್ರಂಥಿಗಳು ಮಧ್ಯೆ ಸಂಪರ್ಕವಿದ್ದು, ಇವುಗಳು ಆಕ್ಸಿಟೊಸಿನ್ ಮತ್ತು ಟೆಸ್ಟೊಸ್ಟರಾನ್ ಉತ್ಪತ್ತಿ ಮಾಡುವುದು. ಇದರಲ್ಲಿ ಉರಿಯೂತ ಶಮನಕಾರಿ ಗುಣಗಳು ಇವೆ ಮತ್ತು ಅತಿಯಾಗಿ ಹಸ್ತಮೈಥುನವು ಇದರ ಉತ್ಪತ್ತಿ ಕಡಿಮೆ ಮಾಡುವುದು. ಇದರಿಂದ ತೊಡೆ ನೋವಿನಿಂದ ವೃಷಣದಲ್ಲೂ ನೋವು ಕಾಣಿಸಬಹುದು.

  Most Read: 'S'ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು, ಕಠಿಣ ಪರಿಶ್ರಮಿ ಹಾಗೂ ಮಗುವಿನಂತ ಮನಸ್ಸು...


 • ಶಿಶ್ನ ಕುಗ್ಗುವುದು

  ಹದಿಹರೆಯದಲ್ಲಿ ಇದರ ಚಟ ಹಚ್ಚಿಕೊಂಡರೆ ಅದು ಬೆಳವಣಿಗೆಯ ಹಾರ್ಮೋನು ಕಡಿಮೆ ಮಾಡುವುದು. ಇದರಿಂದ ಶಿಶ್ನವು ಸರಿಯಾದ ಗಾತ್ರಕ್ಕೆ ಬೆಳೆಯಲು ಹಾರ್ಮೋನು ಸಿಗದೆ ಗಾತ್ರ ಸಣ್ಣದಾಗಬಹುದು.


 • ಅಕಾಲಿಕ ಸ್ಖಲನ

  ಟೆಸ್ಟೊಸ್ಟೆರಾನ್ ಮತ್ತು ಇತರ ಕೆಲವೊಂದು ನರಸಂವಾಹಕಗಳಾಗಿರುವಂತಹ ಡೊಪಮೈನ್ ಮತ್ತು ಸೆರೊಟೊನಿನ್ ನರಮಂಡಲವು ದುರ್ಬಲವಾಗಲು ಕಾರನವಾಗುವುದು. ಇದರಿಂದ ನಿಮಿರುವಿಕೆ ಅಸಾಮಾನ್ಯತೆ, ವೀರ್ಯ ಸೋರಿಕೆ ಮತ್ತು ಅಕಾಲಿಕ ಸ್ಖಲನ ಉಂಟಾಗಬಹುದು.

  Most Read: ತನ್ನ ತಾಯಿ ಶವವನ್ನು ತಿಂಗಳುಗಟ್ಟಲೆ ಜೊತೆಗಿಟ್ಟುಕೊಂಡವಳ ಖತರ್ನಾಕ್ ಸ್ಟೋರಿ ಇದು!


 • ಕೂದಲು ಉದುರುವಿಕೆ

  ಹಾರ್ಮೋನು ಮತ್ತು ನರಸಂವಾಹಕವು ದೇಹದಲ್ಲಿ ಉನ್ನತ ಮಟ್ಟದಲ್ಲಿ ಪ್ರೊಲ್ಯಾಕ್ಟಿನ್ ಮತ್ತು ಡಿಎಚ್ ಇಎ ನ್ನು ನಿರ್ಮಿಸುವುದು. ಇದರಿಂದ ಕೂದಲು ಉದುರುವುದು.
  ಅತಿಯಾದ ಹಸ್ತಮೈಥುನದಿಂದಾಗಿ ಹಲವಾರು ರೀತಿಯ ಅಡ್ಡಪರಿಣಾಮಗಳ ಬಗ್ಗೆ ನೀವು ತಿಳಿದುಕೊಂಡಿದ್ದೀರಿ. ನೀವು ಇದನ್ನು ಆರಂಭದಲ್ಲಿ ತಿಳಿದುಕೊಳ್ಳಬೇಕು. ನಿಮಗೆ ಯಾವುದೇ ರೀತಿಯ ಸಮಸ್ಯೆಯು ಕಾಡುತ್ತಲಿದ್ದರೆ ಲೈಂಗಿಕ ತಜ್ಞರನ್ನು ಭೇಟಿಯಾಗಿ. ಇನ್ನು ಹಸ್ತಮೈಥುನವು ದಿನಕ್ಕೆ ಒಮ್ಮೆ, ದಿನಕ್ಕೆರಡು ಬಾರಿ, ಮೂರು ಬಾರಿ ಹೀಗೆ ಸಂಖ್ಯೆಯು ಹೆಚ್ಚುತ್ತಾ ಹೋದಂತೆ ಅಪಾಯದ ಮಟ್ಟವೂ ಹೆಚ್ಚುತ್ತದೆ ಎಂದು ವೈದ್ಯಕೀಯಶಾಸ್ತ್ರ ದೃಢ ಪಡಿಸಿದೆ. ವೈದ್ಯಕೀಯ ಶಾಸ್ತ್ರದಲ್ಲಿ ವಾರಕ್ಕೆ 2-3 ಬಾರಿಯೂ ಹಸ್ತಮೈಥುನಕ್ಕೆ ಒಳಗಾಗಬಾರದು ಎಂದು ಹೇಳುತ್ತದೆ. ಹಸ್ತಮೈಥುನ ಮಾಡಿ ಕೊಳ್ಳುವುದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಅನಾರೋಗ್ಯದ ಮೇಲೆ ಪರಿಣಾಮಗಳು ಉಂಟಾಗುತ್ತವೆ.


 • ಶಕ್ತಿ ಕುಂದುವಂತೆ ಮಾಡುತ್ತದೆ

  ಹಸ್ತಮೈಥುನವು ಹಾನಿಕಾರಕವಾದ ಒಂದು ಚಟುವಟಿಕೆ ಎಂದು ಹೇಳಲಾಗುತ್ತದೆ. ಹಸ್ತಮೈಥುನದಲ್ಲಿ ವ್ಯಕ್ತಿ ಹೆಚ್ಚು ಶಕ್ತಿಯನ್ನು ಬಳಸಬೇಕಾಗುತ್ತದೆ. ನಿತ್ಯವೂ ಈ ಕ್ರಿಯೆ ಹಲವು ಬಾರಿ ನಡೆಯುತ್ತಿದ್ದರೆ ಕ್ರಮೇಣವಾಗಿ ದೇಹದಲ್ಲಿರುವ ಶಕ್ತಿಯು ಕುಂದುತ್ತಾ ಬರುತ್ತದೆ. ಜೊತೆಗೆ ಪುರುಷರ ದೌರ್ಬಲ್ಯತೆಗೆ ಕಾರಣವಾಗುವ ಸಾಧ್ಯತೆಗಳು ಹೆಚ್ಚು.


 • ಅದೇ ಒಂದು ಚಟವಾಗಿ ಹೋಗಬಹುದು...

  ಹಸ್ತಮೈಥುನದಿಂದ ದೇಹದಲ್ಲಿ ಜೈವಿಕ ಬದಲಾವಣೆಯನ್ನು ಕಾಣಬಹುದು. ಇವರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡು. ಹಸ್ತಮೈಥುನವನ್ನೇ ಚಟವನ್ನಾಗಿ ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಕೆಲವು ಬಾರಿ ಅದಿಲ್ಲದೇ ಬೇರೆ ಏನ್ನನೂ ಮಾಡಲು ಸಾಧ್ಯವಿಲ್ಲ ಎನ್ನುವ ಮಟ್ಟವನ್ನು ತಲುಪುವ ಸಾಧ್ಯತೆಗಳೂ ಇವೆ ಎಂದು ವೈದ್ಯಕೀಯ ಶಾಸ್ತ್ರ ಹೇಳುತ್ತದೆ.

  Most Read: ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!


 • ಲಿಂಗ ನಿಮಿರುವಿಕೆಯ ದೋಷ

  ಅಧಿಕ ಪ್ರಮಾಣದ ಹಸ್ತ ಮೈಥುನದಿಂದ ಉಂಟಾಗುವ ಅಧಿಕ ದುಷ್ಪರಿಣಾಮ ಎಂದರೆ ಅದು ಲಿಂಗ ನಿಮಿರುವಿಕೆಯ ದೋಷವಾಗಿದೆ. ಅತ್ಯಧಿಕ ಬಾರಿಗೆ ಹಸ್ತ ಮೈಥುನ ಮಾಡಿಕೊಳ್ಳುವವರು ಮುಂದೆ ತಮ್ಮ ಲಿಂಗ ನಿಮಿರುವಿಕೆಯಲ್ಲಿ ದೋಷವನ್ನು ಎದುರಿಸುವ ಅಪಾಯ ಹೆಚ್ಚಿರುತ್ತದೆ.


 • ನರಗಳ ದೌರ್ಬಲ್ಯತೆ

  ಅಧಿಕ ಪ್ರಮಾಣದ ಹಸ್ತ ಮೈಥುನದಿಂದ ನರ ಸಂಬಂಧಿ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ವಯಸ್ಸಾದ ಗಂಡಸರು ಇದರಲ್ಲಿ ತೊಡಗಿಸಿಕೊಂಡಾಗ ಅವರಲ್ಲಿ ತೀವ್ರ ತರಹದ ನರ ಸಂಬಂಧಿ ಸಮಸ್ಯೆಗಳು ಕಂಡು ಬರುತ್ತವೆ.


 • ಶೀಘ್ರ ವೀರ್ಯ ಸ್ಖಲನ

  ಅಧಿಕ ಪ್ರಮಾಣದ ಹಸ್ತಮೈಥುನವು ಶೀಘ್ರ ವೀರ್ಯ ಸ್ಖಲನದ ಜೊತೆಗೆ ತಳಕು ಹಾಕಿಕೊಂಡಿರುತ್ತದೆ. ಅತಿ ಹೆಚ್ಚು ಹಸ್ತ ಮೈಥುನ ಮಾಡಿಕೊಳ್ಳುವವರು ತಮ್ಮ ವೀರ್ಯವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ. ಪೆನಲ್ ನರವನ್ನು ಹೆಚ್ಚು ಬಾರಿಗೆ ಉದ್ರೇಕಗೊಳಿಸುವುದರಿಂದ ಈ ಸಮಸ್ಯೆಯು ತಲೆದೋರುತ್ತದೆ.


 • ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

  ಈ ಅಂಶವು ಹಿಂದೆ ಹೇಳಲಾದ ಅಂಶಕ್ಕೆ ಪೂರಕವಾಗಿ ಬರುತ್ತದೆ. ಅಂದರೆ ಶೀಘ್ರ ವೀರ್ಯ ಸ್ಖಲನ ಸಮಸ್ಯೆಯಿರುವವರು ತಮ್ಮ ಸಂಗಾತಿಯೊಂದಿಗೆ ಉತ್ತಮವಾದ ಲೈಂಗಿಕ ಜೀವನವನ್ನು ನಡೆಸಲು ತೊಂದರೆಯಾಗುತ್ತದೆ. ಮಿಲನ ಸುಖವನ್ನು ಮಹತ್ತರ ಹಂತಕ್ಕೆ ಕೊಂಡೊಯ್ಯುವ ಘಟ್ಟವೇ ವೀರ್ಯ ಸ್ಖಲನ ಅದೇ ಬೇಗ ಆದರೆ ಇನ್ನೂ ಅದರಲ್ಲಿ ಆನಂದ ಎಲ್ಲಿ ಸಿಗುತ್ತದೆ.


 • ದುಃಖವನ್ನು ಅನುಭವಿಸುತ್ತೀರಿ!

  ತುಂಬಾ ಹಸ್ತಮೈಥುನ ಮಾಡುವಾಗ ನೀವು ಆಗಾಗ್ಗೆ ಮಧುಮೇಹ ಅನುಭವಿಸುವಿರಿ. ಮಿದುಳಿನಲ್ಲಿ ಬಿಡುಗಡೆಯಾದ ಹೆಚ್ಚುವರಿ ಡೋಪಮೈನ್ ಕಾರಣವಾಗುವದು.


 • ನಿದ್ದೆಯ ಮಂಪರು ಸದಾ ಇರುವಂತೆ ಮಾಡುತ್ತದೆ

  ನೀವು ಅಧಿಕ ಪ್ರಮಾಣದಲ್ಲಿ ಹಸ್ತ ಮೈಥುನದಲ್ಲಿ ತೊಡಗಿಸಿಕೊಂಡರೆ, ಅದು ನಿಮ್ಮನ್ನು ನಿದ್ದೆಯ ಮಂಪರಿನಲ್ಲಿರುವಂತೆ ಮಾಡುತ್ತದೆ. ಏಕೆಂದರೆ ಹಸ್ತ ಮೈಥುನವು ಅಧಿಕವಾದಷ್ಟು ಮೆದುಳಿನಲ್ಲಿ ಅಧಿಕ ಪ್ರಮಾಣದ ಡೋಪಮೈನ್ ಬಿಡುಗಡೆಯಾಗುತ್ತದೆ.ಇದರಿಂದ ಮಂಪರು ಆವರಿಸುತ್ತದೆ.


 • ಮರೆವು ಉಂಟಾಗುವುದು!

  ಅತಿಯಾಗಿ ಹಸ್ತಮೈಥುನ ಮಾಡುವುದರಿಂದ ಮಿದುಳಿನಲ್ಲಿ ಅತಿಯಾದ ಡೋಪಮೈನ್ ಬಿಡುಗಡೆ ಆಗುತ್ತದೆ. ಇದರಿಂದ ಮರೆವು ಉಂಟಾಗುವುದು. ಕಾಲಾಂತರದಲ್ಲಿ ಕ್ರಮೇಣ ಮಿದುಳಿಗೆ ಸಂಬಂಧಿಸಿದ ಅನೇಕ ಅಡ್ಡ ಪರಿಣಾಮಗಳನ್ನು ಅನುಭವಿಸಬೇಕಾಗುವುದು.


 • ಲೈಂಗಿಕ ಆಸಕ್ತಿ ಕುಂದುವುದು

  ಅಧಿಕ ಪ್ರಮಾಣದಲ್ಲಿ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುವವರು ಸ್ವಾಭಾವಿಕವಾದ ಲೈಂಗಿಕ ಜೀವನದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಇವರಿಗೆ ಆ ಕಾಲ್ಪನಿಕ ಲೈಂಗಿಕ ಜೀವನವೇ ಇಷ್ಟವಾಗುತ್ತದೆ. ಜೊತೆಗೆ ಅಧಿಕ ಹಸ್ತ ಮೈಥುನವು ಗಂಡಸರ ದೇಹದಲ್ಲಿರುವ ಟೆಸ್ಟೋಸ್ಟೇರೋನ್ ಎಂಬ ಲೈಂಗಿಕತೆಗೆ ಸಂಬಂಧಿಸಿದ ಹಾರ್ಮೋನ್ ಮೇಲೆ ದುಷ್ಪರಿಣಾಮ ಬೀರುತ್ತದೆ ಇದರಿಂದಾಗಿ ಈ ಸಮಸ್ಯೆ ಕಂಡು ಬರುತ್ತದೆ.


 • ವಯಸ್ಸಾಗುವುದು

  ವಾರಕ್ಕೆ ಆರರಿಂದ ಏಳು ಬಾರಿ ಹಸ್ತಮೈಥುನ ಮಾಡುವ ಪುರುಷರು ವೇಗವಾಗಿ ವಯಸ್ಸಿಗೆ ಹೋಗುತ್ತಾರೆ. ಹೊಸ ಅಧ್ಯಯನ ಹೇಳುತ್ತದೆ, ಇದು ಮುಖ್ಯವಾಗಿ ಟೆಸ್ಟೋಸ್ಟೆರಾನ್ ಮಟ್ಟಕ್ಕೆ ತಳುಕುಹಾಕಿಕೊಂಡಿರುತ್ತದೆ ಎನ್ನಲಾಗುವುದು.
ಹದಿಹರೆಯಕ್ಕೆ ಕಾಲಿಡುತ್ತಾ ಇರುವಂತೆ ಮನಸ್ಸಿನಲ್ಲಿ ಕಾಮನೆಗಳು ಮೂಡುವುದು ಸಹಜ. ಇದನ್ನು ಹತ್ತಿಕೊಳ್ಳಬಹುದಾದರೂ ಯಾವುದೇ ತೊಂದರೆಯಾಗದಂತೆ ಮಾಡುವಂತಹ ಹಸ್ತುಮೈಥುನವು ಕಾಮಾಸಕ್ತಿಯನ್ನು ತಣಿಸುವುದು. ಇದು ಉತ್ತಮವೆಂದು ವೈದ್ಯರು ಹೇಳುತ್ತಾರೆ. ಆದರೆ ಕಾಮವನ್ನು ತಣಿಸಲು ಪುರುಷರು ಹಾಗೂ ಮಹಿಳೆಯರು ಇದನ್ನೇ ಚಟವಾಗಿಸಿಕೊಂಡರೆ ಆಗ ಕೆಲವೊಂದು ಸಮಸ್ಯೆಗಳು ಕಾಡುವುದು ಖಚಿತ. ಹದಿಹರೆಯದಲ್ಲಿ ಕುತೂಹಲಕ್ಕೆಂದು ಆರಂಭವಾಗುವಂತಹ ಹಸ್ತಮೈಥುನದ ಚಟವು ಇದರ ಬಳಿಕ ಅಭ್ಯಾಸವಾಗಿ ಹೋಗಬಹುದು.

ಏಕಾಂಗಿಯಾಗಿರುವಂತಹವರು ಇದರ ಮೊರೆ ಹೋಗುವುದು ಹೆಚ್ಚು. ವಾರದಲ್ಲಿ 3-4 ಸಲ ಮಾಡುವುದು ಸಾಮಾನ್ಯವೆಂದು ಪರಿಗಣಿಸಲಾಗಿದೆ. ಅದಾಗ್ಯೂ, ದಿನದಲ್ಲಿ ಒಂದೆರಡು ಸಲ ಹಸ್ತಮೈಥುನ ಮಾಡಿಕೊಳ್ಳ ಬೇಕಾದರೆ ಆಗ ಇದು ಸಮಸ್ಯೆಯಾಗಬಹುದು. ಅತಿಯಾದ ಹಸ್ತಮೈಥುನದಿಂದಾಗಿ ಆಗುವಂತಹ ಸಮಸ್ಯೆಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗಿದೆ.

   
 
ಹೆಲ್ತ್