Back
Home » ಆರೋಗ್ಯ
ಒಂದು ವೇಳೆ ಜೇಡ ಕಚ್ಚಿದರೆ-ತಕ್ಷಣ ಹೀಗೆ ಮಾಡಿದ್ರೆ ಕೂಡಲೇ ಗುಣವಾಗುತ್ತದೆ
Boldsky | 30th Sep, 2018 07:01 AM
 • ಜೇಡದ ಕಡಿತವು ಹೇಗೆ ಕಾಣಿಸುವುದು?

  ಸಾಮಾನ್ಯವಾಗಿ ಕೀಟಗಳು ಕಡಿದಾಗ ಹೇಗೆ ಗಾಯವಾಗುತ್ತದೆಯಾ ಅದೇ ರೀತಿಯ ಗಾಯವಾಗುವುದು. ಸ್ವಲ್ಪ ಊದಿಕೊಂಡು ಗುಳ್ಳೆ ಬಂದಿರಬಹುದು. ಇದು ತುರಿಕೆ ಉಂಟುಮಾಡಿ, ಕೆಂಪಾಗಿರಬಹುದು. ಇದು ಹೆಚ್ಚು ಸಮಸ್ಯೆಯುಂಟು ಮಾಡಲ್ಲ. ಜೇನುನೊಣದ ಕಡಿತದಷ್ಟೇ ಇರುವುದು. ಗಂಟೆಯಲ್ಲಿ ಇದು ಮಾಯವಾಗುವುದು. ಕೆಂಪು ಬಣ್ಣವು ಗಾಯದಿಂದ ಸುತ್ತಲಿನ ಭಾಗಕ್ಕೆ ಪಸರಿಸಬಹುದು. ಕಡಿತದ ಭಾಗದಲ್ಲಿ ಒಂದು ಗಾಯವಾಗಿರಬಹುದು. ಕಡಿತದ ಭಾಗದಲ್ಲಿ ಜುಮ್ಮೆನಿಸುವ ಭಾವನೆ ಮೂಡಿಸಬಹುದು.


 • ಜೇಡ ಕಡಿತದ ವೇಳೆ ಪಾಲಿಸಬೇಕಾದ ಕ್ರಮಗಳು

  *ನೀರು ಮತ್ತು ಸೋಪ್ ಹಾಕಿ ಕಡಿತದ ಜಾಗ ಶುಚಿಗೊಳಿಸಿ.
  *ಈ ಭಾಗಕ್ಕೆ ಆ್ಯಂಟಿಬಯೋಟಿಕ್ ಕ್ರೀಮ್ ಹಚ್ಚಿ.
  *ತಂಪಾದ, ಒದ್ದೆ ಬಟ್ಟೆಯನ್ನು ಕಡಿತದ ಜಾಗಕ್ಕೆ ಕಟ್ಟಿಕೊಳ್ಳಿ.
  *ಕಾಲು ಅಥವಾ ಕೈಯ ಭಾಗಕ್ಕೆ ಕಚ್ಚಿದ್ದರೆ ಅದನ್ನು ಮೇಲೆತ್ತಿಕೊಳ್ಳಿ.
  *ಆಂಟಿಹಿಸ್ಟಮೈನ್ ನೋವು ಶಮನಗೊಳಿಸುವುದು.
  *ಅಸೆಟಾಮಿನೋಫೆನ್ ಅಥವಾ ಐಬುಪ್ರೊಫೇನ್ ನ್ನು ನೋವು ನಿವಾರಿಸಲು ಸೇವಿಸಬಹುದು. ಜೇಡ ಕಚ್ಚಿದರೆ ಮಾಡಬಹುದಾದ ಮನೆಮದ್ದುಗಳು

  Most Read: ಈ ವ್ಯಕ್ತಿ ದಿನಕ್ಕೆ ಮೂರು ಕಿ.ಲೋ.ಮಣ್ಣು, ಕಲ್ಲು ಮತ್ತು ಒಂದು ಇಟ್ಟಿಗೆ ತಿನ್ನುತ್ತಾನಂತೆ!


 • ಐಸ್(ಮಂಜುಗಡ್ಡೆ)

  ಕಡಿತದ ಭಾಗಕ್ಕೆ ಬಿಸಿ ನೀರು ಮತ್ತು ಸೋಪ್ ಹಾಕಿ ತೊಳೆಯಿರಿ. ಇದರ ಬಳಿಕ ಆ ಜಾಗಕ್ಕೆ ಐಸ್ ಇಡಿ. ಇದು ಊತ ತಡೆಯುವುದು. 10 ನಿಮಿಷ ಹಾಗೆ ಬಿಡಿ. ದಿನದಲ್ಲಿ ಹಲವಾರು ಸಲ ಐಸ್ ಇಡಿ. ಜೇಡದ ಕಡಿತಕ್ಕೆ ಇದು ತುಂಬಾ ನೈಸರ್ಗಿಕ ಮತ್ತು ಸರಳ ಚಿಕಿತ್ಸೆ.


 • ಇದ್ದಿಲು

  ವಿಷಕಾರಿ ಅಂಶವನ್ನು ತೆಗೆಯುವಂತಹ ಗುಣವು ಇದರಲ್ಲಿದೆ. ಇದ್ದಿಲಿನ ಪೇಸ್ಟ್ ನ್ನ ಕಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ. ಇದು ವಿಷವಿದ್ದರೆ ಅದನ್ನು ಹೊರಹಾಕುವುದು. ಕಡಿತದ ಜಾಗದಲ್ಲಿ ಒಂದು ಅಥವಾ ಎರಡು ಗಂಟೆಗಳ ಕಾಲ ಪೇಸ್ಟ್ ಇರಲಿ. ಗಾಯವು ಒಣಗುವ ತನಕ ನೀವು ದಿನದಲ್ಲಿ ಎರಡು ಸಲ ಹೀಗೆ ಮಾಡಿ.


 • ಆಲೂಗಡ್ಡೆ

  ಆಲೂಗಡ್ಡೆಯಲ್ಲಿ ಉರಿಯೂತ ಶಮನಗೊಳಿಸುವಂತಹ ಗುಣವು ಇದೆ. ಬಟಾಟೆಯನ್ನು ತುರಿದುಕೊಳ್ಳಿ ಮತ್ತು ಇದನ್ನು ತೆಳುವಾದ ಬಟ್ಟೆಯಲ್ಲಿ ಹಾಕಿ ಕಟ್ಟಿ. ಇದನ್ನು ಕಚ್ಚಿದ ಜಾಗಕ್ಕೆ ಇಟ್ಟುಬಿಡಿ. ಬಟಾಟೆ ಒಣಗುವ ತನಕ ಹೀಗೆ ಬಿಡಿ.


 • ಲ್ಯಾವೆಂಡರ್ ತೈಲ

  ಜೇಡ ಕಡಿತದಿಂದ ಆಗಿರುವಂತಹ ಉರಿಯೂತವನ್ನು ಈ ಎಣ್ಣೆಯು ಶಮನಗೊಳಿಸುವುದು. ಕೆಲವು ಹನಿ ಲ್ಯಾವೆಂಡರ್ ತೈಲವನ್ನು ತೆಂಗಿನೆಣ್ಣೆ ಜತೆಗೆ ಮಿಶ್ರಣ ಮಾಡಿಕೊಂಡು ಕಚ್ಚಿದ ಜಾಗಕ್ಕೆ ಹಚ್ಚಿಕೊಳ್ಳಿ.


 • ಅಡುಗೆ ಸೋಡಾದ ಪೇಸ್ಟ್

  ಅಡುಗೆ ಸೋಡಾವನ್ನು ಬಳಸಿಕೊಂಡು ಜೇಡ ಕಡಿತವನ್ನು ಶಮನ ಮಾಡುವುದು ತುಂಬಾ ಸರಳ ಹಾಗೂ ಅಗ್ಗದ ಚಿಕಿತ್ಸೆ. ಅಡುಗೆ ಸೋಡಾ ಮತ್ತು ನೀರನ್ನು ಬಳಸಿಕೊಂಡು ಪೇಸ್ಟ್ ಮಾಡಿ. ಇದನ್ನು ಕಚ್ಚಿದ ಜಾಗಕ್ಕೆ ಹಲವಾರು ಸಲ ಹಚ್ಚಿಕೊಳ್ಳಿ.

  Most Read: ಒಣಕೆಮ್ಮು, ಗಂಟಲ ಕೆರೆತ, ಕಫ ನಿವಾರಣೆಗೆ: ಏಲಕ್ಕಿ ಪರ್ಫೆಕ್ಟ್ ಮನೆಮದ್ದು


 • ಎತ್ತರದಲ್ಲಿಡಿ

  ನಿಮ್ಮ ಕೈ ಅಥವಾ ಕಾಲಿಗೆ ಜೇಡವು ಕಚ್ಚಿದರೆ ಆಗ ಅವುಗಳನ್ನು ಎತ್ತರದ ಭಾಗದಲ್ಲಿ ಇಡಿ. ಇದರಿಂದ ಊತ ಕಡಿಮೆಯಾಗುವುದು.


 • ಅಲೋವೆರಾ

  ಇದು ಕಡಿತದಿಂದ ಆಗುವ ಉರಿಯೂತ ಮತ್ತು ತುರಿಕೆ ಕಡಿಮೆ ಮಾಡುವುದು. ಅಲೋವೆರಾವನ್ನು ದಿನದಲ್ಲಿ ಕೆಲವು ಬಾರಿ ಕಡಿತದ ಭಾಗಕ್ಕೆ ಹಚ್ಚಿಕೊಳ್ಳಿ.

  Most Read: ಸಾಲ ಮಾಡಿಯಾದ್ರೂ ತುಪ್ಪ ತಿನ್ನಿ! ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು


 • ವಿಚ್ ಹ್ಯಾಝೆಲ್

  ಇದರಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಮತ್ತು ಸಂಕೋಚನ ಗುಣದಿಂದಾಗಿ ಇದು ಚರ್ಮಕ್ಕೆ ಶಮನ ನೀಡುವುದು. ವಿಚ್ ಹ್ಯಾಝೆಲ್ ಜೇಡ ಕಡಿತಕ್ಕೆ ಒಳ್ಳೆಯ ಚಿಕಿತ್ಸೆ.


 • ಅಪಾಯ ಮತ್ತು ವೈದ್ಯರನ್ನು ಯಾವಾಗ ಭೇಟಿಯಾಗಬೇಕು?

  ಕಡಿತದ ಭಾಗದಲ್ಲಿ ತೀವ್ರ ನೋವು ಅಥವಾ ಸೆಳೆತ ಉಂಟಾಗುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಲೇಬೇಕು. ಉಸಿರಾಟದಲ್ಲಿ ತೊಂದರೆ ಅಥವಾ ಬೇರೆ ಯಾವುದೇ ಸಮಸ್ಯೆಯು ಕಡಿತದ ಬಳಿಕ ಕಾಣಿಸಿಕೊಂಡರೆ ಆಗ ನೀವು ತಕ್ಷಣ ವೈದ್ಯರನ್ನು ಭೇಟಿಯಾಗಿ. ಕಚ್ಚಿದ ಗಾಯವು ಒಣಗದೆ ಇದ್ದರೆ ಅಥವಾ ಸುತ್ತಲಿನ ಭಾಗವು ಕೆಂಪಾಗಿದ್ದು, ಗಾಯದಲ್ಲಿ ಕುಳಿ ಕಾಣಿಸಿದ್ದರೆ ಆಗ ನೀವು ವೈದ್ಯರ ಸಲಹೆ ಪಡೆಯಬೇಕು. ಲಕ್ಷಣಗಳು ಹೆಚ್ಚಾದಾಗ ವಿಷಕಾರಿ ಜೇಡವು ಕಚ್ಚಿದೆ ಎಂದು ಹೇಳಬಹುದು.


 • ಮಹಿಳೆಯ ಕಿವಿಯೊಳಗೆ ಜೇಡದ ವಾಸ! ಕೊನೆಗೆ ಏನಾಯಿತು ಗೊತ್ತೇ?

  ಅರೆಅರೆ ಕಿವಿಯೊಳಗೆ ಜೇಡದ ವಾಸವೇ? ಕೇಳಿ ಅಚ್ಚರಿಯಾಯಿತೇ? ಹೌದು ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್
  ಓರ್ವ ತರುಣಿ ತನಗೆ ಎದುರಾದ ತಲೆನೋವಿಗೆ ಚಿಕಿತ್ಸೆ ಪಡೆಯಲೆಂದು ವೈದ್ಯರ ಬಳಿ ಹೋದಾಗ ಇದಕ್ಕೆ ಜೇಡವೊಂದು ಕಾರಣ ಎಂದು ಆಕೆ ಕನಸಿನಲ್ಲಿಯೂ ಊಹಿಸಿರಲಾರಳು! ಆಕೆಯ ಕಿವಿಯನ್ನು ಪರೀಕ್ಷಿಸಿದ ವೈದ್ಯರಿಗೆ ಅಲ್ಲಿ ವಾಸವಾಗಿರುವ ಜೇಡವೊಂದನ್ನು ಕಂಡಾಗ ಅವರೇ ಮೊದಲು ಚಕಿತರಾಗಿದ್ದರಂತೆ. ಅದರಲ್ಲೂ ಜೇಡ ಜೀವಂತವಾಗಿದ್ದು ಆರಾಮವಾಗಿ ಕಿವಿಯ ಒಳಭಾಗವನ್ನೇ ತನ್ನ ಮನೆಯನ್ನಾಗಿಸಿ ಆರಾಮವಾಗಿ ಓಡಾಡಿಕೊಂಡಿತ್ತು. ಜೇಡದ ಕಾಲುಗಳಲ್ಲಿ ಅತಿಸೂಕ್ಷ್ಮವಾದ ಕೂದಲುಗಳಿದ್ದು ಜೇಡ ನಡೆದಾಡುವಾಗ ಕಿವಿಯ ಅತಿಸೂಕ್ಷ್ಮಭಾಗಗಳಿಗೆ ಸಂವೇದನೆಯುಂಟಾಗಿ ಇದರ ಪರಿಣಾಮದಿಂದ ಆಕೆಗೆ ತಲೆನೋವು ಪ್ರಾರಂಭವಾಗಿತ್ತು! ಬನ್ನಿ, ನಮ್ಮ ಭಾರತದಲ್ಲಿಯೇ ನಡೆದ ಈ ಘಟನೆಯ ಬಗ್ಗೆ ಅರಿಯೋಣ..


 • ಒಂದು ದಿನ ಎದ್ದಾಗ ಆಕೆಯ ಕಿವಿ ಮುಚ್ಚಿತ್ತು

  ಒಂದು ದಿನ ಆಕೆ ಎದ್ದಾಗ ಆಕೆಯ ಬಲಗಿವಿ ಎಂದಿನಂತಿಲ್ಲ ಎನ್ನಿಸಿತ್ತು. ಕಿವಿ ನೋವಿನಿಂದ ಕೂಡಿದ್ದು ಪೂರ್ಣವಾಗಿ ಮುಚ್ಚಿಹೋಗಿದೆ ಎಂಬ ಅನುಭವವಾಗುತ್ತಿತ್ತು. ಆದರೆ ಹೊರಭಾಗಕ್ಕೇನೂ ಕಾಣದ ಕಾರಣ ಹಾಗೂ ಕೊಂಚ ಹೊತ್ತಿನ ಬಳಿಕ ಸರಿಹೋಗಬಹುದೆಂದು ತಿಳಿದು ಆಕೆ ಪ್ರಾರಂಭಿಕ ನೋವನ್ನು ಅಲಕ್ಷಿ಼ಸಿದಳು. ಆದರೆ ಕಾಲಕ್ರಮೇಣ ಈ ನೋವು ಹೆಚ್ಚುತ್ತಾ ಹೋಯಿತು ಹಾಗೂ ಕೊಂಚ ಸಮಯದಲ್ಲಿಯೇ ತಡೆಯಲಸಾಧ್ಯವಾಯ್ತು.


 • ಆಕೆಯ ಕಿವಿಯೊಳಗೇನಾಗುತ್ತಿದೆ ಎಂದೇ ಆಕೆಗೆ ಗೊತ್ತಿರಲಿಲ್ಲ

  ನೋವಿಗೆ ಏನು ಕಾರಣ ಎಂದು ಆಕೆ ಊಹಿಸಲು ಅಸಮರ್ಥಳಾಗಿದ್ದಳು. ಜೇಡ ಅಲುಗಿದಂತೆಲ್ಲಾ ನೋವು ಭುಗಿಲೆದ್ದು ಆಕೆ ತತ್ತರಿಸುವಂತೆ ಮಾಡುತ್ತಿತ್ತು.

  Most Read: ಪಿತೃ ಪಕ್ಷದ ವೇಳೆ ಕಾಗೆಗಳಿಗೆ ಏಕೆ ಇಷ್ಟೊಂದು ಮಹತ್ವ?


 • ತಪಾಸಣೆ ನಡೆಸಿದ ವೈದ್ಯರಿಗೇ ಆಘಾತ ಎದುರಾಗಿತ್ತು

  ನೋವು ತಡೆಯಲಾಗದೇ ವೈದ್ಯರ ಬಳಿಗೆ ಹೋದ ಆಕೆಯನ್ನು ಪರಿಶೀಲಿಸಿದ ವೈದ್ಯರಿಗೆ ತಮ್ಮ ಜೀವಮಾನದ ದೊಡ್ಡ ಆಘಾತ ಎದುರಾಗಿತ್ತು. ಕಿವಿಯೊಳಗೊಂದು ಪೂರ್ಣಪ್ರಮಾಣದ ಜೇಡವೊಂದು ಮನಕಟ್ಟಿ ಕುಳಿತಿತ್ತು.


 • ಆಕೆಯ ನೋವಿಗೆ ಏನು ಕಾರಣ ಎಂದು ಅಕೆಗೆ ತಿಳಿಸಿದಾಗ....

  ಆಕೆಗೆ ಸತ್ಯಸಂಗತಿಯನ್ನು ತಿಳಿಸಿದಾಗ ಆಕೆ ತನ್ನ ಜೀವಮಾನದ ಗರಿಷ್ಟ ಆಘಾತವನ್ನು ಎದುರಿಸಬೇಕಾಯ್ತು ಹಾಗೂ ಆಕೆ ವಿಪರೀತವಾಗಿ ಹೆದರಿದ್ದಳು ಹಾಗೂ ತಾನು ಸತ್ತೇ ಹೋಗುತ್ತೇನೆಂದು ತೀವ್ರವಾಗಿ ಬೆದರಿದಳು. ಕಿವಿಯೊಳಗೆ ಚಿಕ್ಕ ಪುಟ್ಟ ಕೀಟಗಳು ನುಸುಳುವುದು ಸಾಮಾನ್ಯವಾದರೂ ಕಿವಿಯೊಳಗೆ ಮನೆಕಟ್ಟಿ ಕುಳಿತ ಜೇಡದ ಬಗ್ಗೆ ವೈದ್ಯವಿಜ್ಞಾನದಲ್ಲಿಯೇ ಯಾವ ಮಾಹಿತಿಯೇ ಇಲ್ಲದ ಕಾರಣ ವೈದ್ಯರಿಗೂ ಇದೊಂದು ದೊಡ್ಡ ಸವಾಲಾಗಿತ್ತು.

  ಈಕೆಯ ಕಿವಿಯಿಂದ ಶಸ್ತ್ರಚಿಕಿತ್ಸೆಯ ಮೂಲಕ ಜೇಡನನ್ನು ಹೊರತೆಗೆಯುವುದು ಭಾರೀ ಕಷ್ಟಕರವಾಗಿತ್ತು
  ಜೇಡ ಜೀವಂತವಾಗಿದ್ದು ಇದು ಯಾವುದೇ ಸಮಯದಲ್ಲಿ ಆಕೆಯನ್ನು ಕುಟುಕುವ ಸಂಭವವಿತ್ತು. ಅಲ್ಲದೇ ಬೆದರಿದ್ದ ಮಹಿಳೆಯ ಕಿವಿಯಿಂದ ಕೀಟವನ್ನು ಆಕೆಗೆ ಕುಟುಕದಂತೆ ಹೊರತೆಗೆಯುವುದೂ ದೊಡ್ಡ ಸವಾಲಾಗಿತ್ತು. ತನ್ನ ಕಿವಿಯೊಳಗೆ ಜೇಡವಿದೆ ಎಂದು ಗೊತ್ತಾದ ಕ್ಷಣದಿಂದ ಆಕೆ ತತ್ತರಿಸಿಹೋಗಿ ಒಂದು ಕಡೆ ನಿಲ್ಲಲಾರದೇ ಚಡಪಡಿಸಹತ್ತಿದ್ದಳು. ಅನಿವಾರ್ಯವಾಗಿ ವೈದ್ಯರು ಆಕೆಗೆ ನಿದ್ದೆ ಬರುವ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ನೀಡಿ ಶಸ್ತ್ರಚಿಕಿತ್ಸೆಗೆ ಸಜ್ಜಾದರು.


 • ಶಸ್ತ್ರಚಿಕಿತ್ಸೆ ಯಶಸ್ವಿಯಾಯ್ತು

  ಮಹಿಳೆಯನ್ನು ಗಾಢನಿದ್ದೆಗೆ ಒಳಪಡಿಸಿದ ಬಳಿಕ ಆಕೆಯ ಕಿವಿಯಲ್ಲಿ ಉಪ್ಪುನೀರನ್ನು ತುಂಬಿ ಜೇಡ ತಾನಾಗಿಯೇ ಹೊರಬರುವಂತೆ ಮಾಡಲಾಯಿತು. ಉಪ್ಪನ್ನು ಸಹಿಸದ ಜೇಡ ತನ್ನ ಮನೆಯನ್ನು ಬಿಟ್ಟು ತಕ್ಷಣವೇ ಹೊರಬಂದಿತ್ತು! ಬಳಿಕ ಕಿವಿಯೊಳಗಿದ್ದ ಜೇಡನ ಬಲೆಯನ್ನೆಲ್ಲಾ ನಿವಾರಿಸಿ ಕಿವಿಯನ್ನು ಸ್ವಚ್ಛಗೊಳಿಸಿ ಆಕೆಯನ್ನು ಬಳಿಕ ಮನೆಗೆ ಕಳಿಸಿಕೊಡಲಾಯ್ತು. ಈಗ ಈ ಮಹಿಳೆ ಸಾಮಾನ್ಯ ಜೀವನ ನಡೆಸುತ್ತಿದ್ದಾಳೆ.

  Most Read: ಮನೆಯಲ್ಲಿ ಶಾಂತಿ, ನೆಮ್ಮದಿ ಇರಬೇಕೆಂದರೆ-ಈ 8 ವಾಸ್ತು ಟಿಪ್ಸ್ ಅನುಸರಿಸಿ


 • ಕಿವಿಯೊಳಗೆ ಕೀಟಗಳ ಪ್ರವೇಶವನ್ನು ನಿರ್ಬಂಧಿಸುವುದು ಹೇಗೆ?

  ನಮ್ಮ ಕಿವಿಯ ತೂತನ್ನೂ ತಮಗೆ ಮನೆ ಮಾಡಲು ಸೂಕ್ತ ಎಂದು ಇರುವೆ ಮೊದಲಾದ ಕೀಟಗಳು ಪರಿಗಣಿಸಿ ಒಳಗೆ ಧಾವಿಸುತ್ತವೆ. ಇದನ್ನು ತಡೆಯಲು ಕೀಟಗಳ ಬಾಧೆ ಇಲ್ಲದ ಪ್ರದೇಶದಲ್ಲಿ ಮಲಗುವುದು ಉತ್ತಮ ಕ್ರಮವಾಗಿದೆ. ಸಾಮಾನ್ಯವಾಗಿ ನೆಲದ ಮೇಲೆ ಮಲಗುವಾಗ ಸುತ್ತ ಮುತ್ತಲ ಸ್ಥಳ ಸ್ವಚ್ಚವಾಗಿಲ್ಲದಿದ್ದರೆ ಇಲ್ಲಿ ಚಿಕ್ಕ ಪುಟ್ಟ ಕೀಟಗಳು ಧಾವಿಸುವುದು ಸಾಮಾನ್ಯ ಹಾಗೂ ಇವುಗಳನ್ನು ಹಿಡಿಯಲು ಜೇಡಗಳೂ ಆಗಮಿಸುತ್ತವೆ. ಹಾಗಾಗಿ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವುದೇ ಅತ್ಯಂತ ಉತ್ತಮವಾದ ಮುನ್ನೆಚ್ಚರಿಕೆಯ ಕ್ರಮವಾಗಿದೆ.ಇಂತಹ ವಿಸ್ಮಯಕಾರಿ ಸಂಗತಿಗಳು ಇಷ್ಟವೇ? ಹಾಗಾದರೆ ಈ ವಿಭಾಗವನ್ನು ಆಗಾಗ ಗಮನಿಸುತ್ತಿರಿ, ಮುಂದೆ ವಿಶ್ವದಲ್ಲಿ ನಡೆಯುವ ಇನ್ನೂ ಹಲವಾರು ರೋಚಕ ಸಂಗತಿಗಳನ್ನು ನಾವು ತಿಳಿಸುವವರಿದ್ದೇವೆ
ಹಾಲಿವುಡ್ ನ ಸ್ಪೈಡರ್ ಮೆನ್ ಸಿನಿಮಾ ನೋಡಿರುವವರಿಗೆ ಜೇಡ ಕಚ್ಚಿದ ವ್ಯಕ್ತಿಯಲ್ಲಿ ಹೇಗೆ ಕೆಲವೊಂದು ಬದಲಾವಣಿಗಳು ಆಗುತ್ತದೆ ಎಂದು ನೋಡಿರಬಹುದು. ಆದರೆ ಅದು ಸಿನಿಮಾ. ಜೇಡದ ಕಡಿತ ಸಾಮಾನ್ಯವೆಂದು ಹೇಳಬಹುದು. ಆದರೆ ಕೆಲವೊಂದು ಪ್ರದೇಶಗಳಲ್ಲಿ ಇರುವಂತಹ ಜೇಡವು ತುಂಬಾ ವಿಷಕಾರಿಯಾಗಿರುವುದು ಮತ್ತು ಇದು ಪ್ರಾಣಕ್ಕೆ ಕುತ್ತು ತರಬಹುದು. ಜೇಡ ಕಚ್ಚುವುದು ತುಂಬಾ ಅಪರೂಪವೆನ್ನಬಹುದು.

ಒಂದು ವೇಳೆ ಕಚ್ಚಿದರೆ ಆಗ ಏನು ಮಾಡಬೇಕು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಆದರೆ ಹೆಚ್ಚಾಗಿ ಜೇಡದ ಕಡಿತವು ಯಾವುದೇ ಹಾನಿಯುಂಟು ಮಾಡುವುದಿಲ್ಲ. ಮುಂದಕ್ಕೆ ಓದಿ ನೀವು ಜೇಡದ ಕಡಿತದ ಮಾಹಿತಿ ಪಡೆಯಿರಿ..

ಜೇಡದ ಕಡಿತವು ಹೇಗೆ ಕಾಣಿಸುವುದು?

ಸಾಮಾನ್ಯವಾಗಿ ಕೀಟಗಳು ಕಡಿದಾಗ ಹೇಗೆ ಗಾಯವಾಗುತ್ತದೆಯಾ ಅದೇ ರೀತಿಯ ಗಾಯವಾಗುವುದು. ಸ್ವಲ್ಪ ಊದಿಕೊಂಡು ಗುಳ್ಳೆ ಬಂದಿರಬಹುದು. ಇದು ತುರಿಕೆ ಉಂಟುಮಾಡಿ, ಕೆಂಪಾಗಿರಬಹುದು. ಇದು ಹೆಚ್ಚು ಸಮಸ್ಯೆಯುಂಟು ಮಾಡಲ್ಲ. ಜೇನುನೊಣದ ಕಡಿತದಷ್ಟೇ ಇರುವುದು. ಗಂಟೆಯಲ್ಲಿ ಇದು ಮಾಯವಾಗುವುದು. ಕೆಂಪು ಬಣ್ಣವು ಗಾಯದಿಂದ ಸುತ್ತಲಿನ ಭಾಗಕ್ಕೆ ಪಸರಿಸಬಹುದು. ಕಡಿತದ ಭಾಗದಲ್ಲಿ ಒಂದು ಗಾಯವಾಗಿರಬಹುದು. ಕಡಿತದ ಭಾಗದಲ್ಲಿ ಜುಮ್ಮೆನಿಸುವ ಭಾವನೆ ಮೂಡಿಸಬಹುದು.

ಜೇಡದ ಕಡಿತದಿಂದ ಆಗುವ ತೊಂದರೆಗಳು ಯಾವುದು?

ಜೇಡವು ಕಡಿದ ಕೆಲವು ಗಂಟೆಗಳಲ್ಲಿ ಕಡಿತದ ಭಾಗದಲ್ಲಿ ಜುಮ್ಮೆನಿಸುವ ಅನುಭವ ಅಥವಾ ಸ್ಪರ್ಶ ಇಲ್ಲದೆ ಇರಬಹುದು. ಸುತ್ತಲಿನ ಜಾಗದಲ್ಲಿ ನೋವು ಇರಬಹುದು. ಸ್ನಾಯು ನೋವು ಅಥವಾ ಸೆಳೆತವು ಕಾಣಿಸಬಹುದು.

   
 
ಹೆಲ್ತ್