Back
Home » ಆರೋಗ್ಯ
ಬೆರಳುಗಳ ಉಗುರುಗಳಿಗೆ ಕಾಡುವ 'ಶಿಲೀಂಧ್ರದ ಸೋಂಕು'-ನೀವು ತಿಳಿದಿರಬೇಕಾದ ಸಂಗತಿಗಳು
Boldsky | 30th Sep, 2018 10:02 AM
 • ಉಗುರಿನ ಶಿಲೀಂಧ್ರದ ಸೋಂಕಿಗೆ ಕಾರಣಗಳೇನು?

  ಅಮೇರಿಕಾದ ಚರ್ಮಶಾಸ್ತ್ರ ಅಧ್ಯಯನವಿಭಾಗದ ಪ್ರಕಾರ ಉಗುರುಗಳಲ್ಲಿ ತೇವಾಂಶವೂ ಇದ್ದು ತಾಪಮಾನವೂ ಬೆಚ್ಚಗಿದ್ದರೆ ಈ ಭಾಗದಲ್ಲಿ ಉಗುರಿನ ಶಿಲೀಂಧ್ರದ ಸೋಂಕು ಎದುರಾಗಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಕೈ ಅಥವಾ ಕಾಲು ಉಗುರುಗಳನ್ನು ಹೆಚ್ಚಿನ ಕಾಲ ತೇವದಲ್ಲಿಯೇ ಇರಿಸುವ ಅನಿವಾರ್ಯತೆ ಇರುವವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತದೆ.
  ಉಗುರಿನ ಶಿಲೀಂಧ್ರದ ಸೋಂಕಿನ ಲಕ್ಷಣಗಳು:
  * ಉಗುರಿನ ಅಡಿಯಲ್ಲಿ ಚರ್ಮ ಸಿಪ್ಪೆಯಂತೇಳುವುದು
  * ಉಗುರಿನ ತುದಿ ಅಥವಾ ಅಂಚು ವೃತ್ತಾಕಾರದಲ್ಲಿ ಒಳಮುಖವಾಗಿ ಮಡಚಿಕೊಳ್ಳುವುದು
  * ಉಗುರಿನ ಬುಡದ ಭಾಗದಲ್ಲಿ ಬಿಳಿಯ ಅಥವಾ ಹಳದಿ ಮಚ್ಚೆಗಳು ಕಾಣಿಸಿಕೊಳ್ಳುವುದು
  * ಬಿಳಿಯ ಅಥವಾ ಹಳದಿ ಬಣ್ಣದ ಸರಳರೇಖೆಗಳು ಕಾಣಿಸಿಕೊಳ್ಳುವುದು
  * ಉಗುರಿನ ಮೇಲ್ಭಾಗದಲ್ಲಿ ಸಿಪ್ಪೆ ಎದ್ದಂತೆ ಉಗುರು ಬೆಳ್ಳಗಾಗಿ ಸಡಿಲವಾಗುವುದು
  * ಉಗುರಿನ ನಡುವೆಯೇ ತುಂಡಾಗಿರುವುದು
  * ಉಗುರಿನ ಬುಡದಿಂದಲೇ ವಿಕೃತಗೊಂಡ ಉಗುರು ಮುಂದುವರೆದಿರುವುದು
  * ಸೋಂಕಿಗೊಳಗಾದ ಉಗುರಿನಿಂದ ವಾಸನೆ ಸೂಸುವುದು

  Most Read: ಪವರ್‌ಫುಲ್ ಎಣ್ಣೆಗಳು: ಕೂದಲು ಉದುರುವಿಕೆ ಸಮಸ್ಯೆಗೆ ಒಂದೇ ವಾರದಲ್ಲಿ ಪರಿಹಾರ


 • ನಿಮ್ಮ ಉಗುರುಗಳಿಗೆ ಉಗುರಿನ ಶಿಲೀಂಧ್ರದ ಸೋಂಕು ತಗುಲಿಗೆ ಎಂದು ತಿಳಿಯುವುದು ಹೇಗೆ?

  ಉಗುರಿನ ಯಾವುದೇ ಬಗೆಯ ಸೋಂಕಿಗೆ ಒಳಗಾದ ಉಗುರು ನೋಡಲಿಕ್ಕೆ ಸಮಾನ ಬಗೆಯ ಲಕ್ಷಣಗಳನ್ನು ಪ್ರಕಟಿಸುತ್ತವೆ. ಹಾಗಾಗಿ ಈ ಸೋಂಕು ಉಗುರಿನ ಶಿಲೀಂಧ್ರದ ಸೋಂಕೇ ಹೌದು ಎಂದು ಖಚಿತವಾಗಿ ಹೇಳಲು ವೈದ್ಯರ ಪರೀಕ್ಷೆ ಅಗತ್ಯವಾಗಿದೆ. ವೈದ್ಯರು ಉಗುರಿನ ಮೇಲ್ಪದರವನ್ನು ಕೊಂಚವಾಗಿ ಕೆರೆದು ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕದಡಿ ಪರೀಕ್ಷಿಸಿ ಇದರ ವರದಿಯನ್ನು ಪರಿಶೀಲಿಸಿದ ಬಳಿಕವೇ ಖಚಿತ ನಿರ್ಧಾರಕ್ಕೆ ಬರುತ್ತಾರೆ.


 • ಉಗುರಿನ ಶಿಲೀಂಧ್ರದ ಸೋಂಕಿಗೆ ಚಿಕಿತ್ಸೆಗಳೇನು?

  ಸಾಮಾನ್ಯವಾಗಿ ಉಗುರಿನ ಬೆಳವಣಿಗೆ ತೀರಾ ನಿಧಾನವಾಗಿರುವುದರಿಂದ ಇದರ ಚಿಕಿತ್ಸೆಯೂ ತೀರಾ ನಿಧಾನವಾಗಿರುತ್ತದೆ. ಉಗುರಿನ ಶಿಲೀಂಧ್ರದ ಸೋಂಕಿಗೆ ಒಳಗಾದ ಭಾಗಕ್ಕೆ ಹಚ್ಚಿಕೊಳ್ಳಲು butenafine hydrochloride, ketoconazole, clotrimazole, miconazole nitrate ಮೊದಲಾದ ಮುಲಾಮುಗಳು ಲಭ್ಯವಿವೆ. ಇದರ ಜೊತೆಗೇ ಮಾತ್ರೆಗಳಾದ terbinafine, itraconazole ಹಾಗೂ fluconazole ಮೊದಲಾದವುಗಳನ್ನೂ ವೈದ್ಯರು ಸಲಹೆ ಮಾಡಬಹುದು. ಆದರೆ ಯಾವುದೇ ಔಷಧಿಯನ್ನೂ ವೈದ್ಯರೇ ನಿರ್ಧರಿಸುತ್ತಾರೆಯೇ ವಿನ: ನೀವಾಗಿ ಸ್ವತಃ ಪ್ರಯೋಗಿಸಬಾರದು.

  Most Read: 'ಬಿ' ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ನೋಡಿ...


 • ಉಗುರಿನ ಶಿಲೀಂಧ್ರದ ಸೋಂಕಿಗೆ ಮನೆಮದ್ದುಗಳು

  ಉಗುರಿನ ಶಿಲೀಂಧ್ರದ ಸೋಂಕಿಗೆ ಕೆಲವಾರು ಮನೆಮದ್ದುಗಳಿವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ ಸರ್ಪಗಂಧಿ (snakeroot) ಎಂಬ ಮೂಲಿಕೆಯ ರಸ, ಒರೆಗ್ಯಾನೋ ಎಣ್ಣೆ, ಟೀಟ್ರೀ ಎಣ್ಣೆ, ಕೆಂಪುಚಕ್ಕೋತ ಬೀಜದ ಎಣ್ಣೆ, ಹಾಗೂ ಓಜೋನೀಕೃತ ಎಣ್ಣೆ (ಓಝೋನ್ ಅನಿಲದೊಡನೆ ಬೆರೆಸಲ್ಪಟ್ಟ ಸೂರ್ಯಕಾಂತಿ ಎಣ್ಣೆ ಅಥವಾ ಆಲಿವ್ ಎಣ್ಣೆ) ಹಾಗೂ ಬೆಳ್ಳುಳ್ಳಿ ಎಣ್ಣೆ, ಲ್ಯಾವೆಂಡರ್ ಎಣ್ಣೆ. ಮ್ದಲಾದವೂ ಈ ಸೋಂಕಿನ ವಿರುದ್ದ ಹೋರಾಡುತ್ತವೆ. ಅಲ್ಲದೇ ಓರೆಗ್ಯಾನೋ ಎಣ್ಣೆ, ಟೀಟ್ರೀ ಎಣ್ಣೆ, ಬೆಳ್ಳುಳ್ಳಿ ಎಣ್ಣೆ, ಮತ್ತು ಲ್ಯಾವೆಂಡರ್ ಎಣ್ಣೆಗಳು ಬಹಳ ಪ್ರಬಲವಾಗಿದ್ದು ಇವನ್ನು ನೇರವಾಗಿ ಉಪಯೋಗಿಸುವ ಮೊದಲು ಆಲಿವ್ ಅಥವಾ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ಸೋಂಕಿಗೊಳಗಾದ ಭಾಗಕ್ಕೆ ಹೆಚ್ಚಬೇಕು. ಇದಕ್ಕಾಗಿ ಎಂದಿಗೂ ಬೆರಳುಗಳನ್ನು ನೇರವಾಗಿ ಸ್ಪರ್ಶಿಸಬಾರದು, ಬದಲಿಗೆ ಹತ್ತಿಯುಂಡೆಯನ್ನು ಈ ಎಣ್ಣೆಯಲ್ಲಿ ಅದ್ದಿ ಸೋಂಕಿಗೊಳಗಾದ ಭಾಗದ ಮೇಲೆ ಕನಿಷ್ಟ ಒಂದು ಘಂಟೆಯಾದರೂ ಹಾಗೇ ಇರುವಂತೆ ಇರಿಸಬೇಕು ಬಳಿಕ ಸ್ವಚ್ಛಬಟ್ಟೆಯಿಂದ ಒರೆಸಿಕೊಂಡು ಸ್ವಚ್ಛಗೊಳಿಸಬೇಕು. ನೀರು ಬಳಸಬಾರದು.


 • ಈ ಸೋಂಕು ತಗಲುವ ಸಾಧ್ಯತೆ ಯಾರಿಗೆ ಹೆಚ್ಚು?

  ಈ ಸೋಂಕನ್ನು ತಡೆಯಲು ಸಾಧ್ಯವಾದರೂ ಕೆಲವು ಸಂದರ್ಭಗಳಲ್ಲಿ ಅನಿವಾರ್ಯವಾಗಿ ಈ ಸೋಂಕು ಎದುರಾಗುತ್ತದೆ. ಒಂದು ವೇಳೆ ನೀವು ಮಧುಮೇಹಿಗಳಾಗಿದ್ದರೆ, ರಕ್ತಪರಿಚಲನೆಯನ್ನು ಕಡಿಮೆಗೊಳಿಸುವ ಯಾವುದೋ ತೊಂದರೆಗೆ ಒಳಗಾಗಿದ್ದರೆ, ಸಾರ್ವಜನಿಕ ಈಜುಕೊಳದಲ್ಲಿ ಈಜಾಡುವ ಅಭ್ಯಾಸ ಹೊಂದಿದ್ದರೆ, ಉಗುರು ಅಥವಾ ಈ ಭಾಗದ ಚರ್ಮದಲ್ಲಿ ಏನಾದರೂ ಪೆಟ್ಟಾಗಿದ್ದರೆ, ಕೃತಕ ಉಗುರುಗಳನ್ನು ಧರಿಸುವ ಅಭ್ಯಾಸ ಹೊಂದಿದ್ದರೆ, ಹೆಚ್ಚು ಹೊತ್ತು ಉಗುರುಗಳನ್ನು ನೀರಿನಲ್ಲಿ ಅದ್ದಿಯೇ ಇರಬೇಕಾದ ಅನಿವಾರ್ಯತೆಯ ಉದ್ಯೋಗದಲ್ಲಿದ್ದರೆ ಅಥವಾ ರೋಗ ನಿರೋಧಕ ಶಕ್ತಿ ಕುಂದಿದ್ದರೆ ಈ ಸೋಂಕು ಸುಲಭವಾಗಿ ಆವರಿಸುತ್ತದೆ.
  Most Read: ನೋಡಿ ಇದೇ ಕಾರಣಕ್ಕೆ ಕಣ್ಣುಗಳಲ್ಲಿ ಸದಾ ನೀರು ತುಂಬಿಕೊಂಡಿರುವುದು!


 • ಉಗುರಿನ ಶಿಲೀಂಧ್ರದ ಸೋಂಕಿನಿಂದ ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳು

  ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಯಾವುದೇ ಬಗೆಯ ಸೋಂಕಿನಿಂದ ರಕ್ಷಣೆ ಪಡೆಯುವ ಅತ್ಯುತ್ತಮ ವಿಧಾನವಾಗಿದೆ. ಅಂತೆಯೇ ಉಗುರುಗಳನ್ನೂ ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಉಳಿದಂತೆ ಈ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳೆಂದರೆ:
  * ಪಾತ್ರೆ ತೊಳೆಯುವ, ಬಟ್ಟೆ ಒಗೆಯುವ ಸಂದರ್ಭಗಳಲ್ಲಿ ರಬ್ಬರ್ ಕೈಗವಸು ತೊಟ್ಟುಕೊಳ್ಳಿ
  * ಶಿಲೀಂಧ್ರ ನಿವಾರಕ ಸ್ಪ್ರೇ ಗಳನ್ನು ನಿತ್ಯವೂ ಪ್ರಯೋಗಿಸಿ
  * ನೀರಿನಲ್ಲಿ ನಡೆಯುವ ಸಂದರ್ಭ ಬಂದಾಗ ನೀರಿನಿಂದ ಹೊರಬಂದ ತಕ್ಷಣವೇ ಕಾಲುಗಳನ್ನು, ವಿಶೇಷವಾಗಿ ಉಗುರು ಮತ್ತು ಬೆರಳುಗಳ ಸಂಧುಗಳನ್ನು ಒಣಬಟ್ಟೆಯಿಂದ ಒರೆಸಿಕೊಳ್ಳುವುದು ಅಗತ್ಯ.
  * ಉಗುರುಗಳಿಗೆ ಪಡೆಯುವ ಮ್ಯಾನಿಕ್ಯೂರ್-ಪೆಡಿಕ್ಯೂರ್ ಸೇವೆಗಳನ್ನು ಪಡೆಯುವಾಗ ವೃತ್ತಿಪರರ ಸೇವೆಯನ್ನೇ ಪಡೆಯಿರಿ.
  * ಕೃತಕ ಉಗುರುಗಳಿಗೆ ಒಲವು ತೋರದಿರಿ.
  * ತೇವಾಂಶ ಹೆಚ್ಚಿದ್ದ ಸಮಯದಲ್ಲಿ ಬರಿಗಾಲಿನಲ್ಲಿ ಓಡಾಡದಿರಿ ಹಾಗೂ ಓಡಾಡಬೇಕಾದರೆ ತೇವಾಂಶ ಹೀರಿಕೊಳ್ಳುವ ಹತ್ತಿಯ ಕಾಲುಚೀಲಗಳನ್ನೇ ಧರಿಸಿ


 • ಎಚ್ಚರಿಕೆ

  ಶಿಲೀಂಧ್ರದ ಸೋಂಕಿಗೆ ಅಪ್ಪಟ ವೈರಿ ಎಂದರೆ ನೀರು! ಹಾಗಾಗಿ ಸಾಧ್ಯವಾದಷ್ಟೂ ಸೋಂಕಿಗೆ ಒಳಗಾದ ಭಾಗಕ್ಕೆ ನೀರು ತಾಕದಂತೆ ಎಚ್ಚರವಹಿಸಿ. ಸ್ನಾನದ ಸಮಯದಲ್ಲಿ ಪ್ಲಾಸ್ಟಿಕ್ ಕೈಗವಸು ಅಥವಾ ಬೇರಾವುದೋ ಕ್ರಮ ಅನುಸರಿಸಿ.
  ಕಾಲಿನ ಹೆಬ್ಬೆರಳಿನ ಉಗುರಿನ ಬುಡದ ಭಾಗ ತುದಿಯವರೆಗೆ ಬರಲು ಸುಮಾರು ಒಂದು ವರ್ಷ ಬೇಕು. ಕಿರುಬೆರಳಿನ ಉಗುರಿಗೆ ಆರು ತಿಂಗಳು, ಉಳಿದ ಬೆರಳುಗಳಿಗೆ ಇದರ ನಡುವಣ ಅವಧಿ ಬೇಕಾಗುತ್ತದೆ. ಹಾಗಾಗಿ ಈ ಸೋಂಕು ಪೂರ್ಣವಾಗಿ ಇಲ್ಲವಾಗಲು ಬೆರಳನ್ನು ಆಧರಿಸಿ ಅವಧಿಯೂ ಹೆಚ್ಚು ಕಡಿಮೆಯಾಗಿರುತ್ತದೆ. ಹಾಗಾಗಿ ಈ ವ್ಯಕ್ತಿಗಳು ಅಷ್ಟು ಸಮಯದವರೆಗಾದರೂ ಉಗುರುಗಳಿಗೆ ನೀರು ತಾಕದಂತೆ ಎಚ್ಚರವಹಿಸುವುದು ಮತ್ತು ತಾಳ್ಮೆ ವಹಿಸುವುದು ಅನಿವಾರ್ಯವಾಗಿದೆ. ನೀರು ತಾಕಿದಷ್ಟೂ ಗುಣವಾಗುವ ಅವಧಿ ಮುಂದೆ ಹೋಗುತ್ತದೆ, ನೆನಪಿರಲಿ. ಈ ಮಾಹಿತಿ ಉಪಯುಕ್ತವೆನಿಸಿದರೆ ನಿಮ್ಮ ಆಪ್ತರೊಂದಿಗೆ ಹಂಚಿಕೊಳ್ಳಿ.
ಶಿಲೀಂಧ್ರದ ಸೋಂಕು ಅಥವಾ ಫಂಗಲ್ ಇನ್ಫೆಕ್ಷನ್ ಸಾಮಾನ್ಯವಾಗಿ ಎಲ್ಲರಿಗೂ ಎದುರಾಗುವ ತೊಂದರೆಯಾಗಿದೆ. ಉಗುರುಗಳ ಸಂಧುಗಳಲ್ಲಿ ಎದುರಾಗುವ ಸೋಂಕು ಉಗುರುಗಳಿಗೆ ಎದುರಾಗುವ ತೊಂದರೆಗಳಿಗೆ 50 ಶೇಖಡಾದಷ್ಟು ಶಿಲೀಂಧ್ರದ ಸೋಂಕೇ ಪ್ರಮುಖ ಕಾರಣವಾಗಿದೆ. ನಮ್ಮ ದೇಹದ ಬಹುತೇಕ ತೇವವಿರುವ ಭಾಗಗಳಲ್ಲಿ ಶಿಲೀಂಧ್ರಗಳು ಧಾಳಿ ಇಡುತ್ತಲೇ ಇರುತ್ತವೆ. ಆದರೆ ಇವು ಮಿತಿಮೀರಿ ಸಂಖ್ಯಾಭಿವೃದ್ದಿ ಪಡೆದರೆ ಮಾತ್ರ ಸೋಂಕು ಎದುರಾಗುತ್ತದೆ. ಇಂದಿನ ಲೇಖನದಲ್ಲಿ ಉಗುರಿನ ಶಿಲೀಂಧ್ರದ ಸೋಂಕಿನ ಬಗ್ಗೆ ಪ್ರಮುಖ ಮಾಹಿತಿಗಳನ್ನು ಅರಿಯೋಣ.

Onychomycosis, ಅಥವಾ tinea unguium ಎಂಬ ಹೆಸರಿನ ಶಿಲೀಂಧ್ರದ ಸೋಂಕು ಉಗುರಿನ ಸೋಂಕಿಗೆ ಪ್ರಮುಖವಾಗಿ ಕಾರಣವಾಗಿದೆ ಹಾಗೂ ಪರಿಣಾಮವಾಗಿ ಉಗುರು ದಪ್ಪನಾಗುವುದು, ಶಿಥಿಲವಾಗುವುದು, ಉಬ್ಬಿಕೊಳ್ಳುವುದು ಅಥವಾ ಅಲೆಅಲೆಯಾಗಿರುವುದು ಮೊದಲಾದ ತೊಂದರೆಗಳನ್ನು ಹುಟ್ಟುಹಾಕುತ್ತದೆ. ಈ ಸೋಂಕು ಕೇವಲ ಕೈಬೆರಳುಗಳಲ್ಲಿ ಮಾತ್ರವಲ್ಲ, ಕಾಲುಬೆರಳುಗಳಲ್ಲಿಯೂ ಕಂಡುಬರುತ್ತದೆ.

   
 
ಹೆಲ್ತ್