Back
Home » ಆರೋಗ್ಯ
ಇದು ಒಂದು ರೀತಿಯ ನೈಸರ್ಗಿಕ ಎಣ್ಣೆ-ಕ್ಯಾನ್ಸರ್ ರೋಗವನ್ನು ನಿಯಂತ್ರಿಸುತ್ತದೆ!
Boldsky | 3rd Oct, 2018 11:31 AM
 • ಸೋಂಕುಗಳಿಂದ ರಕ್ಷಿಸುತ್ತದೆ

  ಈ ಎಣ್ಣೆಯಲ್ಲಿರುವ ಸೋಂಕುನಿವಾರಕ ಗುಣ ಇದನ್ನೊಂದು ಪ್ರಬಲ ಔಷಧಿಯನ್ನಾಗಿಸಿದೆ. ಈ ಎಣ್ಣೆಯನ್ನು ಬಿಸಿಮಾಡಿದಾಗ ಉದ್ಭವವಾಗುವ ಧೂಮವೂ ಅತಿ ಪ್ರಬಲ ಸೋಂಕುನಿವಾರಕವಾಗಿದೆ. ವಿಶೇಷವಾಗಿ ದ್ರವರೂಪದ ಔಷಧಿ ತಲುಪಲಾರದ ಕಡೆಗೂ ಈ ಹೊಗೆ ತಲುಪಿ ಅಲ್ಲೆಲ್ಲಾ ಮನೆಮಾಡಿಕೊಂಡಿದ್ದ ಕ್ರಿಮಿಗಳನ್ನೆಲ್ಲಾ ಎತ್ತಂಗಡಿ ಮಾಡುತ್ತದೆ. ಗಾಯಗಳ ಮೇಲೆ ಸವರಿಕೊಂಡಾಗ ಇದೊಂದು ತೆಳುವಾದ ಪೊರೆಯಂತೆ ಹೊರಗಿನಿಂದ ಬರುವ ಎಲ್ಲಾ ಸೋಂಕುಕಾರಕ ಕ್ರಿಮಿಗಳನ್ನು ತಡೆಯುತ್ತದೆ. ಅಲ್ಲದೇ ದೇಹದ ಒಳಭಾಗದಲ್ಲಿ ಉಂಟಾದ ಗಾಯಗಳನ್ನೂ ಮಾಗಿಸಲು ಮತ್ತು ಇನ್ನಷ್ಟು ಸೋಂಕುಗಳು ಎದುರಾಗುವುದರಿಂದ ತಪ್ಪಿಸುತ್ತದೆ.


 • ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ

  ಫ್ರಾಂಕಿಂನ್ಸೆನ್ಸ್ ತೈಲದಲ್ಲಿರುವ ಒಂದು ಪ್ರಮುಖ ಅಂಶವೆಂದರೆ ಬೋಸ್ವೆಲ್ಲಿಕ್ ಆಮ್ಲ. ಈ ಆಮ್ಲದಲ್ಲಿ ಪ್ರಬಲ ಉರಿಯೂತ ನಿವಾರಕ ಗುಣವಿದೆ ಹಾಗೂ ಇದರ ಇರುವಿಕೆಯಿಂದ ದೇಹದಲ್ಲಿ ಕ್ಯಾನ್ಸರ್ ಎದುರಾಗುವ ಸಾಧ್ಯತೆ ಅಪಾರವಾಗಿ ತಗ್ಗುತ್ತದೆ. ವಿಶೇಷವಾಗಿ ಚರ್ಮದ ಹೊರಭಾಗದಲ್ಲಿ ಹಚ್ಚಿಕೊಳ್ಳುವ ಮೂಲಕ ಚರ್ಮ ಮತ್ತು ಸ್ತನ ಕ್ಯಾನ್ಸರ್ ನಿಂದ ರಕ್ಷಣೆ ದೊರಕುತ್ತದೆ. ಈ ನಿಟ್ಟಿನಲ್ಲಿ ಸಡೆಸಿದ ಕೆಲವಾರು ಸಂಶೋಧನೆಗಳ ಮೂಲಕ ಮೂತ್ರಕೋಶದ ಕ್ಯಾನ್ಸರ್ ಗೂ ಈ ಎಣ್ಣೆಯನ್ನು ಚಿಕಿತ್ಸಕ ರೂಪದಲ್ಲಿ ಬಳಸಬಹುದು ಎಂದು ಕಂಡುಕೊಳ್ಳಲಾಗಿದೆ.

  Most Read: 3-10-2018: ಬುಧವಾರದ ದಿನ ಭವಿಷ್ಯ


 • ಮಾನಸಿಕ ಒತ್ತಡ ನಿವಾರಿಸುತ್ತದೆ

  ಈ ಎಣ್ಣೆ ಒಂದು ಅದ್ಭುತ ನಿದ್ರಾಜನಕವಾಗಿದೆ. ಈ ಎಣ್ಣೆಯ ಪರಿಮಳ ಮನಸ್ಸಿನಲ್ಲಿ ಶಾಂತಿ, ತೃಪ್ತಿ, ಆಧ್ಯಾತ್ಮಿಕ ಮತ್ತು ನಿರಾಳತೆಯನ್ನು ಪಡೆಯಲು ಪ್ರೇರಣೆ ನೀಡುತ್ತದೆ. ಫ್ರಾಂಕಿಂನ್ಸೆನ್ಸ್ ಎಣ್ಣೆಯ ಲೇಪನದಿಂದ ಉದ್ವೇಗ, ಸಿಟ್ಟು ಮತ್ತು ಮಾನಸಿಕ ಒತ್ತಡ ಸಹಾ ಗಣನೀಯ ಮಟ್ಟದಲ್ಲಿ ಕಡಿಮೆಯಾಗುತ್ತದೆ. ಮನೆಯಲ್ಲಿ ಬಳಸುವ ಡಿಫ್ಯೂಸರ್ ಅಥವಾ ನೀರಾವಿಯನ್ನು ನೀಡುವ ಉಪಕರಣದಲ್ಲಿ ಈ ಎಣ್ಣೆಯನ್ನು ಬೆರೆಸುವ ಮೂಲಕ ವಾತಾವರಣ ಪ್ರಫುಲ್ಲಿತವಾಗುತ್ತದೆ ಹಾಗೂ ಮಾನಸಿಕ ಉದ್ವೇಗದ ಭಾವನೆಯಿಂದ ಹೊರಬರಲು ನೆರವಾಗುತ್ತದೆ. ಅಲ್ಲದೇ ಒತ್ತಡದ ಮೂಲಕ ಎದುರಾಗಿದ್ದ ಅಧಿಕ ರಕ್ತದೊತ್ತಡ ಮತ್ತು ಮಾನಸಿಕ ಕ್ಷೋಭೆಯೂ ತಿಳಿಯಾಗಿ ಸಮಾಧಾನ ಪಡೆಯಲು ನೆರವಾಗುತ್ತದೆ.


 • ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ

  ಈ ಎಣ್ಣೆಯಲ್ಲಿರುವ ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆ ತಡೆಯುವ ಗುಣ ವೃದ್ಧಾಪ್ಯದ ಚಿಹ್ನೆಗಳನ್ನು ತಡವಾಗಿಸಲು ನೆರವಾಗುತ್ತದೆ. ಆರೋಗ್ಯಕರ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಈಗ ಇರುವ ಅಂಗಾಂಶಗಳು ಮತ್ತು ಜೀವಕೋಶಗಳ ಪ್ರಮಾಣ ಮತ್ತು ಸಾಂದ್ರತೆಯನ್ನು ಇಷ್ಟೇ ಮಟ್ಟದಲ್ಲಿರುವಂತೆ ಇರಲು ಸಾಧ್ಯವಾಗುತ್ತದೆ ಇದರೊಂದಿಗೆ ಈ ಎಣ್ಣೆಯ ಸಂಕೋಚಕ ಗುಣವೂ ಸೇರಿಕೊಂಡಾಗ ಚರ್ಮದ ಸೆಳೆತವೂ ಹೆಚ್ಚಿ ವೃದ್ದಾಪ್ಯದ ಚಿಹ್ನೆಗಳಾದ ನೆರಿಗೆ, ಬಿಸಿಲಿನ ಕಪ್ಪು ಕಲೆಗಳು ಮೊದಲಾದವು ಇಲ್ಲವಾಗುತ್ತವೆ. ಅಲ್ಲದೇ ಚರ್ಮದ ಸೆಳೆತ ಹೆಚ್ಚುವುದರಿಂದ ಕಾಂತಿಯೂ ಹೆಚ್ಚುತ್ತದೆ. ಅಲ್ಲದೇ ಹಳೆಯ ಮತ್ತು ಸಾಯುತ್ತಿರುವ ಜೀವಕೋಶಗಳನ್ನು ನಿವಾರಿಸಿ ಆರೋಗ್ಯಕರ ಹೊಸ ಜೀವಕೋಶಗಳನ್ನು ಬೆಳೆಯುವಂತೆ ಮಾಡಿ ನವತಾರುಣ್ಯ ನೀಡುತ್ತದೆ.


 • ದೇಹದಲ್ಲಿ ರಸದೂತಗಳ ಮಟ್ಟಗಳನ್ನು ನಿಯಂತ್ರಿಸುತ್ತದೆ

  ಮಹಿಳೆಯರಲ್ಲಿ ಈಸ್ಟ್ರೋಜೆನ್ ರಸದೂತದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಗರ್ಭಕೋಶದ ಆರೋಗ್ಯವನ್ನು ಸಹಾ ಈ ಎಣ್ಣೆ ಅತ್ಯುತ್ತಮ ಮಟ್ಟದಲ್ಲಿರಿಸಲು ನೆರವಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ವಿಶೇಷವಾಗಿ ರಜೋನಿವೃತ್ತಿಯ ಬಳಿಕ ಎದುರಾಗುವ ಗರ್ಭಕೋಶದ ಗಡ್ಡೆ ಅಥವಾ ಗುಳ್ಳೆಗಳು ಎದುರಾಗುವ್ ಸಾಧ್ಯತೆ ತಗ್ಗುತ್ತದೆ. ಅಲ್ಲದೇ ತರುಣಿಯರಲ್ಲಿ ನಿಯಮಿತ ಮತ್ತು ಆರೋಗ್ಯಕರ ಮಾಸಿಕ ದಿನಗಳನ್ನು ಪಡೆಯುವಂತೆ ಮಾಡುವ ಮೂಲಕ ಗರ್ಭಕೋಶದ ಆರೋಗ್ಯ ಅತ್ಯುತ್ತಮವಾಗಿರಿಸಲು ನೆರವಾಗುತ್ತದೆ.


 • ಸಂಧಿವಾತ ಮತ್ತು ರ್‍ಹೂಮಾಟಿಕ್ ನೋವನ್ನು ನಿವಾರಿಸುತ್ತದೆ

  ಈ ನಿಟ್ಟಿನಲ್ಲಿ ನಡೆಸಿದ ಕೆಲವು ಅಧ್ಯಯನಗಳ ಮೂಲಕ ಈ ತೈಲದ ಬಳಕೆಯಿಂದ ದೇಹದಲ್ಲಿ ಉರಿಯೂತವನ್ನುಂಟು ಮಾಡುವ ಕಣಗಳ ಉತ್ಪಾದನೆಗೆ ಕಡಿವಾಣ ಹಾಕಲಾಗುತ್ತದೆ ಎಂದು ಕಂಡುಕೊಳ್ಳಲಾಗಿದೆ. ಈ ಮೂಲಕ ವಿಶೇಷವಾಗಿ ಅಸ್ಥಿಮಜ್ಜೆಯ ಜೀವಕೋಶಗಳ ಸವೆತ ತಡೆಯಲು ಸಾಧ್ಯವಾಗುತ್ತದೆ. ಈ ಸವೆತವೇ ಸಂಧಿವಾತ ಮತ್ತು ರ್‍ಹೂಮಾಟಿಕ್ ನೋವಿನ ಮೂಲವಾಗಿದೆ. ಭಾರತದಲ್ಲಿ ಉತ್ಪಾದಿಸಲಾದ ಫ್ರಾಂಕಿಂನ್ಸೆನ್ಸ್ ತೈಲದಲ್ಲಿ ಉರಿಯೂತ ನಿವಾರಕ ಗುಣ ಗರಿಷ್ಟವಾಗಿದ್ದು ಒಂದು ನೈಸರ್ಗಿಕ ನೋವು ನಿವಾರಕ ಹಾಗೂ ಸಂಧಿವಾತವನ್ನು ಗುಣಪಡಿಸುವಲ್ಲಿ ಅತ್ಯುತ್ತಮ ಗುಣಮಟ್ಟ ಹೊಂದಿದೆ ಎಂದು ಅಧ್ಯಯನಗಳ ಮೂಲಕ ಕಂಡುಕೊಳ್ಳಲಾಗಿದೆ.

  Most Read: ಆರೋಗ್ಯ ಟಿಪ್ಸ್: ಸರ್ವರೋಗಕ್ಕೂ ವೀಳ್ಯದೆಲೆಯೇ ಮನೆಮದ್ದು...


 • ಊರಿಯೂತ ಮತ್ತು ಬಾವುಗಳನ್ನು ನಿವಾರಿಸುತ್ತದೆ

  ಉರಿಯೂತ ಮತ್ತು ಬಾವುಗಳನ್ನು ಗುಣಪಡಿಸಲು ಅವಶ್ಯಕ ತೈಲಗಳನ್ನು ನೂರಾರು ವರ್ಷಗಳಿಂದ ಬಳಸಲಾಗುತ್ತಿದೆ. ಈ ಎಣ್ಣೆಯಲ್ಲಿರುವ ಉರಿಯೂತ ನಿವಾರಕ ಗುಣ ಅತ್ಯಂತ ಪ್ರಬಲವಾಗಿದ್ದು ಯಾವುದೇ ಬಗೆಯ ಬಾವು ಮತ್ತು ಉರಿಯೂತಕ್ಕೆ ಈ ಎಣ್ಣೆ ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಅಲ್ಲದೇ ಉರಿಯೂತದ ಮೂಲಕ ಎದುರಾಗುವ ಹಲವಾರು ಕಾಯಿಲೆಗಳ ಚಿಕಿತ್ಸೆಗೂ ಈ ಎಣ್ಣೆಯನ್ನು ಪ್ರಮುಖವಾಗಿ ಬಳಸಲಾಗುತ್ತಿದೆ. ಆದರೆ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಔಷಧಿಗಳನ್ನು ಸೇವಿಸುವ ವ್ಯಕ್ತಿಗಳು (anticoagulant medication) ಈ ಎಣ್ಣೆಯನ್ನು ಕಡ್ಡಾಯವಾಗಿ ಬಳಸಬಾರದು.


 • ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

  ಒಂದು ವೇಳೆ ನಿಮಗೆ ಅಜೀರ್ಣತೆ ಅಥವಾ ಜೀರ್ಣಕ್ರಿಯೆಯ ತೊಂದರೆ ಇದ್ದರೆ ಈ ಎಣ್ಣೆ ಅತ್ಯವಾಶ್ಯಕವಗಿದೆ. ಸತತವಾಗಿ ಆಮ್ಲೀಯತೆಯಿಂದ ಬಳಲುತ್ತಾ ಅಂಟಾಸಿಡ್ ಔಷಧಿಗಳನ್ನು ಹೆಚ್ಚೇ ಸೇವಿಸುವ ವ್ಯಕ್ತಿಗಳಿಗೆ ಈ ಎಣ್ಣೆ ಅತ್ಯುತ್ತಮವಾಗಿದೆ. ಈ ಎಣ್ಣೆ ಆಮ್ಲೀಯತೆಯನ್ನು ತಗ್ಗಿಸುವುದು ಮಾತ್ರವಲ್ಲ ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಜಠರ ಮತ್ತು ಕರುಗಳುಗಳಲ್ಲಿ ಪಿತ್ತರಸ ಮತ್ತು ಜೀರ್ಣರಸಗಳನ್ನು ಹೆಚ್ಚು ಸ್ರವಿಸುವ ಮೂಲಕ ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಅಲ್ಲದೇ ಕರುಳುಗಳಲ್ಲಿ ಜೀರ್ಣಗೊಂಡ ಆಹಾರ ಸುಲಭವಾಗಿ ಚಲಿಸಲು ಪ್ರಚೋದನೆ ನೀಡುತ್ತದೆ.


 • ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ

  ಕೆಂಡದ ಮೇಲೆ ಹಾಕಿ ಹೊಗೆಯನ್ನುಂಟುಮಾಡುವ ಲೋಬಾನದಂತೆಯೇ ಈ ಅವಶ್ಯಕ ತೈಲದ ಹೊಗೆಯ ಸೇವನೆಯಿಂದ ಸ್ಮರಣಶಕ್ತಿ ಹೆಚ್ಚುತ್ತದೆ ಎಂದು ಕಂಡುಕೊಂಡಿದ್ದ ಹಿರಿಯರು ಕಲಿಕಾ ಸ್ಥಳದಲ್ಲಿ ಈ ಎಣ್ಣೆಯ ಹೊಗೆ ಇರುವಂತೆ ಮಾಡುತ್ತಿದ್ದರು. ಇಲಿಗಳ ಮೇಲೆ ನಡೆಸಿದ ಸಂಶೋಧನೆಯೊಂದರಲ್ಲಿ ಗರ್ಭಾವಸ್ಥೆಯಲ್ಲಿ ಇಲಿಗಳಿಗೆ ಈ ಎಣ್ಣೆಯನ್ನು ಸೇವಿಸಲು ನೀಡಿದ ಬಳಿಕ ಹುಟ್ಟಿದ ಇಲಿಮರಿಗಳು ಹೆಚ್ಚು ಸ್ಮರಣಶಕ್ತಿ ಹಾಗೂ ಹೆಚ್ಚಿನ ಏಕಾಗ್ರತೆ ಪಡೆದಿರುವುದನ್ನು ಗಮನಿಸಲಾಗಿದೆ.

  Most Read: ನೆನಪಿಡಿ ಇಂತಹ ತಪ್ಪುಗಳನ್ನು ಎಂದೂ ಮಾಡಬೇಡಿ- 'ಪಿತೃ ದೋಷ' ಬರಬಹುದು!


 • ಉಸಿರಾಟದ ತೊಂದರೆಗಳಿಂದಲೂ ಶಮನ ನೀಡುತ್ತದೆ

  ಸಾಮಾನ್ಯವಾಗಿ ಗಂಟಲು ಮತ್ತು ಶ್ವಾಸನಾಳಗಳಲ್ಲಿ ಕಟ್ಟಿಕೊಂಡಿರುವ ಕಫವೇ ಉಸಿರಾಟದ ತೊಂದರೆಗೆ ಪ್ರಮುಖ ಕಾರಣವಾಗಿದೆ. ಶೀತ, ಕೆಮ್ಮು ಮೊದಲಾದವುಗಳಿಗೂ ಈ ಕಫವೇ ಕಾರಣ. ಈ ಅವಶ್ಯಕ ತೈಲದ ಬಳಕೆಯಿಂದ ಈ ಕಫವೇ ಮೂಲದಿಂದ ನಿವಾರಣೆಯಾಗುವ ಕಾರಣ ಶೀತ ಕೆಮ್ಮು ಮೊದಲಾದ ಸಾಮಾನ್ಯ ಕಾಯಿಲೆಗಳ ಜೊತೆಗೇ ಬ್ರಾಂಖೈಟಿಸ್, ಫಾರಿಂಕ್ಸ್, ಬ್ರಾಂಕೈ, ಮೂಗು, ಶ್ವಾಸನಾಳ, ಗಂಟಲಿನ ಸೋಂಕು ಮೊದಲಾದ ಗಂಭೀರ ಕಾಯಿಲೆಗಳೂ ಸುಲಭವಾಗಿ ಇಲ್ಲವಾಗುತ್ತವೆ. ಈ ಎಣ್ಣೆಯ ಉರಿಯೂತ ನಿವಾರಕ ಮತ್ತು ಶಮನಕಾರಿ ಗುಣಗಳು ಕಫವನ್ನು ಸಡಿಲಿಸಿ ಸರಾಗ ಉಸಿರಾಟಕ್ಕೆ ನೆರವಾಗುತ್ತವೆ. ಅಲ್ಲದೇ ಈ ಮೂಲಕ ಎದುರಾಗಬಹುದಾಗಿದ್ದ ಅಸ್ತಮಾಘಾತದಿಂದಲೂ ರಕ್ಷಣೆ ಒದಗಿಸುತ್ತವೆ. ಈ ಎಣ್ಣೆಯ ಪರಿಮಳವನ್ನು ಸೇರವಾಗಿ ಮೂಗಿನಿಂದ ಹೀರಿಕೊಳ್ಳುವುದು ಸುಲಭ ವಿಧಾನವಾದರೆ ಚರ್ಮದ ಮೇಲೆ ಹಚ್ಚಿಕೊಳ್ಳುವುದು ಇನ್ನೊಂದು ವಿಧಾನವಾಗಿದೆ. ಇದನ್ನು ಇತರ ಅವಶ್ಯಕ ಎಣ್ಣೆಗಳು ಅಥವಾ ಕೊಬ್ಬರಿ ಎಣ್ಣೆ ಅಥವಾ ಹೋಹೋಬಾ ಎಣ್ಣೆಯೊಂದಿಗೆ ಬೆರೆಸಿಯೂ ಬಳಸಬಹುದು. ಅಲ್ಲದೇ ಮೆದುಳಿನ ಸಂಕೇತ ಸಂವಹನಾ ವ್ಯವಸ್ಥೆ (limbic system) ಗೆ ಸಂಕೇತಗಳನ್ನು ಒದಗಿಸುವ ಮೂಲಕ ನರವ್ಯವಸ್ಥೆಯನ್ನೂ ಉತ್ತಮಗೊಳಿಸಲು ಪ್ರಚೋದನೆ ನೀಡುತ್ತದೆ.
ಇಂದು ಲಭ್ಯವಿರುವ ಹಲವಾರು ಅವಶ್ಯಕ ತೈಲಗಳಲ್ಲಿ ಫ್ರಾಂಕಿಂನ್ಸೆನ್ ತೈಲವೂ ಒಂದಾಗಿದ್ದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇವುಗಳಲ್ಲಿರುವ ಗುಣಪಡಿಸುವ, ಸಂಕೋಚಕ, ಚಿಕಿತ್ಸಕ, ಜೀರ್ಣಕಾರಿ, ಅನಿಯಂತ್ರಿತ ಜೀವಕೋಶಗಳ ಬೆಳವಣಿಗೆ ತಡೆಯುವ, ಸೋಂಕುನಿವಾರಕ, ಶಾಂತಗೊಳಿಸುವ, ಕಫವನ್ನು ಸಡಿಲಗೊಳಿಸುವ, ನಿದ್ರಾಜನಕ, ಹುರಿಗಟ್ಟಿಸುವ ಹಾಗೂ ಗಾಯಗಳನ್ನು ಶೀಘ್ರವಾಗಿ ಮಾಗಿಸುವ ಗುಣಗಳು ಇದನ್ನೊಂದು ಅದ್ಭುತ ಔಷಧಿಯನ್ನಾಗಿಸಿವೆ.

ಈ ಅವಶ್ಯಕ ತೈಲ ವಿಶ್ವದಾದ್ಯಂತ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಈ ತೈಲವನ್ನು ಸುಗಂಧದ್ರವ್ಯ ಮತ್ತು ಗಾಯಗಳಿಗೆ ಸವರಲು ಬಳಸಲಾಗುತ್ತಿತ್ತು. ಈಜಿಪ್ಟ್ ನ ಮಹಿಳೆಯರು ಈ ಎಣ್ಣೆಯನ್ನು ಸುಟ್ಟು ಇದರ ಭಸ್ಮವನ್ನು ನುಣ್ಣಗಾಗಿಸಿ ಕಣ್ಣುಗಳಿಗೆ ಕಾಡಿಗೆಯ ರೂಪದಲ್ಲಿ ಹಚ್ಚಿಕೊಳ್ಳುತ್ತಿದ್ದರೆಂದು ಇತಿಹಾಸದಲ್ಲಿ ವಿವರಿಸಲಾಗಿದೆ.

ಅಲ್ಲದೇ ಸೋಪು, ಲೋಷನ್, ಶವರ್ ಜೆಲ್ ಮೊದಲಾದ ಸುಗಂಧರಹಿತ ಪ್ರಸಾಧನಗಳಲ್ಲಿ ಸುಗಂಧ ಸೇರಿಸಲೂ ಬಳಸಲಾಗುತ್ತದೆ. ಬನ್ನಿ, ಈ ಅದ್ಭುತ ತೈಲದಲ್ಲಿ ಇನ್ನೂ ಯಾವ ಯಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

 
ಹೆಲ್ತ್