ಇದರಲ್ಲಿ ಇರುವಂತಹ ಪ್ರಮುಖ ತೈಲವು ಬಾಯಿಯ ದುರ್ವಾಸನೆ ಉಂಟುಮಾಡುವಂತಹ ಬ್ಯಾಕ್ಟೀರಿಯಾವನ್ನು ದೂರ ಮಾಡುವುದು. ಒಂದು ಚಮಚ ದಾಲ್ಚಿನ್ನಿ ಹುಡಿ ತೆಗೆದುಕೊಂಡು ಅದನ್ನು ಸರಿಯಾಗಿ ಕುದಿಸಿದ ಬಳಿಕ ಸೋಸಿಕೊಳ್ಳಿ. ಈ ನೀರನ್ನು ಬಾಯಿ ಮುಕ್ಕಳಿಸಿಕೊಳ್ಳಲು ಬಳಸಿ. ಇದರಿಂದ ಕೆಟ್ಟ ವಾಸನೆ ಕಡಿಮೆಯಾಗುವುದು.
ಸೋಂಪಿನಲ್ಲಿ ಬ್ಯಾಕ್ಟೀರಿಯ ವಿರೋಧಿ ಗುಣಗಳು ಇವೆ. ಇದು ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುವುದು. ಸ್ವಲ್ಪ ಸೋಂಪು ಬಾಯಿಗೆ ಹಾಕಿಕೊಂಡು ಜಗಿಯಿರಿ. ಇದು ಜೊಲ್ಲಿನ ಉತ್ಪತ್ತಿ ಹೆಚ್ಚಿಸಿ ಕೆಟ್ಟ ವಾಸನೆ ತಡೆಯುವುದು.
Most Read: ಮೊಳಕೆ ಬಂದಿರುವ ಆಲೂಗಡ್ಡೆ ತಿನ್ನಬೇಡಿ-ವಾಂತಿ-ಭೇದಿ ಸಮಸ್ಯೆ ಕಾಡಬಹುದು!!
ಒಂದು ಚಮಚ ಮೆಂತೆ ತೆಗೆದುಕೊಳ್ಳಿ ಮತ್ತು ಇದನ್ನು ಸರಿಯಾಗಿ ಕುದಿಸಿ ಅದರ ನೀರನ್ನು ಸೋಸಿಕೊಳ್ಳಿ. ಇದನ್ನು ದಿನದಲ್ಲಿ ಒಂದು ಸಲ ಕುಡಿಯಿರಿ. ಬಾಯಿ ದುರ್ವಾಸನೆ ನಿವಾರಣೆಯಾಗುವ ತನಕ ಇದನ್ನು ಕುಡಿಯಿರಿ.
ಅಡುಗೆ ಮಾಡುವಾಗ ಲವಂಗವನ್ನು ಸುವಾಸನೆಗಾಗಿ ಮತ್ತು ರುಚಿಗಾಗಿ ಬಳಸುತ್ತಾರೆ. ಬಹು ಹಿಂದಿನ ಕಾಲದಿಂದಲು ಇದನ್ನು ಹಲ್ಲು ನೋವಿಗೆ ರಾಮ ಬಾಣವಾಗಿ ಬಳಸುತ್ತಿದ್ದಾರೆ. ಜೊತೆಗೆ ಹಲವಾರು ಟೂಥ್ ಪೇಸ್ಟ್ ಮತ್ತು ಮೌತ್ ವಾಷ್ಗಳಲ್ಲಿ ಇದನ್ನು ಬಳಸಿರುತ್ತಾರೆ. ಇದು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುವ ಅತ್ಯುತ್ತಮ ಮನೆಮದ್ದಾಗಿದೆ. ಲವಂಗದಲ್ಲಿ ಯೂಜೆನೊಲ್ ಎಂಬ ಅಂಟಿ ಬ್ಯಾಕ್ಟೀರಿಯಲ್ ಅಂಶವು ಯಥೇಚ್ಛವಾಗಿದೆ. ಮತ್ತೇಕೆ ತಡ ದುರ್ವಾಸನೆ ಬಂದಾಗ ಒಂದೆರಡು ಲವಂಗಗಳನ್ನು ಜಗಿಯಿರಿ.
ಟ್ರೀ ಟ್ರೀಮರದ ಎಣ್ಣೆಯಲ್ಲಿ ನಂಜುನಿರೋಧಕ ಗುಣಗಳು ಇವೆ. ನಿಮ್ಮ ಟೂಥ್ ಪೇಸ್ಟ್ ಗೆ ಕೆಲವು ಹನಿ ಚಾ ಮರದ ಎಣ್ಣೆ ಹಾಕಿಕೊಂಡು ಅದರಿಂದ ನಿಯಮಿತವಾಗಿ ಹಲ್ಲುಜ್ಜಿಕೊಳ್ಳಿ. ಇದರಿಂದ ಬಾಯಿ ದುರ್ವಾಸನೆ ನಿವಾರಿಸಬಹುದು.
Most Read: ಮುಖದಲ್ಲಿ ಮೂಡುವ ನೆರಿಗೆಯ ಸಮಸ್ಯೆಗೆ-ಒಂದೆರಡು ಚಮಚ ಲಿಂಬೆ ರಸ ಸಾಕು!
ಪುದೀನಾವು ನೈಸರ್ಗಿಕವಾಗಿ ಬಾಯಿಗೆ ಸುಗಂಧ ನೀಡುವುದು. 2-3 ಪುದೀನಾ ಎಲೆಗಳನ್ನು ಜಗಿಯಿರಿ. ಇದರಿಂದ ಬೇಗನೆ ಬಾಯಿಯ ದುರ್ವಾಸನೆ ದೂರ ಮಾಡಬಹುದು.
ಬಾಯಿಯಿಂದ ಕೆಟ್ಟ ವಾಸನೆ ಬರುತ್ತಲಿದ್ದರೆ ಎರಡರಿಂದ ಮೂರು ಏಲಕ್ಕಿ ತೆಗೆದುಕೊಂಡು ಅದರ ಬೀಜ ತೆಗೆಯಿರಿ. ಬಳಿಕ ಇದನ್ನು ಬಾಯಿಗೆ ಹಾಕಿ ಜಗಿದರೆ ದುರ್ವಾಸನೆಯು ತಕ್ಷಣ ಮಾಯವಾಗುವುದು.
ಕಿತ್ತಳೆ, ನಿಂಬೆ ಇತ್ಯಾದಿ ಹಣ್ಣುಗಳು ನಿಮ್ಮ ಬಾಯಿಯಲ್ಲಿ ಲಾಲಾ ರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಲಾಲಾ ರಸವು ಪ್ಲಾಕ್,ನಿರ್ಜೀವ ಕೋಶಗಳಿಂದ ಮತ್ತು ಆಹಾರದ ಕಣಗಳಿಂದ ಬಾಯಿಯಲ್ಲಿ ಉಂಟಾಗುವ ದುರ್ವಾಸನೆಯನ್ನು ಹತೋಟಿಗೆ ತರುತ್ತದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರ ಪದಾರ್ಥಗಳು ನಿಮ್ಮ ಬಾಯಿಯಲ್ಲಿ ದುರ್ವಾಸನೆಯನ್ನು ಉಂಟು ಮಾಡುತ್ತವೆ. ಇದಕ್ಕಾಗಿ ಕೊತ್ತಂಬರಿಯನ್ನು ಆಹಾರದ ತಯಾರಿಕೆಯಲ್ಲಿ ಬಳಸಿದರೆ ಆ ದುರ್ವಾಸನೆಕಾರಕಗಳನ್ನು ಹತೋಟಿಯಲ್ಲಿಡಬಹುದು. ನಿಮ್ಮ ಬಾಯಿಯ ದುರ್ವಾಸನೆಯನ್ನು ತಡೆಯಲು ಊಟದ ನಂತರ ಸ್ವಲ್ಪ ಕೊತ್ತಂಬರಿ ಎಲೆಗಳನ್ನು ಸೇವಿಸಿ. ಇದರ ಜೊತೆಗೆ ಧನಿಯಾ ಬೀಜಗಳನ್ನು ಉರಿದು ಅದಕ್ಕೆ ಒಂದು ಚಿಟಿಕೆ ಉಪ್ಪನ್ನು ಸೇರಿಸಿ ಮೌತ್ ಫ್ರೆಶ್ನರ್ ರೀತಿ ಬಳಸಬಹುದು.
Most Read: ಜ್ಞಾಪಕಶಕ್ತಿ ಹೆಚ್ಚಲು, ತಪ್ಪದೇ ಇಂತಹ ಆಹಾರಗಳನ್ನು ದಿನನಿತ್ಯ ಸೇವಿಸಿ
ಉಪ್ಪು ನೀರು ಬಾಯಿಯ ಪಿಎಚ್ ಸಮತೋಲನ ತಟಸ್ಥಗೊಳಿಸುವುದು ಮತ್ತು ಶುದ್ಧೀಕರಿಸುವುದು. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಒಂದು ಚಮಚ ಉಪ್ಪನ್ನು ಉಗುರುಬೆಚ್ಚಗಿನ ನೀರಿಗೆ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಕಲಸಿಕೊಂಡು ಬೆಳಗ್ಗೆ ಬಾಯಿ ಮುಕ್ಕಳಿಸಿ.
ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುವವರು ಒಂದು ಲೋಟ ನೀರಿಗೆ ಸ್ವಲ್ಪ ಅರಿಶಿನ ಹಾಕಿ ಕುಡಿದರೆ ಬಾಯಿ ದುರ್ವಾಸನೆ ಬೀರುವುದಿಲ್ಲ.
ಲಿಂಬೆಯಲ್ಲಿ ಇರುವಂತಹ ಆಮ್ಲೀಯ ಗುಣಗಳು ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಆಗದಂತೆ ತಡೆಯುತ್ತದೆ. ಒಂದು ಚಮಚ ಲಿಂಬೆರಸವನ್ನು ಒಂದು ಲೋಟ ನೀರಿಗೆ ಹಾಕಿಕೊಂಡು ಅದರಿಂದ ಬಾಯಿ ಮುಕ್ಕಳಿಸಿ.
ಸಂಶೋಧಕರ ಪ್ರಕಾರ, ಮೊಸರಿನ ಸೇವನೆಯಿಂದ ಬಾಯಿಯಲ್ಲಿ ದುರ್ವಾಸನೆಗೆ ಕಾರಣವಾಗುವ ಸಲ್ಫೈಟ್ ಕಡಿಮೆ ಮಾಡಬಹುದು. ಇದು ಬ್ಯಾಕ್ಟೀರಿಯಾವನ್ನು ತೊಲಗಿಸುವುದರಿಂದ ಕಡಿಮೆ ಕೊಬ್ಬಿನಂಶ, ಸಕ್ಕರೆರಹಿತ ಮೊಸರಿಸ ಸೇವನೆ ತುಂಬಾ ಒಳ್ಳೆಯದು. ಆದರೆ ಸಕ್ಕರೆ ಬೆರೆಸಿ ತಿಂದರೆ ಬಾಯಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆ ಇನ್ನಷ್ಟು ಹೆಚ್ಚುತ್ತದೆ.
ಬಾಯಿಯಿಂದ ದುರ್ವಾಸನೆ ಬರುತ್ತಲಿದ್ದರೆ ಆಗ ಯಾರೊಂದಿಗೂ ಬೆರೆಯಲು ನಮಗೆ ಮುಜುಗರವಾಗುವುದು. ಎದುರಿಗಿರುವ ವ್ಯಕ್ತಿಯೊಂದಿಗೆ ಮಾತನಾಡುವಾಗ ಬಾಯಿಯಿಂದ ಕೆಟ್ಟ ವಾಸನೆ ಬಂದರೆ ಅದು ನಮಗೆ ಮಾತ್ರವಲ್ಲದೆ ಸುತ್ತಲಿನಲ್ಲಿ ಇರುವವರಿಗೂ ತುಂಬಾ ಕಿರಿಕಿರಿ ಉಂಟು ಮಾಡುವುದು. ಇದರಿಂದಾಗಿ ನಮ್ಮ ಆತ್ಮವಿಶ್ವಾಸವೇ ಕುಸಿದು ಹೋಗಬಹುದು. ನಿಮಗೂ ಬಾಯಿಯ ದುರ್ವಾಸನೆ ಸಮಸ್ಯೆಯಿದ್ದರೆ ಆಗ ಇದಕ್ಕೆ ಹೆದರಬೇಕಿಲ್ಲ.
ಯಾಕೆಂದರೆ ಬಾಯಿ ದುರ್ವಾಸನೆ ನಿವಾರಣೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಬಾಯಿಯ ವಾಸನೆ ಬರಲು ಪ್ರಮುಖವಾಗಿ ಕೆಲವೊಂದು ಬ್ಯಾಕ್ಟೀರಿಯಾಗಳು ಕಾರಣವಾಗಿದೆ. ಇದು ಹಲ್ಲಿನೆಡೆಯಲ್ಲಿ ಕುಳಿತುಕೊಂಡು ವಾಸನೆ ಉಂಟು ಮಾಡುವುದು. ಬಾಯಿಯಲ್ಲಿ ಜೊಲ್ಲು ಕಡಿಮೆಯಾದಾಗ ಬ್ಯಾಕ್ಟೀರಿಯಾ ಕೆಲವೊಂದು ಹಾನಿಕಾರಕ ಅಂಶಗಳನ್ನು ಬಿಡುಗಡೆ ಮಾಡುವುದು. ಇದರಿಂದ ದುರ್ವಾಸನೆ ಉಂಟಾಗುವುದು. ಆ ಮನೆಮದ್ದುಗಳು ಯಾವುದು ಎಂದು ನೀವು ತಿಳಿಯಿರಿ.