Back
Home » ಪ್ರವಾಸ
ಮೋದಿ ಕೂಡಾ ಪ್ರಶ್ನೆಗೆ ಉತ್ತರ ಕೇಳಲು ಬಂದಿದ್ರಂತೆ ರಾಯಚೂರಿನ ಈ ತಾಯಿಯ ಬಳಿಗೆ
Native Planet | 9th Oct, 2018 04:19 PM
 • ದಾಸರಿಗಟ್ಟೆ ಚೌಡೇಶ್ವರಿ ದೇವಿ

  Priya

  ದಾಸರಿಗಟ್ಟೆ ಚೌಡೇಶ್ವರಿ ದೇವಿಯು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರು ಜಿಲ್ಲೆಯಲ್ಲಿದೆ. ಇದು ಬೆಂಗಳೂರಿನಿಂದ 72 ಕಿಮೀ ದೂರದಲ್ಲಿದೆ. ಸಮಸ್ಯೆಯಲ್ಲಿರುವವರು ಇಲ್ಲಿಗೆ ಹೋಗಿ ತಾಯಿಯ ದರ್ಶನ ಪಡೆದರೆ ಖಂಡಿತ ಸಮಸ್ಯೆ ಪರಿಹಾರವಾಗುತ್ತದೆ ಎನ್ನುತ್ತಾರೆ.


 • ಚೌಡೇಶ್ವರಿ ದೇವಿ

  PC: Bhanu

  ಈ ದೇವಸ್ಥಾನದಲ್ಲಿರುವ ತಾಯಿಯು ಅತ್ಯಂತ ಪ್ರಭಾವಶಾಲಿ ಹಾಗೂ ಪ್ರಸಿದ್ದಳು ಎಂದು ಹೇಳಲಾಗುತ್ತದೆ. ಇಲ್ಲಿ ಕರ್ನಾಟಕದಿಂದ ಮಾತ್ರವಲ್ಲದೆ ಹೊರ ರಾಜ್ಯಗಳಿಂದ ಭಕ್ತರು ಬಂದು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ. ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುತ್ತಾರೆ.

  ಶೃಂಗೇರಿ ಶಾರದೆಯ ಸನ್ನಿಧಾನದಲ್ಲಿರುವ ಮೂಗುತ್ತಿ ಮೀನು ನೋಡಿದ್ರೆ ಅದೃಷ್ಟವಂತೆ


 • ಪಂಚಲೋಹದ ಪ್ರತಿಮೆ

  Bp

  ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ತಮ್ಮ ಪ್ರಶ್ನೆಗಳನ್ನು ತಿಳಿದುಕೊಳ್ಳಲು ಬಯಸುವವರು ವಿಶೇಷ ಟಿಕೆಟ್ ತೆಗೆದುಕೊಳ್ಳಬೇಕು ಮತ್ತು ದೇವಾಲಯದ ಆವರಣದಲ್ಲಿ ಕುಳಿತುಕೊಳ್ಳಬೇಕು. ಚೌಡೇಶ್ವರಿ ದೇವಿಯ ಪಂಚಲೋಹದ ಪ್ರತಿಮೆ ಅಕ್ಕಿ ತಟ್ಟೆಯಲ್ಲಿ ಇರಿಸಲಾಗಿದೆ. ಇಲ್ಲಿ ಭಕ್ತರು ತಮ್ಮ ಪ್ರಶ್ನೆಯನ್ನು ಒಂದು ಕಾಗದಲ್ಲಿ ಬರೆದು ಅದನ್ನು ಪಂಚಲೋಹ ವಿಗ್ರಹದ ಕೆಳಗೆ ಇರಿಸಲಾಗುತ್ತದೆ.


 • ಪ್ರಶ್ನೆಗೆ ಉತ್ತರ ಸಿಗುತ್ತದೆ

  PC: Priya

  ನಂತರ ಪುರೋಹಿತರು ಕಣ್ಣು ಮುಚ್ಚಿ ಪ್ರಾರ್ಥಿಸುತ್ತಾರೆ. ಅದೇ ಸಮಯದಲ್ಲಿ ಅಕ್ಕಿಯ ಮೇಲೆ ಒಂದು ಕಲಶವನ್ನು ಇಡುತ್ತಾರೆ. ಆಗ ಅಕ್ಕಿಯ ಮೇಲೆ ಅಕ್ಷರಗಳು ಮೂಡುತ್ತವೆ ಎನ್ನಲಾಗುತ್ತದೆ. ಅಲ್ಲಿ ಮೂಡಿರುವ ಅಕ್ಷರಗಳು ದೇವತೆಗಳು ತಮ್ಮ ಸಮಸ್ಯೆಗೆ ಉತ್ತರವನ್ನು ನೀಡಿರುವುದು ಎಂದು ಅರ್ಥಮಾಡಿಕೊಳ್ಳಬಹುದು. ಆ ಮೂಲಕ ದೇವರು ಭಕ್ತರ ಸಮಸ್ಯೆಗೆ ಉತ್ತರಿಸಿದ್ದು ಎಂದು ನಂಬಲಾಗುತ್ತದೆ.

  ಊಟಿ ಪಕ್ಕದಲ್ಲೇ ಇರುವ ಮಸಿನಗುಡಿಯ ವಿಶೇಷತೆ ಏನು ನೋಡಿ


 • ಮೋದಿಯೂ ಬಂದಿದ್ದರು

  ತಮ್ಮ ಸಮಸ್ಯೆಗಳಿಗೆ ಸರಿಯಾದ ಉತ್ತರವನ್ನು ಕಂಡುಹಿಡಿಯಲು ಕೆಲವು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಈ ದೇವಾಲಯಕ್ಕೆ ಬಂದಿದ್ದರು ಎಂದು ಸ್ಥಳೀಯರು ಹೇಳುತ್ತಾರೆ. ಮೋದಿ ತಾನು ಪ್ರಧಾನಿಯಾಗುತ್ತೇನೋ ಇಲ್ಲವೋ ಎನ್ನುವುದನ್ನು ತಿಳಿಯಲು ಈ ದೇವಾಲಯಕ್ಕೆ ಬಂದಿದ್ದರು ಎನ್ನಲಾಗುತ್ತದೆ. ಮುಂದಿನ ಬಾರಿಯು ಮೋದಿ ಇಲ್ಲಿಗೆ ಬರಲೂ ಬಹುದು ಎನ್ನುತ್ತಾರೆ ಇಲ್ಲಿನ ಜನರು.


 • ಕನ್ನಡದಲ್ಲೇ ಉತ್ತರ

  Bp

  ಇಲ್ಲಿ ಬರುವ ಭಕ್ತರು ಕನ್ನಡ, ಇಂಗ್ಲೀಷ್, ಹಿಂದಿ, ಕೊಂಕಣಿ, ತೆಲುಗು ಯಾವುದೇ ಭಾಷೆಯಲ್ಲಿ ಪ್ರಶ್ನೆ ಕೇಳಿದರೂ ಚೌಡೇಶ್ವರಿ ದೇವಿ ಅವರ ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರ ನೀಡುತ್ತಾಳೆ.

  ಬಳ್ಳಾರಿಯ ಗಾಣಾಗಟ್ಟೆ ಮಾಯಮ್ಮಳ ಪವಾಡ ಕೇಳಿದ್ದೀರಾ?


 • ದೇವಾಲಯದ ಕಥೆ

  Bhanu

  ಈ ದೇವಾಲಯದ ಬಗ್ಗೆ ಒಂದು ಕಥೆಯೂ ಪ್ರಚಾರದಲ್ಲಿದೆ. ನೂರಾರು ವರ್ಷಗಳ ಹಿಂದೆ, ಕರ್ನಾಟಕದ ರಾಯಚೂರು ಜಿಲ್ಲೆಯ ತುಂಗಾ ನದಿಯಲ್ಲಿ ನಂದಾವರ ಸಾಮ್ರಾಜ್ಯವಾಗಿತ್ತು. ಈ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಜನು ಶಕ್ತಿ ದೇವತೆಯ ಆರಾಧಕನಾಗಿದ್ದನು.


 • ಮಾಂತ್ರಿಕ ಶಕ್ತಿ

  PC: Bp

  ಆತನಿಗೆ ಅನೇಕ ಮಾಂತ್ರಿಕ ಶಕ್ತಿಗಳ ಬಗ್ಗೆ ತಿಳಿದಿತ್ತು. ನಂತರ ಅವರು ಕಾಶಿಗೆ ಹೋದರು, ತನಗೆ ಗೊತ್ತಿರುವ ಮಾಂತ್ರಿಕ ಶಕ್ತಿಯಿಂದ ಎಷ್ಟು ದೂರದ ಕಾಶಿಗೆ ಹೋಗಿಬರುತ್ತಿದ್ದನು. ರಾಜ ಕಾಶಿಯಲ್ಲಿ ಸ್ನಾನ ಮಾಡಿ ಮತ್ತೆ ರಾಜ್ಯಕ್ಕೆ ಮರಳುತ್ತಿದ್ದನು.

  ಸನ್ನಿಧಾನಕ್ಕೆ ಬಂದವರನ್ನು ಎಂದೂ ಕೈಬಿಡೋದಿಲ್ಲವಂತೆ ಗುರು ರಾಯರು


 • ರಾಣಿಗೆ ಅನುಮಾನ

  ಆದರೆ ರಾಜ ತನಗೆ ಅರಿವಿಲ್ಲದೆ ಎಲ್ಲಿಗೆ ಹೋಗುತ್ತಿದ್ದಾನೆ ಎನ್ನುವ ಅನುಮಾನ ರಾಜನ ಪತ್ನಿಗೆ ಬರುತ್ತದೆ. ಹಾಗಾಗಿ ತಾನು ಪ್ರತಿದಿನ ಎಲ್ಲಿಗೆ ಹೋಗುವುದಾಗಿ ರಾಜನು ತಿಳಿಸುತ್ತಾನೆ. ಆದರೆ ಅದನ್ನು ನಂಬದ ರಾಣಿ, ನೀವು ಕಾಶಿಗೆ ಹೋಗುವುದನ್ನು ಕಣ್ಣಾರೆ ಕಂಡರಷ್ಟೇ ಇದನ್ನು ತಾನು ನಂಬುವುದಾಗಿ ಪಟ್ಟುಹಿಡಿಯುತ್ತಾಳೆ. ಬೇರೆ ವಿಧಿ ಇಲ್ಲದೆ ರಾಜನು ಮರುದಿನ ರಾಣಿಯನ್ನು ಕಾಶಿಗೆ ಕರೆದುಕೊಂಡು ಹೋಗುತ್ತಾನೆ.


 • ಚಂಡಿ ಯಾಗ

  Bpdg

  ಇಬ್ಬರೂ ಕಾಶಿಯಲ್ಲಿದ್ದಾಗ, ರಾಣಿಗೆ ಋತುಚಕ್ರವಾಗುತ್ತದೆ. ಇದರಿಂದ ರಾಜನು ತನ್ನ ಎಲ್ಲಾ ಮಂತ್ರಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಹಾಗಾಗಿ ಅವನು ಗಂಗಾ ನದಿ ತೀರದಲ್ಲಿ ಯೋಚಿಸುತ್ತಾ ಇರುವಾಗ ಅದೇ ಸಮಯಕ್ಕೆ ಬ್ರಾಹ್ಮಣರು ಈ ವಿಷಯ ತಿಳಿದು ರಾಣಿಯ ಪವಿತ್ರವಾಗಿಸಲು ಚಂಡಿ ಯಾಗ ಮಾಡುವಂತೆ ತಿಳಿಸುತ್ತಾರೆ.

  ಬೆಂಗಳೂರಿನ ಈ ಕಾರ್ಯ ಸಿದ್ಧಿ ಹನುಮನಿಗೆ ಸಂಕಲ್ಪದ ತೆಂಗಿನಕಾಯಿ ಕಟ್ಟೋದು ಯಾಕೆ?


 • ಭೂಮಿ ನೀಡುವ ಮಾತು

  Bhanu

  ಅದೇ ಸಮಯದಲ್ಲಿ ರಾಜನ ಮುಂದೆ ತಮ್ಮ ಮನಸ್ಸಿನಲ್ಲಿದ್ದ ಅಪೇಕ್ಷೆಯನ್ನು ತಿಳಿಸುತ್ತಾರೆ. ಅದರ ಪ್ರಕಾರ ತಾವು ಕೇಳಿದಾಗ ರಾಜ್ಯದಲ್ಲಿನ ಸ್ವಲ್ಪ ಭೂಮಿಯನ್ನು ತಮಗೆ ನೀಡಬೇಕೆಂದು ಕೋರುತ್ತಾರೆ. ಅದರಂತೆಯೇ ರಾಜ ಭರವಸೆ ನೀಡುತ್ತಾನೆ. ರಾಜರಾಣಿ ಇಬ್ಬರೂ ತಮ್ಮರಾಜ್ಯಕ್ಕೆ ಮರಳಿ ಬರುತ್ತಾರೆ.


 • ತೀವ್ರ ಬರಗಾಲ

  ಒಮ್ಮೆ ಕಾಶಿನಲ್ಲಿ ತೀವ್ರ ಬರಗಾಲ ಸಂಭವಿಸುತ್ತದೆ. ಹಾಗಾಗಿ ಬ್ರಾಹ್ಮಣರು ಅರಸನು ನೀಡಿದ ಮಾತಿನಂತೆ ಅರಸನ ಬಳಿಗೆ ಬಂದು ಅವರಿಗೆ ನೀಡುತ್ತೇನೆ ಎಂದು ಹೇಳಿದ ಭೂಮಿಯ ಜೊತೆಗೆ ಸ್ವಲ್ಪ ಧನ, ಧಾನ್ಯ ನೀಡುವಂತೆ ಕೋರುತ್ತಾರೆ.

  ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತ ಇಲ್ಲಿದೆ ನೋಡಿ


 • ಬ್ರಾಹ್ಮಣರನ್ನು ನಿಂದಿಸಿದ ರಾಜ

  ಆದರೆ ಕೊಟ್ಟ ಮಾತನ್ನು ಮರೆತಿದ್ದ ರಾಜ ಆ ಬ್ರಾಹ್ಮಣರನ್ನು ನಿಂದಿಸುತ್ತಾನೆ. ಬ್ರಾಹ್ಮಣರು ತಾವು ರಾಜನಿಗೆ ಮಾಡಿದ ಸಹಾಯಕ್ಕೆ ಸಾಕ್ಷಿಯಾಗಿದ್ದ ಚೌಡೇಶ್ವರಿಯನ್ನು ನಂದಾವರ ಸಾಮ್ರಾಜ್ಯಕ್ಕೆ ಬರುವಂತೆ ಕೋರುತ್ತಾರೆ.


 • ಚೌಡೇಶ್ವರಿ ದೇವಿಯ ಆಗಮನ

  Bpdg

  ಹಾಗೆಯೇ ಚೌಡೇಶ್ವರಿ ನಂದಾವರ ಸಾಮ್ರಾಜ್ಯಕ್ಕೆ ಬರುತ್ತಾಳೆ. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಬ್ರಾಹ್ಮಣರಿಗೆ ಮಾತು ನೀಡಿದಂತೆ ಭೂಮಿ ಅದರ ಜೊತೆ ನಗ ನಾಣ್ಯ, ಧಾನ್ಯಗಳನ್ನು ನೀಡುತ್ತಾನೆ.

  ಗುಲ್ಬರ್ಗಾದಲ್ಲಿದ್ದಾಳಂತೆ ಜಮ್ಮುವಿನ ವೈಷ್ಣೋದೇವಿ
 • ಅಲ್ಲೇ ನೆಲೆಸಿದ ತಾಯಿ

  Priya

  ಆ ನಂತರ ತಾಯಿಯನ್ನು ಇಲ್ಲೇ ನೆಲೆಸುವಂತೆ ಕೋರಿ ದೇವಿಯನ್ನು ಪೂಜಿಸಲು ಪ್ರಾರಂಭಿಸುತ್ತಾರೆ. ಪ್ರತಿದಿನಕ್ಕಿಂತಲೂ ಮಂಗಳವಾರ ಹಾಗೂ ಶುಕ್ರವಾರ ಇಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
ದೇವರು, ದೆವ್ವ ಎನ್ನುವುದು ಅವರವರ ನಂಬಿಕೆಯನ್ನು ಆಧರಿಸಿದೆ. ಆದರೆ ಹೆಚ್ಚಾಗಿ ಜನರಿಗೆ ದೇವರು ನೆನಪಿಗೆ ಬರುವುದು ಏನಾದರೂ ಕಷ್ಟಬಂದಾಗ ಮಾತ್ರ. ನಾವು ಸಾಮಾನ್ಯವಾಗಿ ದೇವರ ದೇವಸ್ಥಾನಕ್ಕೆ ಹೋಗಿ ನಮ್ಮ ಕಷ್ಟ ಪರಿಹಾರಕ್ಕೆ ಬೇಡುತ್ತೇವೆ. ದೇವರು ನಮ್ಮ ಕಷ್ಟ ಪರಿಹಾರ ಮಾಡುತ್ತಾರೆ ಎನ್ನುವ ನಂಬಿಕೆ ನಮ್ಮಲ್ಲಿರುತ್ತದೆ. ಆದರೆ ಇಲ್ಲೊಂದು ದೇವಸ್ಥಾನವಿದೆ ಇಲ್ಲಿ ದೇವಿಯು ನಮ್ಮ ಸಮಸ್ಯೆಗಳಿಗೆ ನಮ್ಮ ಪ್ರಶ್ನೆಗಳಿಗೆ ನೇರವಾಗಿ ಉತ್ತರ ನೀಡುತ್ತಾರೆ.

   
 
ಹೆಲ್ತ್