Back
Home » ಆರೋಗ್ಯ
ಅಗರಬತ್ತಿಯ ಹೊಗೆ ತುಂಬಾನೇ ಅಪಾಯಕಾರಿಯಂತೆ! ಇಲ್ಲಿದೆ ನೋಡಿ ಕಾರಣಗಳು
Boldsky | 8th Oct, 2018 05:28 PM
 • ಎಚ್ಚರಿಕೆ ಅಗತ್ಯ

  ಭಾರತೀಯರು ಹೆಚ್ಚಾಗಿ ತಮ್ಮ ಮನೆಯಲ್ಲಿ ಪೂಜೆಗೆ ಮೊದಲು ಅಗರಬತ್ತಿಯನ್ನು ಹಚ್ಚಿಟ್ಟುಕೊಳ್ಳುವುದು ಒಂದು ಸಂಪ್ರದಾಯವನ್ನಾಗಿ ಮಾಡಿಕೊಂಡಿದ್ದಾರೆ. ಇದರಿಂದ ಮನೆಗೆ ಸುವಾಸನೆಯು ಬರುವುದು. ಆದರೆ ಇದರಲ್ಲಿ ಇರುವಂತಹ ಹಾನಿಕಾರವಾದ ಅಂಶಗಳು ಆರೋಗ್ಯದ ಮೇಲೆ ಪರಿಣಾಮ ಬೀರುವುದು. ದಕ್ಷಿಣ ಚೀನಾದಲ್ಲಿರುವ ವಿಜ್ಞಾನಿಗಳು ವಿವಿಧ ರೀತಿಯ ಊದುಬತ್ತಿಗಳನ್ನು ಪರೀಕ್ಷೆ ನಡೆಸಿದರು. ಅಗರಬತ್ತಿ ಹೊಗೆಯಿಂದಾಗಿ ಹಾನಿಕಾರಕ ಅಂಶವಾಗಿರುವ ಜೆನೆಟೋನಿಕ್ಸ್ (ಇದು ಅನುವಂಶೀಯ ಬದಲಾವಣೆ ಮಾಡಿ ಕ್ಯಾನ್ಸರ್ ಗೆ ಕಾರಣವಾಗಬಹುದು) ಮುಟಜೆನಿಕ್(ಡಿಎನ್ ಎ ಮಟ್ಟದಲ್ಲಿ ಬದಲಾವಣೆ) ಮತ್ತು ಸೈಟೊಟಾಕ್ಸಿಕ್(ಜೀವಿಸುವ ಕೋಶಗಳಲ್ಲಿ ವಿಷ) ಹೊರಬರುವುದು. ಅಗರಬತ್ತಿಯನ್ನು ಅತಿಯಾಗಿ ಬಳಸಬಾರದು ಎನ್ನುವುದಕ್ಕೆ ಐದು ಕಾರಣಗಳನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.


 • ಅಸ್ತಮಾ ಸಮಸ್ಯೆ ಹೆಚ್ಚಿಸುವುದು

  ಅಗರಬತ್ತಿ ಕಡ್ಡಿಯನ್ನು ಹಚ್ಚಿಟ್ಟಾಗ ಅದು ವಾಯುಮಾಲಿನ್ಯ ಉಂಟು ಮಾಡುವುದು ಮತ್ತು ಕಿರಿಕಿರಿ ಉಂಟಾಗುವುದು. ಇದು ಶ್ವಾಸಕೋಶದ ಕೋಶಗಳಲ್ಲಿ ಉರಿಯೂತ ಉಂಟು ಮಾಡುವುದು. ಇದರಲ್ಲಿ ಇರುವಂತಹ ಹಾನಿಕಾರಕ ಅಂಶಗಳು ಅಸ್ತಮಾ ಸಮಸ್ಯೆಯನ್ನು ಹೆಚ್ಚಿಸಬಹುದು ಮತ್ತು ಸಿಒಪಿಡಿ(ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ರೋಗ) ಉಂಟು ಮಾಡಬಹುದು. ದಕ್ಷಿಣ ಚೀನಾದಲ್ಲಿರುವ ಯೂನಿವರ್ಸಿಟಿ ಆಫ್ ಟೆಕ್ನಾಲಜಿ ಮತ್ತು ಚೀನಾ ಟೊಬೆಕೊ ಗುಂಗ್ ಡಾಂಗ್ ಇಂಡಸ್ಟ್ರೀಯಲ್ ಕಂಪೆನಿಯು ನಡೆಸಿರುವಂತಹ ಅಧ್ಯಯನದ ಪ್ರಕಾರ ಊದುಬತ್ತಿಯಲ್ಲಿರುವಂತಹ ರಾಸಾಯನಿಕರು ತಂಬಾಕಿನ ಹೊಗೆಗಿಂತಲೂ ತುಂಬಾ ಹಾನಿಕಾರವಾಗಿದೆ.

  Most Read: ಅಕ್ಟೋಬರ್ 8 ರಿಂದ 14ರ ವರೆಗಿನ ವಾರ ಭವಿಷ್ಯ


 • ಹೃದಯದ ಆರೋಗ್ಯದ ಮೇಲೆ ಪರಿಣಾಮ

  ಅತಿಯಾಗಿ ಅಗರಬತ್ತಿಯನ್ನು ಹಚ್ಚುವುದರಿಂದ ಅದು ನಿಮ್ಮ ಹೃದಯದ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡಬಹುದು. ಅಗರಬತ್ತಿಯನ್ನು ನಿಯಮಿತವಾಗಿ ಹಚ್ಚಿಡುವ ಕಾರಣದಿಂದಾಗಿ ಶೇ.12ರಷ್ಟು ಹೃದಯದ ಕಾಯಿಲೆಯಗಳು ಬರಬಹುದು ಮತ್ತು ಸಾವು ಸಂಭವಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಯಾಕೆಂದರೆ ಅಗರಬತ್ತಿ ಹೊಗೆಯಿಂದಾಗಿ ಉರಿಯೂತ ಉಂಟಾಗುವುದು ಮತ್ತು ರಕ್ತ ಸಂಚಾರಕ್ಕೆ ಪರಿಣಾಮ ಬೀರುವುದು.


 • ಮಕ್ಕಳ ಮೇಲೆ ಪರಿಣಾಮ

  ಅಗರಬತ್ತಿ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಗರ್ಭದಲ್ಲಿರುವ ಮಗುವಿಗೂ ಇದರ ಪರಿಣಾಮವಾಗುವುದು. ಗರ್ಭಿಣಿ ಮಹಿಳೆಯರು ಆದಷ್ಟು ಮಟ್ಟಿಗೆ ಅಗರಬತ್ತಿಯ ಹೊಗೆಯಿಂದ ದೂರವಿರುವುದು ತುಂಬಾ ಒಳ್ಳೆಯದು. ಜರ್ನಲ್ ಆಫ್ ನ್ಯಾಶನಲ್ ಕ್ಯಾನ್ಸರ್ ಇನ್ಸ್ ಟ್ಯೂಟ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ ಅಗರಬತ್ತಿ ಹೊಗೆಗೆ ಒಗ್ಗಿರುವಂತಹ ಮಕ್ಕಳಿಗೆ ರಕ್ತರ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.


 • ಶ್ವಾಸಕೋಶದ ಕ್ಯಾನ್ಸರ್ ನ ಸಾಧ್ಯತೆ

  ಅಗರಬತ್ತಿ ಹೊಗೆಯಿಂದಾಗಿ ಉಂಟಾಗುವಂತಹ ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳಬಹುದು. ಹೊಗೆಯು ಶ್ವಾಸಕೋಶದಲ್ಲಿ ಕಿರಿಕಿರಿ ಉಂಟು ಮಾಡಬಹುದು ಮತ್ತು ಹೊಗೆಯಿಂದಾಗಿ ವಾಯುನಾಳದಲ್ಲಿ ಕ್ಯಾನ್ಸರ್ ಕೋಶಗಳು ಬಿಡುಗಡೆಯಾಗಬಹುದು.


 • ಶ್ವಾಸಕೋಶಗಳ ಕ್ಯಾನ್ಸರ್ ರೋಗದ ಅಪಾಯವನ್ನು ಹೆಚ್ಚಿಸುತ್ತದೆ

  ಉರಿಯುತ್ತಿರುವ ಅಗರಬತ್ತಿಯ ಹೊಗೆಯು ಶ್ವಾಸಕೋಶಗಳ ಅರ್ಬುದ ರೋಗ (ಕ್ಯಾನ್ಸರ್) ದ ಅಪಾಯವನ್ನು ಹೆಚ್ಚಿಸಬಲ್ಲದೆ೦ಬುದರ ಕುರಿತು ಎ೦ದಾದರೂ ಯೋಚಿಸಿದ್ದೀರಾ ? ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಎ೦ಬ ನಿಯತಕಾಲಿಕೆಯಲ್ಲಿ ಕಾಣಿಸಿಕೊ೦ಡ ಅಧ್ಯಯನವೊ೦ದರ ಪ್ರಕಾರ, ಅಗರಬತ್ತಿಯ ಹೊಗೆಗೆ ದೀರ್ಘಕಾಲದವರೆಗೆ ತೆರೆದುಕೊಳ್ಳುವುದರಿ೦ದ ಅದು ಮೇಲ್ಭಾಗದ ಅಥವಾ ಪೂರ್ವಾರ್ಧದ ಶ್ವಾಸಕಾ೦ಗ ಮಾರ್ಗಗಳ ಕ್ಯಾನ್ಸರ್ ಗೆ ದಾರಿಮಾಡಿಕೊಡಬಲ್ಲದು. ಅಧ್ಯಯನವು ಮತ್ತಷ್ಟು ಮು೦ದೆ ಸಾಗಿ, ಅಗರಬತ್ತಿಯ ಹೊಗೆಯನ್ನು ಸೇವಿಸುವ ಧೂಮಪಾನಿಗಳಲ್ಲಿ ಶ್ವಾಸನಾಳಗಳ ಮೇಲ್ಮಾರ್ಗದ ಕ್ಯಾನ್ಸರ್ (squamous cell carcinoma) ನ ಸ೦ಭವನೀಯತೆಯು ಇತರ ವ್ಯಕ್ತಿಗಳಿಗೆ ಹೋಲಿಸಿದಲ್ಲಿ ಹೆಚ್ಚಾಗಿರುತ್ತದೆ ಎ೦ದು ಸಾಬೀತು ಪಡಿಸಿತು.


 • ಚರ್ಮದ ಅಲರ್ಜಿ

  ಅಗರಬತ್ತಿಯನ್ನು ಅತಿಯಾಗಿ ಬಳಸುವುದರಿಂದಾಗಿ ಮಕ್ಕಳು ಹಾಗೂ ದೊಡ್ಡವರದಲ್ಲಿ ಕಣ್ಣಿನ ಅಲರ್ಜಿ ಕಾಣಿಸಬಹುದು. ಚರ್ಮದ ಸೂಕ್ಷ್ಮತೆ ಹೊದಿರುವ ವ್ಯಕ್ತಿಗಳು ಅಗರಬತ್ತಿ ಹೊಗೆಗೆ ಒಗ್ಗಿಕೊಂಡರೆ ಆಗ ಚರ್ಮದ ಅಲರ್ಜಿ ಕಾಣಿಸಬಹುದು ಮತ್ತು ಕೆಲವರಿಗೆ ಡರ್ಮಟೈಟಿಸ್ ಉಂಟಾಗಬಹುದು.


 • ಶರೀರದಲ್ಲಿ ವಿಷದ ಪ್ರಮಾಣವನ್ನು ಹೆಚ್ಚಳಗೊಳಿಸುತ್ತದೆ

  ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಉರಿಯುತ್ತಿರುವ ಅಗರಬತ್ತಿಗಳು ಹೊರಸೂಸುವ ಹೊಗೆಯಲ್ಲಿ ಸೀಸ, ಕಬ್ಬಿಣ, ಹಾಗೂ ಮೆಗ್ನೀಶಿಯ೦ ನ೦ತಹ ಹಾನಿಕಾರಕ ವಸ್ತುಗಳಿದ್ದು ಇವು ಶರೀರದೊಳಗಿನ ವಿಷದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅಗರಬತ್ತಿಯ ಹೊಗೆಯಲ್ಲಿರಬಹುದಾದ ರಾಸಾಯನಿಕ ಅನಿಲಗಳು ಹಾಗೂ ಕಣರೂಪೀ ವಸ್ತುಗಳು ಶ್ವಾಸನಾಳಗಳ ಮೂಲಕ ಶರೀರವನ್ನು ಪ್ರವೇಶಿಸಿದಲ್ಲಿ, ಅವುಗಳನ್ನು ಮೂತ್ರದ ಮೂಲಕ ಶರೀರದಿ೦ದ ಹೊರಹಾಕುವ ನಿಟ್ಟಿನಲ್ಲಿ ಮೂತ್ರಪಿ೦ಡಗಳ ಕಾರ್ಯಭಾರವು ಹೆಚ್ಚುತ್ತದೆ ಹಾಗೂ ಇದು ನಾನಾತೆರನಾದ ಮೂತ್ರಪಿ೦ಡಗಳ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ. ಉರಿಯುತ್ತಿರುವ ಅಗರಬತ್ತಿಯು ಹೊರಸೂಸುವ ಹೊಗೆಯು ರಕ್ತದಲ್ಲಿರಬಹುದಾದ ಅಶುದ್ಧ ವಸ್ತುಗಳ ಸಾ೦ದ್ರತೆಯನ್ನು ಹೆಚ್ಚಿಸುತ್ತದೆ.

  Most Read: ಒಂಬತ್ತು ದಿನಗಳ ಕಾಲ ದೇವಿಯ ಆರಾಧನೆಗಾಗಿ 'ಶಕ್ತಿಯುತ' ಮಂತ್ರಗಳು


 • ತಡೆಯುವುದು ಹೇಗೆ?

  ಪ್ರತಿನಿತ್ಯವು ನೀವು ಅಗರಬತ್ತಿಯನ್ನು ದೀರ್ಘಕಾಲದ ತನಕ ಬಳಸುತ್ತಿದ್ದರೆ ಅದು ತುಂಬಾ ಹಾನಿಕಾರಕವಾಗಲಿದೆ. ಇದರಿಂದ ಇದರ ಉಪಯೋಗವನ್ನು ಕಡಿಮೆ ಮಾಡಿಕೊಳ್ಳುವುದು ತುಂಬಾ ಒಳ್ಳೆಯ ವಿಧಾನವಾಗಿದೆ. ಶ್ವಾಸಕೋಶದ ಸಮಸ್ಯೆ ಇರುವಂತಹವರು ಇದರಿಂದ ಆದಷ್ಟು ಮಟ್ಟಿಗೆ ದೂರ ಇರಬೇಕು. ಅಗರಬತ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದರೆ ತುಂಬಾ ಒಳ್ಳೆಯದು. ಒಂದು ವೇಳೆ ಅಸಾಧ್ಯವಾದರೆ ಆಗ ಬಾಗಿಲು, ಕಿಟಕಿಗಳನ್ನು ತೆರೆದಿಟ್ಟು ಹಚ್ಚಿಕೊಳ್ಳಿ.
ಭಾರತೀಯರು ಹೆಚ್ಚಾಗಿ ತಮ್ಮ ಪೂಜಾ ಕೊಠಡಿಯಲ್ಲಿ ಅಗರಬತ್ತಿ ಹೊತ್ತಿಸದೆ ಇರಲಾರರು. ವಿವಿಧ ಸುಗಂಧವನ್ನು ನೀಡುವಂತಹ ಅಗರಬತ್ತಿ ಹಿಂದೂ ಧರ್ಮಿಯರಿಗೆ ಪೂಜೆಯ ಒಂದು ಭಾಗವೇ ಆಗಿ ಹೋಗಿದೆ. ಒಂದು ಅಗರಬತ್ತಿ ಹಚ್ಚಿಟ್ಟರೆ ಅದರಿಂದ ಮನೆಯಿಡಿ ಸುವಾಸನೆ ಬರುವುದು.

ಆದರೆ ಸುವಾಸನೆ ಹಿಂದೆ ಅಡಗಿರುವಂತಹ ಹಾನಿಕಾರಕ ವಸ್ತುಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಅಗರಬತ್ತಿಯನ್ನು ಅತಿಯಾಗಿ ಬಳಸಿದರೆ ಅದರಿಂದ ಆರೋಗ್ಯಕ್ಕೆ ಹಾನಿಯಿದೆ ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ನೀವು ಅಗರಬತ್ತಿಯನ್ನು ಅತಿಯಾಗಿ ಬಳಸುವುದರಿಂದ ಆಗುವಂತಹ ಅಡ್ಡಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವ....

   
 
ಹೆಲ್ತ್