Back
Home » ಆರೋಗ್ಯ
ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್
Boldsky | 9th Oct, 2018 02:16 PM
 • ಸೌತೆಕಾಯಿ, ಬೇಯಿಸಿದ ಹಸಿರು ತರಕಾರಿಗಳನ್ನೆಲ್ಲಾ ಹೆಚ್ಚು ತಿನ್ನಿ

  ಕರಿದ, ಖಾರದ ಆಹಾರವು ನಿಮ್ಮ ದೇಹದ ಉಷ್ಣತೆಯು ಹೆಚ್ಚಾಗುವಂತೆ ಮಾಡುವುದು. ಸೌತೆಕಾಯಿ, ಬೇಯಿಸಿದ ಹಸಿರು ತರಕಾರಿಗಳು ದೇಹದ ತೂಕ ಕಡಿಮೆ ಮಾಡುವುದು. ಮಜ್ಜಿಗೆ ಮತ್ತು ಮಸ್ಕ್ ಮೆಲನ್(ಕಸ್ತೂರಿ) ದೇಹದ ಉಷ್ಣತೆ ತಗ್ಗಿಸುವುದು.


 • ತುಳಸಿ ಬೀಜ ಹಾಕಿ ನೀರು ಕುಡಿಯಿರಿ

  ದೇಹದ ಉಷ್ಣತೆ ತಗ್ಗಿಸಲು ತುಳಸಿ ಬೀಜಗಳೊಂದಿಗೆ ತಣ್ಣೀರು ಕುಡಿಯಿರಿ. ಇದನ್ನು ನೀರಿಗೆ ಹಾಕಿಕೊಂಡು ನೆನೆಸಿಡಿ ಮತ್ತು ಇದರ ಬಳಿಕ ಹಾಲು ಮತ್ತು ರೋಸ್ ವಾಟರ್ ಗೆ ಹಾಕಿದರೆ ಪರಿಣಾಮಕಾರಿಯಾಗಿ ದೇಹದ ತೂಕ ಕಡಿಮೆ ಮಾಡಬಹುದು.

  Most Read: ನೀರಿನಲ್ಲಿ ನೆನೆಸಿಟ್ಟ 'ಮೆಂತೆ ಕಾಳಿನ' ಆರೋಗ್ಯಕಾರಿ ಪ್ರಯೋಜನಗಳು


 • ಯೋಗಾಸನಗಳು

  ಪ್ರಾಣಾಯಾಮ, ಸೂರ್ಯನಮಸ್ಕಾರ ಮತ್ತು ತ್ರಿಕೋನಾಸನದಂತಹ ಯೋಗಾಸನಗಳು ನಿಮ್ಮ ದೇಹದ ಉಷ್ಣತೆ ಕಡಿಮೆ ಮಾಡುವುದು. ಔಷಧಿಯೊಂದಿಗೆ ಇದು ನಿಮ್ಮ ದೇಹ ಮತ್ತು ಮನಸ್ಸನ್ನು ಶಾಂತವಾಗಿಡುವಂತೆ ಮಾಡುವುದು. ಇದರಿಂದ ಶಕ್ತಿಯು ಒಂದು ಕಡೆ ಕೇಂದ್ರೀಕೃತವಾಗಿ ದೇಹವು ತಂಪಾಗುವುದು.


 • ಗಿಡಮೂಲಿಕೆ ಚಹಾ

  ಕೊತ್ತಂಬರಿ, ಜೀರಿಗೆ ಮತ್ತು ಸೋಂಪಿನಿಂದ ಮಾಡಿರುವಂತಹ ಗಿಡಮೂಲಿಕೆ ಚಹಾವು ಚಯಾಪಚಯ ಕ್ರಿಯೆ ಉತ್ತಪಡಿಸಿ, ದೇಹದ ಉಷ್ಣತೆ ತಗ್ಗಿಸುವುದು. ಚಾಮೊಮೈಲ್ ಮತ್ತು ಪುದೀನಾ ಚಹಾ ಕೂಡ ದೇಹಕ್ಕೆ ಶಮನ ನೀಡುವುದು.


 • ಗಿಡಮೂಲಿಕೆ ಎಣ್ಣೆಯ ಮಸಾಜ್

  ಗಿಡಮೂಲಿಕೆ ಎಣ್ಣೆಗಳಿಂದ ದೇಹಕ್ಕೆ ಮಸಾಜ್ ಮಾಡಿ ರಕ್ತಸಂಚಾರ ಉತ್ತಮಗೊಳಿಸಿ ಮತ್ತು ಇದು ದೇಹಕ್ಕೆ ಶಮನ ನೀಡುವುದು. ಇನ್ನುಆಯುರ್ವೇದದ ಪ್ರಕಾರ ತೆಂಗಿನೆಣ್ಣೆಯು ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಪ್ರಮುಖ ಪಾತ್ರ ವಹಿಸುವುದು.


 • ಮೊಸರು

  ದೇಹದ ತೂಕ ಕಡಿಮೆ ಮಾಡಲು ಸಕ್ಕರೆ ಬದಲು ಜೇನುತುಪ್ಪ ಅಥವಾ ಕಾಕಂಬಿ ಬಳಸಿ, ಹಾಗೂ ಊಟ ಬಳಿಕ ಮೊಸರಿಗೆ ನೀರು ಬೆರೆಸಿಕೊಂಡು ಕುಡಿದರೆ ದೇಹದ ತೂಕ ತಗ್ಗುವುದು. ಮೊಸರು ನೈಸರ್ಗಿಕ ತಂಪುಕಾರಕ ಗುಣ ಹೊಂದಿದೆ.

  Most Read: ಅಕ್ಟೋಬರ್ 8 ರಿಂದ 14ರ ವರೆಗಿನ ವಾರ ಭವಿಷ್ಯ


 • ಲಿನೆನ್ ಮತ್ತು ಹತ್ತಿ ಬಟ್ಟೆಯನ್ನು ಉಪಯೋಗಿಸಿ

  ತಂಪಾಗಿರುವಂತಹ ವಾತಾವರಣದಲ್ಲಿ ತೋಟದ ಕೆಲಸ ಮತ್ತು ಈಜುವುದರಿಂದಲೂ ದೇಹದ ಉಷ್ಣತೆಯು ತಗ್ಗುವುದು. ಅಲ್ಲದೆ ದೇಹದ ಉಷ್ಣತೆ ತಗ್ಗಿಸಲು ತಿಳಿ ಬಣ್ಣದ ಬಟ್ಟೆಗಳನ್ನು ಬಳಸಿ. ಲಿನೆನ್ ಮತ್ತು ಹತ್ತಿ ಬಟ್ಟೆಯು ದೇಹವನ್ನು ತಂಪಾಗಿಡುವುದು.


 • ಏಲಕ್ಕಿ

  ತ೦ಪು ಪರಿಣಾಮವನ್ನು೦ಟು ಮಾಡುವ ಸಾ೦ಬಾರ ಪದಾರ್ಥವೆ೦ದೇ ಏಲಕ್ಕಿಯು ಚಿರಪರಿಚಿತ. ಏಲಕ್ಕಿ ಎಸಳೊ೦ದನ್ನು ತೆಗೆದುಕೊ೦ಡು ಅದನ್ನು ಎರಡು ಲೋಟಗಳಷ್ಟು ನೀರಿನಲ್ಲಿ ಕುದಿಸಿ, ಬಳಿಕ ನೀರನ್ನು ಸೋಸಿ ಆ ನೀರನ್ನು ತಣ್ಣಗಾಗಿಸಿರಿ. ನಿಮ್ಮ ಶರೀರದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ಈ ನೀರನ್ನು ನಿಯಮಿತ ಕಾಲಾ೦ತರಗಳಲ್ಲಿ ಕುಡಿಯಿರಿ.


 • ಮೆ೦ತೆಕಾಳುಗಳು

  ಉಷ್ಣತೆಯ ಪರಿಣಾಮಕ್ಕೆ ತದ್ವಿರುದ್ಧವಾದ ಪರಿಣಾಮವನ್ನು೦ಟು ಮಾಡುವ ನಿಟ್ಟಿನಲ್ಲಿ ಮೆ೦ತೆಕಾಳುಗಳು ಅತ್ಯ೦ತ ಆದರ್ಶಪ್ರಾಯವಾದ ಪರಿಹಾರೋಪಾಯವಾಗಿವೆ. ಒ೦ದು ಟೇಬಲ್ ಚಮಚದಷ್ಟು ಮೆ೦ತೆಕಾಳುಗಳನ್ನು ಒ೦ದು ಲೋಟದಷ್ಟು ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿರಿ ಹಾಗೂ ಮಾರನೆಯ ದಿನ ಬೆಳಗ್ಗೆ ಆ ನೀರನ್ನು ಕುಡಿಯಿರಿ.ನೀರಿನಲ್ಲಿ ನೆನೆದಿರುವ ಆ ಕಾಳುಗಳನ್ನು ಜಜ್ಜಿ ಅವುಗಳನ್ನು ಒ೦ದು ಕೇಶರಾಶಿಯ ಪರದೆಯ ರೂಪದಲ್ಲಿ ತಲೆಗೂದಲಿಗೆ ಹಚ್ಚಿಕೊಳ್ಳಿರಿ. ಹೀಗೆ ಮಾಡಿದಲ್ಲಿ ನಿಮ್ಮ ಶರೀರವು ಅತ್ಯ೦ತ ತ೦ಪುಗೊ೦ಡಿದುದರ ಅನುಭವವು ನಿಮಗಾಗುತ್ತದೆ. ಇಷ್ಟು ಮಾತ್ರವಲ್ಲದೇ, ನಿಮ್ಮ ದೇಹದ ಉಷ್ಣಾ೦ಶವನ್ನು ತಗ್ಗಿಸುವ ನಿಟ್ಟಿನಲ್ಲಿ ನೆನೆಸಿಟ್ಟಿದ್ದ ಒ೦ದಿಷ್ಟು ಮೆ೦ತೆಕಾಳುಗಳನ್ನು ಜಗಯುವುದೂ ಕೂಡಾ ಪರಿಣಾಮಕಾರಿಯಾಗಿರುತ್ತದೆ.


 • ಎಳನೀರನ್ನು ಕುಡಿಯಿರಿ

  ಬಿಸಿಲ ಝಳದಿ೦ದ ಸೋತುಸುಣ್ಣವಾಗಿರುವ ಜೀವಕ್ಕೆ ಎಳನೀರಿನಷ್ಟು ತ೦ಪನ್ನೀಯುವ ಪೇಯವು ಮತ್ತೊ೦ದಿರಲಾರದು. ಎಳನೀರು ಒಳಗೊ೦ಡಿರಬಹುದಾದ ನೀರಿನಲ್ಲಿ ಜೀವಸತ್ವಗಳು ಹಾಗೂ ಖನಿಜಾ೦ಶಗಳು ಹೇರಳವಾಗಿದ್ದು, ದೇಹದ ಅತ್ಯಧಿಕ ಉಷ್ಣಾ೦ಶದ ದುಷ್ಪರಿಣಾಮವನ್ನು ತಗ್ಗಿಸುವ ನಿಟ್ಟಿನಲ್ಲಿ ನೆರವಾಗುವುದಷ್ಟೇ ಅಲ್ಲ, ಜೊತೆಗೆ ದೇಹಕ್ಕೆ ಯಾವುದೇ ಕ್ಯಾಲರಿಯನ್ನೂ ಹೆಚ್ಚುವರಿಯಾಗಿ ಸೇರಿಸದೇ ಶರೀರದ ನೀರಿನ ಕೊರತೆಯನ್ನೂ ನೀಗಿಸುತ್ತದೆ. ನಿಮ್ಮ ಶರೀರವನ್ನು ಸದೃಢವಾಗಿ ಹಾಗೂ ತ೦ಪಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿದಿನವೂ ಎಳನೀರನ್ನು ಕುಡಿಯಿರಿ.

  Most Read: ಕೂದಲಿಗೆ ರೆಡ್ ವೈನ್ ಬಳಸಿ-ಇದರಿಂದ ಸಾಕಷ್ಟು ಪ್ರಯೋಜನಗಳಿವೆ


 • ಬಾಡಿ ಹೀಟ್ ಕಡಿಮೆ ಮಾಡಲು ಒಂದಿಷ್ಟು ಸರಳ ಟಿಪ್ಸ್

  • ಒಂದು ಲೋಟ ಹಾಕಿಗೆ ಒಂದು ಚಮಚ ಬಾದಾಮಿ ಹುಡಿ ಮತ್ತು ಚಿಟಿಕೆ ಅರಿಶಿನ ಹಾಕಿಕೊಂಡು ಕುಡಿದರೆ ದೇಹದ ಉಷ್ಣತೆ ಕಡಿಮೆಯಾಗುವುದು.
  • ಹೆಚ್ಚು ಉಪ್ಪು, ಖಾರ ಮತ್ತು ಎಣ್ಣೆಯಿರುವಂತಹ ಆಹಾರವನ್ನು ಸೇವಿಸಬೇಡಿ. ಇದು ದೇಹದ ತೂಕ ಹೆಚ್ಚಿಸುವುದು. ಸಂಸ್ಕರಿತ ಮತ್ತು ಫಾಸ್ಟ್ ಫುಡ್ ಕಡೆಗಣಿಸಿ.
  • ದೇಹದ ಉಷ್ಣತೆ ತಗ್ಗಿಸಲು ಹಲವಾರು ರೀತಿಯ ವಿಧಾನಗಳು ಆಯುರ್ವೇದದಲ್ಲಿದೆ. ನೀವು ಆಯುರ್ವೇದ ತಜ್ಞರನ್ನು ಭೇಟಿಯಾಗಿ ಅವರಿಂದ ಸಲಹೆ ಪಡೆದು ಮುಂದುವರಿಯಿರಿ.
ಭೂಮಿ ಮೇಲಿರುವ ಒಬ್ಬೊಬ್ಬ ವ್ಯಕ್ತಿಯ ದೇಹವು ಒಂದೊಂದು ರೀತಿಯಲ್ಲಿರುವುದು. ಒಂದೇ ರೀತಿಯ ದೇಹ ಹೊಂದಿರುವ ಜನರು ಸಿಗುವುದು ಕಡಿಮೆ. ಯಾಕೆಂದರೆ ಕೆಲವರ ದೇಹವು ತುಂಬಾ ತಂಪಾಗಿದ್ದರೆ, ಇನ್ನು ಕೆಲವರು ಅತಿಯಾದ ಉಷ್ಣವನ್ನು ಹೊಂದಿರುವುದು. ಇದನ್ನು ಆಯುರ್ವೇದದಲ್ಲಿ ಪಿತ್ತವೆಂದು ಕರೆಯಲಾಗುವುದು. ಪಿತ್ತವು ಪ್ರತಿಯೊಬ್ಬರ ದೇಹದಲ್ಲೂ ಇರುವುದು. ಪಿತ್ತ ದೇಹದ ಚಯಾಪಚಯ ಕ್ರಿಯೆಯು ಸಾಮಾನ್ಯವಾಗಿರುವಂತೆ ಮಾಡುವುದು. ಅದರೆ ಪಿತ್ತ ದೋಷವು ಕಾಣಿಸಿಕೊಂಡರೆ ದೇಹದ ಉಷ್ಣತೆಯು ಅಧಿಕವಾಗಿರುವುದು.

ಇದು ದೇಹದ ಉಷ್ಣವನ್ನು ಹಠಾತ್ ಹಾಗೂ ಅಗತ್ಯಕ್ಕಿಂತ ಹೆಚ್ಚು ವೃದ್ಧಿಸುವುದು. ಇದರ ಪರಿಣಾಮವಾಗಿ ಸಾಮಾನ್ಯ ಚಯಾಪಚಯ ಕ್ರಿಯೆ ಮೇಲೆ ಪರಿಣಾಮ ಬೀರಿ, ದೇಹದಲ್ಲಿ ರಾಸಾಯನಿಕಗಳ ಅಸಮತೋಲನ ಉಂಟಾಗುವುದು. ಇದರಿಂದಾಗಿ ಮೊಡವೆ, ಎದೆಯುರಿ, ಚರ್ಮದಲ್ಲಿ ದದ್ದುಗಳು ಮತ್ತು ಅತಿಸಾರ ಉಂಟಾಗುವುದು. ಆಯುರ್ವೇದದಲ್ಲಿ ದೇಹದ ಉಷ್ಣತೆ ಅಥವಾ ಬಾಡಿ ಹೀಟ್ ತಗ್ಗಿಸಲು ಕೆಲವು ಔಷಧಿಗಳು ಇವೆ. ಇದನ್ನು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮುಂದೆ ಓದಿ

   
 
ಹೆಲ್ತ್