Back
Home » Business
ಸಿಹಿಸುದ್ದಿ! ಆಧಾರ್ ಸೇವಾ ಕೇಂದ್ರಗಳ ಸ್ಥಾಪನೆ, ಯೋಜನಾ ವೆಚ್ಚ 300-400 ಕೋಟಿ
Good Returns | 10th Oct, 2018 12:11 PM

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪಾಸ್ಪೋರ್ಟ್ ಸೇವಾ ಕೇಂದ್ರಗಳ ಮಾದರಿಯಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಿದೆ.

ದೇಶದ 53 ನಗರಗಳಲ್ಲಿ ಸೇವಾ ಕೇಂದ್ರಗಳನ್ನು ತೆರೆಯಲು ನಿಶ್ಚಯಿಸಲಾಗಿದ್ದು, ಒಟ್ಟು ರೂ. 300 ರಿಂದ 400 ಕೋಟಿ ವೆಚ್ಚದ ಯೋಜನೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆಧಾರ್ ನೋಂದಣಿ, ಪರಿಷ್ಕರಣೆಯಂತಹ ಸೇವೆಗಳು ಸಾರ್ವಜನಿಕರಿಗೆ ಇನ್ನು ಮುಂದೆ ಈಗಿನದ್ದಕ್ಕಿಂತ ಸುಲಭದಲ್ಲಿ ಸಿಗಲಿವೆ.

ದೇಶದ ಮಹಾನಗರಗಳಲ್ಲಿ ನಾಲ್ಕು ಹಾಗೂ ನಗರಗಳಲ್ಲಿ 2 ರಂತೆ ಆಧಾರ್ ಸೇವಾ ಕೇಂದ್ರಗಳನ್ನು ನಿರ್ಮಾಣವಾಗಲಿದ್ದು, ಇವು 2019 ರ ಏಪ್ರಿಲ್ ವೇಳೆಗೆ ಕಾರ್ಯಾರಂಭ ಮಾಡಲಿವೆ ಎಂದು ಯುಐಡಿಎಐ ತಿಳಿಸಿದೆ.

ಪ್ರಸ್ತುತ ದೇಶಾದ್ಯಂತ ಪ್ರತಿಇನ ಸುಮಾರು 4 ಲಕ್ಷ ಜನರು ಆಧಾರ್ ಅಪ್‍ಡೇಟ್ ಹಾಗೂ ಅಧಾರ್ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ದೇಶದಾದ್ಯಂತ ಹಲವು ಬ್ಯಾಂಕ್, ಅಂಚೆ ಕಚೇರಿ ಹಾಗೂ ಸರ್ಕಾರಿ ಸ್ವಾಮ್ಯದ ಇತರ ಸಂಸ್ಥೆಗಳು ಒಳಗೊಂಡಂತೆ ಒಟ್ಟು 30 ಸಾವಿರ ಕೇಂದ್ರಗಳಲ್ಲಿ ಸೇವೆ ನೀಡಲಾಗುತ್ತಿದೆ. ಆಧಾರ್ ಸೇವೆ ಇನ್ನಷ್ಟು ಸುಗಮವಾಗಿ ಸಿಗುವಂತಾಗಲಿ ಎಂಬ ಆಶಯದಿಂದ ಅಧಾರ್ ಸೇವಾ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ.

   
 
ಹೆಲ್ತ್