Back
Home » ಆರೋಗ್ಯ
ಇಂತಹ ವಸ್ತುಗಳನ್ನು ಆದಷ್ಟು ಬೇಗ ಬೆಡ್-ರೂಮ್‌ನಿಂದ ಹೊರಹಾಕಿ- ಇಲ್ಲಾಂದ್ರೆ ಕ್ಯಾನ್ಸರ್ ಬರಬಹುದು!!
Boldsky | 10th Oct, 2018 12:29 PM
 • ತಲೆದಿಂಬಿನ ಹತ್ತಿ ಬಟ್ಟೆ ಕವಚ ಮತ್ತು ಶೀಟ್ ಗಳು

  ಸಾಂಪ್ರದಾಯಿಕ ಹತ್ತಿಯು ಕೀಟಾಣುಗಳು ಬೆಳೆಯಲು ತುಂಬಾ ಪ್ರಸಕ್ತವಾಗಿರುವಂತಹ ಜಾಗವಾಗಿದೆ. ಇದಕ್ಕೆ ಸಿಂಪಡಿಸುವಂತಹ ಮೊನ್ಸಾಂಟೊದ ರೌಂಡಪ್ ಎನ್ನುವುದು ಗ್ಲೈಫೋಸೇಟ್ ನ ಕ್ರಿಯಾಶೀಲ ಘಟಕವಾಗಿದೆ.ಗ್ಲೈಫೋಸೇಟ್ ಕ್ಯಾನ್ಸರ್ ಗೆ ಸಂಬಂಧಿಸಿದ್ದಾಗಿದೆ. ಆದರೂ ಜನರು ಇದನ್ನು ಹಾಗೂ ಇದರ ಅಂಶವು ಉಳಿದಿರುವಂತಹ ವಸ್ತುಗಳನ್ನು ಬಳಕೆ ಮಾಡುವರು. ಸಾಂಪ್ರದಾಯಿಕ ಹತ್ತಿಗೆ ಪರ್ಯಾಯವಾಗಿ ಸಾವಯವ ಹತ್ತಿ ಮತ್ತು ಬಿದಿರನ್ನು ಬಳಸಬಹುದು. ಸಾವಯವ ಹತ್ತಿ ಬಟ್ಟೆಯಿಂದ ತಯಾರಿಸಿರುವಂತಹ ಬೆಡ್ ಶೀಟ್ ಗಳನ್ನು ಇತ್ತೀಚೆಗೆ ಬಳಸುತ್ತಿದ್ದೇನೆ ಮತ್ತು ನನ್ನ ಜೀವನ ಹಿಂದಿನ ಹಾಗಿಲ್ಲ. ಇದು ತುಂಬಾ ಮೃದುವಾಗಿದೆ ಮತ್ತು ಸಾಂಪ್ರದಾಯಿಕ ಹತ್ತಿಯಂತೆ ಇದು ಯಾವುದೇ ರೀತಿಯ ಆರೋಗ್ಯದ ಅಪಾಯವನ್ನು ಉಂಟು ಮಾಡುವುದಿಲ್ಲ.

  Most Read: ನಿಮಗೆ ತಿಳಿದಿರಲೇಬೇಕಾದ ಅತಿ ಶಕ್ತಿಯುತ ನಾಲ್ಕು 'ದುರ್ಗಾ ಮಂತ್ರಗಳು'


 • ನಕಲಿ ಚರ್ಮದ ಪೀಠೋಪಕರಣಗಳು

  ನನ್ನ ಬಗ್ಗೆ ತಪ್ಪು ತಿಳಿಯಬೇಡಿ. ನಾನು ಯಾವುದೇ ಪ್ರಾಣಿಯ ಚರ್ಮ ಅಥವಾ ಅದರಿಂದ ತಯಾರಿಸಿದ ಉತ್ಪನ್ನಗಳನ್ನು ಬೆಂಬಲಿಸುವುದಿಲ್ಲ. ನನ್ನ ಮನೆಯಲ್ಲಿ ಚರ್ಮದ ಪೀಠೋಪಕರಣಗಳು ಇರಬೇಕೆಂದು ಬಯಸುವುದಿಲ್ಲ ಮತ್ತು ಇದನ್ನು ಬೇರೆಯವರು ಖರೀದಿಸಲಿ ಎಂದು ಒತ್ತಾಯಿಸುವುದಿಲ್ಲ. ಆದರೆ ನಕಲಿ ಚರ್ಮವನ್ನು ಪಿವಿಸಿ ಮತ್ತು ಇತರ ರಾಸಾಯನಿಕಗಳಿಂದ ಮಾಡಲಾಗಿರುವುದು. ಇದರಲ್ಲಿ ಇರುವಂತಹ ವಿಷಕಾರಿ ಅಂಶಗಳು ಆರೋಗ್ಯಕ್ಕೆ ಮಾರಕವಾಗಿರುವುದು. ಸೋಫಾಗಳಲ್ಲಿ ಹೆಚ್ಚಾಗಿ ಜ್ವಾಲೆಯ ನಿವಾರಕಗಳಿರುವುದು. ಇದು ಚರ್ಮ ಹಾಗೂ ನಕಲಿ ಚರ್ಮ ಎರಡರಲ್ಲೂ ಇರುವುದು. ಜ್ವಾಲೆಯ ನಿವಾರಕವು ಆರೋಗ್ಯಕ್ಕೆ ಹಾನಿಕಾರಕ. ಇದು ಕೇವಲ ಕ್ಯಾನ್ಸರ್ ಕಾರಕವಲ್ಲದೆ, ಹಾರ್ಮೋನು ಅಸಮತೋಲನ ಮತ್ತು ಮೆದುಳಿನ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು.


 • ಪೈಂಟ್

  ಹೊಸ ಪೈಂಟ್ ಬಳಿದಿರುವಂತಹ ಮನೆಯು ಒಂದು ರೀತಿಯ ಸುವಾಸನೆ ಉಂಟು ಮಾಡುವುದು. ಆದರೆ ಇದರ ಹಿಂದೆ ಕೆಲವೊಂದು ರಾಸಾಯನಿಕಗಳು ಇರುವುದು. ಮನೆಯಲ್ಲಿ ಜೈವಿಕ ಸಾಮಾನ್ಯ ಮೂಲವೆಂದರೆ ಅದು ಪೈಂಟ್. ಇದರಲ್ಲಿ ಕಾರ್ಸಿನೋಜೆನಿಕ್ ಇದೆ. ಮನೆಯ ಒಳಗಡೆ ಇರುವಾಗ ಇದಕ್ಕೆ ಒಗ್ಗಿಕೊಳ್ಳುವುದು ಹೆಚ್ಚು.

  Most Read: ದಿನಾ ಒಂದೊಂದು ಗ್ಲಾಸ್ 'ಟೊಮೆಟೊ ಜ್ಯೂಸ್' ಕುಡಿದರೆ ಆರೋಗ್ಯವಾಗಿರುವಿರಿ


 • ಇಲೆಕ್ಟ್ರಾನಿಕ್ ಸಾಧನಗಳು

  ಹಾಸಿಗೆಯ ಬದಿಯಲ್ಲೇ ಮೊಬೈಲ್ ಫೋನ್ ಇಟ್ಟು ಮಲಗುತ್ತೀರಾ? ಹೀಗೆ ಮಾಡುವುದು ನೀವೊಬ್ಬರೇ ಅಲ್ಲ. ಕೋಟ್ಯಂತರ ಮಂದಿ ಇಂದು ಹೀಗೆ ಮಾಡುತ್ತಿದ್ದಾರೆ. ಯಾಕೆಂದರೆ ರಾತ್ರಿ ವೇಳೆ ಸಂಗೀತ ಕೇಳಿ ಹಾಗೆ ನಿದ್ರೆ ಹೋಗುವರು. ಇನ್ನು ಕೆಲವರು ಬೆಳಗ್ಗೆ ಬೇಗನೆ ಏಳಲು ಅಲರಾಂ ಇಟ್ಟುಕೊಳ್ಳುವರು. ಮಲಗುವ ಕೋಣೆಯಲ್ಲಿ ಇತರ ಇಲೆಕ್ಟ್ರಾನಿಕ್ ಸಾಧನಗಳಾಗಿರುವಂತಹ ಟಿವಿ, ಹೇರ್ ಡೈಯರ್ ಮತ್ತು ಅಲರಾಂ ಕ್ಲಾಕ್ ಅಥವಾ ವೈಫೈ ಮತ್ತು ಡಿಮ್ಮರ್ ಸ್ವಿಚ್ ಗಳು ಇದ್ದರೆ ಆಗ ನೀವು ಇಎಂಎಫ್ ಗೆ ಹೆಚ್ಚು ಒಗ್ಗಿಕೊಳ್ಳುತ್ತಿದ್ದೀರಿ.


 • ಚಾಪೆಗಳು

  ಚಾಪೆಗಳನ್ನು ತಯಾರಿಸುವ ವೇಳೆ ಕೂಡ ಇದನ್ನು ಜ್ವಾಲೆ ನಿರೋಧಕಗಳಲ್ಲಿ ಮುಳುಗಿಸಲಾಗುತ್ತದೆ. ಜ್ವಾಲೆ ನಿರೋಧಕವು ಆರೋಗ್ಯಕ್ಕೆ ಒಳ್ಳೆಯದಲ್ಲವೆಂದು ಈಗಾಗಲೇ ಹೇಳಿದ್ದೇವೆ. ಇದು ಕೇವಲ ಕ್ಯಾನ್ಸರ್ ಕಾರಕವಲ್ಲದೆ ಹಾರ್ಮೋನು ವೈಪರಿತ್ಯ ಮತ್ತು ಮೆದುಳಿನ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದರಿಂದ ಸಾವಯವಾಗಿರುವ ಚಾಪೆ ಬಳಸಿ.


 • ತುಂಬಿಸಲ್ಪಟ್ಟಿರುವ ಗೊಂಬೆಗಳು

  ಇದು ತುಂಬಾ ಅಪಾಯಕಾರಿಯಾಗಿದೆ. ಇದಕ್ಕೆ ಕೂಡ ಜ್ವಾಲೆ ನಿರೋಧಕ ಬಳಸಲಾಗುತ್ತದೆ. ಆದರೆ ನಮಗೆ ತಿಳಿಯದೆ ಇದನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ನೀಡುತ್ತೇವೆ. ಇದರಿಂದ ಮಕ್ಕಳ ದೇಹವನ್ನು ವಿಷಕಾರಿ ಅಂಶಗಳು ಸೇರಿಕೊಳ್ಳುವುದು. ಹೆಚ್ಚಿನವರು ಇದನ್ನು ಇಷ್ಟಪಡುವರು. ಆದರೆ ಇದನ್ನು ಕೇಳಿದ ಬಳಿಕ ಖಂಡಿತವಾಗಿಯೂ ನೀವು ಇದರಿಂದ ದೂರವಿರುವಿರಿ.

  Most Read: ಮಾರಕ 'ಕ್ಯಾನ್ಸರ್' ರೋಗವನ್ನು ಗೋಮೂತ್ರದಿಂದ ಗುಣಪಡಿಸಬಹುದು!


 • ಸುಗಂಧಿತ ರೂಮ್ ಸ್ಪ್ರೇಗಳು

  ಏರ್ ಫ್ರೆಶ್ನರ್ ನ್ನು ಪ್ರತಿಯೊಬ್ಬರು ಇಷ್ಟಪಡುವರು. ಇದು ಮನೆಯಿಂದ ಹಿಡಿದು ಬಾತ್ ರೂಮ್, ಬೆಡ್ ರೂಮ್, ಕಾರ್ ಹೀಗೆ ಎಲ್ಲೆಂದರಲ್ಲಿ ಇರುವುದು. ಇದನ್ನು ಸಂಶ್ಲೇಷಿತ ಸುಗಂಧದಿಂದ ತಯಾರಿಸಲಾಗುತ್ತದೆ. ಪರ್ಫೂಮ್ ಎನ್ನುವುದು ವಿಷಕಾರಿ ರಾಸಾಯನಿಕಗಳ ಮಿಶ್ರಣವಾಗಿದೆ. ಇದಕ್ಕೆ ಬಳಸಿರುವ ರಾಸಾಯನಿಕಗಳನ್ನು ಹೆಸರಿಸುವ ಬದಲು ಕೇವಲ ಪರ್ಫೂಮ್ ಎಂದು ಹೇಳಲಾಗುತ್ತದೆ. ಕಂಪೆನಿಗಳು ತಮ್ಮ ರಹಸ್ಯವನ್ನು ಕಾಪಾಡಿಕೊಂಡು ಹೋಗುತ್ತದೆ. ಇದರಿಂದಾಗಿ ಕಾರ್ಸಿನೋಜೆನ್ ನ್ನು ಜನರು ಗೊತ್ತಿಲ್ಲದೆ ಬಳಸಿಕೊಳ್ಳುವರು.

  Most Read: ಎಲ್ಲಾ 12 ರಾಶಿಯವರ 'ಜೀವನದ ನಿಜವಾದ ಗುರಿ' ಇಲ್ಲಿದೆ ನೋಡಿ


 • ಕೊನೆಯ ಮಾತು

  ಜನರಲ್ಲಿ ಭೀತಿ ಮೂಡಿಸಬೇಕೆನ್ನುವ ಉದ್ದೇಶದಿಂದ ಇಂತಹ ಲೇಖನವನ್ನು ನಾವು ಪ್ರಕಟಿಸುತ್ತಿಲ್ಲ. ಜನರಲ್ಲಿ ಇಂತಹ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದೇ ಉದ್ದೇಶವಾಗಿದೆ. ನಮಗೆ ಇವುಗಳ ಬಗ್ಗೆ ಜ್ಞಾನವಿದ್ದರೆ ಆಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇಂತಹ ವಸ್ತುಗಳ ಬಗ್ಗೆ ನೀವು ಚಿಂತೆ ಮಾಡುವ ಬದಲು ಭವಿಷ್ಯದಲ್ಲಿ ಇದನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ.
ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆಯು ಹಲವಾರು ವಿಧಗಳಿಂದ ದೇಹವನ್ನು ಪ್ರವೇಶಿಸಬಹುದು. ಆಧುನಿಕ ಯುಗದಲ್ಲಿ ಕ್ಯಾನ್ಸರ್ ಎನ್ನುವ ಪದವು ಸಾಮಾನ್ಯವೆನ್ನುವಂತಾಗಿದೆ. ಆದರೆ ನಮ್ಮ ಮಲಗುವ ಕೋಣೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳಿಂದ ಕೂಡ ಕ್ಯಾನ್ಸರ್ ಬರಬಹುದು ಎಂದು ತಿಳಿದಿದೆಯಾ? ಹೌದು, ನಾವು ಬಳಸುವಂತಹ ಹಾಸಿಗೆಯಿಂದ ಹಿಡಿದು ಹೊದ್ದುಕೊಳ್ಳುವಂತಹ ಕಂಬಳಿ, ಬೆಡ್ ಶೀಟ್, ಟೇಬಲ್ ಮೇಲಿರುವಂತಹ ಇಲೆಕ್ಟ್ರಾನಿಕ್ ವಸ್ತುಗಳು ಕಾರ್ಸಿನೋಜೆನಿಕ್ ಅಂಶವನ್ನು ಹೊಂದಿದೆ.

ತಿನ್ನುವ ಆಹಾರದಿಂದ ಹಿಡಿದು, ದೇಹದ ಮೇಲೆ ಬಳಸುವಂತಹ ಉತ್ಪನ್ನಗಳನ್ನು ನಾವು ಬದಲಾಯಿಸಿ ಕ್ಯಾನ್ಸರ್ ತಡೆಗಟ್ಟಲು ಪ್ರಯತ್ನಿಸುತ್ತೇವೆ. ಆದರೆ ಮಲಗುವ ಕೋಣೆಯಲ್ಲೇ ಇರುವಂತಹ ಕೆಲವೊಂದು ಕ್ಯಾನ್ಸರ್ ಕಾರಕ ವಸ್ತುಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ತಿಳಿಯಲು ನೀವು ತಯಾರಾಗಿರಿ.

   
 
ಹೆಲ್ತ್