Back
Home » ಆರೋಗ್ಯ
ಮೊಣಕಾಲು ನೋವಿರುವವರು ಮಾಡಬೇಕಾದ, ಹಾಗೂ ಮಾಡಬಾರದ ಸಂಗತಿಗಳು
Boldsky | 10th Oct, 2018 04:09 PM
 • ಆದಷ್ಟು ನಡೆಯಿರಿ....

  ನಡೆಯಲು ನಮಗೆ ಯಾವುದೇ ರೀತಿಯ ಸಾಧನಗಳು ಬೇಕಿಲ್ಲ ಮತ್ತು ಇದು ತುಂಬಾ ಸರಳ. ಆರಂಭದಲ್ಲಿ ಸ್ವಲ್ಪ ಸಮಯ ನಡೆಯಿರಿ. ಇದರ ಬಳಿಕ ದಿನದಲ್ಲಿ 20-30 ನಿಮಿಷ ಕಾಲ ನಡೆಯಿರಿ. ನಿಮ್ಮ ಗಂಟುಗಳು ಧನ್ಯವಾದ ಹೇಳುವವು.


 • ವಾರ್ಮ್ ಅಪ್ ಮತ್ತು ಸ್ಟ್ರೆಚ್

  ನಿಮ್ಮ ಸ್ನಾಯುಗಳನ್ನು ವಾರ್ಮ್ ಅಪ್ ಮಾಡದೆ ನೀವು ನೇರವಾಗಿ ವ್ಯಾಯಾಮ ಮಾಡಿದರೆ ಗಾಯಾಳುವಾಗುವಂತಹ ಸಮಸ್ಯೆಯು ಹೆಚ್ಚಾಗಿರುವುದು. ಯಾವುದೇ ವ್ಯಾಯಾಮದ ಮೊದಲು ಕೆಲವು ಹೆಜ್ಜೆ ನಡೆದಾಡಿ ಮತ್ತು ಕಾಲುಗಳನ್ನು ಅಲುಗಾಡಿಸಿ. ಇದರಿಂದ ಸ್ನಾಯುಗಳು ತಯಾರಾಗುವುದು ಮತ್ತು ಯಾವುದೇ ಸಮಸ್ಯೆಯಾಗದು.


 • ನೀರಿನಲ್ಲಿ ವ್ಯಾಯಾಮ

  ನೀರಿನಲ್ಲಿ ವ್ಯಾಯಾಮ ಮಾಡುವುದು ತುಂಬಾ ಉತ್ತಮವಾಗಿರುವ ವಿಧಾನ. ಯಾಕೆಂದರೆ ನೀರು ತೇಲುವ ಗುಣ ಹೊಂದಿರುವ ಕಾರಣದಿಂದಾಗಿ ನೋವು ಕಡಿಮೆಯಾಗುವುದು. ನೀವು ತೇಲುವಂತೆ ಮಾಡುವುದು, ಆಗ ನೀವು ಹಗುರವಾಗಿರುವಿರಿ ಮತ್ತು ದೇಹದ ಭಾರ ಹೊತ್ತುಕೊಳ್ಳುವ ಗಂಟುಗಳಿಗೆ ಆರಾಮ ಸಿಗುವುದು.'

  Most Read: ಇಂತಹ ವಸ್ತುಗಳನ್ನು ಆದಷ್ಟು ಬೇಗ ಬೆಡ್-ರೂಮ್‌ನಿಂದ ಹೊರಹಾಕಿ- ಇಲ್ಲಾಂದ್ರೆ ಕ್ಯಾನ್ಸರ್ ಬರಬಹುದು!!


 • ಗಂಟುಗಳಿಗೆ ಸ್ನೇಹಿಯಾಗಿರುವ ವ್ಯಾಯಾಮ ಸಾಧನ ಬಳಸಿ

  ಗಂಟುಗಳಿಗೆ ತುಂಬಾ ಕಡಿಮೆ ಒತ್ತಡ ಬೀಳುವಂತಹ ಹಲವಾರು ಸಾಧನಗಳು ಜಿಮ್ ನಲ್ಲಿ ಇರುವುದು. ಉದಾಹರಣೆಗೆ ಸ್ಟೇಷನರಿ ಅಥವಾ ರೆಕುಂಬೆಂಟ್ ಬೈಕ್ ಅಥವಾ ಎಲ್ಲಿಪ್ಟಿಕಲ್ ಬಳಸಿ.


 • ನೆರವಾಗುವ ಸ್ನಾಯುಗಳನ್ನು ಬಲಗೊಳಿಸಲು ವ್ಯಾಯಾಮ ಮಾಡಿ

  ಮೊಣಕಾಲಿನ ಗಂಟಿನ ಸುತ್ತಲಿನ ಸ್ನಾಯುಗಳು ನೈಸರ್ಗಿಕ ಮೊಣಕಾಲಿನ ಕಟ್ಟುಪಟ್ಟಿ ಹೊಂದಿರುವುದು. ಗಂಟುಗಳಿಗೆ ಬೆಂಬಲ ನೀಡುವಂತಹ ಪ್ರಮುಖ ಸ್ನಾಯುಗಳೆಂದರೆ ಅದು ಕ್ವಾರ್ರಿಕೆಪ್ಸ್ ಮತ್ತು ಹ್ಯಾಮ್ ಸ್ಟ್ರಿಂಗ್. ಇವುಗಳನ್ನು ನೀವು ಬಲಗೊಳಿಸಲು ಪ್ರಯತ್ನಿಸಿದರೆ ಆಗ ಗಂಟುಗಳು ಕೂಡ ಒಳ್ಳೆಯ ಬೆಂಬಲ ಪಡೆಯುವುದು. ಹಿಂದಕ್ಕೆ ನಡೆಯುವುದು, ಕಾಲುಗಳನ್ನು ನೇರವಾಗಿ ಮೇಲೆತ್ತುವ ವ್ಯಾಯಾಮಗಳನ್ನು ಮಾಡಿ.


 • ವೃತ್ತಿಪರರನ್ನು ಭೇಟಿಯಾಗಿ

  ಇದು ಯಾವುದೇ ವ್ಯಾಯಾಮ ಅಥವಾ ಯೋಗವಾಗಿರಬಹುದು. ನೀವು ವೃತ್ತಪರರ ಸಲಹೆ ಪಡೆದರೆ ತುಂಬಾ ಒಳ್ಳೆಯದು. ಅವರು ನಿಮಗೆ ಸರಿಯಾದ ವ್ಯಾಯಾಮ ಮತ್ತು ಸ್ಟ್ರೆಚ್ ಹೇಳಿಕೊಡುವರು. ದೈಹಿಕ ತಜ್ಞರು ನೀವು ಯಾವ ರೀತಿಯ ಚಲನೆಗಳನ್ನು ಮಾಡಬಾರದು ಎಂದು ಹೇಳುವರು. ಈ ತಜ್ಞರನ್ನು ಅದ್ಭುತವಾದ ಜ್ಞಾನವಿರುವುದು ಮತ್ತು ನಿಮ್ಮ ನೋವನ್ನು ಇದು ಸಂಪೂರ್ಣವಾಗಿ ಕಡಿಮೆ ಮಾಡುವುದು.


 • ಇದನ್ನು ಮಾಡಬೇಡಿ

  ಅತಿಯಾದ ಗಂಟುನೋವಿದ್ದರೆ ಆಗ ನೀವು ಕೆಲವೊಂದು ತೀವ್ರ ಪರಿಣಾಮ ಬೀರುವಂತಹ ಚಟುವಟಿಕೆಗಳನ್ನು ಮಾಡಬಾರದು. ಇದರಲ್ಲಿ ಮುಖ್ಯವಾಗಿ ಓಡುವುದು, ಹಠಾತ್ ಆಗಿ ನಿಲ್ಲುವುದು, ಹಾರುವುದು ಮತ್ತು ಪದೇ ಪದೇ ತಿರುಗುವುದು ಗಂಟನ್ನು ಮತ್ತಷ್ಟು ಹಾನಿಗೀಡು ಮಾಡಬಹುದು. ಇದರಲ್ಲಿ ಕೆಲವು ಕ್ರೀಡೆಗಳಾದ ಟೆನಿಸ್, ಫುಟ್ಬಾಲ್ ಮತ್ತು ಬಾಸ್ಕೆಟ್ ಬಾಲ್ ನ್ನು ಆಡಬಾರದು. ಇದನ್ನು ನೀವು ಸಂಪೂರ್ಣವಾಗಿ ಕಡೆಗಣಿಸಬೇಕಿಲ್ಲ. ಆದರೆ ನಿಮ್ಮ ಚಲನೆ ಬಗ್ಗೆ ಗಮನಹರಿಸಿ.

  Most Read: ಎಲ್ಲಾ 12 ರಾಶಿಯವರ 'ಜೀವನದ ನಿಜವಾದ ಗುರಿ' ಇಲ್ಲಿದೆ ನೋಡಿ


 • ಗಡಸು ಮೇಲ್ಮೈ ಮೇಲೆ ವ್ಯಾಯಾಮ ಮಾಡಬೇಡಿ

  ನೀವು ನಡೆಯುವುದಾದರೆ ಹುಲ್ಲಿನ ಮೇಲೆ ಅಥವಾ ಮಣ್ಣಿನ ಮೇಲೆ ನಡೆಯಿರಿ. ಕಾಂಕ್ರೀಟ್ ಅಥವಾ ಬೇರೆ ರೀತಿಯ ಗಡಸು ಮೇಲ್ಮೈ ಮೇಲೆ ನಡೆಯುವುದು ಅಥವಾ ಓಡುವುದರಿಂದ ಮೊಣಕಾಲಿನ ಮೇಲೆ ಒತ್ತಡ ಬೀಳುವುದು. ಟ್ರೇಡ್ ಮಿಲ್ಸ್ ಗಳು ಒಳ್ಳೆಯ ಆಯ್ಕೆಯಾದರೂ ಇದರಲ್ಲಿ ಕೆಲವು ಕೆಟ್ಟದು ಹಾಗೂ ಒಳ್ಳೆಯದು ಇದೆ.


 • ಅಧಿಕ ಭಾರದ ವ್ಯಾಯಾಮ ಮಾಡಬೇಡಿ

  ಫುಲ್ ಸ್ಕ್ವಾಟ್ಸ್, ಲೆಗ್ ಪ್ರೆಸಸ್ ನೋವನ್ನು ಹೆಚ್ಚಿಸಬಹುದು. ನೈಸರ್ಗಿಕವಾಗಿ ಕಾಲುಗಳು ಬಾಗುವ 90 ಡಿಗ್ರಿಗಿಂತಲೂ ಅಧಿಕವಾಗಿ ಕಾಲುಗಳು ಬಾಗುವಂತೆ ಈ ವ್ಯಾಯಾಮವು ಮಾಡುವುದು. ಇದರಿಂದ ಗಂಟುಗಳ ಮೇಲೆ ಒತ್ತಡ ಬೀಳುವುದು. ಈ ವ್ಯಾಯಾಮವನ್ನು ಸರಿಯಾದ ಕ್ರಮದಲ್ಲಿ ಮಾಡುವುದಿಲ್ಲ. ಹೀಗಾಗಿ ಗಾಯಾಳು ಸಮಸ್ಯೆಯಾಗುವುದು.


 • ತೂಕವನ್ನು ಕಡೆಗಣಿಸಬೇಡಿ

  ದೇಹವು ಅತಿಯಾದ ತೂಕ ಹೊಂದಿದ್ದರೆ ಅದರಿಂದ ಗಂಟುಗಳ ಮೇಲೆ ಒತ್ತಡ ಬೀಳುವುದು. ಸಣ್ಣ ಬದಲಾವಣೆಗಳು ದೊಡ್ಡ ಪರಿಣಾಮ ಬೀರುವುದು. ಇದರಿಂದ ದೇಹ ತೂಕ ಕಡಿಮೆ ಮಾಡಿ.

  Most Read: ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್


 • ಸರಿಯಾದ ಗಾತ್ರದ ಶೂ ಧರಿಸಿ

  ಕಾಲಿಗೆ ಸರಿಯಾಗಿ ಹೊಂದದೇ ಇರುವ ಅಥವಾ ಕಾಲಿಗಿಂತ ದೊಡ್ಡದಾಗಿರುವಂತಹ ಶೂ ಧರಿಸಿದರೆ ಅದರಿಂದ ನೀವು ನಡೆಯುವಾಗ ಮೊಣಕಾಲಿಗೆ ಪರಿಣಾಮವಾಗುವುದು. ನೀವು ನಡೆಯುತ್ತಿರುವ ರೀತಿಯಿಂದಾಗಿ ಇದು ಗಂಟುಗಳ ಮೇಲೆ ಹೆಚ್ಚಿನ ಒತ್ತಡ ಹಾಕುವುದು. ನಿಮಗೆ ಹೊಂದಿಕೊಳ್ಳುವಂತಹ ಶೂ ಧರಿಸಿಕೊಂಡರೆ ಗಂಟು ನೋವು ತಪ್ಪಿಸಬಹುದು.


 • ಅತಿಯಾಗಿ ಮಾಡಬೇಡಿ

  ವ್ಯಾಯಾಮದ ಮಧ್ಯೆ ಒಂದು ದಿನ ವಿರಾಮ ಪಡೆಯುವುದು ಅತಿ ಅಗತ್ಯ. ಯಾಕೆಂದರೆ ನಿಮ್ಮ ದೇಹ ಹಾಗೂ ಗಂಟುಗಳಿಗೆ ಕೂಡ ವಿಶ್ರಾಂತಿ ಬೇಕಾಗಿರುವುದು.
ಇಂದಿನ ದಿನಗಳಲ್ಲಿ 40 ದಾಟಿದ ಮಹಿಳೆಯರು ಅಥವಾ ಪುರುಷರು ಯಾರೆನ್ನಾದರೂ ಕೇಳಿ ನೋಡಿ. ಅವರು ಮೊಣಕಾಲು ನೋವಿನ ಸಮಸ್ಯೆ ಇಲ್ಲವೆಂದು ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಮೊಣಕಾಲು ನೋವು ಎನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಹದಿಹರೆಯದವರನ್ನು ಇದು ಕಾಡಲು ಆರಂಭಿಸಿದೆ. ಗಂಟು ದೇಹದ ಅತೀ ದೊಡ್ಡ ಜೋಡಣೆಯಾಗಿದ್ದು, ಇದು ಕಾಲುಗಳನ್ನು ಬಗ್ಗಿಸಲು ಹಾಗೂ ನೇರಗೊಳಿಸಲು ನೆರವಾಗುವುದು.

ಸ್ನಾಯುಗಳನ್ನು ಬಲವಾಗಿರಿಸಿಕೊಳ್ಳಲು ಮತ್ತು ಯಾವುದೇ ರೀತಿಯ ಸಮಸ್ಯೆಯು ತುಂಬಾ ಕೆಟ್ಟದಾಗಿ ಕಾಡುವುದನ್ನು ತಡೆಯಲು ಹೆಚ್ಚು ಕ್ರಿಯಾಶೀಲರಾಗಿರಬೇಕು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ನಾವು ಮಾಡುವಂತಹ ಕೆಲವೊಂದು ದೈಹಿಕ ಚಟುವಟಿಕೆಗಳು ಕೂಡ ಗಂಟು ನೋವಿಗೆ ಕಾರಣವಾಗುವುದು. ಇದನ್ನು ತಡೆಯಬೇಕು. ಆದರೆ ಕೆಲವೊಂದು ವ್ಯಾಯಾಮಗಳು ಮೊಣಕಾಲು ನೋವಿಗೆ ತುಂಬಾ ಪರಿಣಾಮಕಾರಿಯಾಗಿರಲಿದೆ. ಮೊಣಕಾಲು ನೋವಿನ ಸಮಸ್ಯೆಗೆ ನೀವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಓದಲು ತಯಾರಾಗಿರಿ....

   
 
ಹೆಲ್ತ್