Back
Home » ಪ್ರವಾಸ
ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ದರ್ಶನ ಮಾಡಿದ್ರೆ ವೈವಾಹಿಕ ಕಷ್ಟ ದೂರವಾಗುತ್ತಂತೆ!
Native Planet | 10th Oct, 2018 02:44 PM
 • ನವರಾತ್ರಿ

  ಶೈಲಪುತ್ರಿಯ ಒಂದು ಪ್ರಾಚೀನ ದೇವಸ್ಥಾನವು ಇಡೀ ದೇಶದಲ್ಲೇ ಪ್ರಸಿದ್ಧವಾಗಿದೆ. ಇಲ್ಲಿಗೆ ದೂರ ದೂರದಿಂದ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸುತ್ತಾರೆ. ಇಲ್ಲಿಗೆ ಬಂದು ದೇವಿಯ ದರ್ಶನ ಮಾಡಿದ್ರೆ ಮನೋಕಾಮನೆ ಪೂರ್ಣಗೊಳ್ಳುತ್ತದೆ ಎನ್ನಲಾಗುತ್ತದೆ. ಈ ಮಂದಿರವು ವಾರಣಾಸಿಯಲ್ಲಿದೆ.

  13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಏಕಶಿಲಾ ಗಣೇಶನ ದರ್ಶನದಿಂದ ಪುಣ್ಯ ಪ್ರಾಪ್ತಿ


 • ಎಲ್ಲಿದೆ ಈ ದೇವಸ್ಥಾನ

  ಶೈಲಪುತ್ರಿ ದೇವಸ್ಥಾನವು ಉತ್ತರ ಪ್ರದೇಶದ ವಾರಾಣಾಸಿ ಎ -40 / 11, ಮರ್ಹಿಯ ಘಾಟ್‌ನಲ್ಲಿದೆ. ಉತ್ತರ ಭಾರತದ ನವರಾತ್ರಿ ಸಂಪ್ರದಾಯಗಳನ್ನುಇಷ್ಟಪಡುವ ಪ್ರವಾಸಿಗರಿಗೆ ಭೇಟಿ ನೀಡಲು ಇದು ಒಂದು ಉತ್ತಮ ಸ್ಥಳವಾಗಿದೆ.


 • ಪರ್ವತದ ಮಗಳು

  ಶೈಲಪುತ್ರಿಯ ರೂಪದಲ್ಲಿ ದುರ್ಗಾ ದೇವಿಯನ್ನು ಸತಿ, ಭವಾನಿ, ಪಾರ್ವತಿ ಅಥವಾ ಹೇಮಾವತಿ ಎಂದು ಕರೆಯಲಾಗುತ್ತದೆ. ಮಾ ಶೈಲಪುತ್ರಿಯನ್ನು ತಾಯಿಯ ಪ್ರಕೃತಿಯ ಸಂಪೂರ್ಣ ರೂಪವೆಂದು ಪರಿಗಣಿಸಲಾಗಿದೆ. ಶೈಲಪುತ್ರಿ ಎಂದರೆ 'ಪರ್ವತದ ಮಗಳು' ಎಂದರ್ಥ.

  ಆರೋಗ್ಯವಂತರಾಗಿರಬೇಕಾದ್ರೆ ಈ ನಾಗರಾಜನಿಗೆ ಉಪ್ಪನ್ನು ಅರ್ಪಿಸಬೇಕಂತೆ!


 • ಮನೋಕಾಮನೆ ಈಡೇರುತ್ತದೆ

  ಕಾಶಿಯ ಅಲಯಿಪುರದಲ್ಲಿ ಶೈಲಪುತ್ರಿಯ ಪ್ರಾಚೀನ ಮಂದಿರವಿದೆ. ಇಲ್ಲಿಯ ವಿಶೇಷತೆ ಏನೆಂದರೆ ನವರಾತ್ರಿಯ ಮೊದಲ ದಿನ ಈ ದೇವಿಯ ದರ್ಶನ ಪಡೆದರೆ ಭಕ್ತರ ಮನೋಕಾಮನೆ ಈಡೇರುತ್ತದೆಯಂತೆ. ವೈವಾಹಿಕ ಸಮಸ್ಯೆ ದೂರವಾಗುತ್ತದೆ. ಹಾಗಾಗಿ ಈ ದೇವಿಯ ದರ್ಶನ ಪಡೆಯಲು ನವರಾತ್ರಿಯ ಹಿಂದಿನ ದಿನವೇ ಭಕ್ತರು ದೇವಸ್ಥಾನದಲ್ಲಿ ಲೈನ್‌ನಲ್ಲಿ ನಿಂತಿರುತ್ತಾರೆ.


 • ಕೈಲಾಸದಿಂದ ಕಾಶಿಗೆ ಬಂದ ತಾಯಿ

  ಈ ದೇವಾಲಯದ ದೇವಿಯ ಬಗ್ಗೆ ಒಂದು ಪ್ರಾಚೀನ ಕಥೆಯೂ ಇದೆ. ಪಾರ್ವತಿ ದೇವಿಯು ಹಿಮಾಲಯದ ಶೈಲರಾಜನ ಪುತ್ರಿಯ ರೂಪದಲ್ಲಿ ಜನ್ಮ ಪಡೆದು ಶೈಲಪುತ್ರಿಯಾದಳು ಎನ್ನಲಾಗುತ್ತದೆ. ಯಾವುದೋ ವಿಷಯಕ್ಕೆ ಪಾರ್ವತಿಯು ಶಿವನಲ್ಲಿ ಕೋಪಗೊಂಡು ಕಾಶಿಗೆ ಬರುತ್ತಾಳೆ.

  ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ?


 • ವೈವಾಹಿಕ ಕಷ್ಟ ದೂರವಾಗುತ್ತದೆ

  ಶಿವನು ಪಾರ್ವತಿಯ ಮನವೊಲಿಸಲು ಭೂ ಲೋಕಕ್ಕೆ ಬಂದಾಗ ಪಾರ್ವತಿಯು ಈ ಸ್ಥಳ ನನಗೆ ಬಹಳ ಇಷ್ಟವಾಗಿದೆ. ಇಲ್ಲಿಂದ ನಾನು ಬರೋದಿಲ್ಲ ಎಂದು ಹೇಳಿ ಅಲ್ಲಿಯೇ ನೆಲೆಸುತ್ತಾಳೆ. ನವರಾತ್ರಿಯ ಮೊದಲ ದಿನ ದಂಪತಿಗಳು ಈ ದೇವಿಯ ದರ್ಶನವನ್ನು ಮಾಡಿದ್ರೆ ಅವರ ವೈವಾಹಿಕ ಕಷ್ಟ ದೂರವಾಗುತ್ತದೆ.


 • ಮುತ್ತೈದೆ ಸಾಮಾನು ಅರ್ಪಣೆ

  ಈ ಮಂದಿರದಲ್ಲಿ ದಿನಕ್ಕೆ ಮೂರು ಬಾರಿ ಪೂಜೆ ನಡೆಯುತ್ತದೆ. ಈ ದೇವಿಗೆ ಎಳನೀರಿನ ಜೊತೆಗೆ ಮುತ್ತೈದೆಯ ಸಾಮಾನುಗಳನ್ನು ಅರ್ಪಿಸಲಾಗುತ್ತದೆ. ಶೈಲಪುತ್ರಿಯ ವಾಹನ ವೃಷಭ. ಬಲಗೈಯಲ್ಲಿ ತ್ರಿಶೂಲ ಹಾಗೂ ಎಡಗೈಯಲ್ಲಿ ತಾವರೆ ಇರುತ್ತದೆ.

  ಬೆಳಗ್ಗೆ ನೀರಿರೋಲ್ಲ, ಸಂಜೆ ನೀರಿರುತ್ತೇ ಹ್ಯಾವ್ಲಾಕ್ ದ್ವೀಪದ ವಿಶೇಷತೆ ಏನು ಗೊತ್ತಾ?


 • ಮೊದಲ ರೂಪವೇ ಶೈಲಪುತ್ರಿ

  ದುರ್ಗೆಯ ಮೊದಲ ರೂಪವೇ ಶೈಲಪುತ್ರಿ. ನವದುರ್ಗೆಯರಲ್ಲಿ ಮೊದಲ ದುರ್ಗೆಯೇ ಈ ಶೈಲಪುತ್ರಿ. ತನ್ನ ಪೂರ್ವ ಜನ್ಮದಲ್ಲಿ ದಕ್ಷನ ಮಗಳಾಗಿದ್ದ ಈಕೆಯ ಹೆಸರು ಸತಿ. ಸತಿ ಶಿವನನ್ನು ವಿವಾಹವಾಗಿದ್ದಳು.
ಇಂದಿನಿಂದ ನವರಾತ್ರಿ ಉತ್ಸವ ಪ್ರಾರಂಭವಾಗಿದೆ. ಒಂಭತ್ತು ದಿನಗಳ ಈ ಹಬ್ಬದಲ್ಲಿ ಪ್ರತಿಯೊಂದು ದಿನವು ಒಂದೊಂದು ದೇವಿಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ದಿನವಾದ ಇಂದು ದೇವಿಯ ಶೈಲಪುತ್ರಿ ಸ್ವರೂಪದ ಪೂಜೆ ಮಾಡಲಾಗುತ್ತದೆ.

   
 
ಹೆಲ್ತ್