Back
Home » Car News
ಬಹುನಿರೀಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ
DriveSpark | 10th Oct, 2018 04:38 PM
 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಈ ಹಿಂದಿನಂತೆಯೇ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಿದ್ದರೂ ಸಹ ಕಾರಿನ ಹೊರ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ತಂದಿರುವ ಟಾಟಾ ಸಂಸ್ಥೆಯು ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಟಿಗೋರ್ ಕಾರಿಗೆ ರೂ.5.20 ಲಕ್ಷ ಮತ್ತು ಟಾಪ್ ಎಂಡ್ ಆವೃತ್ತಿಗೆ ರೂ.7.38 ಲಕ್ಷ ನಿಗದಿಗೊಳಿಸಿದೆ.


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಐದು ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರುಗಳು, ಹಳೆಯ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯ ಮತ್ತು ವಿನೂತನ ವಿನ್ಯಾಸಗಳಿಂದಾಗಿ ಸೆಡಾನ್ ಪ್ರಿಯರ ಆಕರ್ಷಣೆಗೆ ಕಾರಣವಾಗಿವೆ.


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಕಾರಿನ ವೆರಿಯೆಂಟ್‌ಗಳು ಮತ್ತು ಬೆಲೆ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)

  ವೆರಿಯೆಂಟ್‌ಗಳು ಪೆಟ್ರೋಲ್ ಕಾರು
  ಡಿಸೇಲ್ ಕಾರು
  ಎಕ್ಸ್‌ಇ ರೂ. 5,20,000
  ರೂ. 6,09,000
  ಎಕ್ಸ್‌ಎಂ ರೂ. 5,55,000
  ರೂ. 6,41,000
  ಎಕ್ಸ್‌ಜೆಡ್ ರೂ. 5,95,000
  ರೂ. 6,84,000
  ಎಕ್ಸ್‌ಜೆಡ್ ಪ್ಲಸ್
  ರೂ. 6,49,000
  ರೂ. 7,38,000
  ಎಕ್ಸ್‌ಜೆಡ್ಎ(ಎಎಂಟಿ) ರೂ. 6,65,000
  ಲಭ್ಯವಿಲ್ಲ


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಕಾರಿನ ವೈಶಿಷ್ಟ್ಯತೆಗಳು
  ಹೊಸ ಟಿಗೋರ್ ಕಾರುಗಳ ಡಿಸೈನ್ ಅನ್ನು ಹಳೆಯ ಆವೃತ್ತಿಗಳಿಗೆ ಹೋಲಿಕೆ ಮಾಡಿದ್ದಲ್ಲಿ ಹೊಸ ಕಾರಿನ ವಿನ್ಯಾಸವು ಸಾಕಷ್ಟು ಸುಧಾರಣೆಗೊಂಡಿದ್ದು, ಕಾರಿನ ಮುಂಭಾಗದ ಡೈಮಂಡ್ ಪ್ಯಾಟರ್ನ್ ಫ್ರಂಟ್ ಗ್ರಿಲ್ ಹಾಗೂ ಡ್ಯುಯಲ್ ಚೆಂಬರ್ ಪ್ರೋಜೆಕ್ಟರ್, ಕ್ರೋಮ್ ಲೈನ್ಡ್ ಡೋರ್ ಹ್ಯಾಂಡಲ್ ನೀಡಲಾಗಿದೆ.


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಜೊತೆಗೆ 15-ಇಂಚಿನ ಡ್ಯುಯಲ್ ಟೋನ್ ಅಲಾಯ್ ಚಕ್ರಗಳು, ಕ್ರಿಸ್ಟಲ್ ಡಿಸೈನ್ ಎಲ್ಇಡಿ ಟೈಲ್ ಲೈಟ್ ಕ್ಲಸ್ಟರ್, ಶಾರ್ಕ್ ಫಿನ್ ಆ್ಯಂಟೆನ್, 36-ಎಲ್ಇಡಿ ಹೈ-ಮೌಟೆಂಡ್ ಸ್ಟಾಪ್ ಲೈಟ್, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಟೈಟಾನಿಯಂ ಕಲರ್ ಫ್ಲಕ್ಸ್ ಲೆದರ್ ಸೀಟುಗಳು ಮತ್ತು ಹರ್ಮನ್ ಅಂಡ್ರಾಯ್ಡ್ ಆಟೋ ಸೌಲಭ್ಯ ಹೊಂದಿದೆ.


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಎಂಜಿನ್ ಸಾಮರ್ಥ್ಯ
  ಟಿಗೋರ್ ಕಾರುಗಳಲ್ಲಿ ಪೆಟ್ರೋಲ್ ಮಾದರಿಯು 1.2-ಲೀಟರ್ ರೆವೊಟ್ರಾನ್ ಎಂಜಿನ್ ಹೊಂದಿದ್ದರೆ, ಡಿಸೇಲ್ ಎಂಜಿನ್‌ಗಳು 1.5-ಲೀಟರ್ ರೆವೊಟ್ರಾಕ್ ಎಂಜಿನ್ ಪಡೆದಿದೆ. ಈ ಮೂಲಕ ಪೆಟ್ರೋಲ್ ಎಂಜಿನ್ 84-ಬಿಎಚ್‌ಪಿ, 114-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಡೀಸೆಲ್ ಎಂಜಿನ್ ಮಾದರಿಯು 69-ಬಿಎಚ್‌ಪಿ, 140-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಹಾಗೆಯೇ ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಕಾರ್ನರ್ ಸ್ಟ್ಯಾಬಿಲಿಟಿ, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಜೊತೆ ಕ್ಯಾಮೆರಾ ಮತ್ತು ಕಾರಿನ ಬಾಡಿ ಗುಣಮಟ್ಟ ಕಾಯ್ದುಕೊಳ್ಳಲು ಗುಣಮಟ್ಟದ ಸ್ಟೀಲ್ ಬಳಕೆ ಮಾಡಲಾಗಿದೆ.


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಖರೀದಿಗೆ ಲಭ್ಯವಿರುವ ಬಣ್ಣಗಳು
  ಟಿಗೋರ್ ಕಾರುಗಳು ಪ್ರಮುಖ ಆರು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಬ್ಲ್ಯೂ, ರೋಮನ್ ಸಿಲ್ವರ್, ಬೆರ್ರಿ ರೆಡ್, ಪರ್ಲ್‌ಸ್ಕೆಂಟ್ ವೈಟ್, ಟೈಟಾನಿಯಂ ಗ್ರೇ ಮತ್ತು ಬ್ರೌನ್ ಬಣ್ಣಗಳನ್ನು ಆಯ್ಕೆ ಮಾಡಬಹುದು.


 • ಬಹುನೀರಿಕ್ಷಿತ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರು ಬಿಡುಗಡೆ

  ಒಟ್ಟಿನಲ್ಲಿ ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲೇ ಉತ್ತಮ ವಿನ್ಯಾಸಗಳನ್ನು ಹೊತ್ತುಬಂದಿರುವ ಟಾಟಾ ಟಿಗೋರ್ ಫೇಸ್‌ಲಿಫ್ಟ್ ಕಾರುಗಳು ಮಾರುತಿ ಡಿಜೈರ್, ಹೋಂಡಾ ಅಮೇಜ್ ಮತ್ತು ಹ್ಯುಂಡೈ ಆಕ್ಸೆಂಟ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.
ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟಿಗೋರ್ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಗೊಳಿಸಿದ್ದು, ಹೊಸ ವಿನ್ಯಾಸಗಳು ಮತ್ತು ಗುಣಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಹೊಸ ಟಿಗೋರ್ ಕಾರುಗಳು ಕಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲೇ ವಿಶೇಷ ಎನ್ನಿಸಲಿವೆ.

ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿರುವ ಟಾಟಾ ಮೋಟಾರ್ಸ್‌ನ ಟಿಯಾಗೊ ಎನ್ಆರ್‌ಜಿ ಕಾರಿನ ಫೋಟೋ ಗ್ಯಾಲರಿ..!

   
 
ಹೆಲ್ತ್