ನೆಲಮಂಗಲ ಸಮೀಪದ ದೊಡ್ಡಮಸ್ಕಲ್ನ ರೈತರ ಮಗ ಈ ಬೈರೇಗೌಡ. ಆಳ್ವಾಸ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ ಬೈರೇಗೌಡ ಡಿಪ್ಲೊಮಾ ಓದಿ ಎಂಜಿನಿಯರಿಂಗ್ ಸೇರಿದವರು. ಎಂಜಿನಿಯರಿಂಗ್ 5ನೇ ಸೆಮಿಸ್ಟರ್ನಿಂದಲೇ ಪರಿಸರಸ್ನೇಹಿ ವಾಹನ ತಯಾರಿಕೆ ಯೋಜನೆ ರೂಪಿಸಿದರು. ಇದಕ್ಕೆ ರೈತ ಹಿನ್ನಲೆಯೂ ಕಾರಣವಿರಬಹುದಂತೆ.!
ಸೌರ ಮತ್ತು ಬ್ಯಾಟರಿ ಚಾಲಿತ'ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನ ನೋಡೋಕೆ ಆಟೊ ತರಹ ಕಾಣುತ್ತದೆ. ಆದರೆ, ಕಾರಿನ ಗುಣಲಕ್ಷಣಗಳನ್ನು ಹೊಂದಿರುವ ಈ ವಾಹನ ಕಾರಿಗಿಂತ ಚಿಕ್ಕದಾಗಿದ್ದು, ಸತತ ಒಂದು ವರ್ಷ, ಎರಡು ತಿಂಗಳ ಪರಿಶ್ರಮದೊಂದಿಗೆ ತಯಾರಾಗಿರುವ ವಾಹನವನ್ನು ಬೇಸಿಗೆ, ಮಳೆಗಾಲ, ಚಳಿಗಾಲ ಹೀಗೆ ಎಲ್ಲ ಕಾಲದಲ್ಲೂ ಓಡಿಸಬಹುದು.
'ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನವನ್ನು ಅಲ್ಯುವಿನಿಯಂ ಆಲಾಯ್ 6063 ಮೆಟಲ್ ಬಳಸಿ ತಯಾರಿಸಿಸಲಾಗಿದೆ. ಹಾಗಾಗಿ, ವಾಹನದ ತೂಕ ಕಡಿಮೆಯಿದೆ. ವಾಹನದ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಹಾಗೂ ಸುಮಾರು 20 ಲಿಥಿಯಂ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಇದರಿಂದ ಸೌರ ಮತ್ತು ಬ್ಯಾಟರಿ ಶಕ್ತಿ ವಾಹನಕ್ಕೆ ದೊರೆಯಲಿದೆ.
ಈ ವಾಹನದಲ್ಲಿ ಮುಂದೆ 2 ಚಕ್ರಗಳಿವೆ. ಹಿಂದೆ ಒಂದು ಚಕ್ರವಿದೆ. ಚಾಲಕನ ಸುರಕ್ಷತೆಯ ದೃಷ್ಟಿಯಿಂದ ಹೀಗೆ ವಿನ್ಯಾಸ ಮಾಡಲಾಗಿದೆ. ಮುಂದಿನ ಚಕ್ರಗಳಿಗೆ ಡ್ರಮ್ ಬ್ರೇಕ್ ಇದ್ದರೆ ಹಿಂಬದಿ ಚಕ್ರಕ್ಕೆ ಡಿಸ್ಕ್ ಬ್ರೇಕ್ ಅಳವಡಿಸಲಾಗಿದೆ. ಸೆನ್ಸರ್ ಸೌಲಭ್ಯವೂ ಇದೆ. ಮೂವರು ಪ್ರಯಾಣಿಸಬಹುದಾದ ಈ ವಾಹನ ಇಂಡಿಪೆಂಡೆಂಟ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಸಹ ಒಳಗೊಂಡಿದೆ.
ಡಾಂಬಾರು ರಸ್ತೆ ಸೇರಿದಂತೆ, ಈ ವಾಹನವನ್ನು ಯಾವುದೇ ಕಚ್ಚಾ ರಸ್ತೆಯಲ್ಲಾದರೂ ಓಡಿಸಬಹುದು. ಮೂರರಿಂದ ನಾಲ್ಕು ಗಂಟೆ ಒಳಗೆ ಇದರ ಬ್ಯಾಟರಿ ಚಾರ್ಜ್ ಆಗಲಿದ್ದು, ಚಾಲನೊಬ್ಬನೇ ಇದ್ದರೆ 70 ರಿಂದ 80 ಕಿ.ಮೀ ಸಾಗುವ ಈ ವಾಹನ ಇಬ್ಬರನ್ನು ಹೊತ್ತು 60 ಕಿ.ಮೀ ನಿಂದ 65 ಕಿ.ಮೀ ದೂರ ಕ್ರಮಿಸುವಷ್ಟು ಬಲಿಷ್ಠವಾಗಿದೆ ಎಂದು ಬೈರೇಗೌಡ ಅವರು ತಿಳಿಸಿದ್ದಾರೆ.
ವಾಹನದ ಒಳಗಡೆ ಸೆಂಟ್ರಲ್ ಲಾಕಿಂಗ್ ಸಿಸ್ಟಮ್, ಜಿಪಿಆರ್ಎಸ್ ಸೇರಿದಂತೆ ಸಂಪೂರ್ಣ ಕಾರಿನ ವ್ಯವಸ್ಥೆ ಇದೆ. ರಿಮೋಟ್ ಲಾಕ್ ಹಾಗೂ ಜಿಪಿಎಸ್: ಈ ಸೌಲಭ್ಯದಿಂದ ವಾಹನ ಕಳುವಾದರೆ ಸುಲಭವಾಗಿ ಪತ್ತೆ ಮಾಡಬಹುದು. ಜತೆಗೆ ರಿಮೋಟ್ ಮೂಲಕ ಗಾಡಿ ಮುಂದೆ ಸಾಗದಂತೆ ಲಾಕ್ ಮಾಡಬಹುದು. ಇದು ವಾಹನದ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
'ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನ ಒಟ್ಟು 85 ಕೆ.ಜಿ. ತೂಕವಿದ್ದು, ವಾಹನ ಗರಿಷ್ಠ 225 ಕೆ.ಜಿ. ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ವಾಹನ ತಯಾರಿಕೆಗೆ ಬಳಸಿರುವ ಅಲ್ಯೂಮಿನಿಯಂ ತುಕ್ಕು ಹಿಡಿಯುವುದಿಲ್ಲವಾದುದರಿಂದ 10 ವರ್ಷಗಳ ಕಾಲ ವಾಹನ ಯಾವುದೇ ಸಮಸ್ಯೆ ಇಲ್ಲದೇ ಸಂಚರಿಸುತ್ತದೆ ಎಂದು ಬೈರೇಗೌಡ ಅವರು ಹೇಳಿದ್ದಾರೆ.
ನಾನು ಪ್ರಾಜೆಕ್ಟ್ಗಾಗಿ ಒಂದೇ 'ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ವಾಹನವನ್ನು ತಯಾರಿಸಿರುವುದರಿಂದ 1.60 ಲಕ್ಷ ಹಣ ಖರ್ಚಾಗಿತ್ತು. ಆದರೆ, ದೊಡ್ಡ ಪ್ರಮಾಣದಲ್ಲಿ (ಬಲ್ಕ್) ತಯಾರಿಸಿದರೆ, ಒಂದು 'ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ತಯಾರಿಕೆಗೆ ಸುಮಾರು 90 ಸಾವಿರದಷ್ಟು ಉತ್ಪಾದನಾ ವೆಚ್ಚವಾಗಬಹುದು ಎಂದು ಬೈರೇಗೌಡ ಅವರು ಹೇಳುತ್ತಾರೆ.
ನಮ್ಮೂರಿನ ಬೈರೇಗೌಡ ಏನು ಮಾಡಲು ಸಾಧ್ಯ ಎಂದುಕೊಂಡಿದ್ದವವರು ಇಂದು ಮೂಗಿನ ಮೇಲೆ ಬೆರಳನ್ನು ಇಟ್ಟುಕೊಳ್ಳಬೇಕು. ಏಕೆಂದರೆ, ಬಿಸಿಲಿದ್ದರೆ ಸೋಲಾರ್ ಶಕ್ತಿಯಲ್ಲಿ ಓಡುವ, ಮೋಡ ಕವಿದಿದ್ದರೆ ಎಲೆಕ್ಟ್ರಿಕ್ ಚಾರ್ಜ್ ಮಾಡಿರುವ ಬ್ಯಾಟರಿಯಲ್ಲಿ ಸಾಗುವ ಒಂದು ನವೀಕರಿಸಬಹುದಾದ ಇಂಧನದಿಂದ ಚಲಿಸುವ ವಾಹನವೊಂದಕ್ಕೆ ಈಗ ಬೈರೇಗೌಡ ರೂಪಕೊಟ್ಟಿದ್ದಾರೆ.!
ಹೌದು, ದೈತ್ಯ ಕಂಪನಿಗಳು ಸಹ ಇಂಥಹ ವಾಹನಗಳ ತಯಾರಿಕೆಗಾಗಿ ಸ್ಪರ್ಧೆಗಿಳಿದಿರುವ ಹೊತ್ತಲ್ಲಿ, ನೆಲಮಂಗಲ ಸಮೀಪದ ದೊಡ್ಡಮಸ್ಕಲ್ನ ರೈತರ ಮಗ ಬೈರೇಗೌಡ ಅವರು ಗಮನಸೆಳೆದಿದ್ದಾರೆ. ತನ್ನ ಸ್ನೇಹಿತರೊಂದಿಗೆ ಸೇರತಿಕೊಂಡು ಅಂತಿಮ ವರ್ಷದ ಪದವಿಯ ಪ್ರಾಜೆಕ್ಟ್ಗಾಗಿ ಸೌರ ಮತ್ತು ಬ್ಯಾಟರಿ ಚಾಲಿತ ಅದ್ಬುತ ವಾಹನ ಒಂದನ್ನು ಸಿದ್ಧಪಡಿಸಿದ್ದಾರೆ.
ಬೈರೇಗೌಡ ಅವರು ತಯಾರಿಸಿರುವ ಈ ಮೂರು ಚಕ್ರದ ಪರಿಸರಸ್ನೇಹಿ ವಾಹನಕ್ಕೆ ಅವರೇ 'ಗೋ ಗ್ರೀನ್, ಗ್ಲೋ ಗ್ರೀನ್ ಸೆಟ್ 3' ಎಂದು ಹೆಸರಿಟ್ಟಿದ್ದು, ಈ ವಾಹನ ಭವಿಷ್ಯದ ತಂತ್ರಜ್ಞಾನದ ಕೊಡುಗೆಯಾಗಿದೆ. ಹಾಗಾದರೆ, ನಮ್ಮ ಬೈರೇಗೌಡ ಅವರು ತಯಾರಿಸಿರುವ ಅದ್ಬುತ ನವೀಕರಿಸಬಹುದಾದ ಇಂಧನ ಚಾಲಿತ ವಾಹನ ಹೇಗಿದೆ ಎಂದನ್ನು ಮುಂದೆ ನೋಡಿ ತಿಳಿಯಿರಿ.