Back
Home » ಸಮ್ಮಿಲನ
ಮದುವೆಯ ವಿಚಾರ: ರಾಶಿಚಕ್ರದ ಅನುಸಾರ ನಿಮ್ಮ ವೈವಾಹಿಕ ಭವಿಷ್ಯ ಹೇಗಿರುತ್ತದೆ ನೋಡಿ...
Boldsky | 11th Oct, 2018 10:51 AM
 • ಮೇಷ

  ಮೇಷ ರಾಶಿಯ ವ್ಯಕ್ತಿಗಳು ಹೆಚ್ಚು ಸಾಹಸ ಪ್ರಿಯರು. ತೆರೆದ ಮನಸ್ಸಿನವರು ಹಾಗೂ ಸ್ವತಂತ್ರವಾದ ವ್ಯಕ್ತಿತ್ವದವರು. ಇವರು ತಾವು ಹುಟ್ಟಿದ ದಿನಾಂಕದಂದೇ ವಿವಾಹವಾದರೆ ವೃದ್ಧಿಯ ಜೀವನವನ್ನು ಅನುಭವಿಸುವಿರಿ. ಸಂಬಂಧವನ್ನು ಕಳೆದುಕೊಳ್ಳುವ ಯಾವುದೇ ಭಯ ಇರುವುದಿಲ್ಲ. ಆಕರ್ಷಕ ಭೋಜನ, ಅನಿರೀಕ್ಷಿತ ಪ್ರಣಯಗಳ ಆಶ್ಚರ್ಯಗಳನ್ನು ಪಡೆದುಕೊಳ್ಳುವರು. ಇವರು ಪರಸ್ಪರ ಸ್ಪರ್ಧಿಗಳಾಗಿರದಂತೆ ನೋಡಿಕೊಳ್ಳಬೇಕು. ಆಗ ಸಂಸಾರ ಸುಂದರವಾಗಿ ಇರುವುದು.


 • ವೃಷಭ

  ಇವರು ಅತಿಯಾದ ಸೂಕ್ಷ್ಮತೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ನೀವು ಮತ್ತು ನಿಮ್ಮ ಸಂಗಾತಿಯು ಜೀವನದಲ್ಲಿ ಉತ್ತಮ ವಿಷಯಗಳನ್ನು ಆನಂದಿಸುವಿರಿ. ಇವರು ಐಶಾರಾಮಿ ಜೀವನವನ್ನು ಆನಂದಿಸುತ್ತಾರೆ. ವಿವಾಹದ ಜೀವನದಲ್ಲಿ ಕಡಿಮೆ ಪ್ರಮಾಣದ ಗೊಂದಲವನ್ನು ಅನುಭವಿಸುವಿರಿ. ಪರಸ್ಪರ ಅಂಟಿಕೊಂಡವರಂತೆ ಬದುಕುವ ನಿಮ್ಮ ಜೀವನ ಸುಂದರವಾಗಿರುವುದು. ಕೆಲವೊಮ್ಮೆ ಹೊಸ ಸಂಗತಿಗಳನ್ನು ನಿಮ್ಮ ನಡುವೆ ತರಲು ಪ್ರಯತ್ನಿಸಬೇಕು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು.


 • ಮಿಥುನ

  ಇವರು ತಾವು ಹುಟ್ಟಿದ ದಿನಾಂಕದಂದೇ ವಿವಾಹವಾದರೆ ಸಂಗಾತಿಯೊಂದಿಗೆ ಹೆಚ್ಚು ಸಂವಹನವನ್ನು ನಡೆಸುವರು. ಸಂಗಾತಿಯ ನಡುವೆ ಪರಸ್ಪರ ನಿರಂತರ ಸಂವಾದ ನಡೆಯುವುದು. ವೈವಿದ್ಯಮಯವಾದ ಹಂಬಲದಿಂದ ಹೊಸ ಚಟುವಟಿಕೆಗಳಲ್ಲಿ ಒಟ್ಟಿಗೆ ಭಾಗವಹಿಸುವಿರಿ. ವಿಷಯಗಳು ಆಸಕ್ತಿದಾಯಕವಾಗಿರಿಸಿ ಕೊಳ್ಳಲು ಪ್ರಯತ್ನಿಸುವರು. ಉತ್ತಮ ಜೀವನ ಹೊಂದಲು ಹೆಚ್ಚು ಸಮಯ ಒಟ್ಟಿಗೆ ಇರುವುದಕ್ಕೆ ಹೆಚ್ಚು ಆದ್ಯತೆ ನೀಡಬೇಕು.


 • ಕರ್ಕ

  ಈ ರಾಶಿಚಕ್ರದವರಿಗೆ ಮನೆಯೇ ಅವರ ಹೃದಯವಾಗಿರುತ್ತದೆ. ಇವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸುವರು. ಒಟ್ಟೊಟ್ಟಿಗೆ ಕೆಲಸವನ್ನು ನಿರ್ವಹಿಸಲು ಮುಂದಾಗುವರು. ಪರಸ್ಪರ ಅಡ್ಡ ಹೆಸರುಗಳನ್ನು ಇಟ್ಟು ಕರೆದುಕೊಳ್ಳುವುದರ ಮೂಲಕ ಜೀವನವನ್ನು ಆನಂದಿಸುವರು. ಸ್ನೇಹಿತರು ಹಾಗೂ ಸಂಬಂಧಿಕರನ್ನು ಸಂಧಿಸುವುದು ಹಾಗೂ ಇತರ ಕಡೆ ಓಡಾದುವುದರ ಮೂಲಕ ಸಂತೋಷವನ್ನು ಅನುಭವಿಸುವರು.


 • ಸಿಂಹ

  ಇವರು ತಮ್ಮ ಜನ್ಮದಿನದಂದೇ ವಿವಾಹವಾದರೆ ದಂಪತಿಗಳ ನಡುವೆ ಬಹಳ ನಾಟಕೀಯ ಪ್ರವೃತ್ತಿ ಇರುತ್ತವೆ. ಇವರ ವಿವಾಹವು ನಾಟಕೀಯವಾದ ಭಾವೋದ್ರಿಕ್ತ ವಿವಾಹವಾಗಿರುವುದು. ಇವರು ಪ್ರಭಲವಾದ ಎರಡು ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಅದನ್ನು ಹಂಚಿಕೊಳ್ಳಲು ಯಾವುದೇ ನಾಚಿಕೆಯ ಸ್ವಭಾವ ಅಡ್ಡಿಯಾಗದು. ಸಾಕಷ್ಟು ಪ್ರಣಯ ಹಾಗೂ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಾದರೂ, ಬಹುತೇಕ ಸಂದರ್ಭದಲ್ಲಿ ಅದು ನಾಟಕೀಯ ವರ್ತನೆಯಿಂದ ಕೂಡಿರುತ್ತವೆ. ಇದು ಕೆಲವೊಮ್ಮೆ ಹೋರಾಟಕ್ಕೆ ಇಳಿಯಬಹುದು.


 • ಕನ್ಯಾ

  ಈ ರಾಶಿಯ ವ್ಯಕ್ತಿಗಳು ಅತ್ಯಂತ ಸಂಘಟಿತ, ಸಂಸ್ಕರಿಸಿದ ಮತ್ತು ಆರೋಗ್ಯಕರ ಚಿಹ್ನೆಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಸಂಗಾತಿಯ ವಿಚಾರದಲ್ಲಿ ಸಾಕಷ್ಟು ಗಮನವನ್ನು ನೀಡುವರು. ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುವರು. ಸಂಗಾತಿಗಳ ನಡುವೆ ಪರಸ್ಪರ ಸಹಕಾರ ಭಾವನೆ ನೈಸರ್ಗಿಕವಾಗಿಯೇ ಬರುವುದು. ನಿಮ್ಮ ಸಮಸ್ಯೆಗಳ ಮೇಲೆ ಗಮನ ಕೇಂದ್ರೀಕರಿಸಿದರೂ ಯಾವುದೇ ಸಮಸ್ಯೆ ಉದ್ಭವ ಆಗದು. ಸಾಕಷ್ಟು ಕ್ರಮಬದ್ಧತೆಯನ್ನು ಬಯಸುವವರು ನೀವಾಗಬಹುದು.


 • ತುಲಾ

  ಇವರು ತಮ್ಮ ಹುಟ್ಟಿದ ದಿನಾಂಕದಂದೆ ವಿವಾಹವಾಗುವುದರಿಂದ ವೈವಾಹಿಕ ಜೀವನದಲ್ಲಿ ಉತ್ತಮ ಸಮತೋಲನವನ್ನು ಕಂಡುಕೊಳ್ಳುವರು. ಸಂಬಂಧದಲ್ಲಿ ಪರಸ್ಪರ ಗೌರವ ಹಾಗೂ ಆದ್ಯತೆಯನ್ನು ನೀಡುವರು. ವೈಯಕ್ತಿಕ ಭಾವನೆಯನ್ನು ಹೆಚ್ಚಿಸುವಲ್ಲಿ ಸಹಾಯಮಾಡುವುದು. ಕೆಲವೊಮ್ಮೆ ನಿಮ್ಮದೇ ಆದ ಕೆಲಸಕ್ಕೆ ಆದ್ಯತೆ ನೀಡುವುದನ್ನು ಮರೆಯ ಬಾರದು.


 • ವೃಶ್ಚಿಕ

  ಈ ರಾಶಿಯ ವ್ಯಕ್ತಿಗಳು ಅತ್ಯಂತ ಪ್ರಣಯ ಅಥವಾ ಮಾದಕ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ವಿವಾಹದ ಬಗ್ಗೆ ಒಂದು ಟನ್‍ಗಳಷ್ಟು ಅನ್ಯೋನ್ಯತೆ ಮತ್ತು ಭಾವೋದ್ರಿಕ್ತ ಭಾವನೆ ಇರುವಂತೆ ನೋಡಿಕೊಳ್ಳುತ್ತಾರೆ. ಇವರಿಗೆ ದೀರ್ಘ ಸಮಯದವರೆಗೆ ಪ್ರಣಯ ಪೂರ್ವಕವಾದ ಜೀವನ ಹೊಂದಲು ಯಾವುದೇ ಸಮಸ್ಯೆ ಇರುವುದಿಲ್ಲ. ಈ ರಾಶಿಯ ವ್ಯಕ್ತಿಗಳಲ್ಲಿ ಶಕ್ತಿ ಮತ್ತು ನಿಯಂತ್ರಣದ ಗುಣವಿರುತ್ತದೆ. ಜಾಗರೂಕರಾಗಿರಿ. ನಿಮಗೆ ನೋವುಂಟುಮಾಡುವ ಸಂಗತಿ ಎದುರಾದಾಗ ಅದರ ಬಗ್ಗೆ ಸೂಕ್ತ ವಿಚಾರ ತಿಳಿದುಕೊಳ್ಳಲು ಮುಂದಾಗಿ.


 • ಧನು

  ಈ ರಾಶಿಯ ವ್ಯಕ್ತಿಗಳು ಸಾಹಸಮಯ ಹಾಗೂ ಲೌಕಿಕ ವಿಚಾರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇವರು ಜೀವನದಲ್ಲಿ ಸಾಕಷ್ಟು ಪ್ರಯಾಣವನ್ನು ಕೈಗೊಳ್ಳುವರು. ಜೀವನದುದ್ದಕ್ಕೂ ನಿರಂತರ ಕಲಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವರು. ಇವರು ನಂಬಲಾಗದಷ್ಟು ಮುಕ್ತ ಮನಸ್ಸಿನವರಾಗಿರುತ್ತಾರೆ. ಕೆಲವೊಮ್ಮೆ ಅಪಾಯವನ್ನು ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ಇದರಂತೆಯೇ ತಮ್ಮ ವಿವಾಹ ಜೀವನವನ್ನು ಕಾಣುವ ವ್ಯಕ್ತಿಗಳು ಎಂದು ಹೇಳಬಹುದು.


 • ಮಕರ

  ಈ ರಾಶಿಯ ವ್ಯಕ್ತಿಗಳು ಸಾಂಪ್ರದಾಯಿಕ ವ್ಯಕ್ತಿಗಳು ಎಂದು ಹೇಳಲಾಗುವುದು. ವೈವಾಹಿಕ ಜೀವನದಲ್ಲೂ ಸಂಗಾತಿಯೊಂದಿಗೆ ಸಾಂಪ್ರದಾಯಿಕ ವಾಗಿ ಇರುತ್ತಾರೆ. ಜೀವನದಲ್ಲಿ ವಿವಿಧ ಯೋಜನೆ ಹಾಗೂ ಸಂಪ್ರದಾಯಗಳಿಗೆ ಬದ್ಧರಾಗುವ ಬದಲು ಭವಿಷ್ಯದಲ್ಲಿ ಬರುವ ಸಂಗತಿಗಳನ್ನು ಆನಂದಿಸಲು ಕಲಿತುಕೊಳ್ಳಬೇಕು.


 • ಕುಂಭ

  ಇವರಿಗೆ ವಿವಾಹ ಎನ್ನುವುದು ಚಮತ್ಕಾರಿ ಮತ್ತು ಆಧುನಿಕ ಸಂಗತಿ ಎಂದು ಪರಿಗಣಿಸುತ್ತಾರೆ. ಇವರು ಸಂಗಾತಿಯೊಂದಿಗೆ ಅತ್ಯುತ್ತಮ ಸ್ನೇಹಿತರ ರೀತಿಯಲ್ಲಿ ಇರುವರು. ಸಾಮಾಜಿಕ ರೀತಿಯಲ್ಲಿ ದಾಂಪತ್ಯವನ್ನು ನಡೆಸುವರು. ದೊಡ್ಡ ಜನ ಸಮೂಹದ ನಡುವೆಯೂ ತಮ್ಮ ದಾಂಪತ್ಯ ಜೀವನವನ್ನು ಆನಂದಿಸುವರು. ವಿವಾಹ ಬಂಧವನ್ನು ಬಲವಾಗಿಟ್ಟುಕೊಳ್ಳಲು ಪ್ರಯತ್ನಿಸಬೇಕು.


 • ಮೀನ

  ಈ ರಾಶಿಯವರು ಸದಾ ಕಲ್ಪನಾ ಲೋಕದಲ್ಲಿ ಕನಸು ಕಾಣುವ ವ್ಯಕ್ತಿಗಳು ಎಂದು ಹೇಳಲಾಗುವುದು. ಇವರು ಸೃಜನಶೀಲತೆಗೆ ಸಂಕೇತವಾದ ವ್ಯಕ್ತಿಗಳು ಎನ್ನಬಹುದು. ಸಂಗಾತಿಯ ಭಾವನೆಗಳೊಂದಿಗೆ ಉತ್ತಮ ಸಂಬಂಧವನ್ನು ಅನುಭವಿಸುವರು. ಅಲ್ಲದೆ ನಿಮ್ಮ ಸೃಜನಾತ್ಮಕ ಪ್ರಯತ್ನಗಳನ್ನು ಹೊಂದಿಸಿಕೊಂಡು ಹೋಗಲು ಮುಂದಾಗಬೇಕು ಎಂದು ಹೇಳಲಾಗುತ್ತದೆ.
ಪ್ರತಿಯೊಬ್ಬರು ತಮ್ಮ ವೈವಾಹಿಕ ಜೀವನ ಸುಂದರವಾಗಿರಬೇಕು ಎಂದು ಬಯಸುತ್ತಾರೆ. ಜೀವನ ಸಂಗಾತಿಯಾಗುವವರು ನಮ್ಮೊಂದಿಗೆ ಪ್ರೀತಿ ವಿಶ್ವಾಸದಿಂದ ಇರಬೇಕು, ನಮ್ಮ ನೋವು ನಲಿವುಗಳಿಗೆ ಸಮನಾಗಿ ಬೆಂಬಲ ಹಾಗೂ ಸಹಕಾರವನ್ನು ನೀಡಬೇಕು, ಜೀವಕ್ಕೆ ಜೀವವಾಗಿ ಬೆರೆತು ಬಾಳಬೇಕು ಎನ್ನುವ ಹಲವಾರು ಕನಸುಗಳನ್ನು ಹೊಂದಿರುತ್ತಾರೆ. ಆದರೆ ಭಿನ್ನಾಭಿಪ್ರಾಯಗಳು, ಹೊಂದಾಣಿಕೆಯ ಸಮಸ್ಯೆ ಮತ್ತು ನಮ್ಮ ನಿತ್ಯದ ಹವ್ಯಾಸದ ಪರಿಣಾಮದಿಂದ ವೈವಾಹಿಕ ಜೀವನವನದಲ್ಲಿ ಕಹಿಯಾದ ಅನುಭವವನ್ನು ಅನುಭವಿಸಬೇಕಾಗುವುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಕೆಲವು ಸೂಕ್ತ ಸಮಯಕ್ಕೆ ಅನುಗುಣವಾಗಿ ವಿವಾಹವಾಗುತ್ತಾರೆ. ಅವರ ಕೆಲವು ಗುಣಗಳು ಅವರ ವೈವಾಹಿಕ ಜೀವನವನ್ನು ನಿರ್ಧರಿಸುತ್ತದೆ. ಅವರ ವರ್ತನೆಗಳಿಂದಲೇ ವೈವಾಹಿಕ ಜೀವನ ದೀರ್ಘ ಸಮಯದವರೆಗೆ ಇರುವುದು ಎಂದು ತಿಳಿಸುತ್ತದೆ. ಅಂತೆಯೆ ವ್ಯಕ್ತಿ ಹುಟ್ಟಿದ ದಿನದಂದೇ ವಿವಾಹವಾದರೆ ವಿವಾಹದ ಜೀವನದಲ್ಲಿ ಕೆಲವು ಮಹತ್ತರವಾದ ತಿರುವನ್ನು ತೆಗೆದುಕೊಳ್ಳುವರು. ಅದು ಸಕಾರಾತ್ಮಕವಾಗಿಯೂ ಇರಬಹುದು. ಇಲ್ಲವೇ ನಕರಾತ್ಮಕವಾಗಿಯಾದರೂ ಇರಬಹುದು ಎಂದು ಹೇಳಲಾಗುವುದು. ಈ ವಿಚಾರದ ಬಗ್ಗೆ ನಿಮಗೂ ಕುತೂಹಲವಿದ್ದರೆ ಇನ್ನಷ್ಟು ಮಾಹಿತಿಗೆ ಲೇಖನದ ಮುಂದಿನ ಭಾಗವನ್ನು ಓದಿ....

   
 
ಹೆಲ್ತ್