Back
Home » ಪ್ರವಾಸ
ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?
Native Planet | 11th Oct, 2018 03:40 PM
 • ಎಲ್ಲಿದೆ ಈ ಕೋಟೆ?

  PC: youtube

  ಈ ಕೋಟೆಯ ಹೆಸರು ಕಾರ್ಕೋಟ ಕೋಟೆ . ಇದು ಅತ್ಯಂತ ಪುರಾತನ ಕೋಟೆಯಾಗಿದ್ದು, ಝಾನ್ಸಿಯಿಂದ ೭೦ ಕಿ.ಮೀ ದೂರದಲ್ಲಿದೆ. ಈ ವರೆಗೆ ಆ ಕೋಟೆಯೊಳಗೆ ಹೋದವರು ಯಾರು ಹಿಂದಿರುಗಿಲ್ಲವಂತೆ.


 • ಸುಂದರವಾದ ಕೋಟೆ

  PC: youtube

  ಈ ಕೋಟೆ ನೋಡಲು ತುಂಬಾ ಸುಂದರವಾಗಿದೆ. ಅಂದವಾದ ಶಿಲ್ಪಗಳು ಕಾಣಸಿಗುತ್ತದೆ. ಆದರೆ ಈ ಕೋಟೆಯೊಳಗೆ ಹೋದವರು ಯಾರೋಬ್ಬರೂ ಹಿಂದಿರುಗಿಲ್ಲ. ಅದಕ್ಕಾಗಿ ಈ ಕೋಟೆಯನ್ನು ಅತ್ಯಂತ ಭಯಂಕರವಾದ ಕಾರ್ಕೋಟ ಕೋಟೆ ಎನ್ನುತ್ತಾರೆ.


 • ರಹಸ್ಯ ಮಾರ್ಗ

  PC: youtube

  ಈ ಕೋಟೆಯೊಳಗೆ ಯಾರಿಗೂ ತಿಳಿಯದಂತಹ ಒಂದು ರಹಸ್ಯ ಮಾರ್ಗವಿದೆ ಎನ್ನಲಾಗುತ್ತದೆ. ಆ ರಹಸ್ಯಮಾರ್ಗವನ್ನು ಕಂಡುಹಿಡಿಯುವ ಉತ್ಸಾಹದಲ್ಲಿ ಆ ಕೋಟೆಯೊಳಗೆ ಹೋದವರಲ್ಲಿ ಯಾರೂ ಇಂದು ಜೀವಂತವಾಗಿಲ್ಲ.


 • ಯಾರೂ ಕಣ್ಣೆತ್ತಿಯೂ ನೋಡೋದಿಲ್ಲ

  PC: youtube

  ಈ ಕೋಟೆಯೊಳಗೆ ಹೋದವರು ಜೀವಂತವಾಗಿಲ್ಲ. ಹಾಗಾಗಿ ಅಲ್ಲಿನ ಸ್ಥಳೀಯರು ಕೂಡಾ ಈ ಕೋಟೆಯನ್ನು ಕಣ್ಣೆತ್ತಿ ನೋಡೋದಕ್ಕೂ ಭಯಪಡುತ್ತಾರೆ.


 • ಅಂತರ್ಭೂಭಾಗ

  PC: youtube

  ಈ ಕೋಟೆ ಭೂಮಿ ಮೇಲೆ ಅಂತಸ್ಥಿನ ರೂಪದಲ್ಲಿ ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಈ ಕೋಟೆಯು ಎರಡು ಮಹಡಿ ಮಾತ್ರ ನಮಗೆ ಕಾಣಿಸುತ್ತದೆ. ಭೂಮಿ ಒಳಗೆ ಕೂಡಾ ಈ ಕೋಟೆಯನ್ನು ನಿರ್ಮಿಸಲಾಗಿದೆ.


 • ಅಂಡರ್‌ ಗ್ರೌಂಡ್

  PC: youtube

  ಪ್ರಸ್ತುತ ಅಪಾರ್ಟ್‌ಮೆಂಟ್‌ಗಳನ್ನೆಲ್ಲ ಆಹೇಗೆ ಅಂಡರ್‌fಗ್ರೌಂಡ್‌ನಲ್ಲಿ ನಿರ್ಮಿಸ್ತಾರೋ ಅದೇ ರೀತಿ ಈ ಕೋಟೆಯಲ್ಲಿ ಎರಡು ಅಂತಸ್ತನ್ನು ಅಂಡರ್‌ಗ್ರೌಂಡ್‌ನಲ್ಲಿ ನಿರ್ಮಿಸಲಾಗಿದೆ. ಆ ಕಾಲದಲ್ಲಿ ಇಂಜಿನಿಯರ್‌ನ ಪ್ರತಿಭೆಗೆ ಈ ಕೋಟೆಯು ಒಂದು ಅದ್ಭುತ ನಿದರ್ಶನವಾಗಿದೆ.


 • ನಿಧಿಗಳು

  PC: youtube

  ಈ ಅಂಡರ್‌ಗ್ರೌಂಡ್‌ನಲ್ಲಿ ಇರುವ ಎರಡು ಅಂತಸ್ತಿನಲ್ಲಿ ನಿಧಿಗಳು, ಗಡಿಗೆಯಲ್ಲಿ ಚಿನ್ನದ ನಾಣ್ಯಗಳು, ನಿಕ್ಷೇಪಗಳು ಇವೆ ಎಂದು ಇಲ್ಲಿನ ಸ್ಥಳೀಯರು ನಂಬುತ್ತಾರೆ.


 • ಆಶ್ಚರ್ಯಕರ ಘಟನೆ

  PC: youtube

  ಈ ಕೋಟೆಯಲ್ಲಿ ಇಷ್ಟೊಂದು ಬೆಲೆ ಬಾಳುವ ನಿಧಿ ನಿಕ್ಷೇಪಗಳು ಇವೆ ಎಂದರೂ ಯಾರೂ ಇದರೊಳಗೆ ಹೋಗುವ ಧೈರ್ಯ ಮಾಡೋದಿಲ್ಲ . ಇದಕ್ಕೆ ಒಂದು ಕಾರಣವೂ ಇದೆ. ಒಂದು ಸಮಾರಂಭವನ್ನು ಮುಗಿಸಿಕೊಂಡು ಬರುತ್ತಿದ್ದ ಗುಂಪೊಂದು ಇಲ್ಲಿನ ಕೋಟೆಯ ಸೌಂದರ್ಯಕ್ಕೆ ಮಾರು ಹೋಗಿ ಆ ಕೋಟೆಯೊಳಗೆ ಹೋಗುತ್ತಾರೆ.


 • ನೋಡಲು ಹೋದವರೂ ಹಿಂದಿರುಗಿಲ್ಲ

  PC: youtube

  ಅಂಡರ್‌ಗ್ರೌಂಡ್‌ನಲ್ಲಿರು ಎರಡಂತಸ್ತಿನ ಪ್ರದೇಶಕ್ಕೆ ಹೋಗುತ್ತಾರೆ. ಹಾಗೆ ಹೋದವರು ಯಾರೂ ಮರಳಿ ಬರಲಿಲ್ಲ. ಆ ಗುಂಪಲ್ಲಿ ಸುಮಾರು ೬೦ ಜನರು ಇದ್ದರು ಎನ್ನಲಾಗುತ್ತದೆ. ಒಬ್ಬರೂ ಹಿಂದಿರುಗಲಿಲ್ಲ. ಈ ಘಟನೆಯ ನಂತರ ಒಳಗೆ ಏನಾಗಿದೆ ಎಂದು ನೋಡಲು ಒಂದಿಬ್ಬರು ಧೈರ್ಯ ಮಾಡಿದರು. ಆದರೆ ಅವರೂ ಹಿಂದಿರುಗಿಲ್ಲ.


 • ಬೀಗ ಹಾಕಲಾಗಿದೆ

  PC: youtube

  ಹಾಗಾಗಿ ಇಲ್ಲಿ ಮನುಷ್ಯರನ್ನು ತಿನ್ನುವ ದೆವ್ವಗಳಿವೆ ಎನ್ನಲಾಗುತ್ತದೆ. ಅವು ಈ ಕೋಟೆಯೊಳಗೆ ಹೋದ ಮನುಷ್ಯರನ್ನು ತಿನ್ನುತ್ತವೆ ಎನ್ನುವ ಪ್ರಚಾರ ಹಬ್ಬಿದೆ. ಇಂತಹ ಘಟನೆಗಳು ನಡೆಯುತ್ತಲೇ ಇದ್ದುದರಿಂದ ಅಲ್ಲಿನ ದ್ವಾರಕ್ಕೆ ಬೀಗ ಜಡಿಯಲಾಗಿದೆ.
ರಾಜ್ಯದ ಸುರಕ್ಷತೆಗೋಸ್ಕರ ಹಿಂದೆ ರಾಜಂದಿರು ದೊಡ್ಡ ದೊಡ್ಡ ಕೋಟೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಕೆಲವು ಪಾಳುಬಿದ್ದಿವೆ. ಈ ಪಾಳು ಬಿದ್ದಿರುವ ಕೋಟೆಗಳಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳು ಕೇಳಸಿಗುತ್ತದೆ. ಇಂತಹ ಕೋಟೆಗಳು ಹೆಚ್ಚಾಗಿ ಉತ್ತರ ಪ್ರದೇಶದಲ್ಲಿ ಕಾಣಸಿಗುತ್ತದೆ. ಅಂತಹ ಕೋಟೆಯೊಂದರ ಬಗ್ಗೆ ನಾವಿಂದು ತಿಳಿಸಲಿದ್ದೇವೆ. ಈ ಕೋಟೆಯೊಳಗೆ ದೆವ್ವಗಳಿವೆ. ಈ ಕೋಟೆಯ ಒಳಗೆ ಹೋದವರನ್ನು ಅವು ತಿನ್ನುತ್ತವೆ ಎನ್ನುತ್ತಾರೆ.

   
 
ಹೆಲ್ತ್