Back
Home » Business
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಸೇಲ್, ವಿಮಾನ ಟಿಕೇಟ್ ಮೇಲೆ 5 ಸಾವಿರ ರಿಯಾಯಿತಿ ಪಡೆಯಿರಿ
Good Returns | 11th Oct, 2018 10:52 AM
 • 5 ಸಾವಿರ ರಿಯಾಯಿತಿ

  ಭಾರತದ ಅತಿದೊಡ್ಡ ಇ-ಚಿಲ್ಲರೆ ಮಾರಾಟಗಾರ ಫ್ಲಿಪ್ಕಾರ್ಟ್ ದೇಶೀಯ ವಿಮಾನ ಟಿಕೆಟ್ ಗಳಿಗೆ ರೂ. 5,000 ರವರೆಗೆ ತ್ವರಿತ ರಿಯಾಯಿತಿ ನೀಡುತ್ತಿದೆ. ಫ್ಲಿಪ್ಕಾರ್ಟ್ ಟ್ರಾವೆಲ್ ಪ್ಲಾಟ್ಫಾರ್ಮ್ ಮೂಲಕ ಬುಕ್ ಮಾಡಲಾದ ಎಲ್ಲಾ ದೇಶೀಯ ವಿಮಾನ ಟಿಕೆಟ್ ಗಳಿಗೆ ಈ ಸವಲಭ್ಯ ಮಾನ್ಯವಾಗಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಆಫರ್, ಅತೀ ಕಡಿಮೆ ಬೆಲೆಗೆ ಮೊಬೈಲ್, ಟಿವಿ ಖರೀದಿಸಿ..


 • ರಿಯಾಯಿತಿ ಪಡೆಯೋದು ಹೇಗೆ?

  ಟಿಕೇಟ್ ಗಳ ಮೇಲೆ ರಿಯಾಯಿತಿ ಪಡೆಯಲು ಬಳಕೆದಾರರು ತಮ್ಮ ಫ್ಲಿಪ್ಕಾರ್ಟ್ ಆಪ್ ಮೂಲಕ ಆಯ್ಕೆ ಮಾಡಬೆಕಾಗುತ್ತದೆ. ಕ್ರೆಡಿಟ್/ಡೆಬಿಟ್ ಕಾರ್ಡು, ನೆಟ್ ಬ್ಯಾಂಕಿಂಗ್ ಮತ್ತು ಕಾರ್ಪೋರೇಟ್/ಕಮರ್ಸಿಯಲ್ ಕಾರ್ಡ್ ಗಳ ಮೂಲಕ ವಹಿವಾಟು ನಡೆಸಿದರೆ ಮಾತ್ರ ಈ ರಿಯಾಯಿತಿ ಅನ್ವಯವಾಗುತ್ತದೆ.


 • ವ್ಯವಹಾರ ಮಿತಿ

  ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿರುವ ಎಲ್ಲಾ ಭಾರತೀಯ ನಿವಾಸಿಗಳು ಈ ಸೌಲಭ್ಯ ಪಡೆಯಬಹುದು. ರೂ 4,000 ವರೆಗಿನ ವ್ಯವಹಾರದ ಮೇಲೆ ರೂ. 350 ರ ರಿಯಾಯಿತಿ ಹಾಗು ರೂ. 4,001 ರಿಂದ ರೂ 8,000 ವರೆಗಿನ ವ್ಯವಹಾರದ ಮೇಲೆ ರೂ. 350 ರಿಂದ ರೂ. 700ರವರೆಗೆ ರಿಯಾಯಿತಿ ಪಡೆಯಬಹುದು.


 • ವ್ಯವಹಾರದ ಗಾತ್ರ ಮತ್ತು ಲಭ್ಯವಿರುವ ರಿಯಾಯಿತಿ (ಫ್ಲೈಟ್ ಟಿಕೆಟ್ ಬೆಲೆ)

  ರೂ. 4000 ರೂ. 350
  ರೂ. 4001- ರೂ. 8000 ರೂ. 700
  ರೂ 8,001 ರಿಂದ ರೂ 12,500 ರೂ. 1200
  12,501 ರಿಂದ ರೂ 20,000 ರೂ. 1700
  ರೂ 20,001 ರಿಂದ ರೂ 35,000 ರೂ. 2500
  ರೂ 35,001 ರಿಂದ ರೂ 50,000 ರೂ. 3500
  ರೂ. 50000 ಮೇಲ್ಪಟ್ಟ ವ್ಯವಹಾರಕ್ಕೆ ರೂ. 5000 ರಿಯಾಯಿತಿ ಲಭ್ಯ. ಎಟಿಎಂ ನಗದು ವಿತ್ ಡ್ರಾ ಮಿತಿ: ಯಾವ ಬ್ಯಾಂಕ್ ಗ್ರಾಹಕರು ಎಷ್ಟು ಹಣ ತೆಗೆಯಬಹುದು?
ಫ್ಲಿಪ್ಕಾರ್ಟ್ ಐದು ದಿನಗಳ ಬಿಗ್ ಬಿಲಿಯನ್ ಡೇ ಮಾರಾಟ ಮೇಳ ಈಗಾಗಲೆ ಆರಂಭವಾಗಿದೆ. ಬಳಕೆದಾರರು ಎಲೆಕ್ಟ್ರಾನಿಕ್ಸ್, ಮನೆ ಸಲಕರಣೆಗಳು ಮತ್ತು ಮೊಬೈಲ್ ಮೇಲೆ ರಿಯಾಯಿತಿಗಳು ಅಷ್ಟೇ ಅಲ್ಲದೇ, ಫ್ಲಿಪ್ಕಾರ್ಟ್ ಟ್ರಾವೆಲ್ ಮೂಲಕ ಅವರು ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ಗಳನ್ನು ಕೂಡ ಬುಕ್ ಮಾಡಬಹುದು.

   
 
ಹೆಲ್ತ್