Back
Home » ಇತ್ತೀಚಿನ
ಬಹುರಾಷ್ಟ್ರೀಯ ಕಾನ್ಫರೆನ್ಸ್‌ನಲ್ಲಿ ಕೇವಲ 10,000 ರೂ.ಕದ್ದು ಸಿಕ್ಕಿಬಿದ್ದ ಗೂಗಲ್ ಉದ್ಯೋಗಿ!!
Gizbot | 11th Oct, 2018 01:40 PM

ಗೂಗಲ್‌ನಲ್ಲಿ ಉದ್ಯೋಗ ದೊರೆತರೆ ಹಣ ನೀರಿನಂತೆ ಹರಿಯುತ್ತದೆ ಎಂಬ ಮಾತಿದೆ. ಆದರೆ, ತನ್ನ ಗರ್ಲ್ ಫ್ರೆಂಡ್‌ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕಾಗಿ ಕೇವಲ 10,000 ರೂಪಾಯಿಗಳನ್ನು ಕದ್ದ ಆರೋಪದ ಮೇಲೆ ಗೂಗಲ್‌ ಉದ್ಯೋಗಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಹರಿಯಾಣದ ಅಂಬಾಲಾ ಜಿಲ್ಲೆಯವನೆಂದು ತಿಳಿದುಬಂದಿದೆ.

ಹೌದು, ಪ್ರಖ್ಯಾತ ಟೆಕ್ ದಿಗ್ಗಜ ಸಂಸ್ಥೆ ಗೂಗಲ್ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನವನ್ನು ತನ್ನ ಉದ್ಯೋಗಿಗೂ ಪಾವತಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಗೂಗಲ್‌ನಲ್ಲಿ ಇಂಜಿನಿಯರ್ ಆಗಿ ಉದ್ಯೋಗ ಮಾಡುತ್ತಿರುವ 24ರ ಹರೆಯದ ಗಾರ್ವಿತ್ ಸಾಹಿನಿ ಎಂಬಾತ ಕೇವಲ 10,000 ರೂಪಾಯಿಗಳನ್ನು ಕದ್ದಿರುವ ಘಟನೆ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.

ಕಳೆದ ಸೆ.11 ನೇ ತಾರೀಖಿನಂದು ಬಹುರಾಷ್ಟ್ರೀಯ ಕಂಪೆನಿಗಳ ಹಿರಿಯ ಎಕ್ಸಿಕ್ಯುಟಿವ್‌ಗಳಿಗಾಗಿ ನವದೆಹಲಿಯ ತಾಜ್‌ ಪ್ಯಾಲೇಸ್‌ನಲ್ಲಿ ಐಬಿಎಂ ಮತ್ತು ಮಾಧ್ಯಮ ಸಂಸ್ಥೆಗಳು ಜತೆಗೂಡಿ ಕಾನ್ಫರೆನ್ಸ್‌ ಏರ್ಪಡಿಸಿದ್ದವು. ಇಂತಹ ದೊಡ್ಡ ಕಾನ್ಫರೆನ್ಸ್‌ನಲ್ಲಿ ದೇವಯಾನಿ ಜೈನ್‌ ಎಂಬಾಕೆಯು ತನ್ನ ಪರ್ಸ್‌ನಿಂದ 10,000 ರೂ. ಕಳವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ದೂರು ದಾಖಲಿಸಿಕೊಂಡ ಪೊಲೀಸರು, ಕಾನ್ಫರೆನ್ಸ್‌ ಹಾಲ್‌ನಲ್ಲಿದ್ದ ಸಿಸಿಟಿಸಿ ಕ್ಯಾಮೆರಾದ ಚಿತ್ರಿಕೆಯನ್ನು ಪರಿಶೀಲಿಸಿದಾಗ ವ್ಯಕ್ತಿಯೋರ್ವ ಪರ್ಸ್‌ನಿಂದ ಹಣ ಕದಿಯುತ್ತಿರುವ ದೃಶ್ಯ ಕಂಡು ಬಂದಿದೆ. ನಂತರ ಕಾನ್ಫರೆನ್ಸ್‌ ಆಮಂತ್ರಿತರ ಪಟ್ಟಿಯನ್ನು ಪರಿಶೀಲಿಸಿದ ಪೊಲೀಸರಿಗೆ ಹಣ ಕದ್ದ ವ್ಯಕ್ತಿ ಯಾರೆಂಬುದು ಖಚಿತವಾಗಿ ಆರೋಪಿ ಗಾರ್ವಿತ್ ನನ್ನು ಅರೆಸ್ಟ್ ಮಾಡಿದ್ದಾರೆ.

ನನಗೆ ತೀವ್ರ ಹಣದ ಅಭಾವವಿತ್ತು. ಗರ್ಲ್ ಫ್ರೆಂಡ್‌ ಖರ್ಚು ವೆಚ್ಚ ನಿಭಾಯಿಸಲು ಹಣ ಬೇಕಾಗಿತ್ತು. ಹಾಗಾಗಿ ನಾನು ಹಣ ಕದ್ದೆ ಎಂದು ಗಾರ್ವಿತ್ ಪೊಲೀಸರಲ್ಲಿ ಒಪ್ಪಿಕೊಂಡಿದ್ದಾನೆ. ಇದಾದ ನಂತರ ಪೊಲೀಸರು ಆತನ ವಶದಲ್ಲಿದ್ದ ಕದ್ದ ಹಣದ ಪೈಕಿ 3,000 ರೂ.ಗಳನ್ನು ವಶಪಡಿಸಿಕೊಂಡಿದ್ದು, ಗೂಗಲ್ ಉದ್ಯೋಗಿ ಕೇವಲ 10,000 ರೂ. ಕದ್ದಿರುವ ಘಟನೆ ಸ್ವತಃ ಪೊಲೀಸರಿಗೂ ನಂಬಲಾಗಲಿಲ್ಲವಂತೆ.

ಓದಿರಿ: ವಿಶ್ವದ ದೈತ್ಯ ಕಂಪನಿಗಳಿಗೆ ಸೆಡ್ಡುಹೊಡೆದ ಬೈರೇಗೌಡ ತಯಾರಿಸಿದ್ದು ಅಂತಿಂಥ ವಾಹನವಲ್ಲ!!

   
 
ಹೆಲ್ತ್