Back
Home » ಸಮ್ಮಿಲನ
ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!
Boldsky | 12th Oct, 2018 11:08 AM
 • ದೊಡ್ಡ ಸಂಖ್ಯೆಯು ಇದ್ದರೆ

  ಸಂಖ್ಯಾಶಾಸ್ತ್ರಜ್ಞರ ಪ್ರಕಾರ, ನೀವು ಹೆಚ್ಚು ಗಮನಾರ್ಹ ಸಂಖ್ಯೆಗಳನ್ನು ಹೊಂದಿದ್ದರೆ ಅದರಿಂದ ನಿಮಗೆ ಬರುವಂತಹ ಅವಕಾಶಗಳು ಹೆಚ್ಚು ಲಾಭದಾಯಕವಾಗಿರುವುದು ಮತ್ತು ನೀವು ಯಶಸ್ಸನ್ನು ಪಡೆಯುವಿರಿ. ನೀವು ಸಮಸ್ಯೆಯಿಂದಲೂ ಪರಾಗಲಿದ್ದೀರಿ.


 • ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 4 ಮತ್ತು 8 ಸಂಖ್ಯೆಯು ಹೆಚ್ಚಿದ್ದರೆ

  ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 4 ಮತ್ತು 8 ಸಂಖ್ಯೆಯು ಹೆಚ್ಚು ಇದ್ದರೆ ಆಗ ನಿಮ್ಮ ಜೀವನದಲ್ಲಿ ಕೆಲವೊಂದು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಸಂಖ್ಯಾಶಾಸ್ತ್ರವು ಹೇಳುವುದು.

  Most Read: ಅಕ್ಟೋಬರ್ 8 ರಿಂದ 14ರ ವರೆಗಿನ ವಾರ ಭವಿಷ್ಯ


 • 4 ಮತ್ತು 8 ಸಂಖ್ಯೆಯ ಬಗ್ಗೆ ಇನ್ನಷ್ಟು…

  ಸಂಖ್ಯಾಶಾಸ್ತ್ರದ ಪ್ರಕಾರ 4 ಮತ್ತು 8 ಸಂಖ್ಯೆಯ ಮಿಶ್ರಣವು ಕೆಟ್ಟದೆಂದು ಪರಿಗಣಿಸಲಾಗಿದೆ. ನೀವು ಮೊಬೈಲ್ ಸಂಖ್ಯೆಯನ್ನು ಬದಲಾಯಿಸಿಕೊಳ್ಳಿ. ಇದರಿಂದ ನಿಮ್ಮ ಸುತ್ತಲು ಧನಾತ್ಮಕ ಶಕ್ತಿ ಬರುವುದು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅಪಾಯವು ದೂರವಾಗುವುದು.


 • 6 ಸಂಖ್ಯೆಯು ಹೆಚ್ಚಿದ್ದರೆ ಆಗ ನೀವು ತುಂಬಾ ಅದೃಷ್ಟವಂತ!

  6 ಸಂಖ್ಯೆಯು ತುಂಬಾ ಅದೃಷ್ಟವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಅದೃಷ್ಟವನ್ನು ಉಂಟು ಮಾಡುವುದು. ಈ ಸಂಖ್ಯೆಯನ್ನು ಹೊಂದಿರುವಂತಹ ವ್ಯಕ್ತಿಗಳು ತುಂಬಾ ಸಂತೋಷ, ರೋಮ್ಯಾಂಟಿಕ್, ಆಶಾವಾದಿಯಾಗಿರುವರು.

  MOst Read: ಅಗರಬತ್ತಿಯ ಹೊಗೆ ತುಂಬಾನೇ ಅಪಾಯಕಾರಿಯಂತೆ! ಇಲ್ಲಿದೆ ನೋಡಿ ಕಾರಣಗಳು


 • 5 ಮತ್ತು 2 ಅದೃಷ್ಟವಲ್ಲ

  ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ 5 ಮತ್ತು 2 ಸಂಖ್ಯೆಯು ಒಂದಕ್ಕಿಂತ ಹೆಚ್ಚು ಸಲ ಇದ್ದರೆ ಇದು ಅದೃಷ್ಟವಲ್ಲವೆಂದು ನಂಬಲಾಗಿದೆ. ಈ ಸಂಖ್ಯೆಯು ಪುನರಾವರ್ತನೆಯಾದರೆ ಅದು ನಿಮ್ಮ ಪ್ರೀತಿ ಹಾಗೂ ಮದುವೆಯ ಜೀವನಕ್ಕೆ ತುಂಬಾ ಸಮಸ್ಯೆಯುಂಟು ಮಾಡಬಹುದು.


 • 8 ಅಥವಾ 5, 2 ಮತ್ತು 8 ಸಂಖ್ಯೆಯ ಮಿಶ್ರಣ ತಪ್ಪಿಸಿ

  8 ಅಥವಾ 5,2 ಮತ್ತು 8 ಸಂಖ್ಯೆಯ ಮಿಶ್ರಣವು ತುಂಬಾ ದುರಾದೃಷ್ಟವೆಂದು ಪರಿಗಣಿಸಲಾಗಿದೆ. ಈ ಸಂಖ್ಯೆಯನ್ನು ಹೊಂದಿರುವಂತಹ ವ್ಯಕ್ತಿಗಳಲ್ಲಿ ಖಿನ್ನತೆ ಮತ್ತು ಮಾನಸಿಕ ಸಮಸ್ಯೆಯು ಕಾಣಿಸಬಹುದು. ನೀವು ಹೀಗೆ ಇದ್ದರೆ ಮೊಬೈಲ್ ನಂಬರ್ ಬದಲಾಯಿಸಿಕೊಳ್ಳಿ.


 • ಇವೆಲ್ಲಾ ಅದೃಷ್ಟವನ್ನೇ ಬದಲಾಯಿಸುವ ಸಂಖ್ಯೆ!, ನಿಮ್ಮದೂ ಪರಿಶೀಲಿಸಿಕೊಳ್ಳಿ

  ಇನ್ನು ನಮ್ಮ ವಾಹನದ ಸಂಖ್ಯೆ, ಮನೆಯ ಸಂಖ್ಯೆ, ಮೊಬೈಲ್ ನಂಬರ್ ಅಥವಾ ಇನ್ಯಾವುದೋ ಒಂದು ಕೆಲಸಕ್ಕೆ ಸಂಬಂಧಿಸಿದ ಸಂಖ್ಯೆಗಳು ನಮ್ಮ ಅದೃಷ್ಟಗಳಿಗೆ ಕಾರಣವಾಗುತ್ತವೆ ಎಂದು ಸಂಖ್ಯಾ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಹೇಳುತ್ತವೆ. ಹಾಗೊಮ್ಮೆ ಆ ಸಂಖ್ಯೆಗಳಿಂದ ನಮಗೆ ಅದೃಷ್ಟ ಇಲ್ಲವೆಂದಾದರೆ ಅದರಿಂದ ಯಾವುದೇ ಉಪಯೋಗ ಅಥವಾ ಲಾಭ ಉಂಟಾಗುವುದಿಲ್ಲ. ಬದಲಿಗೆ ನಷ್ಟ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ. ಹಾಗಾದರೆ ಆ ಉತ್ತಮ ಸಂಖ್ಯೆಗಳು ಯಾವವು? ಅವು ನಮ್ಮ ರಾಶಿ ಚಕ್ರಕ್ಕೆ ಅನುಗುಣವಾಗಿವೆಯೇ? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು ಎನ್ನುವ ಹಂಬಲವಿದ್ದರೆ ಮುಂದೆ ಓದಿ


 • ಮೇಷ

  ಮಂಗಳ ಗ್ರಹ ಮೇಷ ರಾಶಿಯವರಿಗೆ ಆಡಳಿತಾತ್ಮಕ ಗ್ರಹವಾಗಿದೆ. ಈ ರಾಶಿಯ ಜನರು ಸಾಕಷ್ಟು ಬಹುಮುಖ, ಶಕ್ತಿಯುತ, ಕೆಚ್ಚೆದೆಯ, ಸಾಹಸಮಯ ಮತ್ತು ಕುತೂಹಲಕಾರಿ ಕೆಲಸವನ್ನು ಮಾಡುತ್ತಾರೆ. ಈ ರಾಶಿ ಚಕ್ರದವರ ಅದೃಷ್ಟ ಸಂಖ್ಯೆಗಳು 6, 18, 41, 77 ಮತ್ತು 83 ಆಗಿವೆ. ಈ ಸಂಖ್ಯೆಗಳು ಅದೃಷ್ಟವನ್ನು ತರುತ್ತವೆ ಮತ್ತು ಜೀವನದ ವಿಚಿತ್ರತೆಯನ್ನು ತಗ್ಗಿಸುತ್ತವೆ.


 • ವೃಷಭ

  ಈ ರಾಶಿಯವರು ಪ್ರಣಯ, ತಾರ್ಕಿಕ ಹಾಗೂ ನಿರ್ಣಾಯಕ ಕೆಲಸದಲ್ಲಿ ಉತ್ತಮ ಸ್ಥಾನವನ್ನು ಪಡೆದುಕೊಳ್ಳುವರು. ಇವರು ಶುಕ್ರ ಗ್ರಹಗದ ಆಳ್ವಿಕೆಗೆ ಒಳಪಡುತ್ತಾರೆ. ಇವರಿಗೆ ಮುಂಬರುವ ವರ್ಷದ ಅದೃಷ್ಟ ಸಂಖ್ಯೆಗಳು 5, 35, 50, 57, ಮತ್ತು 82.

  Most Read: 'ಬಿ' ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ನೋಡಿ...


 • ಮಿಥುನ

  ಈ ರಾಶಿಚಕ್ರದವರಿಗೆ ಈ ವರ್ಷವು ಒಂದು ಆಕರ್ಷಣೀಯ ಸಂದರ್ಭಗಳನ್ನು ತಂದುಕೊಡುತ್ತದೆ. ಇವರು ಆದಷ್ಟು ಆಧ್ಯಾತ್ಮಿಕ ವಿಚಾರದ ಬಗ್ಗೆ ಗಮನ ನೀಡಬೇಕಿದೆ. ಇವರಿಗೆ 1, 10, 18, 35 ಮತ್ತು 86 ರ ಸಂಖ್ಯೆಗಳು ಎಲ್ಲಾ ಪ್ರಯತ್ನಗಳಿಗೆ ಫಲದಾಯಕವೆಂದು ಸಾಬೀತುಪಡಿಸುತ್ತವೆ.


 • ಕರ್ಕ

  ಈ ರಾಶಿಚಕ್ರ ಚಿಹ್ನೆಯ ಜನರು ವಿಶೇಷ ಸಂವೇದನಾ ಶಕ್ತಿಯನ್ನು ಹೊಂದಿದ್ದಾರೆ. ಅದು ಅವರ ಒಂದು ದೊಡ್ಡ ಕಾಲ್ಪನಿಕ ಶಕ್ತಿ ಎನ್ನಬಹುದು. ವೈದಿಕ ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರ ಆಡಳಿತದ ಗ್ರಹವು ಸೂರ್ಯ. ಇವರಿಗೆ ಈ ವರ್ಷ ಅದೃಷ್ಟ ಸಂಖ್ಯೆಗಳು 1, 21, 24, 58, ಮತ್ತು 66.


 • ಸಿಂಹ

  ಈ ರಾಶಿಚಕ್ರ ಚಿಹ್ನೆಯ ಜನರು ಧಾರ್ಮಿಕ, ನಿಷ್ಠಾವಂತ ಮತ್ತು ಉತ್ಸಾಹಶಾಲಿಯಾಗಿರುತ್ತಾರೆ. ವೈದಿಕ ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರದವರು ಸೂರ್ಯನಿಂದ ಆಳಲ್ಪಡುತ್ತಾರೆ. ಮುಂಬರುವ ವರ್ಷ ಅವರು ನಿರೀಕ್ಷಿಸುತ್ತಿದ್ದ ಹೆಚ್ಚು ನಿರೀಕ್ಷಿತ ಧನಾತ್ಮಕ ಬದಲಾವಣೆಗಳನ್ನು ತರಬಹುದು. ಮುಂಬರುವ ವರ್ಷದ ಅದೃಷ್ಟ ಸಂಖ್ಯೆಗಳು 6, 24, 39, 59, ಮತ್ತು 83.


 • ಕನ್ಯಾ

  ಈ ರಾಶಿಚಕ್ರ ಚಿಹ್ನೆಯು ತನ್ನೊಳಗೆ ರಕ್ಷಕನನ್ನು ಕಂಡುಕೊಳ್ಳುತ್ತದೆ. ಈ ರಾಶಿಚಕ್ರ ಜನರು ಸಹಾಯ ಮಾಡುವ ನೈಸರ್ಗಿಕ ಸ್ವಭಾವ ಹೊಂದಿದ್ದಾರೆ. ಸೊಗಸಾದ ವರಾಗಿರುವ ಇವರು ಇತರರಿಗೆ ಸಾಧಾರಣವಾಗಿ ತಿರುಗುತ್ತಾರೆ. ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 16, 29, 79, 80, ಮತ್ತು 90.


 • ತುಲಾ

  ಈ ರಾಶಿಚಕ್ರ ಚಿಹ್ನೆಯ ಜನರು ಬಲವಾದ ಸಾಮಾಜಿಕ ಕೌಶಲ್ಯ, ಮೋಡಿ, ಮತ್ತು ಸೌಂದರ್ಯ ಹೊಂದಿರುವ ಅತ್ಯಂತ ಆದರ್ಶವಾದಿ ವ್ಯಕ್ತಿಗಳಾಗಿರುತ್ತಾರೆ. ಇವರು ಶುಕ್ರ ಗ್ರಹದಿಂದ ಆಳಲ್ಪಡುತ್ತಾರೆ. ಮುಂಬರುವ ವರ್ಷದ ಅದೃಷ್ಟ ಸಂಖ್ಯೆಗಳು 7, 20, 55, 77 ಮತ್ತು 86.
  Most Read: ನವರಾತ್ರಿಗಳಲ್ಲಿ 'ನವದುರ್ಗೆ'ಯನ್ನು ಪೂಜಿಸುವ ಆ ಒಂಬತ್ತು ರೂಪಗಳು...
  https://kannada.boldsky.com/inspiration/short-story/navadurga-and-the-9-forms-of-the-hindu-goddess-durga-018540.html


 • ವೃಶ್ಚಿಕ

  ಈ ರಾಶಿಯವರನ್ನು ಆಳುವ ಗ್ರಹಗಳು ಮಂಗಳ ಮತ್ತು ಪ್ಲುಟೋ ಗುಣಗಳನ್ನು. ಅವರು ಸಾಕಷ್ಟು ನಿಗೂಢ, ತರ್ಕಬದ್ಧ ಮತ್ತು ಸ್ವತಂತ್ರ ಗುಣಗಳನ್ನು ಹೊಂದಿರುತ್ತಾರೆ. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 27, 29, 45, 53 ಮತ್ತು 89.


 • ಧನು

  ಅವರು ಧೈರ್ಯಶಾಲಿ, ಆಶಾವಾದಿ ಮತ್ತು ಸ್ವಭಾವತಃ ಸಾಕಷ್ಟು ಕಲಿತಿರುತ್ತಾರೆ. ಮುಂಬರುವ ವರ್ಷದಲ್ಲಿ ಈ ಚಿಹ್ನೆಯ ಜನರು ಅದೃಷ್ಟ ಸಂಖ್ಯೆಗಳೊಂದಿಗೆ ಕೆಲವು ಪರಿಹಾರವನ್ನು ನೋಡುತ್ತಾರೆ - 6, 16, 23, 60, ಮತ್ತು 81. ಮತ್ತೊಂದೆಡೆ ಈ ರಾಶಿಚಕ್ರ ಬರುವ ವರ್ಷದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಲು ಸ್ವಲ್ಪ ಹೆಚ್ಚಿನ ಕೆಲಸವನ್ನು ಮಾಡಬೇಕಾಗಿದೆ.


 • ಮಕರ

  ಈ ರಾಶಿಚಕ್ರ ಜನರು ತಮ್ಮ ಗುರಿಗಳ ಕಡೆಗೆ ಒಂದು ಅತ್ಯುತ್ತಮ ವಿಧಾನವನ್ನು ಹೊಂದಿರುತ್ತಾರೆ. ವಿಶ್ವಾಸಾರ್ಹ, ಉದಾರ, ಮತ್ತು ನಿರಂತರವಾಗಿ ಇರುವಂತಹ ಗುಣಗಳು ನೈಸರ್ಗಿಕವಾಗಿಯೇ ಬಂದಿರುತ್ತದೆ. ಅವರು ಸ್ವಲ್ಪ ಮೊಂಡುತನದ ಮತ್ತು ಸಂಶಯಾಸ್ಪದವರಾಗಿರಬಹುದು. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 3, 21, 66, 83, ಮತ್ತು 84.

  Most Read: ದುರಾದೃಷ್ಟ ತರಬಹುದಾದ ಗಿಡಗಳಿವು- ಮನೆಯಲ್ಲಿ ಅಪ್ಪಿತಪ್ಪಿಯೂ ಇಡಬೇಡಿ!


 • ಕುಂಭ

  ಈ ರಾಶಿಚಕ್ರ ಚಿಹ್ನೆಯ ಜನರು ಸಹಿಷ್ಣು, ಆದರ್ಶ, ಶಾಂತ ಮತ್ತು ಸ್ನೇಹಪರರಾಗಿದ್ದಾರೆ. ಅಗತ್ಯವಿದ್ದಾಗ ಅವರು ಸಾಕಷ್ಟು ಬಂಡಾಯಗಾರರಾಗಬಹುದು. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಚಿಹ್ನೆಯ ಅದೃಷ್ಟ ಸಂಖ್ಯೆಗಳು 17, 40, 46, 61, ಮತ್ತು 76.


 • ಮೀನ

  ಈ ಚಿಹ್ನೆಯ ಜನರಿಗೆ ಸಾಕಷ್ಟು ಪ್ರಜ್ಞೆ ಮತ್ತು ಅನುಯಾಯಿಗಳಾಗಿ ಇರಬಹುದು. ಅವರು ತಮ್ಮ ಒಳ್ಳೆಯ ಸ್ವಭಾವದಿಂದ ಆಶೀರ್ವದಿಸಲ್ಪಡುತ್ತಾರೆ. ಮುಂಬರುವ ವರ್ಷದಲ್ಲಿ ಈ ರಾಶಿಚಕ್ರದ ಅದೃಷ್ಟ ಸಂಖ್ಯೆಗಳು 8, 10, 27, 56 ಮತ್ತು 69.
ಸಂಖ್ಯಾಶಾಸ್ತ್ರದ ಮೇಲೆ ಹೆಚ್ಚಿನ ಜನರಿಗೆ ವಿಶ್ವಾಸವಿದೆ. ಇದರಿಂದಾಗಿಯೇ ಕ್ರಿಕೆಟಿನಿಂದ ಹಿಡಿದು ಸಿನಿಮಾ ಜಗತ್ತಿನ ತನಕ ಪ್ರತಿಯೊಬ್ಬರು ಸಂಖ್ಯಾಶಾಸ್ತ್ರಜ್ಞರ ಮೊರೆ ಹೋಗುವರು. ಸಂಖ್ಯಾಶಾಸ್ತ್ರಜ್ಞರ ಪ್ರಕಾರ ಕೆಲವೊಂದು ಅಂಕೆಗಳು ನಮ್ಮ ಜೀವನದ ಮೇಲೆ ಪ್ರಭಾವ ಬೀರುವುದು.

ಅಂಕೆಗಳು ನಮಗೆ ಎಷ್ಟು ಅದೃಷ್ಟವನ್ನು ಉಂಟು ಮಾಡುತ್ತಿದೆ ಎನ್ನುವುದನ್ನು ತಿಳಿಯುವುದರೊಂದಿಗೆ ಇದರ ಕಡೆ ಗಮನಹರಿಸಬೇಕು. ನಿಮ್ಮ ಮೊಬೈಲ್ ನಂಬರ್ ನ್ನು ಸಂಖ್ಯಾಶಾಸ್ತ್ರದ ಪ್ರಕಾರ ಆಯ್ಕೆ ಮಾಡಿಕೊಳ್ಳುವುದು ಹೇಗೆ ಎಂದು ನಿಮಗೆ ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ. ಇದು ಒಂದು ಮಾದರಿಯಲ್ಲಿ ಇರುವುದು ಮತ್ತು ಇದರ ಹಿಂದಿನ ಅರ್ಥವನ್ನು ನೀವು ತಿಳಿಯಬಹುದಾಗಿದೆ.

   
 
ಹೆಲ್ತ್