Back
Home » ಇತ್ತೀಚಿನ
ನೋಕಿಯಾದಿಂದ ಮತ್ತೇರಡು ಫೋನ್‌ ಲಾಂಚ್‌..! ಶಿಯೋಮಿ, ಜಿಯೋ ಫೋನ್‌ ಯಾಕೆ..?
Gizbot | 11th Oct, 2018 04:09 PM
 • ಡಿಸ್‌ಪ್ಲೇ

  ನೋಕಿಯಾ 3.1 ಪ್ಲಸ್‌ 6 ಇಂಚಿನ್‌ HD+ IPS ನೋಚ್‌ಲೆಸ್‌ ಡಿಸ್‌ಪ್ಲೇ ಹೊಂದಿದ್ದು, 18:9 ಆಸ್ಪೆಕ್ಟ್‌ ರೇಷಿಯೋ ಹೊಂದಿದೆ. ಗೇಮಿಂಗ್‌ ಮತ್ತು ಮಲ್ಟಿಮೀಡಿಯಾ ಬಳಸುವ ಸಂದರ್ಭದಲ್ಲಿ ಉತ್ತಮ ಅನುಭವವನ್ನು ಬಳಕೆದಾರನಿಗೆ ನೀಡುತ್ತದೆ. ಅದಲ್ಲದೇ ನೋಕಿಯಾ 3.1 ಪ್ಲಸ್‌ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ 2.5D ಗ್ಲಾಸ್‌ನಿಂದ ರಕ್ಷಣೆ ಹೊಂದಿದೆ.


 • ಕಾರ್ಯನಿರ್ವಹಣೆ ಮತ್ತು ಪ್ರೊಸೆಸರ್

  ಆಂಡ್ರಾಯ್ಡ್‌ ಒನ್‌ನಿಂದ ಬೆಂಬಲಿತವಾಗಿರುವ ನೋಕಿಯಾ 3.1 ಪ್ಲಸ್‌ ಸ್ಮಾರ್ಟ್‌ಫೋನ್‌ ಒಕ್ಟಾ ಕೋರ್‌ ಮೀಡಿಯಾ ಟೆಕ್‌ ಹೆಲಿಯೋ P22 ಪ್ರೊಸೆಸರ್‌ ಹೊಂದಿದೆ. 2GB RAM + 16GB ಇಂಟರ್ನಲ್‌ ಮೆಮೊರಿ ಹಾಗೂ 3GB RAM + 32GB ಇಂಟರ್ನಲ್‌ ಮೆಮೊರಿ ಹೊಂದಿದ್ದು, ಮೈಕ್ರೋ SD ಕಾರ್ಡ್‌ ಮೂಲಕ 400GBವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.


 • ಕ್ಯಾಮೆರಾ

  ನೋಕಿಯಾ 3.1 ಪ್ಲಸ್‌ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್‌ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, ಪ್ರಾಥಮಿಕ ಕ್ಯಾಮೆರಾ 13MP ಪ್ರಾಥಮಿಕ ಸೆನ್ಸಾರ್ ಹಾಗೂ 5MP ಸೆಕೆಂಡರಿ ಲೆನ್ಸ್‌ ಹೊಂದಿದೆ. ಇದಲ್ಲದೇ ಲೈವ್‌ ಬೋಕೆ ಫೀಚರ್‌ ಲಭ್ಯವಿದೆ. ಆಗೆಯೇ ಮ್ಯಾನುವಲ್ ಮೋಡ್‌ ಮತ್ತು ಸ್ಲೋ ಮೋಷನ್‌ ಫೀಚರ್‌ಗಳು ಲಭ್ಯವಿವೆ. ಇನ್ನು ಫ್ರಾಂಟ್‌ ಕ್ಯಾಮೆರಾ ವಿಷಯಕ್ಕೆ ಬಂದರೆ 8MP ಸೆನ್ಸಾರ್ ಹೊಂದಿದ್ದು, ಬೋಕೆ ಫೀಚರ್‌ ಮತ್ತು ಸ್ಕ್ರೀನ್‌ ಫ್ಲಾಶ್‌ ಲಭ್ಯವಿದೆ.


 • ಬ್ಯಾಟರಿ

  ನೋಕಿಯಾ 3.1 ಪ್ಲಸ್‌ ಸ್ಮಾರ್ಟ್‌ಫೋನ್‌ 3,500 mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ದೀರ್ಘ ಕಾಲದ ಬಾಳಿಕೆಯನ್ನು ಹೊಂದಿರುತ್ತದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸಾರ್‌ ಇದ್ದು, ಭದ್ರತೆಗೆ ಮತ್ತೊಂದು ಆಯ್ಕೆ ಸಿಕ್ಕಂತಾಗಿದೆ. ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್‌ 8.1 ಒರಿಯೋ ಒಎಸ್‌ನ ಸ್ಟಾಕ್‌ ಆವೃತ್ತಿಯಿಂದ ಕಾರ್ಯನಿರ್ವಹಿಸುತ್ತದೆ.

  ನೋಕಿಯಾ 3.1 ಪ್ಲಸ್‌ ಕುರಿತ ಇನ್ನು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ..


 • ಹೇಗಿದೆ ನೋಕಿಯಾ 8110..?

  ನೋಕಿಯಾ 8110 ಫೀಚರ್ ಫೋನ್‌ 4G LTE ಸಂಪರ್ಕ ಹೊಂದಿದ್ದು, ಕರ್ವಡ್‌ ಬ್ಯಾಕ್‌ ವಿನ್ಯಾಸ ಮತ್ತು ಸ್ಲೈಡ್‌-ಔಟ್‌ ಕೀಬೋರ್ಡ್‌ ಕವರ್‌ ಹೊಂದಿದೆ. ಸ್ಲೈಡ್‌ ಅಪ್‌ ಫೋನ್‌ ಆಗಿರುವ ನೋಕಿಯಾ 8110 ಮೊಬೈಲ್‌ 2.45 ಇಂಚ್‌ QVGA ಬಣ್ಣದ ಡಿಸ್‌ಪ್ಲೇ ಹೊಂದಿದ್ದು, KaiOSನಿಂದ ಕಾರ್ಯನಿರ್ವಹಿಸುತ್ತದೆ.


 • ಪ್ರೊಸೆಸರ್‌

  ನೋಕಿಯಾ 8110 ಮೊಬೈಲ್‌ 1.1GHz ಕಾರ್ಯನಿರ್ವಹಣೆ ವೇಗ ಹೊಂದಿದ್ದು, ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 205 ಡ್ಯುಯಲ್ ಕೋರ್‌ ಪ್ರೊಸೆಸರ್ ಹೊಂದಿದೆ. ಮತ್ತು 512MB RAM ಮತ್ತು 4GB ಆಂತರಿಕ ಸ್ಟೋರೆಜ್‌ ಹೊಂದಿದ್ದು, ಮೈಕ್ರೋ SD ಕಾರ್ಡ್‌ ಮೂಲಕ 128GBವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದು.


 • ಮತ್ತೇನು ಫೀಚರ್ ಇದೆ..?

  ನೋಕಿಯಾ 8110ದಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್‌, ಯೂಟ್ಯೂಬ್‌ ಮತ್ತು ಟ್ವಿಟ್ಟರ್‌ಗಳು ಬೆಂಬಲಿಸಲಿವೆ. ಗೂಗಲ್‌ ಮ್ಯಾಪ್ಸ್‌ ಹಾಗೂ ಗೂಗಲ್‌ ಅಸಿಸ್ಟಂಟ್‌ ಮತ್ತು ಜನಪ್ರಿಯ ಗೇಮ್‌ ಸ್ನೇಕ್‌ ಕೂಡ ಇದೆ. 2MP ರಿಯರ್ ಕ್ಯಾಮೆರಾ ಹೊಂದಿದ್ದು, ಸಿಂಗಲ್‌ LED ಫ್ಲಾಶ್‌ ಹೊಂದಿದೆ. ಇನ್ನು ಬ್ಯಾಟರಿ ವಿಷಯಕ್ಕೆ ಬಂದರೆ 1,500 mAh ಬ್ಯಾಟರಿ ಹೊಂದಿದೆ.


 • ಬೆಲೆ ಎಷ್ಟು ಗೊತ್ತಾ..?

  ನೋಕಿಯಾ 3.1 ಪ್ಲಸ್‌ ಭಾರತದಲ್ಲಿ ₹11,499ಕ್ಕೆ ಮಾರಾಟವಾಗಲಿದ್ದು, ಜಾಗತಿಕವಾಗಿ 159 ಯುರೋಗೆ ಮಾರಾಟವಾಗುತ್ತಿದೆ. ಇದರ ಜತೆ ಏರ್‌ಟೆಲ್‌ ಗ್ರಾಹಕರು ₹ 199 ಮತ್ತು ಅದಕ್ಕಿಂತ ಹೆಚ್ಚಿನ ರೀಚಾರ್ಜ್‌ ಮಾಡಿಸಿದರೆ 1TB ಡೇಟಾವನ್ನು ಉಚಿತವಾಗಿ ಪಡೆಯಲಿದ್ದಾರೆ. ಇನ್ನು ನೋಕಿಯಾ 8110 4G ಫೀಚರ್‌ ಫೋನ್‌ ₹ 5,999ಕ್ಕೆ ಗ್ರಾಹಕನ ಕೈ ಸೇರಲಿದೆ.


 • ಯಾವಾಗ ಮಾರಾಟ..?

  ಹೊಸ ಫೋನ್‌ಗಳೆರಡೂ ಇದೇ ತಿಂಗಳಲ್ಲಿ ಮಾರಾಟ ಆರಂಬಿಸಲಿದ್ದು, ನೋಕಿಯಾ 3.1 ಪ್ಲಸ್‌ ಅಕ್ಟೋಬರ್ 19ರಿಂದ ಮಾರಾಟ ಆರಂಭಿಸಿದರೆ, ನೋಕಿಯಾ 8110 ಫೀಚರ್‌ ಫೋನ್‌ ಅಕ್ಟೋಬರ್ 24ರಿಂದ ಖರೀದಿಗೆ ಲಭ್ಯವಾಗಲಿದೆ. ಮೊಬೈಲ್‌ ಮಾರುಕಟ್ಟೆಯಲ್ಲಿ ಬಹಳಷ್ಟು ಸ್ಪರ್ಧೆ ಇರುವಾಗ ಜನ ಈ ಫೋನ್‌ಗಳನ್ನು ಇಷ್ಟ ಪಡುತ್ತಾರಾ..? ಉತ್ತರಕ್ಕೆ ಕಾದು ನೋಡಬೇಕು..
ಜನರಿಗೆ ಮೊಬೈಲ್‌ ಮಾರುಕಟ್ಟೆಯಲ್ಲಿ ಒಂದು ಕಾಲದ ನಂಬಿಕೆಯಾಗಿದ್ದ ನೋಕಿಯಾ ಮತ್ತೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಮುಂದಾಗುತ್ತಿದೆ. ಕಾಲ ಬದಲಾದಂತೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಧುಮುಕುತ್ತಿರುವ ನೋಕಿಯಾ ಪ್ರಮುಖ ಕಂಪನಿಗಳಿಗೆ ಸ್ಪರ್ಧೆ ನೀಡುತ್ತಿದೆ. ಹೌದು, ಇತ್ತೀಚೆಗೆ ತಾನೇ ನೋಕಿಯಾ 5.1 ಪ್ಲಸ್‌ ಮತ್ತು 6.1 ಪ್ಲಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದ ನೋಕಿಯಾ ಈಗ ಭಾರತೀಯ ಮಾರುಕಟ್ಟೆಗ ಮತ್ತೆರಡು ಮೊಬೈಲ್‌ಗಳನ್ನು ಬಿಡುಗಡೆ ಮಾಡಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿದೆ.

ಹೌದು, ವರ್ಷದ ಆರಂಭದಲ್ಲಿ ಬಾರ್ಸಿಲೋನಾದಲ್ಲಿ ನಡೆದಿದ್ದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರವೇಶ ಮಾಡಿದ್ದ ಆರಂಭಿಕ ಮಟ್ಟದ 4G ಫೀಚರ್‌ ಫೋನ್‌ ನೋಕಿಯಾ 8110 ಮತ್ತು ಮಧ್ಯಮ ಬೆಲೆಯ ನೋಕಿಯಾ 3.1 ಪ್ಲಸ್‌ನ್ನು ಭಾರತೀಯ ಮಾರುಕಟ್ಟೆಗೆ ಇಂದು ಬಿಡುಗಡೆಗೊಳಿಸಿದ್ದು, ನೋಕಿಯಾ 3.1 ಪ್ಲಸ್‌ ಬೆಜೆಲ್‌ ಲೆಸ್‌ ಡಿಸ್‌ಪ್ಲೇ ಮತ್ತು ಡ್ಯುಯಲ್ ರಿಯರ್‌ ಕ್ಯಾಮೆರಾ ಹೊಂದಿರುವುದು ವಿಶೇಷವಾಗಿದೆ. ಎರಡು ಫೋನ್‌ಗಳು ಏನೆಲ್ಲಾ ಫೀಚರ್‌ ಹೊಂದಿವೆ..? ಯಾವಾಗ ಮಾರಾಟ..? ಏನೇನು ಲಾಂಚಿಂಗ್‌ ಆಫರ್‌ಗಳಿವೆ ಎಂಬುದನ್ನು ಮುಂದೆ ನೋಡಿ.

   
 
ಹೆಲ್ತ್