Back
Home » ಸಿನಿ ಸಮಾಚಾರ
'ಕೆ ಜಿ ಎಫ್' ಚಿತ್ರವನ್ನು ವಿತರಣೆ ಮಾಡಲು ಹೆಮ್ಮೆ ಇದೆ ಎಂದ ಬಾಲಿವುಡ್ ನಟ
Oneindia | 11th Oct, 2018 06:52 PM
 • ಚಿತ್ರದ ಹಕ್ಕು ಪಡೆದ ಫರ್ಹಾನ್ ಅಕ್ತರ್

  'ಕೆ ಜಿ ಎಫ್' ಸಿನಿಮಾದ ಹಿಂದಿ ವಿತರಣೆ ಹಕ್ಕನ್ನು ಬಾಲಿವುಡ್ ನಟ ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ''ಕೆ ಜಿ ಎಫ್' ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ವಿತರಣೆ ಮಾಡಲು ಹೆಮ್ಮೆ ಆಗುತ್ತಿದೆ'' ಎಂದಿದ್ದಾರೆ.


 • ಬಿಡುಗಡೆಯ ದಿನಾಂಕ ಮುಂದಕ್ಕೆ

  ಇದೇ ಕಾರಣದಿಂದ ಸಿನಿಮಾದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ನವೆಂಬರ್ ಗೆ ರಿಲೀಸ್ ಆಗಬೇಕಿದ್ದ ಚಿತ್ರ ಈಗ ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ. ನವೆಂಬರ್ ನಲ್ಲಿ ಸಿನಿಮಾದ ಟ್ರೇಲರ್ ಬಿಡುಗಡೆ ಆಗಲಿದೆ.


 • ಯಶ್ ಕೆರಿಯರ್ ನಲ್ಲಿ ಇದೇ ಮೊದಲು

  ಯಶ್ ಅಭಿನಯದ ಈ ಹಿಂದಿನ ಯಾವ ಚಿತ್ರಗಳು ಒಮ್ಮೆ ರಿಲೀಸ್ ಡೇಟ್ ಘೋಷಣೆ ಮಾಡಿ, ಮತ್ತೆ ಬದಲಾಯಿಸಿದ ಉದಾಹರಣೆಗಳಿಲ್ಲ. ಆದ್ರೆ, ಕೆಜಿಎಫ್ ಚಿತ್ರದ ತುಂಬಾ ದೊಡ್ಡದು, ದೊಡ್ಡ ಬಜೆಟ್ ನಲ್ಲಿ ಮೂಡಿಬರ್ತಿರುವ ಕಾರಣ ಎಲ್ಲವನ್ನೂ ನಿರ್ಧರಿಸಿ ಡಿಸೆಂಬರ್ ಗೆ ಹೋಗ್ತಿದ್ದೀವಿ ಎಂದು ಸ್ವತಃ ಯಶ್ ಖಚಿತಪಡಿಸಿದ್ದಾರೆ.


 • 5 ಭಾಷೆಗಳಲ್ಲಿ ಚಿತ್ರ ರಿಲೀಸ್

  ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ 'ಕೆಜಿಎಫ್' ಚಿತ್ರ ತೆರೆಗೆ ಬರಲಿದೆ. ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್ ನಲ್ಲಿ ಚಿತ್ರ ನಿರ್ಮಾಣವಾಗಿದೆ. ಶ್ರೀನಿಧಿ ಶೆಟ್ಟಿ ಚಿತ್ರದ ನಾಯಕಿ.
ಒಂದು ಕಡೆ 'ದಿ ವಿಲನ್' ಮತ್ತೊಂದು ಕಡೆ 'ಕೆ ಜಿ ಎಫ್' ಈ ಎರಡೂ ಸಿನಿಮಾಗಳು ಈಗ ಸುದ್ದಿಯ ಮೇಲೆ ಸುದ್ದಿ ಮಾಡುತ್ತಿವೆ. ಅದರಲ್ಲಿಯೂ 'ಕೆ ಜಿ ಎಫ್' ಸಿನಿಮಾ ಈಗ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ.

ಹಿಂದಿ ಚಿತ್ರರಂಗದ ಖ್ಯಾತ ನಟ ಸಿನಿಮಾದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಈ ಕಾರಣದಿಂದ ಸಿನಿಮಾ ಬಿಡುಗಡೆಯ ದಿನಾಂಕ ಕೂಡ ಮುಂದಕ್ಕೆ ಹೋಗಿದೆ. ಬಾಲಿವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಪ್ಲಾನ್ ನಡೆಯುತ್ತಿದೆ.

'ಕೆಜಿಎಫ್' ರಿಲೀಸ್ ದಿನಾಂಕ ಮುಂದಕ್ಕೆ ಹೋಗಲು 'ಬಾಲಿವುಡ್' ಕಾರಣ

ಸೌತ್ ಇಂಡಿಯಾದ 'ಬಾಹುಬಲಿ' '2.0' ರೀತಿಯ ಸಿನಿಮಾಗಳು ಯಾವ ರೀತಿ ಹಿಂದಿ ಭಾಷೆಗಳ ಎದುರು ನಿಲ್ಲುತ್ತಿದೆಯೋ ಅದೇ ರೀತಿ 'ಕೆ ಜಿ ಎಫ್' ಕೂಡ ಸಕಲ ರೀತಿಯಾಗಿ ಸಜ್ಜಾಗಿದೆ. ಮುಂದೆ ಓದಿ...

   
 
ಹೆಲ್ತ್