Back
Home » ಇತ್ತೀಚಿನ
ಮಾರ್ಗ ಮಧ್ಯೆಯೇ ಕೆಟ್ಟುನಿಂತಿತು ಗಗನಯಾತ್ರಿಗಳನ್ನು ಹೊತ್ತಿದ್ದ 'ರಾಕೆಟ್'!!
Gizbot | 11th Oct, 2018 05:28 PM

ಗಗನಯಾತ್ರಿಗಳನ್ನು ಹೊತ್ತು ನಭಕ್ಕೆ ಚಿಮ್ಮಿದ ರಾಕೆಟ್ ಒಂದು ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆಯೇ ಕೆಟ್ಟು ನಿಂತಿದ್ದ ಆತಂಕದ ಘಟನೆ ಇಂದು ನಡೆದಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಸ್ಪೇಸ್ ಏಜೆನ್ಸಿಗೆ ಸೇರಿದ ರಾಕೆಟ್ ಮಾರ್ಗ ಮಧ್ಯೆಯೇ ತಾಂತ್ರಿಕ ದೋ‍ಷಕ್ಕೆ ತುತ್ತಾಗಿದೆ.

ಗಗನಯಾತ್ರಿಗಳನ್ನು ಹೊತ್ತು ರಷ್ಯಾದ 'ಬೈಕೊನುರ್ ಕಾಸ್ಮೋಡ್ರೋಮ್' ಅಂತರಿಕ್ಷ ನೌಕಾ ನೆಲೆಯಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್ಎಸ್) ಇಂದು (ಗುರುವಾರ)( ಉಡಾವಣೆಗೊಂಡಿದ್ದ ರಾಕೆಟ್‌ ಮಾರ್ಗ ಮಧ್ಯೆ ವಿಫಲಗೊಂಡು ತುರ್ತು ಭೂ ಸ್ಪರ್ಶ ಮಾಡಿದೆ. ರಾಕೆಟ್‌ನಲ್ಲಿದ್ದ ಇಬ್ಬರೂ ಗಗನಯಾತ್ರಿಗಳು ಸುರಕ್ಷಿತವಾಗಿರುವುದು ತಿಳಿದುಬಂದಿದೆ.

ತಾಂತ್ರಿಕ ದೋಷದಿಂದ ಮಾರ್ಗ ಮಧ್ಯೆಯೇ ರಾಕೆಟ್ ಕೆಟ್ಟು ನಿಂತರೂ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೊರಟಿದ್ದ ನಾಸಾದ ನಿಕ್ ಹಾಗ್ಯೂ ಮತ್ತು ಅಲೆಸ್ಕಿ ಓವಿಶಿನಿನ್ ಗಗನಯಾತ್ರಿಗಳು ಸುರಕ್ಷತವಾಗಿರುವ ಬಗ್ಗೆ ನಾಸಾ ಟ್ವಿಟ್ಟಿಸಿರುವ ಟ್ವಿಟ್ ಮೂಲಕ ತಿಳಿದುಬಂದಿದೆ.ಬಾಹ್ಯಾಕಾಶ ಕ್ಷೇತ್ರವನ್ನು ಕೆಲಹೊತ್ತು ಆತಂಕಕ್ಕೆ ತಳ್ಳಿದ ಘಟನೆ ಈಗ ಸುಖಾಂತ್ಯವಾಗಿದೆ.

ತಾಂತ್ರಿಕ ದೋಷ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ರಾಕೆಟ್ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿದೆ. ಇದರಿಂದ ಕೆಲಕಾಲ ವಿಚಲಿತರಾದ ಗಗನಯಾತ್ರಿಗಳು, ಎಮರ್ಜೆನ್ಸಿ ಲ್ಯಾಂಡಿಂಗ್‌ ಆಯ್ಕೆ ಬಳಸಿ ಸುರಕ್ಷಿತವಾಗ ಭೂಮಿಗೆ ವಾಪಸಾಗಿದ್ದಾರೆ. ರಾಕೆಟ್‌ ವಿಫಲವಾದಾಗ ವ್ಯೂಮನೌಕೆಯ ಒಳಗೆ ಗಗನಯಾತ್ರಿಗಳು ಪರದಾಡಿದ ದೃಶ್ಯ ಕೂಡ ವಿಡಿಯೋದಲ್ಲಿ ದಾಖಲಾಗಿದೆ.

ಯಶಸ್ವಿಯಾಗಿ ಉಡಾವಣೆಗೊಂಡ ರಾಕೆಟ್‌ ಆರಂಭದಲ್ಲಿ ನಿರೀಕ್ಷೆಯಂತೆ ಪಥದಲ್ಲಿ ಚಲಿಸಿತಾದರೂ, ಮಾರ್ಗ ಮಧ್ಯೆ 'ಬೂಸ್ಟರ್ ರಾಕೆಟ್‌' ಚಾಲನೆ ವಿಫಲವಾಯಿತು ಎನ್ನಲಾಗಿದೆ. ಕೂಡಲೇ ರಾಕೆಟ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದ ಗಗನಯಾತ್ರಿಗಳು, ರಾಕೆಟ್ ಅನ್ನು ಸುರಕ್ಷಿತವಾಗಿ ಕಜಾಕಿಸ್ತಾನದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಓದಿರಿ: ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಮಿಂಚುಹರಿಸಿದ 'ಶಿಯೋಮಿ ಮಿ8'!..ಸೇಲ್ ಆಗಿದ್ದು ಎಷ್ಟು ಗೊತ್ತಾ?

   
 
ಹೆಲ್ತ್