Back
Home » ಇತ್ತೀಚಿನ
ಹಬ್ಬದ ಸೇಲ್‌ನಲ್ಲಿ ಯಾರಿಗೆ ಲಾಭ..? ಅಮೆಜಾನ್‌ಗೋ ಅಥವಾ ಫ್ಲಿಪ್‌ಕಾರ್ಟ್‌ಗೋ..?
Gizbot | 11th Oct, 2018 05:04 PM
 • ಕಳೆದ ವರ್ಷಕ್ಕಿಂತ ಹೆಚ್ಚು ಸೇಲ್:

  ಕಳೆದ ವರ್ಷದ ಇವೆಂಟ್ ಗೆ ಹೋಲಿಸಿದರೆ ಈ ವರ್ಷ ಫ್ಲಿಪ್ ಕಾರ್ಟ್ 4 ಪಟ್ಟು ಹೆಚ್ಚು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಮಾರಾಟವಾಗುವ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.ಅಮೇಜಾನ್ ಕೂಡ ಈ ನಿಟ್ಟಿನಲ್ಲಿ ದೊಡ್ಡ ಮಟ್ಟದ ಬೆಳವಣಿಗೆಯನ್ನು ನಿರೀಕ್ಷೆ ಮಾಡಿದೆ ಮತ್ತು ಅನೇಕ ಆಫರ್ , ರಿಯಾಯಿತಿಯನ್ನು ನೀಡುತ್ತಿದೆ. ಐಫೋನ್ ಎಕ್ಸ್(64ಜಿಬಿ ) ಫೋನ್ ಗೆ ಹೆಚ್ಚು ಕಡಿಮೆ 22,000 ರುಪಾಯಿ ರಿಯಾಯಿತಿ ಮತ್ತು ಕ್ಯಾಷ್ ಬ್ಯಾಕ್ ಇದೆ. ಒನ್ ಪ್ಲಸ್ 6 ಫೋನಿಗೆ 5,000 ರುಪಾಯಿ ರಿಯಾಯಾತಿಯನ್ನು ನೀಡಲಾಗುತ್ತಿದೆ. ಅಕ್ಟೋಬರ್ 10 ರಿಂದ ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಎರಡೂ ಕೂಡ ಸೀಸನ್ ಸೇಲ್ ನ್ನು ಆರಂಭವಿಸಿದೆ.


 • 10-15 ಸಾವಿರ ಬೆಲೆಯ ಫೋನ್ ಗಳ ಮಾರಾಟ ಅಧಿಕ:

  ತಜ್ಞರು ಅಭಿಪ್ರಾಯ ಪಡುವಂತೆ ಈ ಬಾರಿಯ ಸೇಲ್ ನಲ್ಲಿ 10,000 ದಿಂದ 15,000 ಬೆಲೆಯ ಫೋನ್ ಗಳು ಹೆಚ್ಚು ಮಾರಾಟಗೊಳ್ಳಲಿದೆ.ಕಳೆದ ಈ ಫ್ಲ್ಯಾಟ್ ಫಾರ್ಮ್ ಗಳಲ್ಲಿ ಮಾರಾಟಗೊಂಡ ಹೆಚ್ಚು ಫೋನ್ ಗಳ ಬೆಲೆಯು 10,000 ರುಪಾಯಿ ಒಳಗೆ ಇತ್ತು. ಅಮೇಜಾನ್ ಗೆ ಹೋಲಿಸಿದರೆ ಈ ಬಾರಿಯ ಸೇಲ್ ನಲ್ಲಿ ಫ್ಲಿಪ್ ಕಾರ್ಟ್ ಹೆಚ್ಚು ಫೋನ್ ಗಳನ್ನು ಮಾರಾಟ ಮಾಡುವ ನಿರೀಕ್ಷೆ ಇದೆಯಂತೆ.ಯಾಕೆಂದರೆ ಫ್ಲಿಪ್ ಕಾರ್ಟ್ ನಲ್ಲಿ ಹೆಚ್ಚು ಆಫರ್ ಗಳನ್ನು ಸ್ಮಾರ್ಟ್ ಫೋನ್ ಗಳ ಮೇಲೆ ನೀಡಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಫಾರೆಸ್ಟರ್ ರೀಸರ್ಚ್ ಅನಲಿಸ್ಟ್ ಆಗಿರುವ ಸತೀಷ್ ಮೀನಾ.


 • ಯಾವುದರಲ್ಲಿ ಹೆಚ್ಚು ಎಕ್ಸ್ ಕ್ಲೂಸೀವ್ ಫೋನ್ ಗಳು:

  ಮಾರ್ಕೆಟ್ ರೀಚರ್ಸ್ ಫರ್ಮ್ ಆಗಿರುವ ಟೆಕ್ ಆರ್ಕ್ ಹೇಳುವಂತೆ ಫ್ಲಿಪ್ ಕಾರ್ಟ್ ಸುಮಾರು 70 ಸ್ಮಾರ್ಟ್ ಫೋನ್ ಗಳನ್ನು ಎಕ್ಸ್ ಕ್ಲೂಸೀವ್ ಆಗಿ ಮಾರಾಟ ಮಾಡಲು ಸಹಭಾಗಿತ್ವ ಪಡೆದಿದೆ ಅದೇ ಅಮೇಜಾನ್ ಕೇವಲ 40 ಎಕ್ಸ್ ಕ್ಲೂಸೀವ್ ಸ್ಮಾರ್ಟ್ ಫೋನ್ ಗಳನ್ನು ಹೊಂದಿದೆ.


 • ಕಡಿಮೆ ಮಾರಾಟದ ಲೆಕ್ಕಾಚಾರ ಒಪ್ಪದ ಅಮೇಜಾನ್:

  ಎಕ್ಸ್ ಕ್ಲೂಸೀವ್ ಫೋನ್ ಗಳು ಎಷ್ಟಿದೆ ಎಂಬುದನ್ನು ಹೋಲಿಸಿ ಫೋನಿನ ಗುಣಮಟ್ಟ ಮತ್ತು ಪ್ರಸಿದ್ಧತೆಯನ್ನು ಅರಿಯದೇ ಚರ್ಚೆ ಮಾಡುವುದು ಸೇಬು ಮತ್ತು ಕಿತ್ತಲೆ ಹಣ್ಣನ್ನು ಹೋಲಿಕೆ ಮಾಡಿದಂತೆಯೇ ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಮೇಜಾನ್ ಸಂಸ್ಥೆಯ ಕೆಟಗರಿ ಮ್ಯಾನೇಜ್ ಮೆಂಟ್ ನ ಉಪಾದ್ಯಕ್ಷರಾಗಿರುವ ಮನೀಶ್ ತಿವಾರಿ. ಅಷ್ಟೇ ಅಲ್ಲ ನಮ್ಮ ಬಳಿ ಉತ್ತಮ ಮಾರಾಟ ಕಾಣುವ ಬೆಸ್ಟ್ ಫೋನ್ ಗಳು ಉತ್ತಮ ಬೆಲೆಯಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ. ರೆಡ್ಮಿ 6ಎ ಭಾರತದಲ್ಲಿ ಉತ್ಯುತ್ತಮವಾಗಿ ಮಾರಾಟವಾಗುವ ಫೋನ್ ಆಗಿದೆ ಎಂದಿದ್ದಾರೆ.
ತಜ್ಞರು ಅಭಿಪ್ರಾಯ ಪಡುವಂತೆ ಈ ಬಾರಿ ಆನ್ ನೈಲ್ ಶಾಪಿಂಗ್ ಮಾಡುವ ಗ್ರಾಹಕರು ಹೆಚ್ಚು ಬೆಲೆಯ ಸ್ಮಾರ್ಟ್ ಫೋನ್ ಗಳನ್ನು ಅಮೇಜಾನ್ ಮತ್ತು ಫ್ಲಿಪ್ ಕಾರ್ಟ್ ಫೇಸ್ಟೀವ್ ಸೀಸನ್ ಸೇಲ್ ನಲ್ಲಿ ಖರೀದಿಸಲು ಆಸಕ್ತರಾಗಿದ್ದಾರೆ. ಯಾಕೆಂದರೆ ಹಲವು ರೀತಿಯ ರಿಯಾಯಿತಿಗಳು ಮತ್ತು ವಿಭಿನ್ನ ಹಾಗೂ ಸುಲಭದ ಪಾವತಿ ಆಯ್ಕೆಗಳು ಇರುವುದರಿಂದಾಗಿ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಖರೀದಿ ಮಾಡಲು ಗ್ರಾಹಕರು ಹೆಚ್ಚೆಚ್ಚು ಆಸಕ್ತಿ ವಹಿಸುತ್ತಿದ್ದಾರೆ.

   
 
ಹೆಲ್ತ್