Back
Home » ಸಮ್ಮಿಲನ
ಭಾರತದ ಈ ಎಂಟು ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶ ನಿಷೇಧ ಮಾಡಲಾಗಿದೆಯಂತೆ!
Boldsky | 11th Oct, 2018 05:16 PM
 • 1. ಅಟ್ಟುಕಲ್ ಮಂದಿರ

  ಕೇರಳದ ಅಟ್ಟುಕಲ್ ಭಗವತಿ ಮಂದಿರದಲ್ಲಿ ಮಹಿಳೆಯರೇ ಪೂಜೆಗಳನ್ನು ನಡೆಸುವರು. ಈ ದೇವಾಲಯದಲ್ಲಿ ಸುಮಾರು ಮೂರು ಮಿಲಿಯನ್ ಮಹಿಳೆಯರು ಸೇರಿ ಪೊಂಗಲ್ ಆಚರಣೆ ಮಾಡಿ ಗಿನ್ನಿಸ್ ದಾಖಲೆಗೆ ಸೇರಿದ್ದಾರೆ. ಹಬ್ಬದ ವೇಳೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಸೇರುವ ಕಾರಣದಿಂದಾಗಿ ಪುರುಷರಿಗೆ ಇಲ್ಲಿ ಪ್ರವೇಶವಿಲ್ಲ


 • 2. ಚಕ್ಕುಲತುಕವು ಮಂದಿರ

  ಕೇರಳದಲ್ಲಿ ಭಗವತಿ ದೇವಿಯ ಮತ್ತೊಂದು ಮಂದಿರ ಚಕ್ಕುಲತುಕವು ಮತ್ತು ಇಲ್ಲಿ ವಾರ್ಷಿಕವಾಗಿ ನಾರಿ ಪೂಜೆಯನ್ನು ಮಾಡಲಾಗುತ್ತದೆ. ಇಲ್ಲಿ ಪುರುಷ ಅರ್ಚಕರು, ಡಿಸೆಂಬರ್ ಮೊದಲ ವಾರದ ಶುಕ್ರವಾರದಿಂದ 10 ದಿನಗಳ ಕಾಲ ಉಪವಾಸ ಮಾಡುವ ಮಹಿಳಾ ಭಕ್ತರ ಪಾದ ತೊಳೆಯುವರು. ಈ ದಿನವನ್ನು ಧನು ಎಂದು ಕರೆಯಲಾಗುತ್ತದೆ. ನಾರಿ ಪೂಜೆಯ ಸಮಯದಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶವಿರುವುದು.

  Most Read: ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!


 • 3.ಸಂತೋಷಿ ಮಾ ವೃತ

  ಸಂತೋಷಿ ಮಾ ವೃತವನ್ನು ಮಹಿಳೆಯರು ಅಥವಾ ಅವಿವಾಹಿತ ಹುಡುಗಿಯರು ಮಾತ್ರ ಕೈಗೊಳ್ಳುವರು. ಈ ವೇಳೆ ಹುಳಿ ಹಣ್ಣು ಅಥವಾ ಉಪ್ಪಿನಕಾಯಿ ಸೇವಿಸಬಾರದು. ದೇವಿಯನ್ನು ಪೂಜಿಸಲು ಇಲ್ಲಿಗೆ ಪುರುಷರು ಪ್ರವೇಶಿಸಬಹುದು. ಆದರೆ ಶುಕ್ರವಾರಂದು ಪುರುಷರಿಗೆ ಸಂಪೂರ್ಣ ನಿಷೇಧವಿದೆ.


 • 4. ಬ್ರಹ್ಮ ದೇವರ ದೇವಾಲಯ

  ರಾಜಸ್ಥಾನದ ಪುಷ್ಕರ್ ನಲ್ಲಿ ಈ ಮಂದಿರವಿದೆ. ವಿವಾಹಿತ ಪುರುಷರಿಗೆ ಈ ದೇವಾಲಯಕ್ಕೆ ಪ್ರವೇಶ ನಿಷಿದ್ಧ. ಇದು ವಿಶ್ವದಲ್ಲಿರುವ ಏಕೈಕ ಬ್ರಹ್ಮ ದೇವಾಲಯವಾಗಿದೆ. ಬ್ರಹ್ಮ ದೇವರು ಪುಷ್ಕರ ಸರೋವರದಲ್ಲಿ ಯಜ್ಞವೊಂದನ್ನು ಆಯೋಜಿಸುವರು. ಆದರೆ ಅವರ ಪತ್ನಿ ಸರಸ್ವತಿ ಇಲ್ಲಿಗೆ ಆಗಮಿಸಲು ವಿಳಂಬ ಮಾಡುವರು. ಇದರಿಂದ ಬ್ರಹ್ಮ ದೇವರು ಗಾಯತ್ರಿ ದೇವಿಯನ್ನು ಮದುವೆಯಾಗುವರು ಮತ್ತು ವಿಧಿವಿಧಾನಗಳನ್ನು ಪೂರೈಸುವರು. ಇದರಿಂದ ಕೋಪಿತರಾದ ಸರಸ್ವತಿ ದೇವಿಯು ಈ ದೇವಾಲಯಕ್ಕೆ ವಿವಾಹಿತ ಪುರುಷರು ಪ್ರವೇಶಿಸಬಾರದು ಮತ್ತು ಹಾಗೊಂದು ವೇಳೆ ಪ್ರವೇಶಿಸಿದರೆ ಅವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಎಂದು ಶಾಪ ನೀಡುವರು. ಈ ಕಾರಣದಿಂದಾಗಿ ಇಲ್ಲಿಗೆ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ.

  Most Read: ಆಯುರ್ವೇದದ ಮೂಲಕ 'ಬಾಡಿ ಹೀಟ್' ಕಡಿಮೆ ಮಾಡಲು ಸರಳ ಟಿಪ್ಸ್


 • 5. ಭಗತಿ ಮಾ ಮಂದಿರ

  ಈ ಮಂದಿರವು ಕನ್ಯಾಕುಮಾರಿಯಲ್ಲಿದೆ. ಕನ್ಯಾ ಮಾತೆ ಭಗವತಿ ದುರ್ಗೆಯು ಸಮುದ್ರ ನಡುವಿನ ಏಕಾಂತ ಪ್ರದೇಶಕ್ಕೆ ಹೋಗಿ ಶಿವನು ತನ್ನ ಪತಿಯಾಗಬೇಕೆಂದು ತಪಸ್ಸನ್ನು ಆಚರಿಸುವರು. ಪುರಾಣಗಳ ಪ್ರಕಾರ ಸತಿಯ ಬೆನ್ನುಹುರಿಯು ಈ ದೇವಾಲಯದಲ್ಲಿ ಬೀಳುತ್ತದೆ. ಈ ದೇವಿಯನ್ನು ಸನ್ಯಾಸ ದೇವಿಯೆಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ ಸನ್ಯಾಸಿ ಪುರುಷರಿಗೆ ಮಂದಿರದ ಆವರಣದ ತನಕ ಮಾತ್ರ ಪ್ರವೇಶವಿದೆ. ಆದರೆ ವಿವಾಹಿತ ಪುರುಷರಿಗೆ ಸಂಪೂರ್ಣ ನಿಷೇಧವಿದೆ.

  Most Read: ಈ 5 ಲೋಹಗಳ ಪಾತ್ರೆಗಳಲ್ಲಿ ಅಡುಗೆ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ!


 • 6.ಮಾತಾ ಮಂದಿರ

  ಬಿಹಾರದ ಮುಝಫ್ಫರಪುರದಲ್ಲಿರುವ ಈ ಮಂದಿರಕ್ಕೆ ಕೆಲವು ನಿರ್ದಿಷ್ಟ ದಿನಗಳಂದು ಪುರುಷರಿಗೆ ಪ್ರವೇಶ ನಿರಾಕರಿಸಲಾಗಿದೆ. ಮಂದಿರದ ಒಳಗೆ ಪುರುಷ ಅರ್ಚಕರಿಗೂ ಪ್ರವೇಶವಿಲ್ಲ. ಕೆಲವು ದಿನಗಳಲ್ಲಿ ಮಹಿಳೆಯರಿಗೆ ಮಾತ್ರ ಇಲ್ಲಿಗೆ ಪ್ರವೇಶ.


 • 7. ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ತೃಂಭಕೇಶ್ವರ ಮಂದಿರ

  ಶಿವ ದೇವರ ಈ ದೇವಾಲಯದ ಗರ್ಭಗುಡಿಗೆ 2016ರ ತನಕ ಮಹಿಳೆಯರಿಗೆ ಪ್ರವೇಶಿಸಲು ಅವಕಾಶವಿರಲಿಲ್ಲ. ಆದರೆ ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಪುರುಷರು ಕೂಡ ಗರ್ಭಗುಡಿ ಭಾಗಕ್ಕೆ ತೆರಳಬಾರದು. ಇದರ ಬಳಿಕ ಪುರುಷರಿಗೂ ಇಲ್ಲಿನ ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿಲ್ಲ.


 • 8. ಅಸ್ಸಾಂನ ಕಾಮರೂಪ ಕಾಮಕಾಯ ಮಂದಿರ

  ಋತುಚಕ್ರದ ವೇಳೆ ಮಾತ್ರ ಮಹಿಳೆಯರು ಈ ಮಂದಿರಕ್ಕೆ ಪ್ರವೇಶಿಸಬಹುದಾಗಿದೆ. ಇಲ್ಲಿ ಮಹಿಳಾ ಅರ್ಚಕಿಯರು ಅಥವಾ ಸನ್ಯಾಸಿನಿಗಳು ಮಾತ್ರ ಪೂಜೆ ಮಾಡುವರು. ಮಾ ಸತಿಯ ಋತುಚಕ್ರದ ಬಟ್ಟೆಯು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ ಮತ್ತು ಇದನ್ನು ಭಕ್ತರಿಗೂ ಹಂಚಲಾಗುತ್ತದೆ. ವಿಷ್ಣು ದೇವರು ಮಾ ಸತಿಯನ್ನು ತನ್ನ ಸುದರ್ಶನ ಚಕ್ರದಿಂದ ತುಂಡು ಮಾಡುವರು. ಈ ವೇಳೆ ಅವರ ಮೊಣಕೈಯು ಈ ಮಂದಿರ ಇರುವ ಜಾಗಕ್ಕೆ ಬಿತ್ತು ಮತ್ತು ಅಲ್ಲಿ ಮಂದಿರ ನಿರ್ಮಾಣವಾಗಿದೆ ಎನ್ನುವ ನಂಬಿಕೆಯಿದೆ.

  All Image Source
ಶಬರಿಮಲೆಯಲ್ಲಿರುವ ಅಯ್ಯಪ್ಪ ಸ್ವಾಮಿ ಮಂದಿರ, ಮಹರಾಷ್ಟ್ರದ ಶನಿ ಸಿಂಗಾಪುರ ಮಂದಿರಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ. ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ಕೂಡ ತೀರ್ಪು ನೀಡಿದೆ. ಇಂತಹ ನಿಷೇಧವು ಮುಂಬಯಿಯ ಹಾಜಿ ಅಲಿ ದರ್ಗಾದಲ್ಲೂ ಇದೆ. ಕೆಲವೊಂದು ಅಡೆತಡೆಗಳ ಬಳಿಕ ಇಲ್ಲಿಗೆ ಮಹಿಳೆಯರು ಪ್ರವೇಶಿಸಬಹುದು ಎಂದು ಹೇಳಲಾಯಿತು.

ಆದರೆ ಮಹಿಳೆಯರಿಗೆ ಕೆಲವು ಮಂದಿರಗಳಿಗೆ ಪ್ರವೇಶವಿಲ್ಲದೆ ಇರುವುದು ನಮ್ಮ ಪುರುಷ ಪ್ರಧಾನ ಸಮಾಜದ ಒಂದು ಸಂಚಿನ ಭಾಗವಾಗಿರಬಹುದು ಅಥವಾ ಇದರ ಹಿಂದೆ ಬೇರೆ ಧಾರ್ಮಿಕ ಕಾರಣಗಳು ಇರಬಹುದು. ಆದರೆ ಭಾರತದಲ್ಲಿರುವಂತಹ ಕೆಲವೊಂದು ದೇವಾಲಯಗಳಿಗೆ ಪುರುಷರಿಗೆ ಪ್ರವೇಶವಿಲ್ಲದೆಂದು ಹೇಳಿದರೆ ನಿಮಗೆ ಅಚ್ಚರಿಯಾಗಬಹುದು. ಕೆಲವೊಂದು ಮಂದಿರಗಳಲ್ಲಿ ಕೆಲವು ದಿನಗಳಲ್ಲಿ ಹಾಗೂ ಇನ್ನು ಕೆಲವು ದೇವಾಲಯಗಳಲ್ಲಿ ಸಂಪೂರ್ಣವಾಗಿ ನಿಷೇಧವಿದೆ. ಇಂತಹ ದೇವಾಲಯಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

   
 
ಹೆಲ್ತ್