Back
Home » ಸಿನಿ ಸಮಾಚಾರ
ವಾಸು ಬಳಿಕ 'ಜಂಟಲ್ ಮನ್' ಜೊತೆ ನಿಶ್ಚಿಕಾ ನಾಯ್ಡು
Oneindia | 11th Oct, 2018 06:04 PM

ನಟಿ ನಿಶ್ಚಿಕಾ ನಾಯ್ಡು ಒಂದರ ನಂತರ ಒಂದರಂತೆ ಸಿನಿಮಾ ಮಾಡುತ್ತಿದ್ದಾರೆ. 'ಅಮ್ಮ ಐ ಲವ್ ಯೂ', 'ಪಡ್ಡೆ ಹುಲಿ' ಹಾಗೂ 'ವಾಸು ನನ್ ಪಕ್ಕಾ ಕಮರ್ಶಿಯಲ್' ಸಿನಿಮಾದಲ್ಲಿ ಈಗಾಗಲೇ ನಿಶ್ಚಿಕಾ ನಟಿಸಿದ್ದಾರೆ.

ಆ ಎಲ್ಲ ಸಿನಿಮಾಗಳ ನಂತರ ಮತ್ತೊಂದು ಅವಕಾಶ ಅವರ ಪಾಲಾಗಿದೆ. 'ಜಂಟಲ್ ಮನ್' ಜೊತೆ ನಿಶ್ಚಿಕಾ ನಾಯ್ಡು ಸೇರಿಕೊಂಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಅಭಿನಯದ ಈ ಸಿನಿಮಾಗೆ ನಾಯಕಿಯಾಗಿ ನಿಶ್ವಿಕಾ ಆಯ್ಕೆ ಆಗಿದ್ದಾರೆ.

ಈ ಹಿಂದೆ ಸಿನಿಮಾದಲ್ಲಿ ನಟಿ ನಂದಿತಾ ಅವರ ಅಭಿನಯಿಸುತ್ತಾರೆ ಎಂದು ಗಾಸಿಪ್ ಇತ್ತು. ಆದರೆ, ಈಗ ನಿಶ್ವಿಕಾ ನಾಯ್ಡು ಆ ಜಾಗಕ್ಕೆ ಬಂದಿದ್ದಾರೆ.

ಜಡೇಶ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಗುರುದೇಶಪಾಂಡೆ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಅಂದರೆ, ನಿಶ್ವಿಕಾ ಅವರ 'ಪಡ್ಡೆಹುಲಿ' ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದು ಸಹ ಗುರುದೇಶಪಾಂಡೆ ಅವರೇ ಆಗಿದ್ದಾರೆ.

   
 
ಹೆಲ್ತ್