Back
Home » ಸಿನಿ ಸಮಾಚಾರ
ಮೊದಲ ಎಸೆತದಲ್ಲೇ ಶಾರೂಖ್ ಖಾನ್ ಗೆ ಗುರಿಯಿಟ್ಟ ರಾಕಿಂಗ್ ಸ್ಟಾರ್
Oneindia | 11th Oct, 2018 06:42 PM
 • ಎಸ್.ಆರ್.ಕೆ ಸೆಡ್ಡು ಹೊಡಿತಾರ ಯಶ್.?

  ಕೆಜಿಎಫ್ ಸಿನಿಮಾ ಹಿಂದಿಯಲ್ಲಿ ಬಿಡುಗಡೆಯಾಗುತ್ತಿರುವುದಕ್ಕೆ ಸಂತಸದಲ್ಲಿರುವ ಸ್ಯಾಂಡಲ್ ವುಡ್ ಅಭಿಮಾನಿಗಳಿಗೆ ಇದು ಅಚ್ಚರಿ ವಿಷ್ಯ. ಹೌದು, ರಾಕಿಂಗ್ ಸ್ಟಾರ್ ಮೊದಲನೇ ಸಲ ಬಿಟೌನ್ ಅಂಗಳಕ್ಕೆ ಕಾಲಿಡ್ತಿದ್ದಾರೆ. ಇಷ್ಟು ದಿನ ಯಶ್ ಸಿನಿಮಾಗಳು ಡಬ್ಬಿಂಗ್ ಸಿನಿಮಾಗಳನ್ನ ಹಿಂದಿ ಪ್ರೇಕ್ಷಕರು ನೋಡಿದ್ದರು. ಆದ್ರೀಗ, ನೇರವಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಎಂಟ್ರಿ ಕೊಡ್ತಿದ್ಹಾಗೆ ಶಾರೂಖ್ ಖಾನ್ ಮೇಲೆ ಕಣ್ಣಿಟ್ಟಿದ್ದಾರೆ.

  'ಕೆಜಿಎಫ್' ಸಿನಿಮಾದ ಮತ್ತೊಬ್ಬ ನಟನ ಲುಕ್ ಬಹಿರಂಗ


 • 'ಜೀರೋ' ಎದುರು 'ಕೆಜಿಎಫ್'

  ಹೌದು, ಯಶ್ ಕೆಜಿಎಫ್ ಸಿನಿಮಾ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ವಿಷ್ಯ ಏನಪ್ಪಾ ಅಂದ್ರೆ ಅದೇ ದಿನ ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರವೂ ತೆರೆಕಾಣುತ್ತಿದೆ. ಅಲ್ಲಿಗೆ ಬಾಲಿವುಡ್ ಎಲ್ಲಾ ಶಾರೂಖ್ ಜಪ ಮಾಡ್ತಿರುತ್ತೆ, ಇಂತಹ ಸಮಯದಲ್ಲಿ ರಾಕಿಂಗ್ ಎಂಟ್ರಿ ಕೊಟ್ಟಿದ್ದಾರೆ ಯಶ್.

  'ಕೆಜಿಎಫ್' ಒನ್ ಲೈನ್ ಕಥೆ ಬಿಚ್ಚಿಟ್ಟ ಯಶ್ ಮತ್ತು ಡೈರೆಕ್ಟರ್


 • ಯೋಚನೆ ಮಾಡ್ಲಿಲ್ವಾ.?

  ಡಿಸೆಂಬರ್ 21ಕ್ಕೆ ರಿಲೀಸ್ ಡೇಟ್ ಘೋಷಣೆ ಮಾಡಿರುವ ಕೆಜಿಎಫ್ ಚಿತ್ರತಂಡ, ಆ ದಿನ ಬಾಲಿವುಡ್ ನಲ್ಲಿ ಯಾವ ಸಿನಿಮಾ ರಿಲೀಸ್ ಆಗ್ತಿದೆ ಎಂದು ಯೋಚನೆ ಮಾಡಿಲ್ವಾ ಅಥವಾ ಉದ್ದೇಶಪೂರ್ವಕವಾಗಿಯೇ ಶಾರೂಖ್ ಎದುರು ಸಿನಿಮಾ ತರ್ತಿದ್ದಾರಾ ಬಿಟೌನ್ ವಿತರಕರು.

  'ಕೆಜಿಎಫ್' ರಿಲೀಸ್ ದಿನಾಂಕ ಮುಂದಕ್ಕೆ ಹೋಗಲು 'ಬಾಲಿವುಡ್' ಕಾರಣ


 • ಬಾಲಿವುಡ್ ಗಾಗಿಯೇ ಮುಂದಕ್ಕೆ ಹೋದ ಕೆಜಿಎಫ್

  ಈ ಹಿಂದೆ ಘೋಷಣೆ ಮಾಡಿದಂತೆ ಕೆಜಿಎಫ್ ಸಿನಿಮಾ ನವೆಂಬರ್ 16 ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ, ಬಾಲಿವುಡ್ ವಿತರಕರ ಬೇಡಿಕೆ ಮತ್ತು ಒತ್ತಾಯಕ್ಕೆ ಮಣಿದ ಚಿತ್ರತಂಡ ಅವರಿಗೆ ನೆರವಾಗುವಂತೆ ರಿಲೀಸ್ ಡೇಟ್ ನಿಗದಿಪಡಿಸಿದ್ದಾರೆ. ಹಾಗಿದ್ರೆ, ಆ ದಿನ ಶಾರೂಖ್ ಸಿನಿಮಾ ಬರ್ತಿರೋದು ಬಾಲಿವುಡ್ ವಿತರಕರಿಗೆ ಗೊತ್ತಾಗ್ಲಿಲ್ವಾ.?

  'ಕೆ ಜಿ ಎಫ್' ನವೆಂಬರ್ ನಲ್ಲಿ ರಿಲೀಸ್ ಆಗೋದು ಡೌಟಂತೆ!


 • ಕ್ಲಿಕ್ ಆದ್ರೆ ಮುಗಿತು!

  ಅಂದ್ಹಾಗೆ, ರಾಕಿಂಗ್ ಸ್ಟಾರ್ ಗೆ ಶಾರೂಖ್ ಖಾನ್ ಅಂದ್ರೆ ತುಂಬಾ ಇಷ್ಟ. ಹೀಗಿರುವಾಗ ತಮ್ಮ ನೆಚ್ಚಿನ ನಟನ ಎದುರೇ ಸ್ಪರ್ಧೆ ಮಾಡೋ ಅವಕಾಶ ಸಿಕ್ಕಿದೆ. ಒಂದು ವೇಳೆ ಕೆಜಿಎಫ್ ಸಿನಿಮಾ ಬಾಲಿವುಡ್ ನಲ್ಲಿ ಯಶಸ್ಸು ಕಂಡ್ರೆ, ಯಶ್ ಜಮಾನ ಬಿಟೌನ್ ಶುರುವಾಗುತ್ತೆ. ಅಲ್ಲಿಯೂ ಅಣ್ತಮ್ಮನ ಹವಾ ಜೋರಾಗುತ್ತೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಹಿಂದಿಯಲ್ಲಿ ರಿಲೀಸ್ ಆಗುತ್ತಿರುವುದು ಈಗ ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡ ಕಲಾಭಿಮಾನಿಗಳಿಗೆ ಹೆಮ್ಮೆಯ ವಿಚಾರ. ಡಿಸೆಂಬರ್ 21 ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಸೇರಿದಂತೆ ಐದು ಭಾಷೆಯಲ್ಲಿ ಕೆಜಿಎಫ್ ಬರ್ತಿದೆ.

ಬಾಲಿವುಡ್ ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ 'ಎಎ ಫಿಲಂಸ್' ಯಶ್ ಕೆಜಿಎಫ್ ಚಿತ್ರವನ್ನ ರಿಲೀಸ್ ಮಾಡಲು ಮುಂದಾಗಿದೆ. ಅನಿಲ್‌ ತಡಾನಿಯವರ ಸಹಯೋಗದಲ್ಲಿ ಫರ್ಹಾನ್ ಅಖ್ತರ್ ಕೂಡ ಕೆಜಿಎಫ್ ಗೆ ಸಾಥ್ ನೀಡ್ತಿದ್ದಾರೆ.

'ಕೆ ಜಿ ಎಫ್' ಚಿತ್ರವನ್ನು ವಿತರಣೆ ಮಾಡಲು ಹೆಮ್ಮೆ ಇದೆ ಎಂದ ಬಾಲಿವುಡ್ ನಟ

ಇಷ್ಟೆಲ್ಲಾ ಖುಷಿಯ ವಿಚಾರದಲ್ಲಿ ಒಂದು ಅಚ್ಚರಿ ವಿಷ್ಯವನ್ನ ಎಲ್ಲರೂ ಗಮನಿಸಲೇಬೇಕು. ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಚಿಕ್ಕದು ಎನ್ನುವ ಈ ಸಮಯದಲ್ಲಿ ಕೆಜಿಎಫ್ ಸಿನಿಮಾ ದೊಡ್ಡ ಮಟ್ಟದ ಸದ್ದು ಮಾಡಿ, ಬಾಲಿವುಡ್ ಗೂ ಲಗ್ಗೆಯಿಟ್ಟಿದೆ. ಆದ್ರೆ, ಮೊದಲ ಹೆಜ್ಜೆಯಲ್ಲೇ ಶಾರೂಖ್ ಖಾನ್ ಗೆ ಗುರಿಯಿಟ್ಟಿದ್ದು ಉತ್ತಮನಾ ಎಂಬ ಪ್ರಶ್ನೆ ಕಾಡುತ್ತಿದೆ.? ಮುಂದೆ ಓದಿ.....

   
 
ಹೆಲ್ತ್