Back
Home » ಇತ್ತೀಚಿನ
ಒನ್‌ಪ್ಲಸ್‌ 6Tಯಲ್ಲಿವೆ ಭವಿಷ್ಯದ ಫೀಚರ್‌ಗಳು..! ಐಫೋನ್‌, ಗ್ಯಾಲೆಕ್ಸಿಯಲ್ಲೂ ಇಲ್ಲ..!
Gizbot | 11th Oct, 2018 07:47 PM
 • ಸ್ಕ್ರೀನ್‌ ಅನ್‌ಲಾಕ್

  ನಮಗೆಲ್ಲಾ ಗೊತ್ತಿರುವಂತೆ ಒನ್‌ಪ್ಲಸ್‌ ಭವಿಷ್ಯದ ಸ್ಕ್ರೀನ್‌ ಅನ್‌ಲಾಕ್‌ ಫೀಚರ್‌ನೊಂದಿಗೆ ಬರುತ್ತಿದೆ. ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌ ಇರುವ ಕುರಿತು ಒನ್‌ಪ್ಲಸ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಪೇಟೆ ಲಾ ಖಚಿತ ಪಡಿಸಿದ್ದು, ಇನ್‌ಡಿಸ್‌ಪ್ಲೇ ಅನ್‌ಲಾಕ್‌ ವೇಗದ ಅನುಭವ ನೀಡಲಿದೆ ಎನ್ನಲಾಗಿದೆ. ಬಹುನಿರೀಕ್ಷಿತ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನಲ್ಲಿನ ಸ್ಕ್ರೀನ್ ಅನ್‌ಲಾಕ್‌ ಫೀಚರ್ ಕುರಿತು ಒನ್‌ಪ್ಲಸ್‌ ಕಂಪನಿ ಸಣ್ಣ ವಿಡಿಯೋ ಬಿಡುಗಡೆ ಮಾಡಿ ಖಚಿತಪಡಿಸಿದೆ.

  ಒನ್‌ಪ್ಲಸ್‌ ಹಾರ್ಡ್‌ವೇರ್‌ ಮತ್ತು ಸ್ವಯಂ-ಕಲಿಕೆಯ ಕ್ರಮಾವಳಿಗಳನ್ನು ಸಂಯೋಜಿಸಿ ನಿಮ್ಮ ಬಯೋಮೆಟ್ರಿಕ್‌ ಮಾಹಿತಿಯನ್ನು ಪೂರ್ವಭಾವಿಯಾಗಿ ಲೋಡ್ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ನಿಮಗೆ ಝಿಪ್ಪಿ ಅನ್‌ಲಾಕ್‌ ಅನುಭವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಸಿಗಲಿದೆ. ಒನ್‌ಪ್ಲಸ್‌ನಲ್ಲಿರುವ ಇಂಜಿನಿಯರ್‌ಗಳು ನಿಮ್ಮ ಫಿಂಗರ್‌ಪ್ರಿಂಟ್‌ ಮಾಹಿತಿ ಸಂಗ್ರಹಿಸಲು ಕ್ವಾಲ್‌ಕಾಮ್‌ ಸ್ನಾಪ್‌ಡ್ರಾಗನ್‌ 845ನಲ್ಲಿನ 'Trust Zone' ಬಳಸಿದ್ದಾರೆ. ಇದು ಗೌಪ್ಯತೆಗಾಗಿರುವ ಪ್ರತ್ಯೇಕ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ.


 • ವೇಗದ ಡ್ಯಾಶ್‌ ಚಾರ್ಜಿಂಗ್‌

  ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ ಡಿವೈಸ್‌ಗಳು ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಮುಂದಿನ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಕಡಿಮೆ ನಿರೀಕ್ಷಿಸುವುದಕ್ಕಾಗಲ್ಲ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ.

  ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.


 • ಮೊದಲ ಸ್ಮಾರ್ಟ್‌ಫೋನ್‌

  ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್‌ ಪೈ ಒಎಸ್‌ನೊಂದಿಗೆ ಬರುತ್ತಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್‌ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬರುತ್ತಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ. Google I/O ದಲ್ಲಿ ಪರಿಚಯಿಸಲ್ಪಟ್ಟ ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌ನ್ನು ಆಂಡ್ರಾಯ್ಡ್‌ ಪೈ ಬೆಂಬಲಿತ Oxyzen OS ಒನ್‌ಪ್ಲಸ್‌ನಲ್ಲಿ ತರುತ್ತದೆ. ಇದು ಹೊಸ ಬ್ಯಾಟರಿ ಫೀಚರ್ ಹೊಂದಿದ್ದು, ಆಪ್‌ ಬಳಕೆಯನ್ನು ವಿಶ್ಲೇಷಿಸಿ, ಬಳಕೆದಾರನ ಬಳಕೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯವನ್ನು ವಿನಿಯೋಗಿಸುತ್ತದೆ.

  ಆಂಡ್ರಾಯ್ಡ್‌ ಪೈ ಆಧಾರಿತ OxygenOS 9.0 ಒಎಸ್‌ನ್ನು ಹಿಂದಿನ ಆವೃತ್ತಿ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ಗೂ ರೋಲ್‌ ಔಟ್‌ ಮಾಡುತ್ತಿದೆ. ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿರುವಂತೆ ಹೊಸ ಅಪ್‌ಡೇಟ್‌ನ್ನು ಸದ್ಯಕ್ಕೆ ಸೀಮಿತ ಸಂಖ್ಯೆಯ ಬಳಕೆದಾರರು ಸ್ವೀಕರಿಸುತ್ತಾರೆ. ಯಾವುದೇ ಬಗ್‌ಗಳಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ನಂತರದ ದಿನಗಳಲ್ಲಿ ಎಲ್ಲರಿಗೂ ಹೊಸ ಅಪ್‌ಡೇಟ್‌ ನೀಡುತ್ತೇವೆ ಎಂದು ಒನ್‌ಪ್ಲಸ್‌ ಹೇಳಿದೆ.


 • ಅದ್ಭುತ AMOLED ಡಿಸ್‌ಪ್ಲೇ

  ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್‌ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ.


 • ಹೊಸ ಟೈಪ್‌-ಸಿ ಒನ್‌ಪ್ಲಸ್‌ ಬುಲೆಟ್‌ ಹೆಡ್‌ಫೋನ್‌ಗಳು

  ಒನ್‌ಪ್ಲಸ್‌ನ ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು ಲಾಂಚ್‌ ಆದಾಗಿನಿಂದ ಸ್ಮಾರ್ಟ್‌ಫೋನ್‌ ಆಸಕ್ತರ ಬಾಯಲ್ಲಿ ಹೆಚ್ಚು ಹರಿದಾಡುತ್ತಿದೆ. ಒನ್‌ಪ್ಲಸ್‌ 6T ಬಿಡುಗಡೆ ಮಾಡುವುದರ ಜತೆ ಕಂಪನಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಏನನ್ನಾದರೂ ನೀಡಬೇಕೆಂಬ ಉದ್ದೇಶ ಹೊಂದಿದೆ. ಅದರಂತೆ, ಹೊಸ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಟೈಪ್-ಸಿ ಜ್ಯಾಕ್‌ ಜತೆ ಬರುವ ಹೊಸ ಬುಲೆಟ್‌ ಇಯರ್‌ಫೋನ್‌ಗಳನ್ನು ನೀಡುತ್ತಿದೆ.

  ಹೊಸ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಟೈಪ್‌-ಸಿ ಪೋರ್ಟ್‌ನ್ನು ಇಷ್ಟು ಉತ್ತಮವಾಗಿ ಬಳಸಿಕೊಳ್ಳಲು ಪ್ರಮುಖ ಕಾರಣವೆಂದರೆ ಬಳಕೆದಾರರು ಯಾವುದೇ ಅಡೆತಡೆಯಿಲ್ಲದ, ಎಫೆಕ್ಟ್‌ಗಳನ್ನು ಕಳೆದುಕೊಳ್ಳದೆ ಧ್ವನಿ ಮತ್ತು ಸಂಗೀತದ ಅನುಭವವನ್ನು ಪಡೆಯಬೇಕೆನ್ನುವುದಾಗಿದೆ. ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಆಡಿಯೋ ಅನುಭವ ಮತ್ತು ಒಟ್ಟಾರೆ ಬ್ಯಾಟರಿ ಬಾಳಿಕೆಯನ್ನು ಸುಧಾರಿಸಲು 3.5mm ಆಡಿಯೋ ಜಾಕ್‌ನ್ನು ಕೈಬಿಡಲು ನಿರ್ಧರಿಸಿದೆ. ಆಡಿಯೋ ಜಾಕ್‌ನ್ನು ಕೈ ಬಿಟ್ಟಿರುವುದರಿಂದ ಆ ಸ್ಥಳವನ್ನು ದೊಡ್ದ ಬ್ಯಾಟರಿಯು ಆಕ್ರಮಿಸಿಕೊಂಡಿದ್ದು, ಉತ್ತಮ ಬ್ಯಾಟರಿ ಬಾಳಿಕೆಯನ್ನು ಬಳಕೆದಾರನಿಗೆ ನೀಡುತ್ತದೆ.
ಒನ್‌ಪ್ಲಸ್‌ ತನ್ನ ಮತ್ತೊಂದು ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ 6T ಬಿಡುಗಡೆಗೊಳಿಸಲು ವೇದಿಕೆ ಸಿದ್ಧಗೊಳಿಸಿದ್ದು, ಅಕ್ಟೋಬರ್‌ 30ಕ್ಕೆ ಲಾಂಚ್‌ ಆಗಲಿದೆ. ಹೀಗಾಗಲೇ ಮಾರುಕಟ್ಟೆಯಲ್ಲಿ ಬಹಳಷ್ಟು ಹೈಪ್‌ ಸೃಷ್ಟಿಸಿಕೊಂಡಿರುವ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಪ್ರಿಯರ ಬಾಯಲ್ಲಿ ಹರಿದಾಡುತ್ತಿದೆ. ಭಾರತೀಯ ಮಾರುಕಟ್ಟೆ ಮತ್ತು ಜಾಗತಿಕ ಮೊಬೈಲ್‌ ಗ್ರಾಹಕರಿಗೆ ಅತ್ಯಾಧುನಿಕ ಫೀಚರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಸ್ಮಾರ್ಟ್‌ಫೋನ್‌ ಅನಾವರಣಗೊಳಿಸುವುದಕ್ಕೂ ಮುಂಚೆ ಮತ್ತೊಮ್ಮೆ ಒನ್‌ಪ್ಲಸ್‌ ಮಾರುಕಟ್ಟೆಯಲ್ಲಿ ಕಂಪನ ಸೃಷ್ಟಿಸಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒನ್‌ಪ್ಲಸ್‌ 6T ಶೀಘ್ರದಲ್ಲಿಯೇ ಬಿಡುಗಡೆ ಕಾಣುತ್ತಿದ್ದು, ಅಮೆಜಾನ್‌ನಲ್ಲಿ 'ನೋಟಿಫೈ ಮಿ' ಎಂಬ ಆಯ್ಕೆ ಲಭ್ಯವಿದ್ದು, ಗ್ರಾಹಕರು ಕ್ಲಿಕ್‌ ಮಾಡುವ ಮೂಲಕ ಚಂದಾದಾರರಾಗಬಹುದು. ಇದರ ಮೂಲಕ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಅಪ್‌ಡೇಟ್‌ಗಳನ್ನು ಪಡೆಯಬಹುದು.

ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2018 ಹೀಗಾಗಲೇ ಪ್ರಾರಂಭವಾಗಿದ್ದು, ಅಮೆಜಾನ್‌ನ ವರ್ಷದ ಬಹುನಿರೀಕ್ಷಿತ ಸೇಲ್‌ನಲ್ಲಿ ಭಾರತದ ಅತಿದೊಡ್ಡ ಪ್ರೀಮಿಯಂ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ಒನ್‌ಪ್ಲಸ್‌ನ ಮುಂದಿನ ಡಿವೈಸ್‌ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನ ಪ್ರೀ ಬುಕ್ಕಿಂಗ್‌ಗಳು ಮೊದಲ 36 ಗಂಟೆಗಳಲ್ಲಿ ಅತಿದೊಡ್ಡ ಮಾರಾಟ ಕಂಡಿದ್ದು,₹400 ಕೋಟಿ ಮೌಲ್ಯದ ಬುಕ್ಕಿಂಗ್‌ ಆಗಿದೆ. ಅಮೆಜಾನ್‌ನ ಮಾರಾಟದ ಅವಧಿಯಲ್ಲಿ ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ ಬುಕ್ಕಿಂಗ್‌ ಈ ವರ್ಷ ಅಮೆಜಾನ್‌ನಲ್ಲಿ ಐದು ಪಟ್ಟು ಹೆಚ್ಚಾಗಿದೆ. 5 ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್ ಅಮೆಜಾನ್ ಇಂಡಿಯಾದಲ್ಲಿ ಅತಿ ಹೆಚ್ಚು ಗಳಿಕೆಯನ್ನು ಕಂಡ ಸ್ಮಾರ್ಟ್‌ಫೋನ್‌ ಆಗಿದೆ.

ಒನ್‌ಪ್ಲಸ್‌ 6T ಖಂಡಿತವಾಗಿಯೂ ಅತ್ಯಂತ ರೋಮಾಂಚಕಾರಿ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಆದರೆ, ನಾವು ಈ ಸಾಧನವನ್ನು ನೋಡುವ ಮೊದಲು ಒನ್‌ಪ್ಲಸ್‌ 6Tಯ ಪ್ರಮುಖ ಫೀಚರ್‌ಗಳನ್ನು ನೋಡಿ.

   
 
ಹೆಲ್ತ್