Back
Home » ಆರೋಗ್ಯ
ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ
Boldsky | 11th Oct, 2018 08:35 PM
 • ಬಾದಾಮಿ

  ಹೆಚ್ಚಿನ ಪ್ರೋಟೀನ್ ಹೊಂದಿರುವಂತಹ ಇದು ಸಸ್ಯಾಹಾರಿಗಳಿಗೆ ಅದ್ಭುತ ಆಹಾರವಾಗಿದೆ. 3.7ಮಿ.ಗ್ರಾಂ. ಕಬ್ಬಿಣ, 12 ಮಿ.ಗ್ರಾಂ. ನಾರಿನಾಂಶ ಮತ್ತು 264 ಮಿ.ಗ್ರಾಂ. ಕ್ಯಾಲ್ಸಿಯಂ ಒಂದು ಪಿಂಗಾಣಿ ಬಾದಾಮಿಯಲ್ಲಿದೆ. ಇದು ಕೋಳಿ ಅಥವಾ ಮಾಂಸಕ್ಕಿಂತ ತುಂಬಾ ಒಳ್ಳೆಯದು. ಅಧಿಕ ಪ್ರೋಟೀನ್ ಇರುವ ಕಾರಣದಿಂದಾಗಿ ಇದು ಸಸ್ಯಾಹಾರಿಗಳಿಗೆ ಅದ್ಭುತವಾ ಆಹಾರವಾಗಿದೆ. ಇನ್ನು ಬಾದಾಮಿಯಲ್ಲಿ ಒಮೆಗಾ9, ಒಮೆಗಾ 6 ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಇವೆ. ಇದು ತುಂಬಾ ಆರೋಗ್ಯಕಾರಿ ಕೊಬ್ಬಿನಾಮ್ಲಗಳು ಮತ್ತು ದೇಹಕ್ಕೆ ತುಂಬಾ ಪರಿಣಾಮಕಾರಿ. ಜಂಕ್ ಫುಡ್ ಮತ್ತು ಸಂಸ್ಕರಿತ ಆಹಾರದಲ್ಲಿ ಕಂಡು ಬರುವಂತಹ ಪರಿಷ್ಕರಿಸಿದ ಕೊಬ್ಬು ಮತ್ತು ಟ್ರಾನ್ಸ್ ಕೊಬ್ಬುಗಳು ಹೃದಯಕ್ಕೆ ಸಂಬಂಧಿಸಿದ ಹಲವಾರು ಕಾಯಿಲೆಗಳಿಗೆ ಕಾರಣವಾಗುವುದು. ಆದರೆ ಬಾದಾಮಿ ಅಪರಿಷ್ಕರಿಸಿದ ಕೊಬ್ಬು ಇದೆ. ಈ ಕೊಬ್ಬು ಹೃದಯಕ್ಕೆ ಸಂಬಂಧಿಸಿದ ಹಲವಾರು ಕಾಯಿಲೆಗಳು ಬರದಂತೆ ತಡೆಯುವುದು. ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡುವುದು. ಬಾದಾಮಿಯ ಸಿಪ್ಪೆಯಲ್ಲಿ ಉನ್ನತ ಮಟ್ಟದ ಆಹಾರದ ನಾರಿನಾಂಶವಿದೆ. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದು ಮತ್ತು ಕರುಳಿನ ಕ್ರಿಯೆ ಸರಾಗವಾಗುವುದು.

  Most Read: ಭಾರತದ ಈ ಎಂಟು ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶ ನಿಷೇಧ ಮಾಡಲಾಗಿದೆಯಂತೆ!


 • ಸೋಯಾಬೀನ್

  ಒಂದು ಕಪ್ ಹಸಿ ಕೋಳಿಯಲ್ಲಿ 43.43 ಗ್ರಾಂ. ಪ್ರೋಟಿನ್ ಇದೆ. ಅದೇ ಒಂದು ಕಪ್ ಸೋಯಾಬೀನ್ ನಲ್ಲಿ 68 ಗ್ರಾಂ ಪ್ರೋಟೀನ್ ಇದೆ. ಇದನ್ನು ಹೊರತುಪಡಿಸಿ, ಸೋಯಾಬೀನ್ ನಲ್ಲಿ ಚಿಕನ್ ಗೆ ಹೋಲಿಸಿದರೆ ಹೆಚ್ಚಿನ ಪೋಷಕಾಂಶಗಳು ಇವೆ.


 • ಕುಂಬಳಕಾಯಿ ಬೀಜಗಳು

  ಯಾವುದೇ ರೀತಿಯ ಆಹಾರ ನಾರಿನಾಂಶವನ್ನು ಹೊಂದಿರದ ಕೋಳಿಮಾಂಸವು ಕುಂಬಳಕಾಯಿ ಬೀಜಕ್ಕೆ ಯಾವುತ್ತೂ ಸರಿಸಮನವಾಗದು. ಒಂದು ಕಪ್ ಕುಂಬಳಕಾಯಿ ಬೀಜದಲ್ಲಿ 18 ಗ್ರಾಂ ನಾರಿನಾಂಶವಿದೆ. ಇದು ಆರೋಗ್ಯಕರವಾಗಿರುವುದು. ಇನ್ನು ಕುಂಬಳಕಾಯಿ ಬೀಜದಲ್ಲಿರುವ ಸತು ಸಂಪೂರ್ಣ ವೀರ್ಯದ ಗುಣಮಟ್ಟ ಮತ್ತು ಪುರುಷರ ಫಲವತ್ತತೆ ಹೆಚ್ಚಿಸುವುದು. ಆರೋಗ್ಯಕರ ಟೆಸ್ಟೊಸ್ಟೆರಾನ್ ಮಟ್ಟವನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುವುದು. ಕುಂಬಳಕಾಯಿ ಬೀಜದಲ್ಲಿ ಉನ್ನತ ಮಟ್ಟದ ಪ್ರೋಟೀನ್, ಮೆಗ್ನಿಶಿಯಂ, ಮ್ಯಾಂಗನೀಸ್, ಫೋಸ್ಪರಸ್, ಕಬ್ಬಿಣ, ಸತು ಮತ್ತು ಪೊಟಾಶಿಯಂ ಇದ್ದು, ಇದು ಪುರುಷರಲ್ಲಿ ಲೈಂಗಿಕ ಆರೋಗ್ಯವನ್ನು ಸುಧಾರಿಸುವುದು. ಅಲ್ಲದೆ ಪುರುಷರು ಕುಂಬಳಕಾಯಿ ಬೀಜಗಳ ಸೇವನೆ ಮಾಡುವುದರಿಂದ ಜನನೇಂದ್ರಿಯ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ಇಂಡಿಯನ್ ಜರ್ನಲ್ ಆಫ್ ಯುರೋಲಾಜಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯು ಹೇಳಿದೆ. ಕುಂಬಳಕಾಯಿ ಬೀಜಗಳ ಸೇವನೆ ಮಾಡುವುದರಿಂದ ಜನನೇಂದ್ರಿಯ ಗ್ರಂಥಿಗಳು ಬಲಗೊಂಡು, ಪುರುಷರಲ್ಲಿ ಆರೋಗ್ಯಕರ ಹಾರ್ಮೋನು ಕಾರ್ಯನಿರ್ವಹಿಸಲು ನೆರವಾಗುವುದು. ಜನನೇಂದ್ರಿಯ ಗ್ರಂಥಿಗಳು ಹಿಗ್ಗಿಕೊಂಡು ಮೂತ್ರವಿಸರ್ಜನೆ ವೇಳೆ ಆಗುವಂತಹ ಸಮಸ್ಯೆಯಾದ ಪ್ರಾಸ್ಟಟಿಕ್ ಹೈಪರ್ಪ್ಲಾಸಿಯಾ (ಬಿಪಿಎಚ್)ವನ್ನು ಕುಂಬಳಕಾಯಿ ಬೀಜವು ನಿವಾರಿಸುವುದು. ನಿಯಮಿತವಾಗಿ ಇದರ ಸೇವನೆ ಮಾಡಿದರೆ ಬಿಪಿಎಚ್ ಸಮಸ್ಯೆ ಕಡಿಮೆಯಾಗುವುದು.

  Most Read: ಮೊಬೈಲ್ ನಂಬರ್‌ನ್ನು 'ಸಂಖ್ಯಾಶಾಸ್ತ್ರದ ಪ್ರಕಾರ' ಆಯ್ಕೆ ಮಾಡಿ-ಅದೃಷ್ಟವಂತರಾಗಿ!


 • ಗಸಗಸೆ

  ಒಂದು ಕಪ್ ಗಸಗಸೆ ಬೀಜದಲ್ಲಿ 19.5 ಗ್ರಾಂ ಆಹಾರದ ನಾರಿನಾಂಶವಿದ್ದು, ಮಾಂಸದಲ್ಲಿ ಯಾವುದೇ ರೀತಿಯ ನಾರಿನಾಂಶವಿಲ್ಲ. ನೀವು ಮಾಂಸಾಹಾರಿಗಳಾಗಿದ್ದರೆ ಆಗ ನಾರಿನಾಂಶವನ್ನು ದೇಹಕ್ಕೆ ಸೇರಿಸಿಕೊಳ್ಳಬೇಕು. ಇದರಿಂದ ಗಸಗಸೆ ಬೀಜವನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.


 • ಅಗಸೆ ಬೀಜಗಳು

  ನೀವು ಸಸ್ಯಾಹಾರಿಗಳಾಗಿದ್ದು, ನಿಮಗೆ ಕಬ್ಬಿನಾಂಶದ ಕೊರತೆ ಕಾಣಿಸುತ್ತಲಿದ್ದರೆ ಆಗ ನೀವು ಅಗಸೆ ಬೀಜಗಳನ್ನು ಸೇವನೆ ಮಾಡಿ. ಪೋಷಕಾಂಶ ತಜ್ಞರ ಪ್ರಕಾರ, ಒಂದು ಕಪ್ ಅಗಸೆ ಬೀಜದಲ್ಲಿ 9.6 ಮಿ.ಗ್ರಾಂ. ಕಬ್ಬಿನಾಂಶವಿದೆ. ಅದೇ ಒಂದು ಕಪ್ ಮಾಂಸದಲ್ಲಿ ಕೇವಲ 1.6 ಮಿ.ಗ್ರಾಂ ಕಬ್ಬಿನಾಂಶ ಮಾತ್ರವಿದೆ. ಇನ್ನು ಈ ಬೀಜಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿದ್ದು, ವೈದ್ಯಕೀಯ ಲಾಭಗಳು ಕೂಡ ಸಾಕಷ್ಟಿವೆ.ಇಂದಿಗೂ ಸಹ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅದ್ಭುತ ಬೀಜಗಳು ಎಂದು ಇವು ಹೆಸರಾಗಿವೆ. ಇವು ಮಾನವನ ದೇಹವನ್ನು ಬೆಚ್ಚಗೆ ಮಾಡುತ್ತವೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಇದನ್ನು ಪುಡಿ ಮಾಡಿ ಸೇವಿಸಬಹುದು. ಇದನ್ನು ಹಾಗೆಯೇ ಸೇವಿಸಿದರೆ ಜೀರ್ಣ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಪುಡಿ ಮಾಡಿದ ಅಗಸೆ ಬೀಜಗಳನ್ನು ನೀರಿನ ಜೊತೆ ಪ್ರತಿದಿನವೂ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಒದಗಿಸುತ್ತದೆ. ಇವುಗಳನ್ನು ಸೇವಿಸಿದ ಸಂದರ್ಭದಲ್ಲಿ ತಪ್ಪದೆ ನೀರನ್ನು ಹೆಚ್ಚು ಸೇವಿಸುತ್ತಾ ಇರಿ. ನಿಮಗೆ ಬೇಕಾದಲ್ಲಿ ಇದನ್ನು ಕರಿದುಕೊಂಡು ಸಹ ಸೇವಿಸಬಹುದು.
ಒಂದೆರಡು ದಶಕದ ಮೊದಲು ಮಾಂಸಾಹಾರ ಸೇವನೆ ಎಷ್ಟು ಸುರಕ್ಷಿತವಾಗಿತ್ತೋ, ಅದು ಇಂದಿನ ದಿನಗಳಲ್ಲಿ ಅಷ್ಟು ಸುರಕ್ಷಿತವಾಗಿಲ್ಲ. ಯಾಕೆಂದರೆ ಬೇಡಿಕೆಗೆ ಅನುಗುಣವಾಗಿ ಮಾಂಸಾಹಾರ ಪೂರೈಕೆ ಮಾಡಲು ಸಾವಯವ ಕ್ರಮವನ್ನು ಬಿಟ್ಟು ಬೇರೆ ವಿಧಾನಗಳು ಬಳಸುವ ಕಾರಣದಿಂದಾಗಿ ಅದು ಜೀವಕ್ಕೆ ಹಾನಿಯುಂಟು ಮಾಡುತ್ತಿದೆ. ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಕ್ಕೆ ಮೊರೆ ಹೋಗುತ್ತಿದ್ದರೆ. ಮಾಂಸಾಹಾರಕ್ಕಿಂತ ಸಸ್ಯಾಹಾರವು ತುಂಬಾ ಆರೋಗ್ಯಕಾರಿ ಎಂದು ಹೇಳಲಾಗುತ್ತದೆ.

ಇದರಲ್ಲೂ ದೇಹಕ್ಕೆ ಬೇಕಾಗಿರುವಂತಹ ಶಕ್ತಿ ಸಿಗುವುದು. ದೇಹಕ್ಕೆ ಬೇಕಾಗಿರುವ ಪ್ರೋಟೀನ್ ನ್ನು ಸಸ್ಯಾಹಾರದಿಂದ ಪಡೆಯುವುದು ಹೇಗೆ ಎಂದು ಕೆಲವು ಜನರ ಪ್ರಶ್ನೆಯಾಗಿದೆ. ಕೊಬ್ಬನ್ನು ಹೊಂದಿರುವಂತಹ ಮಾಂಸಾಹಾರದಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಪ್ರೋಟೀನ್ ಗಳು ಇವೆ ಮತ್ತು ಇದು ಬೆಳೆಯುತ್ತಿರುವ ಮಕ್ಕಳಿಗೆ ಬೇಕಾಗಿರುವ ಪೋಷಕಾಂಶಗಳನ್ನು ಒದಗಿಸುವುದು. ಇಲ್ಲಿ ನೀಡಿರುವಂತಹ ಕೆಲವೊಂದು ಆಹಾರಗಳನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. ಇದು ಮಾಂಸಾಹಾರದಷ್ಟೇ ಪೋಷಕಾಂಶಗಳನ್ನು ದೇಹಕ್ಕೆ ನೀಡುವುದು.

   
 
ಹೆಲ್ತ್