Back
Home » Car News
ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್
DriveSpark | 11th Oct, 2018 08:03 PM
 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಹೊಸ ಟಾಟಾ ಟಿಯಗೊ ಮತ್ತು ಟಾಟಾ ಟಿಗೋರ್ ಕಾರುಗಳ ಸ್ಪೋರ್ಟ್ಸ್ ಆವೃತ್ತಿಗಳಾದ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಕಾರುಗಳನ್ನು 2018ರ ಆಟೋ ಎಕ್ಸ್ ಪೋನಲ್ಲಿ ಅನಾವರಣಗೊಳಿಸಿದ್ದಲ್ಲೇ ಇದೀಗ ಕಾರುಗಳ ಬಿಡುಗಡೆಯಾಗಿ ಅಂತಿಮ ಹಂತದ ಸಿದ್ದತೆ ನಡೆಸುತ್ತಿದೆ.

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ವರದಿಗಳ ಪ್ರಕಾರ, ದೀಪಾವಳಿಗೂ ಮುನ್ನವೇ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳು ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ತಮಿಳುನಾಡಿನ ಹಲವು ಕಡೆ ಸ್ಪಾಟ್ ಟೆಸ್ಟಿಂಗ್ ಸಂದರ್ಭದಲ್ಲಿ ಹೊಸ ಕಾರುಗಳಲ್ಲಿ ಸ್ಪೋರ್ಟಿ ಲುಕ್ ಒದಗಿಸಿರುವುದು ಬಹಿರಂಗವಾಗಿದೆ.

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಜೆಟಿಪಿ ಎಂಬುದರ ಪೂರ್ಣರೂಪ ಜೇಯಮ್ ಟಾಟಾ ಫರ್ಫಾಮನ್ಸ್ (Jayem Tata Performance) ಎಂಬುದಾಗಿದೆ. ಟಾಟಾ ಮೋಟಾರ್ಸ್ ಹಾಗೂ ಜೇಯಮ್ ಆಟೋಮೋಟಿವ್ಸ್ ಜಂಟಿಯಾಗಿ ತಾಜಾ ಟಾಟಾ ಕಾರುಗಳ ಶಕ್ತಿಶಾಲಿ ಮಾಡೆಲ್‌ಗಳನ್ನು ನಿರ್ಮಿಸುತ್ತಿದೆ.

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಹೀಗಾಗಿ ಸ್ಟ್ಯಾಂಡರ್ಡ್ ಮಾದರಿಗಳಿಗೆ ಹೋಲಿಸಿದಾಗ ಹೊಸ ಕಾರುಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದ್ದು, ಕ್ರೀಡಾತ್ಮಕ ಬಂಪರ್ ಜತೆಗೆ ಹೊಸತಾದ ಫಾಗ್ ಲ್ಯಾಂಪ್ ಹೌಸಿಂಗ್ ಹಾಗೂ ಅಗಲವಾದ ಲೋವರ್ ಗ್ರಿಲ್ ಇರಲಿದೆ. ಕಪ್ಪು ವರ್ಣ ಸುತ್ತುವರಿದ ಹೆಡ್‌ಲ್ಯಾಂಪ್ ಜತೆಗೆ ಜೆಟಿಪಿ ಲೊಗೊ ಸಹ ಪ್ರಮುಖ ಆಕರ್ಷಣೆಯಾಗಲಿದ್ದು, ಹಿಂಭಾಗದಲ್ಲೂ ರೂಫ್ ಸ್ಪಾಯ್ಲರ್ ಹೆಚ್ಚಿನ ಕ್ರೀಡಾತ್ಮಕ ಲುಕ್ ನೀಡಲಿದೆ.

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಟಾಟಾ ಟಿಯಾಗೊ ಜಿಟಿಪಿ ಮತ್ತು ಟಿಗೋರ್ ಜೆಟಿಪಿ ಅಗಲವಾದ ಏರ್ ಡ್ಯಾಮ್ ಮತ್ತು ಫೋಗ್ ಲ್ಯಾಂಪ್ ಹೌಸಿಂಗ್, ಕೆಂಪು ಕಾಂಸ್ಟ್ರಾಕ್ಟಿಂಗ್ ಡಿಟೈಲಿಂಗ್, ಅರ್ ವೆಂಟ್ಸ್ ಆಯ್ಕೆಗಳನ್ನು ಹೊಂದಿದ್ದು, ಜೊತೆಗೆ ಸ್ಮೋಕ್ಡ್ ಹೇಡ್ ಲ್ಯಾಂಪ್ಸ್, ಸೈಡ್ ಸ್ಕರ್ಟ್ಸ್ ಮತ್ತು ರೇರ್ ಡಿಫ್ಯೂಸರ್ ಅನ್ನು ಕಾರುಗಳಿಗೆ ಸ್ಪೋರ್ಟಿ ಲುಕ್ ನೀಡಿವೆ.

  MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಕಾರಿನ ಚಕ್ರದ ಉದ್ದಳತೆಯು ರೆಗ್ಯುಲರ್ ಆವೃತ್ತಿಯಂತೆಯೇ 15 ಇಂಚಿನ ಡೈಮಂಡ್ ಕಟ್ ಫಿನಿಶ್ ಹೊಂದಿರುವುದೆ ವಿಶೇಷವಾಗಿದ್ದು, ಕಾರಿನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಗಳನ್ನು ಹೊಂದಿವೆ.

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಕಾರಿನ ಒಳಗೆ ಬ್ಲಾಕ್ ಥೀಮ್, ಸೀಟುಗಳಿಗೆ ರಿಚ್ ಲೆದರ್ ಫಿನಿಶ್, ಅಲ್ಯುಮಿನಿಂ ಪೆಡಲ್ಸ್ ಹೊಂದಿದ್ದು, ಅಪ್ ಗ್ರೇಡ್ ಪಡೆದುಕೊಂಡಂತಹ ಟಚ್-ಸ್ಕ್ರೀನ್ ಸಿಸ್ಟಂ, ಇನ್ಫೋಟೈನ್‌ಮೆಂಟ್ ಸಿಸ್ಟಂ, ಮತ್ತು ಹರ್ಮಾನ್ 8 ಸ್ಪೀಕರ್ ಸಿಸ್ಟಂ ಅನ್ನು ಹೊಂದಿದೆ.

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಎಂಜಿನ್ ಸಾಮರ್ಥ್ಯ
  ನೆಕ್ಸಾನ್ ಮಾದರಿಯಲ್ಲೇ 1.2-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಣೆ ಹೊಂದಿರಲಿದ್ದು, ಸದ್ಯ ನೆಕ್ಸಾನ್ ಕಾರುಗಳ 108-ಬಿಎಚ್‌ಪಿ ಮತ್ತು 170-ಎನ್ಎಂ ಟಾರ್ಕ್‌ಗಿಂತಲೂ ಟಿಯಾಗೊ ಜೆಟಿಪಿ ಕಾರು ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಉತ್ಪಾದಿಸಲಿದೆ.

  MOST READ: ಹೊಸ ಸ್ಯಾಂಟ್ರೋ ಕಾರು ಖರೀದಿಗೆ ಬುಕ್ಕಿಂಗ್ ಆರಂಭ- ಬೆಲೆ ಎಷ್ಟಿರಲಿದೆ ಗೊತ್ತಾ?

 • ಟಿಯಾಗೊ ಜೆಟಿಪಿ ಕಾರಿನ ಎಂಜಿನ್ ವೈಶಿಷ್ಟ್ಯತೆ ಬಹಿರಂಗಗೊಳಿಸಿದ ಟಾಟಾ ಮೋಟಾರ್ಸ್

  ಹೀಗಾಗಿ ಟಾಟಾ ಸಂಸ್ಥೆಯ ಟಿಗೋರ್ ಜೆಟಿಪಿ ಮತ್ತು ಟಿಯಾಗೊ ಜೆಟಿಪಿ ಎರಡೂ ಕಾರುಗಳು ಚಾಲಕರಿಗೆ ಉತ್ತಮ ರೈಡ್ ಮತ್ತು ಹ್ಯಾಂಡ್ಲಿಂಗ್ ಅನುಭವವನ್ನು ನೀಡಲಿದ್ದು, ಗ್ರಾಹಕರು ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಮೈಲೇಜ್ ಕೊಡುವಂತಹ ರೆಗ್ಯುಲರ್ ಟಿಯಾಗೊ, ಟಿಗೋರ್ ಅಥವಾ ಸ್ಪೋರ್ಟ್ ಡ್ರೈವ್ ಅನುಭವಕ್ಕಾಗಿ ಜಿಟಿಪಿ ಆವೃತ್ತಿಯ ಕಾರುಗಳನ್ನು ಬಳಸಬಹುದಾಗಿದೆ.
ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದೀಪಾವಳಿ ಹೊತ್ತಿಗೆ ಹೊಸ ಟಿಯಾಗೊ ಜೆಟಿಪಿ ಮತ್ತು ಟಿಗೋರ್ ಜೆಟಿಪಿ ಪರ್ಫಾಮೆನ್ಸ್ ಆವೃತ್ತಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಇದೀಗ ಟಿಯಾಗೊ ಕಾರಿನ ಎಂಜಿನ್ ವೈಶಿಷ್ಟ್ಯತೆಗಳನ್ನು ಬಹಿರಂಗಗೊಳಿಸಿದೆ.

ಹೆಲ್ತ್