Back
Home » ಇತ್ತೀಚಿನ
ವಿಶ್ವದ ಮೊದಲ 5 ಕ್ಯಾಮೆರಾ ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ ಎ9 ಪ್ರೊ' ಲಾಂಚ್!!
Gizbot | 12th Oct, 2018 10:57 AM
 • ಕ್ವಾಡ್ ಕ್ಯಾಮರಾ ಸೆಟಪ್!

  ಅತ್ಯುತ್ತಮ ಚಿತ್ರಗಳನ್ನು ಪಡೆಯಲು ಪಿಕ್ಸೆಲ್ ವಿಲೀನಗೊಳಿಸುವ ತಂತ್ರಜ್ಞಾನದೊಂದಿಗೆ 'ಗ್ಯಾಲಕ್ಸಿ ಎ 9 ಪ್ರೊ' ಸ್ಮಾರ್ಟ್‌ಫೋನ್ 24 ಎಂಪಿ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ. ಎರಡನೆಯ ಕ್ಯಾಮೆರಾ 2x ಜೂಮ್ ಟೆಲಿಫೋಟೋ ಲೆನ್ಸ್ ಮತ್ತು ಪ್ರತ್ಯೇಕ ಡೀಪ್ ಕ್ಯಾಮರಾ ಲೆನ್ಸ್ವ್ಳೊಂದಿಗೆ ಜೋಡಿಯಾಗಿ 120-ಡಿಗ್ರಿ ಅಲ್ಟ್ರಾ-ವೈಡ್ ಕ್ಯಾಮರಾ ಸಂವೇದಕವಾಗಿದೆ. ಈ ಎಲ್ಲಾ ಕ್ಯಾಮೆರಾಗಳು ಕಂಪನಿಯ ಸ್ವಂತ AI ಕ್ಯಾಮರಾ ಸಾಫ್ಟ್‌ವೇರ್‌ನಿಂದ ಬೆಂಬಲಿತವಾಗಿವೆ.


 • 24MP ಸೆಲ್ಫಿ ಕ್ಯಾಮೆರಾ!

  ಹಿಂಬಾಗದಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ 'ಗ್ಯಾಲಕ್ಸಿ ಎ 9 ಪ್ರೊ' ಸ್ಮಾರ್ಟ್‌ಫೋನ್ ಮುಂಬಾಗದಲ್ಲಿ 24MP ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದೆ. ಹಿಂಬಾಗದ ಪ್ರಾಥಮಿಕ ಕ್ಯಾಮೆರಾ ಹಾಗೂ ಸೆಲ್ಫಿ ಕ್ಯಾಮೆರಾಗಳೆರಡು 24MP ಸಾಮರ್ಥ್ಯವನ್ನು ಹೊಂದಿರುವುದು 'ಗ್ಯಾಲಕ್ಸಿ ಎ 9 ಪ್ರೊ' ಸ್ಮಾರ್ಟ್‌ಫೋನಿನ ವಿಶೇಷತೆಯಾಗಿದೆ. ಸೆಲ್ಫಿ ಕ್ಯಾಮೆರಾ ಕೂಡ AI ಕ್ಯಾಮರಾ ಸಾಫ್ಟ್‌ವೇರ್‌ ಬೆಂಬಲಿತವಾಗಿದ್ದು, ಇಂಟೆಲಿಜೆಂಟ್ ಕ್ಯಾಮೆರಾ ವೈಶಿಷ್ಟ್ಯವಾಗಿ ಡಬ್ ಮಾಡಲಾಗಿದೆ.


 • ಡಿಸ್‌ಪ್ಲೇ ಮತ್ತು ವಿನ್ಯಾಸ!

  'ಗ್ಯಾಲಕ್ಸಿ ಎ 9 ಪ್ರೊ' ಸ್ಮಾರ್ಟ್‌ಫೋನ್ 6.3-ಇಂಚಿನ ಪೂರ್ಣ HD + AMOLED ಡಿಸ್‌ಪ್ಲೇಯನ್ನು ಹೊಂದಿದೆ. 1080x2220 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ ಡಿಸ್‌ಪ್ಲೇ ಎಡ್ಜ್ ಟು ಎಡ್ಜ್ ವಿನ್ಯಾಸವನ್ನು ಹೊಂದಿದೆ. ಇನ್ನು ಹಿಂಬಾಗದಲ್ಲಿ ನಾಲ್ಕು ಕ್ಯಾಮೆರಾಗಳು ಹಾಗೂ ಫಿಂಗರ್‌ಪ್ರಿಂಟ್ ಫೀಚರ್ ಆಯ್ಕೆಯನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಹೈ ಎಂಡ್ ಲುಕ್ ಹೊಂದಿರುವುದರಲ್ಲಿ ಎರು ಮಾತಿಲ್ಲ.


 • ಪ್ರೊಸೆಸರ್ ಮತ್ತು RAM!

  6ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿ ಹಾಗೂ 8 ಜಿಬಿ RAM ಮತ್ತು 128 ಜಿಬಿ ಆಂತರಿಕ ಮೆಮೊರಿಯ ಎರಡು ಮಾದರಿಗಳಲ್ಲಿ 'ಗ್ಯಾಲಕ್ಸಿ ಎ 9 ಪ್ರೊ' ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೆಸರಿಸಲಾರದ ಓಕ್ಟಾ ಕೋರ್ ಪ್ರೊಸೆಸರ್‌ನಿಂದ ಚಾಲಿವಾಗುವ ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು 512 ಜಿಬಿ ವರೆಗೆ ವಿಸ್ತರಿಸಬಹುದು ಎಂದು ಸ್ಯಾಮ್‌ಸಂಗ್ ಕಂಪೆನಿ ತಿಳಿಸಿದೆ.


 • ಇತರೆ ಏನೆಲ್ಲಾ ಫೀಚರ್ಸ್?

  3,800 mAh ಬ್ಯಾಟರಿಯಿಂದ ಬೆಂಬಲಿತವಾಗಿರುವ ಗ್ಯಾಲಕ್ಸಿ A9 'ಗ್ಯಾಲಕ್ಸಿ ಎ 9 ಪ್ರೊ' ಆಂಡ್ರಾಯ್ಡ್ 8.0 ಓರಿಯೊದಲ್ಲಿ ರನ್ ಆಗಲಿದೆ. 162.5 x 77 x 7.8 ಮಿಮೀ ಅಳತೆ ಮತ್ತು 183 ಗ್ರಾಂ ತೂಕವಿರುವ ಈ ಸಾಧನದಲ್ಲಿ ಅಕ್ಸೆಲೆರೊಮೀಟರ್, ಫಿಂಗರ್ಪ್ರಿಂಟ್ ಸೆನ್ಸರ್, ಗೈರೋ ಸಂವೇದಕ, ಭೂಕಾಂತೀಯ ಸಂವೇದಕ, ಹಾಲ್ ಸಂವೇದಕ, RGB ಬೆಳಕಿನ ಸಂವೇದ ಹಾಗೂ ಸಾಮೀಪ್ಯ ಸಂವೇದಕಗಳಿವೆ. ಇನ್ನು ಎನ್ಎಫ್‌ಸಿ ಮೂಲಕ ಸ್ಯಾಮ್ಸಂಗ್ ಪೇ ಅನ್ನು ಬೆಂಬಲಿಸುತ್ತದೆ.


 • ಬೆಲೆ ಮತ್ತು ಲಭ್ಯತೆ?

  ನೆನ್ನೆಯಷ್ಟೇ ಲಾಂಚ್ ಆಗಿರುವ 'ಗ್ಯಾಲಕ್ಸಿ ಎ 9 ಪ್ರೊ' ಸ್ಮಾರ್ಟ್‌ಫೋನ್ ಬೆಲೆ ಎಷ್ಟು ಎಂಬುದು ಈವರೆಗೂ ಬಿಡುಗಡೆಯಾಗಿಲ್ಲ. ಆದರೆ, ಭಾರತ ಸೇರಿದಂತೆ ವಿಶ್ವದ ಎಲ್ಲಾ ಮಾರುಕಟ್ಟೆಗಳಿಗೂ ನವೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತಿರುವ ಈ ಸ್ಮಾರ್ಟ್‌ಪೋನ್ ಬೆಲೆ 700 ಡಾಲರ್‌ಗಳಿರಬಹುದು ಎಂದು ಅಂದಾಜು ಮಾಡಲಾಗಿದೆ. ಅಂದರೆ, ಭಾರತದ ರೂಪಾಯಿಗಳ ಲೆಕ್ಕದಲ್ಲಿ 51,000 ಸಾವಿರ ರೂಪಾಯಿಗಳಾಗಬಹುದು.
ನಾಲ್ಕು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಅನ್ನು ಟೆಕ್ ದೈತ್ಯ ಸಂಸ್ಥೆ ಸ್ಯಾಮ್‌ಸಂಗ್ ನೆನ್ನೆ ಬಿಡುಗಡೆ ಮಾಡಿದೆ. ಮಲೆಷ್ಯಾದ ರಾಜಧಾನಿ ಕೌಲಾಲಂಪುರ್ ನಗರದಲ್ಲಿ ನಡೆರದ ಕಾರ್ಯಕ್ರಮದಲ್ಲಿ 'ವಿಶ್ವದ ಮೊದಲ ರಿಯರ್ ಕ್ವಾಡಾಪ್ ಕ್ಯಾಮೆರಾ' ಸ್ಮಾರ್ಟ್‌ಫೋನ್ 'ಗ್ಯಾಲಕ್ಸಿ ಎ 9 ಪ್ರೊ' ಮಾರುಕಟ್ಟೆಗೆ ಪರಿಚಯವಾಗಿದೆ.

ಚೀನಾ ಮೊಬೈಲ್ ಕಂಪೆನಿಗಳಿಗೆ ಸೆಡ್ಡುಹೊಡೆಯುವ ಸಲುವಾಗಿ ನೂತನ ತಂತ್ರಜ್ಞಾನಗಳತ್ತ ಗಮನಹರಿಸುತ್ತಿರುವ ಟೆಕ್ ದೈತ್ಯ ಸ್ಯಾಮ್‌ಸಂಗ್ ಇದೀಗ ನಾಲ್ಕು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಅನ್ನು ಪರಿಚಯಿಸಿ ಎಲ್ಲರ ನಿರೀಕ್ಷೆಯನ್ನು ಹೆಚ್ಚಿಸಿದೆ. ಇನ್ನು ಇದೇ ನವೆಂಬರ್‌ನಲ್ಲಿ ವಿಶ್ವದಾದ್ಯಂತ ಈ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸುವುದಾಗಿ ತಿಳಿಸಿದೆ.

ಪರಿಚಿತವಾದ 'ಗ್ಯಾಲಕ್ಸಿ ಎ 9 ಪ್ರೊ' ಕ್ಯಾಮೆರಾ ಮಾತ್ರವಲ್ಲದೆ ವಿನ್ಯಾಸ ಹಾಗೂ ಫೀಚರ್ಸ್ ಕೂಡ ಮೊಬೈಲ್ ಪ್ರಿಯರನ್ನು ಸೆಳೆಯುತ್ತಿದೆ. ಹಾಗಾದರೆ, ನಾಲ್ಕು ರಿಯರ್ ಕ್ಯಾಮೆರಾಗಳನ್ನು ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಲುಕ್ ಹೇಗಿದೆ? ಸ್ಮಾರ್ಟ್‌ಫೋನಿನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್