Back
Home » ಆರೋಗ್ಯ
ಸಂಧಿವಾತಕ್ಕೆ ತ್ವರಿತ ಉಪಶಮನ ನೀಡುವ ನೈಸರ್ಗಿಕ ಮನೆಮದ್ದುಗಳು
Boldsky | 12th Oct, 2018 11:53 AM
 • ಬಿಸಿ ಹಾಗೂ ತಂಪು

  ದೀರ್ಘಕಾಲದ ಕಾಯಿಲೆಯಿಂದಾಗಿ ಉಂಟಾಗುವಂತಹ ಉರಿಯೂತ ಮತ್ತು ನೋವನ್ನು ನಿವಾರಣೆ ಮಾಡಲು ಬಿಸಿ ಹಾಗೂ ತಂಪಿನ ಒತ್ತಡ ಹಾಕಿ. ನೋವು ನಿವಾರಣೆ ಮಾಡಲು ಬಿಸಿ ಬಳಿಕ ತಂಪು ಮತ್ತೆ ಬಿಸಿ ಹೀಗೆ ಒತ್ತಡ ಹಾಕಿ.


 • ಉಪ್ಪಿನ ಸ್ನಾನ

  ದೇಹದ ನೋವಿನಿಂದ ನಿವಾರಣೆ ಪಡೆಯಲು ಇದು ತುಂಬಾ ನೈಸರ್ಗಿಕ ಪರಿಹಾರ. ದೀರ್ಘಕಾಲದಿಂದ ಇರುವಂತಹ ನೋವನ್ನು ಕಡಿಮೆ ಮಾಡಿಕೊಳ್ಳಲು ಉಪ್ಪು ನೀರನ ಸ್ನಾನ ಮಾಡಿ. ಅಲ್ಲದೆ ಉಪ್ಪು ನೀರಿನಲ್ಲಿ ಸ್ನಾನವು ಗಂಟು ನೋವು ಮತ್ತು ಸ್ನಾಯು ನೋವಿಗೆ ತುಂಬಾ ಪರಿಣಾಮಕಾರಿ ಎಂದು ಹೇಳಲಾಗುತ್ತದೆ. ಇದು ಸ್ನಾಯುಗಳಲ್ಲಿ ಇರುವ ಸೆಳೆತ ಕಡಿಮೆ ಗೊಳಿಸಿ ಕೀಲು ನೋವನ್ನು ನಿವಾರಣೆ ಮಾಡುವುದು. ಇದರಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಇರುವ ಕಾರಣದಿಂದ ಹಿಂದಿನಿಂದಲೂ ಸಂಧಿವಾತಕ್ಕೆ ಉಪ್ಪು ನೀರಿನ ಸ್ನಾನವನ್ನು ಬಳಸಿಕೊಂಡು ಬರುತ್ತಾ ಇದ್ದಾರೆ.

  Most Read: ಚಿಕನ್- ಮಟನ್‌ಗಿಂತಲೂ ಇಂತಹ ಸಸ್ಯಾಹಾರಿ ಆಹಾರಗಳು ತುಂಬಾನೇ ಆರೋಗ್ಯಕಾರಿ


 • ಅರಿಶಿನ ಮತ್ತು ಶುಂಠಿ

  ಇವೆರಡರಲ್ಲಿಯೂ ಕುರ್ಕುಮಿನ್ ಎಂಬ ಪೋಷಕಾಂಶವಿದ್ದು ಇದೊಂದು ಪ್ರಬಲ ಆಂಟಿ ಆಕ್ಸಿಡೆಂಟ್ ಆಗಿದೆ. ದೇಹದಲ್ಲಿ ಎದುರಾಗುವ ಉರಿಯೂತವನ್ನು ಕಡಿಮೆಗೊಳಿಸಲು ಈ ಆಂಟಿ ಆಕ್ಸಿಡೆಂಟ್ ಉತ್ತಮವಾಗಿವೆ. ಈ ಪೋಷಕಾಂಶದ ಗರಿಷ್ಟ ಪ್ರಯೋಜನ ಪಡೆಯಲು ಇದನ್ನು ದ್ರವರೂಪದಲ್ಲಿ ಸೇವಿಸುವುದು ಉತ್ತಮ. ಇದಕ್ಕಾಗಿ ದಿನವಿಡೀ ಕೊಂಚಕೊಂಚವಾಗಿ ಅರಿಶಿನ ಮತ್ತು ಶುಂಠಿ ಕುದಿಸಿ ಸೋಸಿದ ಟೀ ಸೇವಿಸುತ್ತಾ ಬರಬೇಕು. ಜೊತೆಗೇ ಈಗತಾನೇ ಅರೆದ ಹಸಿಶುಂಠಿ ಮತ್ತು ಹಸಿ ಅರಿಶಿನದ ಕೊಂಬಿನ ಲೇಪನವನ್ನು ಕೊಂಚ ಬಿಸಿನೀರಿನೊಂದಿಗೆ ಬೆರೆಸಿ ಇದಕ್ಕೆ ಕೊಂಚ ಜೇನ್ಜು ಬೆರೆಸಿ ಸೇವಿಸುವ ಮೂಲಕ ಸಂಧಿವಾತ ಕಡಿಮೆಯಾಗುವ ಜೊತೆಗೇ ದಿನದ ದಣಿವು ಸಹಾ ಮಾಯವಾಗುತ್ತದೆ.


 • ದಾಂಡೇಲಿಯನ್ ಬೇರು ಹಾಗೂ ಎಲೆಗಳು

  ಸಂಧಿವಾತಕ್ಕೆ ಮತ್ತೊಂದು ಪ್ರಮುಖ ಮನೆಮದ್ದು ಯಾವುದೆಂದರೆ ಅದು ದಾಂಡೇಲಿಯನ್ ಬೇರು. ಇದರ ಎಲೆಗಳು ಹಾಗೂ ಹೂವು ಕೂಡ ನೋವು ನಿವಾರಣೆ ಮಾಡಿ ಸಂಧಿವಾತ ನಿವಾರಣೆ ಮಾಡುವ ಗುಣ ಹೊಂದಿದೆ.


 • ಮೀನಿನೆಣ್ಣೆ

  ಮೀನಿನೆಣ್ಣೆಯಲ್ಲಿ ಉತ್ತಮ ಪ್ರಮಾಣದ ಒಮೆಗಾ-3 ಕೊಬ್ಬಿನಾಮ್ಲವಿದೆ. ಇದು ಉರಿಯೂತ ಮತ್ತು ಗಂಟುಗಳಲ್ಲಿ ಇರುವಂತಹ ನೋವಿನ ತೀವ್ರತೆ ಕಡಿಮೆ ಮಾಡುವುದು. ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿದ್ದರೆ ಮೀನಿನೆಣ್ಣೆಯನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಇನ್ನು ಮೀನಿನೆಣ್ಣೆಯನ್ನು ಸಿದ್ಧರೂಪದಲ್ಲಿ ಅಥವಾ ಕ್ಯಾಪ್ಸೂಲುಗಳ ರೂಪದಲ್ಲಿ ಸೇವಿಸುವ ಮೊದಲು ವೈದ್ಯರನ್ನು ಭೇಟಿಯಾಗಿ ಈ ಬಗ್ಗೆ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳುವುದು ಉತ್ತಮ. ಅಲ್ಲದೇ ಎಷ್ಟು ಸೇವಿಸಬೇಕು, ಯಾವ ಹೊತ್ತಿನಲ್ಲಿ ಸೇವಿಸುವುದು ಉತ್ತಮ ಎಂಬ ಮಾಹಿತಿಯನ್ನು ನಿಮ್ಮ ಆರೋಗ್ಯವನ್ನು ಪರೀಕ್ಷಿಸಿದ ವೈದ್ಯರು ನೀಡಬಲ್ಲರು. ಆ ಪ್ರಕಾರವೇ ಮೀನಿನೆಣ್ಣೆಯ ಕ್ಯಾಪ್ಸೂಲು ಅಥವಾ ದ್ರವರೂಪದಲ್ಲಿ ಸೇವಿಸುವುದು ವಿಹಿತವಾಗಿದೆ.
  Most Read: ಭಾರತದ ಈ ಎಂಟು ದೇವಸ್ಥಾನಕ್ಕೆ ಪುರುಷರಿಗೆ ಪ್ರವೇಶ ನಿಷೇಧ ಮಾಡಲಾಗಿದೆಯಂತೆ!


 • ವ್ಯಾಯಾಮ

  ಸಾಮಾನ್ಯವಾಗಿ ನೋವಿದ್ದರೆ ನಾವು ಆ ಭಾಗಕ್ಕೆ ಯಾವುದೇ ಒತ್ತಡ ನೀಡದೇ ನೋವಿನಿಂದ ರಕ್ಷಿಸಿಕೊಳ್ಳುತ್ತೇವೆ. ಇದನ್ನೇ ಕುಂಟುತನ ಎಂದು ಕರೆಯುತ್ತೇವೆ. ವಾಸ್ತವವಾಗಿ ತೂಕವನ್ನು ಉತ್ತಮ ಮಿತಿಯಲ್ಲಿರಿಸಲು ವ್ಯಾಯಾಮ ಅವಶ್ಯಕವಾಗಿದೆ. ಒಂದು ವೇಳೆ ಸಂಧಿವಾತ ಅಥವಾ ಇದಕ್ಕೆ ಸಮಯಾದ ಇತರ ಯಾವುದೇ ತೊಂದರೆಯಿಂದ ನೀವು ನರಳುತ್ತಿದ್ದರೆ ಹಾಗೂ ನಿಮ್ಮ ತೂಕ ಆರೋಗ್ಯಕರ ಮಿತಿಗಳಲ್ಲಿದ್ದರೆ ನೋವು ಸಹಜವಾಗಿಯೇ ಕಡಿಮೆಯಾಗಲು ಸುಲಭ ವ್ಯಾಯಾಮದಿಂದ ಸಾಧ್ಯವಾಗುತ್ತದೆ. ನೋವಿರುವ ಭಾಗಕ್ಕೆ ಕೊಂಚವೇ ನೋವು ಹೆಚ್ಚುವಷ್ಟು ಮಟ್ಟಿಗಾದರೂ ವ್ಯಾಯಾಮವನ್ನು ನೀಡಿ ನೋವನ್ನು ಸಹಿಸಿಕೊಳ್ಳುತ್ತಾ ಬಂದರೆ ನಿಧಾನವಾಗಿ ನೋವು ತಾನಾಗಿಯೇ ಕಡಿಮೆಯಾಗುತ್ತದೆ.


 • ಆಲಿವ್ ಎಣ್ಣೆ

  ಆಲಿವ್ ಎಣ್ಣೆ ಚರ್ಮದ ಆಳಕ್ಕಿಳಿದು ಮೂಳೆಗಳ ಸಂಧುಗಳಿಗೆ ಅಗತ್ಯವಾದ ಜಾರುಕತೆಯನ್ನು ಒದಗಿಸುತ್ತದೆ. ಈ ಅದ್ಭುತ ಎಣ್ಣೆ ಯನ್ನು ಅಡುಗೆಯಲ್ಲಿ ಬಳಸುವ ಮೂಲಕ ಕೇವಲ ಹೃದಯಕ್ಕೆ ಮಾತ್ರವಲ್ಲ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ ಹಾಗೂ ನೋವಿರುವ ಭಾಗಕ್ಕೆ ಕೊಂಚ ಮಸಾಜ್ ನೊಂದಿಗೆ ಹಚ್ಚಿಕೊಳ್ಳುವ ಮೂಲಕವೂ ಉತ್ತಮ ಆರೈಕೆ ದೊರಕುತ್ತದೆ. ನೋವಿರುವ ಭಾಗದಲ್ಲಿ ಎರಡು ಮೂರು ತೊಟ್ಟು ಮಾತ್ರದಷ್ಟು ಆಲಿವ್ ಎಣ್ಣೆ ಸಾಕಾಗುತ್ತದೆ. ಇದರ ಕ್ಷಮತೆಯನ್ನು ಹೆಚ್ಚಿಸಲು ನಿಮ್ಮ ಆಯ್ಕೆಯ ಅವಶ್ಯಕ ತೈಲದ ಒಂದೆರಡು ತೊಟ್ಟುಗಳನ್ನು ಬೆರೆಸಿದರೆ ನೋವು ಶಮನವಾಗುವ ಗತಿ ಇನ್ನೂ ಹೆಚ್ಚುತ್ತದೆ.
ಸಂಧಿವಾತವೆನ್ನುವುದು ಪ್ರತಿಯೊಬ್ಬರನ್ನು ಒಂದಲ್ಲಾ, ಒಂದು ವಿಧದಿಂದ ಕಾಡುತ್ತಲೇ ಇರುವುದು. ಸಂಧಿವಾತದಿಂದಾಗಿ ಕೆಲವರಿಗೆ ದೈನಂದಿನ ಚಟುವಟಿಕೆಗಳನ್ನು ಸರಿಯಾಗಿ ಮಾಡಿಕೊಳ್ಳಲು ಸಾಧ್ಯವಾಗಲ್ಲ. ಕೆಲವರು ಜೀವನಪೂರ್ತಿ ಈ ನೋವನ್ನು ಅನುಭವಿಸುವರು. ಸಂಧಿವಾತದ ನೋವು ಹಾಗೂ ಉರಿಯೂತ ಶಮನಗೊಳಿಸಲು ಕೆಲವೊಂದು ಮನೆಮದ್ದುಗಳು ಲಭ್ಯವಿದೆ. ಇದು ನೋವು ನಿವಾರಣೆ ಮಾಡಿ, ಶಮನ ನೀಡುವುದಕ್ಕೆ ತುಂಬಾ ಪರಿಣಾಮಕಾರಿ ಎಂದು ಹಿಂದಿನಿಂದಲೂ ಸಾಬೀತಾಗಿದೆ.

ಇಂದು ಬೋಲ್ಡ್ ಸ್ಕೈ ನಿಮಗೆ ಇಂತಹ ಕೆಲವೊಂದು ನೈಸರ್ಗಿಕ ಮನೆಮದ್ದುಗಳ ಬಗ್ಗೆ ತಿಳಿಸಿಕೊಡಲಿದೆ. ಇದರಿಂದ ಸಂಧಿವಾತದ ನೋವು ಹಾಗೂ ಉರಿಯೂತ ಕಡಿಮೆ ಮಾಡಬಹುದು. ಈ ನೈಸರ್ಗಿಕ ಮನೆಮದ್ದುಗಳು ಗಂಟಿನಲ್ಲಿರುವವಂತಹ ನೋವು ಹಾಗೂ ಉರಿಯೂತವನ್ನು ಶೀಘ್ರವಾಗಿ ಕಡಿಮೆಗೊಳಿಸುವುದು. ಅದ್ಭುತವಾಗಿ ಫಲಿತಾಂಶ ನೀಡಬಲ್ಲಂತಹ ಈ ನೈಸರ್ಗಿಕ ಮನೆಮದ್ದುಗಳ ಬಗ್ಗೆ ನೀವು ಈ ಲೇಖನದಲ್ಲಿ ತಿಳಿಯಿರಿ.

ಸೂಚನೆ: ಯಾವುದೇ ನೈಸರ್ಗಿಕ ಮನೆಮದ್ದನ್ನು ಬಳಸುವ ಮೊದಲು ಇದು ನಿಮ್ಮ ಪ್ರಸಕ್ತ ಔಷಧಿಗೆ ಯಾವುದೇ ಪರಿಣಾಮ ಬೀರಲಿದೆಯಾ ಎಂದು ವೈದ್ಯರಿಂದ ತಿಳಿಯಿರಿ.

   
 
ಹೆಲ್ತ್