Back
Home » ಪ್ರವಾಸ
ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆಯಿಂದ ಅಲೌಖಿಕ ಸುಖ ಪ್ರಾಪ್ತಿ
Native Planet | 12th Oct, 2018 12:35 PM
 • ಎಲ್ಲಿದೆ ಈ ದೇವಾಲಯ?

  PC: youtube

  ಚಂದ್ರಘಂಟಾ ದೇವಿ ಮಂದಿರವು ವಾರಣಾಸಿಯಲ್ಲಿನ ಜೈತ್ಪುರಿಯಲ್ಲಿದೆ. ಭಕ್ತರು ನವರಾತ್ರಿ ಮೂರನೇ ದಿನದಂದು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ.

  ಈ ಬಾರಿಯಾದ್ರೂ 750 ಕೆ.ಜಿ ತೂಕದ ಚಿನ್ನದ ಅಂಬಾರಿ ನೋಡ್ಲೇ ಬೇಕು
 • ಮೂರನೇ ಅವತಾರ

  PC: CodePanda

  ದುರ್ಗೇಯ ಮೂರನೇ ಅವತಾರವೇ ಚಂದ್ರಘಂಟಾ. ಈ ದೇವಿಯ ಹಣೆ ಮೇಲೆ ಗಂಟೆಯಾಕಾರದ ಅರ್ಧ ಚಂದ್ರ ಇರೋದರಿಂದ ಚಂದ್ರಘಂಟಾ ಎನ್ನುವ ಹೆಸರು ಬಂದಿದೆ. ತನ್ನ ವಾಹನವಾದ ಸಿಂಹದ ಮೇಲೆ ಸವಾರಿ ಮಾಡುವ ಈ ತಾಯಿಯ ಸ್ವರೂಪವು ಯುದ್ಧ ಹಾಗೂ ದುಷ್ಟರ ನಾಶಕ್ಕೆ ಸಿದ್ಧವಾಗಿರುತ್ತದೆ.


 • ದಶ ಹಸ್ತೆ

  PC:Jonoikobangali

  ಚಂದ್ರಘಂಟಾ ದೇವಿಯ ಸ್ವರೂಪವು ಅದ್ಭುತವಾಗಿದೆ. ತನ್ನ ಹತ್ತು ಹಸ್ತಗಳಲ್ಲಿ ಶಂಖ, ತಾವರೆ, ಬಿಲ್ಲು, ತಲವಾರು, ಕಮಂಡಲ, ತ್ರಿಶೂಲ, ಗಧೆ ಮುಂತಾದ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಣೆ ಮೇಲೆ ಅರ್ಧ ಚಂದ್ರಾಕೃತಿಯಲ್ಲಿ ಗಂಟೆಯ ಚಿತ್ರವಿದೆ. ಹಾಗೆಯೇ ಕೊರಳಿನಲ್ಲಿ ಬಿಳಿ ಮಾಲೆ ಇದೆ.

  ಮನುಷ್ಯರನ್ನು ತಿನ್ನುವ ದೆವ್ವಗಳಿವೆಯಂತೆ ಇಲ್ಲಿ ...ಇದರೊಳಗೆ ಹೋದವರು ಏನಾದ್ರು ಗೊತ್ತಾ?


 • ಏನೆಲ್ಲಾ ಅರ್ಪಿಸುತ್ತಾರೆ

  PC: youtube

  ತೆಂಗಿನಕಾಯಿಗಳು, ಕೆಂಪು ಬಟ್ಟೆ, ಕೆಂಪು ಹೂವುಗಳನ್ನು ದೇವಿಗೆ ಅರ್ಪಣೆ ಮಾಡುತ್ತಾರೆ. ವಾರಣಾಸಿಯಲ್ಲಿನ ದೇವಸ್ಥಾನದ ಹೊರತಾಗಿ, ಭಾರತದಾದ್ಯಂತ ಜನರು ಈ ಮಂಗಳಕರ ದಿನದಂದು ಚಂದ್ರಘಂಟಾ ರೂಪದ ವಿಗ್ರಹಗಳನ್ನು ಪೂಜಿಸುತ್ತಾರೆ .


 • ಅಲೌಖಿಕ ಸುಖ ಪ್ರಾಪ್ತಿ

  PC: youtube

  ಈ ದೇವಿಯು ಸದಾ ಯುದ್ಧಕ್ಕೆ ಸನ್ನದ್ಧಳಾಗಿರುತ್ತಾಳೆ. ಆಕೆಯ ಗಂಟೆಯ ಸದ್ದು ಹಾಗೂ ಧ್ವನಿಗೆ ರಾಕ್ಷಸರೂ ಹೆದರುತ್ತಾರೆ. ಚಂದ್ರಘಂಟಾ ದೇವಿಯ ಆರಾಧನೆ ಮಾಡುವವರಿಗೆ ಅಲೌಖಿಕ ಸುಖ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

  ಬ್ರಹ್ಮಚಾರಿಣಿ ದರ್ಶನ ಪಡೆದ್ರೆ ಸಂತಾನ ಪ್ರಾಪ್ತಿಯಾಗುತ್ತಂತೆ !


 • ಕ್ಷೇಮಾಮಯಿ ಮಂದಿರ

  ಅಲಹಾಬಾದ್‌ನಲ್ಲೂ ಕ್ಷೇಮಾಮಯಿಯ ಅತ್ಯಂತ ಪ್ರಾಚೀನ ದೇವಸ್ಥಾನವಿದೆ. ಇಲ್ಲಿ ದೇವಿ ದುರ್ಗೇಯು ಚಂದ್ರಘಂಟಾ ಸ್ವರೂಪದಲ್ಲಿ ನೆಲೆಸಿದ್ದಾಳೆ. ಇಲ್ಲಿ ದುರ್ಗೇಯ ಒಂಭತ್ತು ರೂಪದ ದರ್ಶನವಾಗುತ್ತದೆ. ಈ ಮಂದಿರದ ದರ್ಶನ ಮಾಡುವುದರಿಂದ ಮಾನಸಿಕ ಹಾಗೂ ಶಾರೀರಿಕ ಕಷ್ಟಗಳು ನಿವಾರಣೆಯಾಗುತ್ತವೆಂತೆ.


 • ಸಾಮೂಹಿಕ ಭಜನೆ

  PC: youtube

  ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಸಾಮೂಹಿಕ ಭಜನೆ, ಕೀರ್ತನೆಗಳು ನಡೆಯುತ್ತವೆ. ದೇವಿಯ ಮೂರ್ತಿಯನ್ನು ಹೂವಿನಿಂದ ಹಾಗೂ ಎಲೆಗಳಿಂದ ಅಲಂಕರಿಸಲಾಗುತ್ತದೆ.

  ಮುರುಡೇಶ್ವರ ಸಮೀಪ ಎಷ್ಟೆಲ್ಲಾ ಬೀಚ್‌ಗಳಿವೆ ಗೊತ್ತಾ?


 • ವಿವಿಧ ಅಲಂಕಾರ

  PC: youtube

  ನವರಾತ್ರಿಯಂದು ಪ್ರತಿದಿನ ದುರ್ಗೇಯ ವಿವಿಧ ರೂಪದ ಅಲಂಕಾರ ಮಾಡಲಾಗುತ್ತದೆ. ಬೆಳಗ್ಗೆ ಹಾಗೂ ಸಂಜೆ ಹೊಸ ವಸ್ತ್ರ, ಹೂವು, ಅಲಂಕಾರಗಳನ್ನು ಮಾಡಿ ಆರತಿ ಮಾಡಲಾಗುತ್ತದೆ. ಸಾವಿರಾರು ಭಕ್ತರು ಈ ದೇವಿಯ ಆರಾಧನೆ ಮಾಡುತ್ತಾರೆ.


 • ಹಾಲಿಗೆ ಪ್ರಾಧಾನ್ಯತೆ

  PC: youtube

  ನವರಾತ್ರಿಯ ಮೂರನೇ ದಿನದ ಪೂಜೆಯಲ್ಲಿ ಹಾಲಿಗೆ ಹೆಚ್ಚಿನ ಪ್ರಾಧಾನ್ಯತೆ ಇರುತ್ತದೆ. ಪೂಜೆಯ ನಂತರ ಆ ಹಾಲನ್ನು ಬ್ರಾಹ್ಮಣರಿಗೆ ದಾನ ಮಾಡುವುದು ಒಳ್ಳೆಯದು.
ನವರಾತ್ರಿಯಂದು ಒಂಭತ್ತು ದಿನಗಳು ಒಂದೊಂದು ದೇವಿಯ ಸ್ವರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ತಾಯಿಯ ಸ್ವರೂಪವು ಯುದ್ಧ ಹಾಗೂ ದುಷ್ಟರ ನಾಶಕ್ಕೆ ಸಿದ್ಧವಾಗಿರುತ್ತದೆ.

   
 
ಹೆಲ್ತ್