Back
Home » ಇತ್ತೀಚಿನ
ಕೇಂದ್ರದಿಂದ ಶಾಕಿಂಗ್ ಸುದ್ದಿ..ಮೊಬೈಲ್ ಖರೀದಿಸುವುದಿದ್ದರೆ ಇಂದೇ ಖರೀದಿಸಿ ಅಷ್ಟೇ!!
Gizbot | 12th Oct, 2018 02:01 PM
 • ಯಾವೆಲ್ಲಾ ಉಪಕರಣಗಳ ಮೇಲೆ ಸುಂಕ?

  ಕಳೆದ ವಾರ 19 ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಸುಂಕವನ್ನು ಹೇರಿದ್ದ ಸರ್ಕಾರ ಈ ಬಾರಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಇಂಟರ್ನೆಟ್ ಪ್ರೋಟೋಕಾಲ್ ಉಪಕರಣಗಳು, ಎತರ್ನೆಟ್ ಸ್ವಿಚ್‌ಗಳು ಹಾಗೂ ಇತರ ಧರಿಸಬಹುದಾದ ಹಲವಾರು ವಸ್ತುಗಳನ್ನು ಪಟ್ಟಿ ಮಾಡಿದೆ. ಈ ಎಲ್ಲಾ ವಸ್ತುಗಳ ಮೇಲೆ ಈಗಾಗಲೇ ಸುಂಕವನ್ನು ಹೆಚ್ಚಿಸುವ ಬಗ್ಗೆ ಮಾಹಿತಿ ನೀಡಿದೆ.


 • ಬೆಲೆ ಎಷ್ಟು ಹೆಚ್ಚಳವಾಗಲಿದೆ?

  ಏರ್‌ ಕಂಡೀಶನರ್, ರೆಫ್ರಿಜರೇಟರ್ ಸಹಿತ 19 ಸಾಮಗ್ರಿ ಗಳ ವಸ್ತುಗಳ ಬೆಲೆ ಶೇ. 10 ರಿಂದ 20 ಪರ್ಸೆಂಟ್ ವರೆಗೂ ಏರಿಸಿದ್ದ ಸರ್ಕಾರ, ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳು, ಇಂಟರ್ನೆಟ್ ಪ್ರೋಟೋಕಾಲ್ ಉಪಕರಣಗಳ ಮೇಲೂ 20 ಪರ್ಸೆಂಟ್ ವರೆಗೂ ಸುಂಕ ವಿಧಿಸಲಿದೆ ಎನ್ನಲಾಗಿದೆ. ಆದರೆ, ಸುಂಕ ಎಷ್ಟು ಎಂಬ ಸ್ಪಷ್ಟ ಮಾಹಿತಿಯನ್ನು ಈ ವರೆಗೂ ನೀಡಿಲ್ಲ.


 • ಟೆಲಿಕಾಂ ಮೇಲೆ ಗಧಪ್ರಹಾರ?

  ಕೇಂದ್ರದ ನೂತನ ಆಮದು ಸುಂಕ ಹೆಚ್ಚಳ ಕೆಲ ದಿನಗಳಲ್ಲೇ ಜಾರಿಯಾಗಲಿದ್ದು, ರಿಲಯನ್ಸ್​ ಜಿಯೋ, ಭಾರ್ತಿ ಏರ್​ಟೆಲ್, ​ಐಡಿಯಾ ಕಂಪೆನಿಗಳ ಸೇರಿದಂತೆ ಎಲ್ಲಾ ಟೆಲಿಕಾಂಗಳ ಮೇಲೂ ಪರಿಣಾಮ ಬೀರಲಿದೆ ಎಂದು ಕೌಂಟರ್ಪಾಯಿಂಟ್ ಸಂಶೋಧನಾ ಸಂಸ್ಥೆಯ ನೀಲ್ ಷಾ ಅವರು ತಿಳಿಸಿದ್ದಾರೆ. ಟೆಲಿಕಾಂ ಟ್ಯಾರಿಫ್ ಬೆಲೆ ಕೂಡ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.


 • ಇಂಟರ್‌ನೆಟ್ ಮೇಲೂ ಎಫೆಕ್ಟ್!

  ಇಂಟರ್ನೆಟ್ ಪ್ರೋಟೋಕಾಲ್ ಉಪಕರಣಗಳ ಮೇಲೆ ಸುಂಕ ವಿಧಿಸುತ್ತಿರುವುದು ಟೆಲಿಕಾಂ ಮೇಲೂ ಪ್ರಭಾವ ಬೀರಲಿದೆ. ಸಿಸ್ಕೊ ​​ಸಿಸ್ಟಮ್ಸ್ ಇಂಕ್, ಹುವಾವೇ ಟೆಕ್ನಾಲಜೀಸ್ ಸ್ಯಾಮ್ಸಂಗ್ ಮುಂತಾದ ನೆಟ್ವರ್ಕ್ ಉಪಕರಣ ತಯಾರಕರಿಗೆ ಈಗ ಹೆಚ್ಚು ಭಾರವಾಗಲಿದೆ. ಹಾಗಾಗಿ, ಬ್ರ್ಯಾಡ್‌ಬ್ಯಾಂಡ್ ಹೆಚ್ಚುವರಿ ವೆಚ್ಚವನ್ನು ಸಹ ಗ್ರಾಹಕರೇ ಭರಿಸಬೇಕಾದ ಪರಿಸ್ಥಿತಿ ಭರಲಿದೆ.


 • ಮೊಬೈಲ್ ಖರೀದಿಗೆ ಇದು ಲಾಸ್ಟ್ ಚಾನ್ಸ್!

  ಆನ್‌ಲೈನ್‌ ಮಾರಾಟದ ದೈತ್ಯ ಸಂಸ್ಥೆಗಳಾದ ಅಮೆಝಾನ್ ಮತ್ತು ಫ್ಲಿಪ್ಕಾರ್ಟ್ ವರ್ಷಕ್ಕೊಮ್ಮೆ ಮಾತ್ರ ಆಯೋಜಿಸುವ ಭಾರಿ ರಿಯಾಯಿತಿ ಮಾರಾಟದ ದಿನಗಳು ಈಗ ಚಾಲ್ತಿಯಲ್ಲಿವೆ. ಈ ಮಾರಾಟ ಮೇಳ ಮುಗಿದ ನಂತರ ಮೊಬೈಲ್‌ಗಳ ಬೆಲೆ ಕೂಡ ಭಾರೀ ಏರಿಕೆ ಕಾಣಲಿವೆ. ಹಾಗಾಗಿ, ಮೊಬೈಲ್ ಖರೀದಿದಾರರಿಗೆ ಇದು ಲಾಸ್ಟ್ ಚಾನ್ಸ್ ಎಂದು ಹೇಳಬಹುದು.


 • ಚೀನಾಗೆ ಆತಂಕ!

  ಚೀನಾದ ಸರಕುಗಳಿಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಭಾರತ ಸರ್ಕಾರದ ಹೊಸ ನಿಯಮ ನಮ್ಮ ದೇಶದ ಆರ್ಥಿಕತೆ ಮೇಲೆ ಭಾರಿ ಹೊಡೆತ ನೀಡಲಿದೆ ಎಂದು ಚೀನಾದ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಬೆಲೆ ಏರಿಕೆಯಾಗುವ ವಸ್ತುಗಳ ಆಮದು ಚೀನಾದಿಂದಲೇ ಹೆಚ್ಚು ನಡೆಯುವುದರಿಂದ ಈ ಬಗ್ಗೆ ಚೀನಾ ಕೂಡ ಆತಂಕ ವ್ಯಕ್ತಪಡಿಸಿದೆ.
ಇತ್ತೀಚಿಗಷ್ಟೇ ವಿದೇಶದಿಂದ ಆಮದಾಗುವ ಏರ್‌ ಕಂಡೀಶನರ್, ರೆಫ್ರಿಜರೇಟರ್ ಸಹಿತ 19 ಸಾಮಗ್ರಿ ಗಳ ಆಮದು ಸುಂಕವನ್ನು ಏರಿಸಿ ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಶಾಕಿಂಗ್ ಸುದ್ದಿಯನ್ನು ನೀಡಿದೆ. ಪಾತಾಳಕ್ಕೆ ಕುಸಿದಿರುವ ರೂಪಾಯಿ ಮೌಲ್ಯವನ್ನು ನಿಯಂತ್ರಿಸಲು ಈ ಬಾರಿ ಸ್ಮಾರ್ಟ್‌ಫೋನ್‌ಗಳ ಮೇಲೆ ಸರ್ಕಾರ ಕೆಂಗಣ್ಣು ಬೀರಿದೆ.

ಅನಗತ್ಯ ವಸ್ತುಗಳ ಆಂದಿನ ಮೇಲೆ ಸುಂಕ ಹೆಚ್ಚಳ ಮಾಡಿದ ಎರಡೇ ವಾರಕ್ಕೆ ಮತ್ತೊಂದು ಆಮದು ಸುಂಕ ಹೆಚ್ಚಳಕ್ಕೆ ಕೇಂದ್ರ ಮುಂದಾಗಿದೆ. ಈ ಬಾರಿ ಸ್ಮಾರ್ಟ್‌ಫೋನ್ ಹಾಗೂ ಮೇಲೆ ಕಣ್ಣುಹಾಕಿರುವ ಸರ್ಕಾರ ಶೀಘ್ರವೇ ಸ್ಮಾರ್ಟ್​ಫೋನ್ ಹಾಗೂ ಇಂಟರ್‌ನೆಟ್ ಉಪಕರಣಗಳ ಮೇಲೆ ಭಾರೀ ಆಮದು ಸುಂಕ ಏರಿಕೆ ಮಾಡುತ್ತಿದೆ ಎಂಬ ಸುದ್ದಿ ಬಹುತೇಕ ಖಚಿತವಾಗಿದೆ.

ಈ ವರ್ಷ ಡಾಲರ್ ಎದುರು ರೂಪಾಯಿ ಮೌಲ್ಯ ಶೇ. 14% ಕ್ಕಿಂತ ಹೆಚ್ಚು ದುರ್ಬಲಗೊಂಡಿರುವುದರಿಂದ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಲಾಗಿದೆ. ಹಾಗಾದರೆ, ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು ಹೆಚ್ಚಳವಾಗುತ್ತಿದೆ? ಯಾವೆಲ್ಲಾ ಉಪಕರಣಗಳ ಮೇಲೆ ಸುಂಕವನ್ನು ಹೇರಲಾಗುತ್ತಿದೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್