Back
Home » ಪ್ರವಾಸ
ದುಶ್ಯಂತ, ಶಕುಂತಲಾ ವಿವಾಹ ನಡೆದ ನಂದ ಪ್ರಯಾಗವನ್ನು ನೋಡಿದ್ದೀರಾ?
Native Planet | 12th Oct, 2018 03:30 PM
 • ಎಲ್ಲಿದೆ ಈ ನಂದ ಪ್ರಯಾಗ

  PC:Travelling Slacker

  ನಂದಪ್ರಯಾಗವು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಜೋಶಿಮಠದಿಂದ ಬದರಿಗೆ ತೆರಳುವ ಮಾರ್ಗದಲ್ಲಿ ಇದೆ.


 • ನಂದ ದೇವಾಲಯ

  PC:Michael Scalet

  ತಂಪಾದ ಪರಿಸರ, ಸುತ್ತಲು ಹಚ್ಚಹಸಿರು, ದೂರದಲ್ಲಿ ಅಮೋಘವಾಗಿ ಕಾಣುವ ಹಿಮಚ್ಛಾದಿತ ಪರ್ವತಗಳು ಒಟ್ಟಾರೆಯಾಗಿ ಇಲ್ಲಿನ ಸೃಷ್ಟಿ ಸೌಂದರ್ಯವನ್ನು ಶ್ಲಾಘಿಸುವಂತೆ ಮಾಡಿವೆ. ನಂದಪ್ರಯಾಗದಲ್ಲಿ ಮುಖ್ಯವಾಗಿ ಕೆಲವು ದೇವಾಲಯಗಳಿದ್ದು ಅದರಲ್ಲಿ ನಂದ ದೇವಾಲಯವು ಪ್ರಮುಖವಾಗಿದೆ.

  ಮೋದಿ ಕೂಡಾ ಪ್ರಶ್ನೆಗೆ ಉತ್ತರ ಕೇಳಲು ಬಂದಿದ್ರಂತೆ ರಾಯಚೂರಿನ ಈ ತಾಯಿಯ ಬಳಿಗೆ


 • ಯದು ಸಾಮ್ರಾಜ್ಯ

  Pc: Fowler&fowler

  ಹಿಂದೆ ಯದು ಸಾಮ್ರಾಜ್ಯದ ರಾಜಧಾನಿಯಾಗಿತ್ತು ನಂದಪ್ರಯಾಗ. ನಂದ ರಾಜನು ಇಲ್ಲಿನ ಶಿಲೆಯೊಂದರ ಮೇಲೆ ಯಜ್ಞವೊಂದನ್ನು ಮಾಡಿದ್ದ. ನಂತರ ಅದೆ ಶಿಲೆಯನ್ನು ನಂದ ದೇವಾಲಯದ ನಿರ್ಮಾಣಕ್ಕೆಂದು ಅಡಿಪಾಯವಾಗಿ ಬಳಸಲಾಗಿದೆ ಎನ್ನಲಾಗುತ್ತದೆ.


 • ನದಿಗಳ ಸಂಗಮ

  ನಂದಪ್ರಯಾಗ ಮೂಲತಃ ಸಂಗಮ ಕ್ಷೇತ್ರವಾಗಿದ್ದು ಇಲ್ಲಿ ಅಲಕನಂದಾ ಹಾಗೂ ನಂದಾಕಿನಿ ನದಿಗಳು ಸಂಗಮ ಹೊಂದುತ್ತವೆ. ಧಾರ್ಮಿಕವಾಗಿ ಈ ಸಂಗಮದಲ್ಲಿ ಮಿಂದವರು ನಿಜವಾಗಿಯೂ ಒಳ್ಳೆಯವರಾಗಿ ಬದಲಾಗಿದ್ದಲ್ಲಿ ಅವರ ಎಲ್ಲಾ ಪಾಪ-ಕರ್ಮಗಳು ನಶಿಸಿ ಹೋಗುತ್ತವೆ ಎಂದು ನಂಬಲಾಗಿದೆ.

  ರಾಯರು 12 ವರ್ಷಗಳ ಕಾಲ ತಪಸ್ಸು ಮಾಡಿದ್ದ ಕರ್ನಾಟಕದ ಆ ಸ್ಥಳ ಯಾವುದು ಗೊತ್ತಾ?


 • ಸಾಹಸಮಯ ಚಟುವಟಿಕೆಗಳೂ ಇವೆ

  ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಒಂದು ಸಾಹಸಮಯ ಅದ್ಭುತ ಪ್ರವಾಸಿ ತಾಣವಾಗಿಯೂ ನಂದಪ್ರಯಾಗ ಹೆಸರುವಾಸಿಯಾಗಿದೆ. ಇಲ್ಲಿ ರೋಮಾಂಚನ ನೀಡುವಂತಹ ಚಾರಣ ಮಾರ್ಗಗಳು, ಪರ್ವತಾರೋಹಣ ಸ್ಕಿಯೀಂಗ್ ಹಾಗೂ ದೋಣಿ ಸವಾರಿಯಂತಹ ಆಕರ್ಷಕ ಸಾಹಸಮಯ ಚಟುವಟಿಕೆಗಳನ್ನು ಆಸ್ವಾದಿಸಬಹುದು.


 • ದುಶ್ಯಂತ ಮತ್ತು ಶಕುಂತಲಾ ವಿವಾಹ

  PC: youtube

  ಇಲ್ಲಿ ಕೃಷ್ಣನ ರೂಪವಾದ ಗೋಪಾಲನ ದೇವಸ್ಥಾನವಿದೆ.. ಈ ಸ್ಥಳದಲ್ಲಿ ಕನ್ವಾ ತನಕ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಲ್ಲದೆ, ರಾಜ ದುಶ್ಯಂತ ಮತ್ತು ಶಕುಂತಲಾ ಅವರ ವಿವಾಹವೂ ನಡೆಯಿತು ಎನ್ನಲಾಗುತ್ತದೆ.

  ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆಯಿಂದ ಅಲೌಖಿಕ ಸುಖ ಪ್ರಾಪ್ತಿ


 • ತಲುಪುವುದು ಹೇಗೆ?

  ಜೋಶಿಮಠದಿಂದ ಬದರಿಗೆ ತೆರಳುವ ಮಾರ್ಗದಲ್ಲಿ ನಂದಪ್ರಯಾಗವು ಸ್ಥಿತವಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ನಂದಪ್ರಯಾಗಕ್ಕೆ ತೆರಳಲು ದೆಹಲಿ, ಹರಿದ್ವಾರ, ಡೆಹ್ರಾಡೂನ್, ಅಲ್ಮೋರಾ ಹಾಗೂ ನೈನಿತಾಲ್ ಗಳಿಂದ ಬಸ್ಸುಗಳು ದೊರೆಯುತ್ತವೆ.


 • ಭೇಟಿಗೆ ಸೂಕ್ತ

  ಭೇಟಿ ನೀಡಲು ಮಾರ್ಚ್ ನಿಂದ ಜೂನ್ ಹಾಗೂ ಅಕ್ಟೋಬರ್ ಮತ್ತು ನವಂಬರ್ ಬಲು ಪ್ರಶಸ್ತವಾದ ಸಮಯವಾಗಿದೆ. ತಂಗಲು ಹೋಟೆಲುಗಳು ದೊರೆಯುತ್ತವೆ. ಮುಂಚಿತವಾಗಿಯೆ ಬುಕ್ ಮಾಡಿದರೆ ಉತ್ತಮ.
ಬದರಿನಾಥಕ್ಕೆ ತೆರಳುವಾಗ ಸಿಗುವ ಒಂದು ಸುಂದರ ತಾಣವೇ ನಂದಪ್ರಯಾಗ. ಪಂಚ ಪ್ರಯಾಗಗಳಲ್ಲಿ ಒಂದಾಗಿರುವ ನಂದಪ್ರಯಾಗವು ಸಾಕಷ್ಟು ಧಾರ್ಮಿಕ ಮಹತ್ವ ಪಡೆದಿರುವ ತಾಣವಾಗಿದೆ. ನಂದಪ್ರಯಾಗ ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರಾಕೃತಿಕವಾಗಿಯೂ ರಮಣೀಯ ತಾಣವಾಗಿದೆ.

   
 
ಹೆಲ್ತ್