Back
Home » Bike News
ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ
DriveSpark | 12th Oct, 2018 01:43 PM
 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಟಿವಿಎಸ್ ಸಂಸ್ಥೆಯು 2018ರ ವಿಗೊ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.53,027ಕ್ಕೆ ನಿಗದಿಗೊಳಿಸಿದ್ದು, ಸ್ಕೂಟರ್ ಹೊರಭಾಗದಲ್ಲಿ ಹೊಸದಾಗಿ ನೀಡಲಾಗಿರುವ ಗ್ರಾಫಿಕ್ಸ್ ಡಿಸೈನ್‌ಗಳು ಸ್ಕೂಟರ್ ಲುಕ್‌ಗೆ ಮೆರಗು ತಂದಿದೆ. ಹೀಗಾಗಿ ಸ್ಪೋರ್ಟಿ ಲುಕ್ ಸ್ಕೂಟರ್ ಇಷ್ಟಪಡುವ ಗ್ರಾಹಕರನ್ನು ಇದು ಉತ್ತಮ ಆಯ್ಕೆಯಾಗಿದ್ದು, ಬೆಲೆ ಕೂಡಾ ಆಕರ್ಷಣೆಯಾಗಿವೆ.


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಹೊಸ ವಿಗೊ ಸ್ಕೂಟರ್‌ಗಳಲ್ಲಿ ಮತ್ತೊಂದು ಪ್ರಮುಖ ಬದಲಾಣೆ ಮಾಡಲಾಗಿದ್ದು, ಈ ಹಿಂದಿನ ಎಂಜಿನ್ ಜೋಡಣೆಯಲ್ಲಿ ಕೆಲವು ತಾಂತ್ರಿಕ ದೋಷದಿಂದಾಗಿ ಸ್ಕೂಟರ್ ಬ್ಯಾಲೆನ್ಸ್ ಮಾಡಲು ತುಸು ತೊಂದರೆ ಇತ್ತು. ಆದ್ರೆ ಇದೀಗ ಎಂಜಿನ್ ಜೋಡಣೆಯಲ್ಲಿ ಬದಲಾಣೆ ತರುವ ಮೂಲಕ ಈ ಹಿಂದಿನ ಸಮಸ್ಯೆಯನ್ನು ಹೊಗಲಾಡಿಸಿದೆ.


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಇದರ ಹೊರತಾಗಿ ಸ್ಕೂಟರ್ ಮಾದರಿಗಳಲ್ಲಿ ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯನ್ನು ಹೊಂದಿರುವ ವಿಗೊ ಸ್ಕೂಟರ್‌ನಲ್ಲಿ ಹೊಸದಾಗಿ ಅಳವಡಿಸಲಾಗಿರುವ ಸ್ಪೋಟಿ ಸೀಟು, 20-ಲೀಟರ್ ಸಾಮರ್ಥ್ಯದ ಯುಟಿಲಿಟಿ ಬಾಕ್ಸ್ ಮತ್ತು ವೀಲ್ಹ್ ರಿಮ್ ಸಿಕ್ಟರ್‌ನಿಂದಾಗಿ ಸ್ಕೂಟರ್ ಹೊಸ ಲುಕ್ ಪಡೆದಿದೆ.


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಎಂಜಿನ್ ಸಾಮರ್ಥ್ಯ
  109.7-ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ವಿಗೊ ಸ್ಕೂಟರ್‌ಗಳು 8-ಬಿಎಚ್‌ಪಿ ಮತ್ತು 8.4-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, 12-ಇಂಚಿನ ಅಲಾಯ್ ಚಕ್ರಗಳನ್ನು ಜೋಡಿಸಲಾಗಿದೆ.


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಜೊತೆಗೆ ಪೂರ್ಣ ಪ್ರಮಾಣದ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಟೈಲ್ ಲ್ಯಾಂಪ್, ಹೊರ ಭಾಗದಲ್ಲಿರುವ ಫ್ಯೂಲ್ ಕ್ಯಾಪ್, ಯುಟಿಲಿಟ್ ಬಾಕ್ಸ್‌ನಲ್ಲಿ ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೌಲಭ್ಯದಿಂದಾಗಿ ಸ್ಕೂಟರ್ ಆಯ್ಕೆಯ ಮೌಲ್ಯವನ್ನು ಹೆಚ್ಚಿಸಿದೆ.

  MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಹೀಗಾಗಿ ಹೊಸ ವಿಗೊ ಸ್ಕೂಟರ್ ಸದ್ಯ ಮಾರುಕಟ್ಟೆಯಲ್ಲಿರುವ ಹೋಂಡಾ ಆಕ್ಟಿವಾ 5ಜಿ, ಹೀರೋ ಮ್ಯಾಸ್ಟ್ರೋ ಎಡ್ಜ್, ಯಮಹಾ ರೇ-ಜೆಡ್ ಮಹೀಂದ್ರಾ ಗಸ್ಟೋ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದ್ದು, ಎಲ್ಲಾ ವಯೋಮಾನದ ಗ್ರಾಹಕರು ಈ ಸ್ಕೂಟರ್‌ಗಳನ್ನು ಆಯ್ಕೆ ಮಾಡಬಹುದು.


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಈ ಬಗ್ಗೆ ಮಾತನಾಡಿರುವ ಟಿವಿಎಸ್ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಅನಿರುದ್ಧ ಹಲ್ದಾರ್ ಅವರು ವಿಗೊ ಸರಣಿಯಲ್ಲಿ ಆದ ಪ್ರಮುಣ ಬದಲಾಣೆಯು ಮುಂಬರುವ ದಿನಗಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದ್ದು, ಸದ್ಯ ಗ್ರಾಹಕರ ಬೇಡಿಕೆಗೆ ಬೇಡಿಕೆಗೆ ಅನುಗುಣವಾಗಿ ಮಹತ್ವದ ಬದಲಾವಣೆ ತಂದಿರುವುದು ಈ ಸ್ಕೂಟರ್ ಹಲವು ವಿಶೇಷತೆಗೆ ಕಾರಣವಾಗಿದೆ ಎಂದಿದ್ದಾರೆ.


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಇದಲ್ಲದೇ ಟಿವಿಎಸ್ ನಿರ್ಮಾಣದ ಇನ್ನೆರಡು ಸ್ಕೂಟರ್ ಮಾದರಿಗಳಾದ ಜೂಪಿಟರ್ ಮತ್ತು ಎನ್‌ಟಾರ್ಕ್ 125 ಸ್ಕೂಟರ್‌ಗಳು ಸಹ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಕಾಯ್ದಕೊಂಡಿದ್ದು, ಅವುಗಳ ಮೇಲೆ ಟಿವಿಎಸ್ ಹೆಚ್ಚಿನ ಒತ್ತುನೀಡುತ್ತಿರುವುದರಿಂದ ವಿಗೊ ಮಾರಾಟ ಅಷ್ಟಾಗಿ ಏರಿಕೆ ಕಾಣುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿದ್ದವು.

  MOST READ: ಹೋಂಡಾ ಆಕ್ಟೀವಾ ಸ್ಕೂಟರ್‌ಗಿಂತಲೂ ದುಬಾರಿ ಈ ಹೆಲ್ಮೆಟ್ ಬೆಲೆ..!


 • ಹೊಸ ಬಣ್ಣದ ಆಯ್ಕೆಯೊಂದಿಗೆ 2018ರ ಟಿವಿಎಸ್ ವಿಗೊ ಬಿಡುಗಡೆ

  ಇದರಿಂದ ವಿಗೊ ಸ್ಕೂಟರ್‌ಗಳಲ್ಲಿ ಪ್ರಮುಖ ಬದಲಾಣೆಯೊಂದಿಗೆ ಇದೀಗ ಬಿಡುಗಡೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಸ್ಕೂಟರ್ ಮಾರಾಟ ಪ್ರಮಾಣದ ಮೇಲೆ ವಿಗೊ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಗ್ರಾಹಕರ ಬೇಡಿಕೆಯಲ್ಲಿ ಹಿನ್ನೆಡೆ ಅನುಭವಿಸಿದ್ದಲ್ಲಿ ವಿಗೊ ಸ್ಕೂಟರ್ ಮಾರಾಟಕ್ಕೆ ಬ್ರೇಕ್ ಕೂಡಾ ಹಾಕುವ ಸಾಧ್ಯತೆಯನ್ನು ಸಹ ತಳ್ಳಿಹಾಕುವಂತಿಲ್ಲ.
ದೇಶದ ಜನಪ್ರಿಯ ಸ್ಕೂಟರ್ ಮಾದರಿಗಳಲ್ಲಿ ಒಂದಾಗಿರುವ ಟಿವಿಎಸ್ ವಿಗೊ ಇದೀಗ ಮತ್ತಷ್ಟು ಹೊಸತನದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಸ್ಕೂಟರ್ ವಿನ್ಯಾಸಗಳಲ್ಲಿ ಗುರುತರ ಬದಲಾವಣೆ ಪಡೆದುಕೊಂಡಿದೆ.

ಇಂಧನ ಬೆಲೆ ಏರಿಕೆ ಚಿಂತೆ ಬೇಡವೇ ಬೇಡ- ಇಲ್ಲಿದೆ ನೋಡಿ ಉತ್ತಮ ಮೈಲೇಜ್ ನೀಡುವ ಏಥರ್ ಎರ್ನಜಿ ಎಲೆಕ್ಟ್ರಿಕ್ ಸ್ಕೂಟರ್..!

   
 
ಹೆಲ್ತ್