ಸ್ಮಾರ್ಟ್ ಟಿವಿಗಳು ಭಾರೀ ರಿಯಾಯಿತಿಯಲ್ಲಿ ಮೂರು ಸೇಲ್ಗಳಲ್ಲಿ ಮಾರಾಟವಾಗುತ್ತಿದ್ದು, ಪೇಟಿಎಂ ಮಾಲ್ನ ಮಹಾ ಕ್ಯಾಶ್ಬ್ಯಾಕ್ ಸೇಲ್ನಲ್ಲಿ ಸ್ಮಾರ್ಟ್ಟಿವಿಗಳ ಮೇಲೆ 8,500 ರೂ.ವರೆಗೆ ಕ್ಯಾಶ್ಬ್ಯಾಕ್ ಲಭ್ಯವಾಗುತ್ತಿದೆ. ಭಾರತದಲ್ಲಿ ಈಗ ಆನ್ಲೈನ್ ಸೇಲ್ಗಳದ್ದೇ ಮಾತಾಗಿದೆ. ಹೌದು, ಕಳೆದ 3 ದಿನಗಳಿಂದ ಅಮೆಜಾನ್, ಫ್ಲಿಪ್ಕಾರ್ಟ್, ಪೇಟಿಎಂ ಮಾಲ್ಗಳು ದೊಡ್ಡ ಮಟ್ಟದ ಮಾರಾಟಗಳನ್ನು ಆರಂಭಿಸಿರುವುದು ನಿಮಗೆಲ್ಲ ಗೊತ್ತೆ ಇದೆ. ಫ್ಯಾಶನ್, ಆಹಾರ ಸಾಮಗ್ರಿ, ಗೃಹೋಪಯೋಗಿ ಉತ್ಪನ್ನಗಳು, ಸ್ಮಾರ್ಟ್ಫೋನ್, ಲ್ಯಾಪ್ಟಾಪ್, ಸ್ಮಾರ್ಟ್ ಟಿವಿ ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ.
ಅದಲ್ಲದೇ ಶೇ.25ರವರೆಗೆ ಸ್ಮಾರ್ಟ್ ಟಿವಿಗಳ ಮೇಲೆ ಪೇಟಿಎಂ ಮಾಲ್ ರಿಯಾಯಿತಿ ಘೋಷಿಸಿರುವುದರಿಂದ ಅತಿ ಕಡಿಮೆ ಬೆಲೆಗೆ ಈ ಹಬ್ಬದ ಸೀಸನ್ನಲ್ಲಿ ಮನೆಗೊಮದು ಸ್ಮಾರ್ಟ್ಟಿವಿಯನ್ನು ಖರೀದಿಸಬಹುದಾಗಿದೆ. ಇದರ ಜತೆಗೆ ICICI ಬ್ಯಾಂಕ್ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಸ್ಮಾರ್ಟ್ಟಿವಿ ಖರೀದಿಸಿದರೆ ಶೇ.10ರಷ್ಟು ಹೆಚ್ಚುವರಿ ಕ್ಯಾಶ್ಬ್ಯಾಕ್ ಸಿಗಲಿದೆ. ಅದಕ್ಕಾಗಿಯೇ ನಿಮಗೆ ಅನುಕೂಲವಾಗಲಿ ಎಂದು 25,000 ರೂ. ಯಿಂದ 45,000 ರೂ.ವರೆಗಿನ ಬೆಲೆಯ ಸ್ಮಾರ್ಟ್ಟಿವಿಗಳನ್ನು ರಿಯಾಯಿತಿ ಮತ್ತು ಕ್ಯಾಶ್ಬ್ಯಾಕ್ ಜತೆಯಲ್ಲಿ ಪಟ್ಟಿ ಮಾಡಲಾಗಿದ್ದು, ಟಿವಿ ಖರೀದಿಸಬೇಕೆಂದರೆ ಒಂದ್ಸಲ ಈ ಸ್ಟೋರಿ ನೋಡಿ..