Back
Home » ಇತ್ತೀಚಿನ
ಇಂಟರ್‌ನೆಟ್‌, ಕಾಲ್‌ಗೆ ಮೊದಲಿನಷ್ಟೇ ಬೆಲೆ ತೆರುವ ಕಾಲ ದೂರವಿಲ್ಲ..!
Gizbot | 13th Oct, 2018 07:30 AM
 • ಆಫರ್ ನಲ್ಲಿ ಏರಿಕೆ :

  ಆದರೆ ಮುಂದಿನ ಕೆಲವು ತ್ರೈಮಾಸಿಕದಲ್ಲಿ ಮಾರುಕಟ್ಟೆಯಲ್ಲಿನ ಇದರ ಬೆಲೆಯಲ್ಲಿ ಬದಲಾವಣೆಯನ್ನು ಟೆಲಿಕಾಂ ಸಂಸ್ಥೆಗಳು ಮಾಡುವ ಸಾಧ್ಯತೆ ಇದೆ ಮತ್ತು ಅದಕ್ಕೆ ಜನರಿಂದ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ.ಕೆಲವು ತಜ್ಞರು ಮತ್ತು ಅಧಿಕಾರಿಗಳು ತಿಳಿಸುವಂತೆ ತಾರಿಫ್ ಗಳು ಮುಂದಿನ ಎರಡು ತ್ರೈಮಾಸಿಕದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಅದು ಬಹುಶ್ಯಃ ಕಳೆದೆರಡು ವರ್ಷಗಳಲ್ಲಿ ಮಾರುಕಟ್ಟೆ ಕಾಣದ ಬೆಲೆಯೂ ಆಗಿರಬಹುದು ಎಂದು ಊಹಿಸಲಾಗುತ್ತಿದೆ.


 • ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುತ್ತಿರುವ ಜಿಯೋ:

  ಆದರೆ ರಿಲಯನ್ಸ್ ಜಿಯೋ ಈ ನಿಟ್ಟಿನಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಯಾಕೆಂದರೆ ಕಳೆದ ಜನವರಿಯಿಂದಲೂ ಕೂಡ ರಿಲಯನ್ಸ್ ಜಿಯೋ ತನ್ನ ಪ್ಲಾನ್ ಮತ್ತು ಅದರ ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ ಮತ್ತು ರಿಲಯನ್ಸ್ ನ ಆಫರ್ ಗಳು ಇತರೆ ಟೆಲಿಕಾಂ ಸಂಸ್ಥೆಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.


 • ಜಿಯೋ ಆಫರ್ ನಿಂದ ಮಾರುಕಟ್ಟೆ ಸ್ಥಿತಿಗತಿ ಅಲ್ಲೋಲ ಕಲ್ಲೋಲ:

  2016 ರಲ್ಲಿ ಜಿಯೋ ಸಂಸ್ಥೆ ಮಾರುಕಟ್ಟೆಗೆ ಕಾಲಿಟ್ಟಾಗಿನಿಂದ ಇತರೆ ಟೆಲಿಕಾಂ ಆಪರೇಟರ್ ಗಳಿಗೆ ತಮ್ಮ ಬೆಲೆಯನ್ನು ಇಳಿಕೆ ಮಾಡುವುದು ಅನಿವಾರ್ಯವಾಯಿತು.ಗ್ರಾಹಕರನ್ನು ಉಳಿಸಿಕೊಳ್ಳಬೇಕಾದರೆ ಜಿಯೋಗಿಂತ ಕಡಿಮೆ ಬೆಲೆಯ ತಾರಿಫ್ ಗಳನ್ನು ನೀಡಲೇಬೇಕಾದ ಒತ್ತಡಕ್ಕೆ ಸಿಲುಕಿದ್ದವು. ಹಾಗಾಗಿ ಡಾಟಾ ಸರ್ವೀಸ್ ಮತ್ತು ವಾಯ್ಸ್ ಕರೆಗಳಲ್ಲಿ ಬೆಲೆಯನ್ನು ಜಿಯೋ ನೀಡುವಂತೆಯೇ ನೀಡಲಾಯಿತು.


 • ಜಿಯೋ ತಾಂತ್ರಿಕತೆ ಹಾಗೂ ಇತರೆ ಟೆಲಿಕಾಂ ತಾಂತ್ರಿಕತೆ ವಿಭಿನ್ನ:

  ಆದರೆ ಜಿಯೋನ ತಾಂತ್ರಿಕತೆಯು ಕಡಿಮೆ ಬೆಲೆಗೆ ಒಗ್ಗಿಕೊಳ್ಳುತ್ತದೆ. ಹಳೆಯ ಟೆಲಿಕಾಂ ಆಪರೇಟರ್ ಗಳ ತಂತ್ರಜ್ಞಾನ ಮತ್ತು ವ್ಯವಸ್ಥೆಯು ಕಡಿಮೆ ಬೆಲೆಯ ತಾರಿಫ್ ಗಳಿಂದ ನಿರ್ವಹಿಸಲು ಅಸಾಧ್ಯವಾಗುವಂತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರು ಸ್ವಲ್ಪ ಮಟ್ಟಿಗೆ ಹೆಚ್ಚುವರಿ ಬೆಲೆಯನ್ನು ಇತರೆ ಟೆಲಿಕಾಂ ಆಪರೇಟರ್ ಗಳಿಗೆ ನೀಡಬೇಕಾದ ಅನಿವಾರ್ಯ ಸಂದರ್ಬ ಎದುರಾಗುವ ಸಾಧ್ಯತೆ ಇದೆ. ಬೆಲೆ ಇಳಿಕೆಯ ಕಾರಣದಿಂದಾಗಿ ಚಂದಾದಾರರು ಲಾಭವನ್ನೇ ಮಾಡಿಕೊಂಡರು ಆದರೆ ಇದು ಮೊಬೈಲ್ ಫೋನ್ ಕಂಪೆನಿಗಳಿಗೆ ಹೊಡೆತ ನೀಡಿತು.

  ವೊಡಾಫೋನ್ ಮತ್ತು ಭಾರತೀ ಏರ್ ಟೆಲ್ ಅನಿವಾರ್ಯವಾಗಿ ಜಿಯೋ ನೊಂದಿಗೆ ಸ್ಪರ್ಧಿಸಲು ದಾರಿ ಹುಡುಕಬೇಕಾದ ಪರಿಸ್ಥಿತಿಯನ್ನು ಎದುರಿಸಿತು. ಹಾಗಾಗಿ ತಜ್ಞರು ಸಮಸ್ಯೆ ರಹಿತ ಟೆಲಿಕಾಂ ಸೇವೆ ಲಭ್ಯವಾಗಬೇಕಾದರೆ ಬೆಲೆ ಏರಿಕೆ ಅನಿವಾರ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈ ನಿಟ್ಟಿನಲ್ಲಿ ವೊಡಾಫೋನ್ ಐಡಿಯಾ, ಭಾರತೀ ಏರ್ ಟೆಲ್ ಮತ್ತು ಜಿಯೋ ಯಾವುದೇ ಪ್ರಶ್ನೆಗಳಿಗೂ ಉತ್ತರಿಸಿಲ್ಲ.ಆದರೆ ದುರ್ಬಲ ರುಪಾಯಿ ಬೆಲೆ,ಟೆಲ್ಕೋಸ್ ನ ಹೊರೆ, ವಿಶೇಷವಾಗಿ ಆರ್ಥಿಕ ಸಮಸ್ಯೆಗಳನ್ನು ಟೆಲಿಕಾಂ ಸಂಸ್ಥೆಗಳು ಎದುರಿಸುವಂತಾಗುತ್ತಿದೆ.


 • ಯಾವಾಗ ಬೆಲೆ ಏರಿಕೆಯಾಗುವ ಸಂಭವ?

  ಬೆಲೆಯಲ್ಲಿ ಯಾವುದೇ ಬದಲಾವಣೆಗಳು ನಡೆದರೂ ಕೂಡ ಅದು ಎಪ್ರಿಲ್ 2019 ರ ನಂತರ ನಡೆಯಲಿದೆ. ಮೊಬೈಲ್ ಗ್ರಾಹಕರು ಉಚಿತವಾಗಿ ಪಡೆದುಕೊಳ್ಳುತ್ತಿರುವ ಹಲವು ಆಫರ್ ಗಳು ಅಂತ್ಯಗೊಳ್ಳುವ ಸಾಧ್ಯತೆ ಇದೆ.ಯಾಕೆಂದರೆ ಹೆಚ್ಚು ಹಣವನ್ನು ವ್ಯಯಿಸುವುದು ಟೆಲ್ಕೋಸ್ ಮೇಲೆ ಒತ್ತಡವನ್ನು ಸೃಷ್ಟಿಮಾಡುತ್ತದೆ.ಹಾಗಾಗಿ ಈ ಒತ್ತಡವನ್ನು ಕಡಿಮೆ ಮಾಡಲು ಬೆಲೆ ಏರಿಕೆಯು ಸಹಕಾರಿಯಾಗಲಿದೆ ಎಂದು ಮಾರ್ಕೆಟ್ಸ್ ಮತ್ತು ಕಾರ್ಪೋರೇಟ್ ಅಫೇರ್ಸ್,ಐಐಎಫ್ಎಲ್ ನ ಉಪಾಧ್ಯಕ್ಷರಾಗಿರುವ ಸಂಜೀವ್ ಭಾಸಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  ಕೆಲವು ಟೆಲಿಕಾಂ ಸಂಸ್ಥೆಗಳು ವಾಯ್ಸ್ ಮತ್ತು ಡಾಟಾ ಪ್ಲಾನ್ ಗಳು ಹೊಸದಾಗಿ ಪರಿಚಯಿಸಲಿದ್ದಾರೆ. ಗ್ರಾಹಕರು ಹೊಸತಕ್ಕೆ ಅಪ್ ಗ್ರೇಡ್ ಆಗುವಂತೆ ಟೆಲ್ಕೋಸ್ ಗಳು ಹೊಸ ಆಫರ್ ಮತ್ತು ವ್ಯಾಲ್ಯೂವನ್ನು ಪರಿಚಯಿಸುವ ನಿರೀಕ್ಷೆ ಇದೆ. ಇನ್ನು ಜಿಯೋ ಕೂಡ ಕಳೆದ ಹಲವು ದಿನಗಳಿಂದ ಪ್ರಮೋಷನ್ ಮತ್ತು ಇತರೆ ಕಾರಣಗಳಿಂದಾಗಿ ನೀಡುತ್ತಿದ್ದ ಭರ್ಜರಿ ಆಫರ್ ಗಳನ್ನು ಬದಲಾಯಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ ಎಂಬುದು ಕೆಲವು ಗ್ಲೋಬಲ್ ರೇಟಿಂಗ್ ಏಜೆನ್ಸಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ವಿಚಾರ ಏನೇ ಇದ್ದರೂ ಮೊಬೈಲ್ ಇಲ್ಲದೇ ಯಾರೂ ಇರಲಾರರು.ಹಾಗಾಗಿ ಮಾರುಕಟ್ಟೆಯ ಏರುಪೇರುಗಳಿಗೆ ಗ್ರಾಹಕ ಒಗ್ಗಿಕೊಳ್ಳಲೇ ಬೇಕು. ಆದರೆ ಅದನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೆ ಎಂಬುದು ಸದ್ಯ ಇರುವ ಪ್ರಶ್ನೆಯಾಗಿದೆ.
ಇತ್ತೀಚೆಗೆ ಕರೆಗಳು ಮತ್ತು ಡಾಟಾಗಳು ಭಾರೀ ಅಗ್ಗವಾಗತೊಡಗಿದೆ. ಟೆಲಿಕಾಂ ಆಪರೇಟರ್ ಗಳ ನಡುವಿನ ಸ್ಪರ್ಧೆಯಿಂದಾಗಿ ಒಂದಕ್ಕಿಂತ ಮತ್ತೊಂದು ಟೆಲಿಕಾಂ ಸಂಸ್ಥೆ ಹೆಚ್ಚಿನ ಆಫರ್ ನೀಡಿ ಗ್ರಾಹಕರನ್ನು ಸೆಳೆಯುವುದಕ್ಕೆ ಪ್ರಯತ್ನಿಸುತ್ತಿದೆ. ಹಾಗಾಗಿ ದಿನದಿಂದ ದಿನಕ್ಕೆ ಕರೆಗಳು ಮತ್ತು ಡಾಟಾಗಳು ಕಡಿಮೆ ಬೆಲೆಗೆ ಗ್ರಾಹಕರ ಕೈಗೆಟುಕುತ್ತಿದೆ. ಆದರೆ ಇದು ದೂರಸಂಪರ್ಕ ವಲಯದಲ್ಲಿ ಒಂದು ರೀತಿಯ ಪ್ರಕ್ಷುಬ್ಧತೆಯನ್ನು ಸೃಷ್ಟಿ ಮಾಡಿದೆ.

   
 
ಹೆಲ್ತ್