Back
Home » ಆರೋಗ್ಯ
ಲೋಹದ ತಟ್ಟೆಗಳಿಂದ ಆಹಾರ ಸೇವಿಸಿದರೆ ಸಿಗುವ ಆರೋಗ್ಯಕಾರಿ ಲಾಭಗಳು
Boldsky | 13th Oct, 2018 11:19 AM
 • ತಾಮ್ರ

  ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯಲು ಸಂಗ್ರಹಿಸಿಡುವುದನ್ನು ನಾವು ನೋಡಿದ್ದೇವೆ. ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಲಾಭಗಳು. ತಾಮ್ರವು ಬ್ಯಾಕ್ಟೀರಿಯಾ ವಿರೋಧಿ ಲೋಹವಾಗಿದೆ. 2012ರಲ್ಲಿ ಜರ್ನಲ್ ಆಫ್ ಹೆಲ್ತ್, ಪೊಪ್ಯುಲೇಷನ್ ಆ್ಯಂಡ್ ನ್ಯೂಟ್ರಿಷನ್ ನಲ್ಲಿ ಪ್ರಕಟಗೊಂಡಿರುವ ವರದಿಯ ಪ್ರಕಾರ, ಸುಮಾರು 16 ಗಂಟೆಗಳ ತಾಮ್ರದ ಪಾತ್ರೆಯಲ್ಲಿ ಕಲುಷಿತ ನೀರನ್ನು ಸಂಗ್ರಹಿಸಿಟ್ಟರೆ ಆಗ ಎಲ್ಲಾ ಹಾನಿಕಾರ ಸೂಕ್ಷ್ಮಜೀವಿಗಳು ಸಾಯುವುದು ಮತ್ತು ನೀರು ಶುದ್ಧವಾಗುವುದು

  ಇದರ ಹೊರತಾಗಿ...

  ·ರಕ್ತವನ್ನು ನಿರ್ವಿಷಗೊಳಿಸುವುದು.
  ·ಜೀರ್ಣಕ್ರಿಯೆ ವ್ಯವಸ್ಥೆಯ ಕಾರ್ಯವನ್ನು ಸುಧಾರಿಸುವುದು.
  ·ತೂಕ ಇಳಿಸಲು ಸಹಕಾರಿ.
  ·ಆ್ಯಂಟಿಆಕ್ಸಿಡೆಂಟ್ ಒದಗಿಸುವುದು.
  ·ಕ್ಯಾನ್ಸರ್ ವಿರುದ್ಧ ಹೋರಾಡುವುದು.
  ·ಮೆದುಳಿನ ಕಾರ್ಯ ಉತ್ತೇಜಿಸುವುದು.

  Most Read: ತಾಮ್ರದ ಪಾತ್ರೆಯಲ್ಲಿ ನೀರು ಕುಡಿದರೆ- ಮಧುಮೇಹ ನಿಯಂತ್ರಣಕ್ಕೆ!


 • ಬೆಳ್ಳಿ

  ಬೆಳ್ಳಿ ಪಾತ್ರೆಗಳಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಈ ಕಾರಣದಿಂದಾಗಿ ಸಣ್ಣ ಮಕ್ಕಳಿಗೆ ಬೆಳ್ಳಿ ಚಮಚ ಹಾಗೂ ಲೋಟದಿಂದ ಆಹಾರ ನೀಡುವರು. ಇದು ಮಕ್ಕಳನ್ನು ಬ್ಯಾಕ್ಟೀರಿಯಾದಿಂದ ರಕ್ಷಿಸುವುದು. ಬೆಳ್ಳಿ ತಟ್ಟೆಗಳನ್ನು ರಾಜರು ಕೂಡ ಬಳಸುತ್ತಲಿದ್ದರು. ಬೆಳ್ಳಿ ಡಬ್ಬ ಹಾಗೂ ಪಾತ್ರೆಯಲ್ಲಿ ಆಹಾರ ಅಥವಾ ಪಾನೀಯವನ್ನು ಸಂಗ್ರಹಿಸಿಟ್ಟರೆ ಅದು ತುಂಬಾ ದೀರ್ಘಕಾಲದ ತನಕ ತಾಜಾವಾಗಿರುವುದು.

  ಬೆಳ್ಳಿ ತಟ್ಟೆಯಲ್ಲಿ ತಿನ್ನುವುದರ ಲಾಭಗಳು

  ·ಪ್ರತಿರೋಧಕ ಶಕ್ತಿ ಹೆಚ್ಚಿಸುವುದು.
  ·ಶೀತ, ಜ್ವರ ಇತ್ಯಾದಿ ತಡೆಯುವುದು.
  ·ಚರ್ಮದ ಆರೋಗ್ಯ ರಕ್ಷಿಸುವುದು.
  ·ಕೀಟಾಣುಗಳನ್ನು ಕೊಲ್ಲುವುದು.


 • ಕಂಚು

  ಕಂಚಿನ ಪಾತ್ರೆಗಳಲ್ಲಿ ಆಹಾರ ಬೇಯಿಸುವುದು ಮತ್ತು ತಿನ್ನುವುದರಿಂದ ಹಲವಾರು ರೀತಿಯ ಲಾಭಗಳು ದೇಹಕ್ಕೆ ಆಗುವುದು. ಆದರೆ ಇದು ಯಾವುದೇ ರೀತಿಯಿಂದಲೂ ದೇಹಕ್ಕೆ ಹಾನಿಯುಂಟು ಮಾಡಬಾರದು ಎನ್ನುವುದನ್ನು ಇಲ್ಲಿ ಎಚ್ಚರಿಕೆ ವಹಿಸಬೇಕು. ಹಳೆಯ ಕಂಚಿನ ಪಾತ್ರೆಗಳನ್ನು ಬಳಕೆ ಮಾಡಬೇಡಿ. ಇದರಲ್ಲಿ ಲೆಡ್ ಅಥವ ಅರ್ಸೆನಿಕ್ ಇರುವುದು. ವಿಷಕಾರಿಯಾಗಿರುವ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

  ಹುಳಿಯಾಗಿರುವ ಆಹಾರವಾಗಿರುವ ಸಿಟ್ರಸ್ ಹಣ್ಣುಗಳು, ಟೊಮೆಟೋ ಅಥವಾ ವಿನೇಗರ್ ಹಾಕಿರುವಂತಹ ಆಹಾರವನ್ನು ಕಂಚಿನ ಪಾತ್ರೆಯಲ್ಲಿ ಇಡಬೇಡಿ ಮತ್ತು ಸೇವಿಸಬೇಡಿ. ತುಪ್ಪವನ್ನು ಇದರಲ್ಲಿ ಬಳಸಬೇಡಿ. ಇದು ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು. ಕಂಚಿನ ಪಾತ್ರೆಗಳಲ್ಲಿ ದೀರ್ಘಕಾಲ ತನಕ ಆಹಾರವನ್ನು ಇಡಬೇಡಿ.

  ಕಂಚಿನ ಪಾತ್ರೆಯಿಂದ ಸಿಗುವ ಲಾಭಗಳು

  ·ರಕ್ತವನ್ನು ಶುದ್ಧೀಕರಿಸುವುದು.
  ·ಹಸಿವು ಹೆಚ್ಚಿಸುವುದು.
  ·ನೆನೆಪಿನ ಶಕ್ತಿ ತೀವ್ರಗೊಳಿಸುವುದು.

  Most Read: ಎಚ್ಚರ, ಇಂತಹ ಪಾತ್ರೆಗಳು ಕೂಡ ಆರೋಗ್ಯಕ್ಕೆ ಮಾರಕ


 • ಬಂಗಾರ

  ಬಂಗಾರ ತಟ್ಟೆಯಲ್ಲಿ ಊಟ ಮಾಡುವವರು ಅಗರ್ಭ ಶ್ರೀಮಂತರೇ ಇರಬೇಕು. ಸಾಮಾನ್ಯ ಜನರಿಗೆ ಇದು ಸಾಧ್ಯವಿಲ್ಲ. ಆದರೆ ಬಂಗಾರದ ತಟ್ಟೆಯಲ್ಲಿ ಊಟ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಹಿಂದಿನ ಕಾಲದಲ್ಲಿ ರಾಜ ಮನೆತನದವರು ಬಂಗಾರದ ತಟ್ಟೆಯನ್ನು ಇದೇ ಕಾರಣದಿಂದ ಬಳಸುತ್ತಿದ್ದಿರಬಹುದು. ಕೇವಲ ಬಂಗಾರದ ತಟ್ಟೆಯಲ್ಲಿ ತಿನ್ನುವುದರಿಂದ ಮಾತ್ರವಲ್ಲದೆ, ಬಂಗಾರದ ಆಭರಣ ಧರಿಸುವುದರಿಂದಲೂ ಹಲವಾರು ಆರೋಗ್ಯ ಲಾಭಗಳು ಇವೆ.

  ಬಂಗಾರ ತಟ್ಟೆಯಲ್ಲಿ ಆಹಾರ ಸೇವಿಸಿದರೆ ಸಿಗುವ ಲಾಭಗಳು...

  ·ಕಣ್ಣಿನ ದೃಷ್ಟಿ ಸುಧಾರಿಸುವುದು
  ·ಮೂರು ದೋಷಗಳನ್ನು ಸಮತೋಲನದಲ್ಲಿಡುವುದು.
  ·ದೇಹಕ್ಕೆ ಶಕ್ತಿ ನೀಡುವುದು.

  Most Read: ನೀವು ಬೆಳಗ್ಗೆ ಕುಡಿಯಬೇಕಾದ 9 ಆರೋಗ್ಯಕಾರಿ ಪಾನೀಯಗಳು


 • ಹಿತ್ತಾಳೆ

  ಹಿತ್ತಾಳೆ ಪಾತ್ರೆಗಳಲ್ಲಿ ಶೇ.70ರಷ್ಟು ತಾಮ್ರ ಮತ್ತು ಶೇ.30ರಷ್ಟು ಸತು ಇದೆ. ಈ ಲೋಹಗಳಲ್ಲಿ ಇರುವಂತಹ ಕೆಲವೊಂದು ಗುಣಗಳಿಂದಾಗಿ ಇದು ನಮ್ಮ ಆರೋಗ್ಯಕ್ಕೆ ತುಂಬಾ ನೆರವಾಗುವುದು. ಹಿತ್ತಾಳೆ ಪಾತ್ರೆಗಳಲ್ಲಿ ಆಹಾರ ತಯಾರಿಸಿದರೆ ಇದು ಶೇ.7ರಷ್ಟು ಮಾತ್ರ ಆಹಾರದ ಪೋಷಕಾಂಶಗಳನ್ನು ಹೀರಿಕೊಳ್ಳುವುದು. ಇದರಿಂದ ಆಹಾರವು ಆರೋಗ್ಯವಾಗಿರುವುದು.

  ಹಿತ್ತಾಳೆಯಿಂದ ಆಹಾರ ತಯಾರಿಸುವುದು ಮತ್ತು ತಿನ್ನುವುದರಿಂದ ಸಿಗುವ ಲಾಭಗಳು....

  ·ಪ್ರತಿರೋಧಕ ಶಕ್ತಿ ವೃದ್ಧಿ
  ·ಕೀಟಗಳಿಗೆ ಸಂಬಂಧಿಸಿದ ಕಾಯಿಲೆ ದೂರವಿಡುವುದು.
  ·ಉಸಿರಾಟದ ಸಮಸ್ಯೆ ಸರಿಪಡಿಸುವುದು.
  ·ವಾತ ಸಂಬಂಧಿ ಕಾಯಿಲೆಗಳಾಗಿರುವಂತಹ ದೀರ್ಘ ನೋವು, ಪರ್ಕಿಸನ್ ಕಾಯಿಲೆ ಇತ್ಯಾದಿಗಳನ್ನು ದೂರವಿಡುವುದು.
ರಾಜಮಹಾರಾಜರು ಬೆಳ್ಳಿ ಹಾಗೂ ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು ಎನ್ನುವುದನ್ನು ಇತಿಹಾಸದಿಂದ ತಿಳಿದುಕೊಂಡಿದ್ದೇವೆ. ಇದು ಶ್ರೀಮಂತಿಕೆ ಅಥವಾ ರಾಜನೆಂಬ ದರ್ಪ ತೋರಿಸಲು ಹೀಗೆ ಮಾಡುತ್ತಿರಬಹುದು ಎಂದು ನಾವು ಭಾವಿಸಿರಬಹುದು. ಆದರೆ ನಿಜವಾಗಿಯೂ ಇಂತಹ ಲೋಹಗಳ ತಟ್ಟೆಗಳಲ್ಲಿ ಊಟ ಮಾಡಿದರೆ, ಲೋಟದಲ್ಲಿ ನೀರು ಕುಡಿದರೆ ಅದರಿಂದ ದೇಹಕ್ಕೆ ಹೆಚ್ಚಿನ ಲಾಭಗಳು ಇವೆ.

ಆಯುರ್ವೇದದ ಪ್ರಕಾರ ದೇಹಕ್ಕೆ ಭಾದಿಸುವಂತಹ ಕಫ, ಪಿತ್ತ ಹಾಗೂ ವಾತ ದೋಷವು ನಾವು ಯಾವುದರಲ್ಲಿ ಆಹಾರ ಸೇವಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿಸಿರುವುದು. ಈ ಮೂರು ದೋಷಗಳು ನಮ್ಮ ದೇಹದಲ್ಲಿ ಪ್ರಮುಖ ಪಾತ್ರ ವಹಿಸುವುದು. ಯಾವುದೇ ಒಂದರಲ್ಲೂ ಅಸಮತೋಲವಾದರೆ ಅದರಿಂದ ಆರೋಗ್ಯದ ಮೇಲೆ ಪರಿಣಾಮವಾಗುವುದು. ಈ ಲೇಖನದಲ್ಲಿ ವಿವಿಧ ಲೋಹಗಳ ತಟ್ಟೆ ಅಥವಾ ಲೋಟಗಳಿಂದ ನಮಗೆ ಯಾವ ರೀತಿಯ ಲಾಭವಾಗಲಿದೆ ಎಂದು ತಿಳಿಯಲಿದ್ದೇವೆ.

   
 
ಹೆಲ್ತ್