Back
Home » ಆರೋಗ್ಯ
ಮೊದಲ ರಾತ್ರಿ ನವ-ದಂಪತಿಗಳಿಗೆ ಹಾಲು ನೀಡುತ್ತಾರಲ್ಲ! ಯಾಕೆ ಗೊತ್ತೇ?
Boldsky | 14th Oct, 2018 10:02 AM
 • ಸಂಪ್ರದಾಯವೇನು?

  ಮೊದಲ ರಾತ್ರಿಯ ದಿನ ಮದುಮಗಳು ಹಾಗೂ ಮದುಮಗನಿಗೆ ಹಾಲು ನೀಡುವಂತಹ ಸಂಪ್ರದಾಯವಿದೆ. ಈ ಹಾಲಿನಲ್ಲಿ ಕೇಸರಿ ಹಾಗೂ ಬಾದಾಮಿ ಹಾಕಿರುವರು. ಕೆಲವೊಂದು ಕಡೆಗಳಲ್ಲಿ ಬಾದಾಮಿ ಮತ್ತು ಕರಿಮೆಣಸಿನ ಹುಡಿ ಹಾಕಿರುವರು, ಕೇವಲ ಬಾದಾಮಿ ಹುಡಿ ಅಥವಾ ಸೋಂಪಿನ ರಸದೊಂದಿಗೆ ಹಾಲನ್ನು ನೀಡುವರು.

  Most Read: ಮದುವೆಯ ಮೊದಲ ರಾತ್ರಿಯೇ? ಹಾಗಾದರೆ ಇಂತಹ ಆಹಾರಗಳನ್ನು ಸೇವಿಸಿ


 • ಇದು ಪವಿತ್ರವೆಂದು ಪರಿಗಣಿಸಲಾಗಿದೆ

  ಹಿಂದೂ ಧರ್ಮದ ಪ್ರಕಾರ ಹಾಲು ತುಂಬಾ ಶುದ್ಧ ಸಾಮಗ್ರಿ ಮತ್ತು ಇದನ್ನು ತುಂಬಾ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದ ಹೊಸ ಜೀವನ ಆರಂಭಿಸುತ್ತಿರುವ ದಂಪತಿಗೆ ಹಾಲು ಸರಿಯಾದ ಪಾನೀಯವೆಂದು ಪರಿಗಣಿಸಿ ನೀಡಲಾಗುತ್ತದೆ.


 • ಇದು ಮೂಲತಃ ಎಲ್ಲಿಂದ ಬಂದಿದೆ?

  ಲೈಂಗಿಕ ಕ್ರಿಯೆ ವೇಳೆ ಹೆಚ್ಚಿನ ಶಕ್ತಿ ಬರಲು ಹಾಲನ್ನು ನೀಡಲಾಗುತ್ತದೆ ಎಂದು ಕಾಮಸೂತ್ರದಲ್ಲಿ ಹೇಳಲಾಗಿದೆ. ಇದು ಮೊದಲ ರಾತ್ರಿಯಂದು ದಂಪತಿಯ ಅನುಭವ ಹೆಚ್ಚಿಸಲಿದೆ. ಸೋಂಪಿನ ರಸ, ಜೇನುತುಪ್ಪ, ಸಕ್ಕರೆ, ಅರಶಿನ, ಕರಿಮೆಣಸನ್ನು ಹಾಲಿಗೆ ಹಾಕಿ ಕೊಡುವುದು ಕಾಮಸೂತ್ರದಿಂದ ಬಂದಿದೆ. ಇದು ಹಿಂದೂಗಳ ಮದುವೆಯ ಸಂಪ್ರದಾಯ ಕೂಡ.


 • ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

  ಆಯುರ್ವೇದದಲ್ಲಿ ಹಾಲಿಗೆ ಪ್ರಮುಖ ಸ್ಥಾನವಿದ್ದು ಜನನಾಂಗಗಳ ಸಾಮರ್ಥ ಹೆಚ್ಚಿಸಲು ಉತ್ತಮ ಎಂದು ಹೇಳಲಾಗಿದೆ. ಹಾಲಿನಲ್ಲಿ ದೇಹದ ಹಲವು ಅಂಗಗಳಿಗೆ ಪುನರ್ಶಕ್ತಿ ನೀಡುವ ಸಾಮರ್ಥ್ಯವಿದ್ದು ಬಳಲಿದ ಅಂಗಗಳು ಶೀಘ್ರವೇ ತಮ್ಮ ಸಾಮರ್ಥ್ಯವನ್ನು ಪಡೆದುಕೊಳ್ಳುತ್ತವೆ.

  Most Read: ಪುರುಷರ ಸೆಕ್ಸ್ ಪರಾಕಾಷ್ಠೆ: ನಿಮಗೆ ಇಂತಹ 7 ಸಂಗತಿಗಳು ತಿಳಿದಿದೆಯಾ?


 • ಸಮತೋಲನವನ್ನು ಕಾಪಾಡಲು

  ಆಯುರ್ವೇದದಲ್ಲಿ ವಾತ ಮತ್ತು ಪಿತ್ತಗಳ ನಡುವಣ ಸಮತೋಲನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಹಾಲು ಈ ಸಮತೋಲನವನ್ನು ಕಾಪಾಡಲು ಅತ್ಯುತ್ತಮವಾದ ದ್ರವ್ಯವಾಗಿದ್ದು ಎಲ್ಲಾ ವಯಸ್ಸಿನವರಿಗೂ ಉತ್ತಮವಾದ ಆಹಾರವಾಗಿದೆ. ಹಾಲು ಒಂದು ಉತ್ತಮ ಕಾಮೋತ್ತೇಜಕ ಹಾಗೂ ಜನನಾಂಗಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಆಹಾರವಾಗಿದ್ದು ಉತ್ತಮ ಲೈಂಗಿಕ ಚಟುವಟಿಕೆ ಮತ್ತು ತನ್ಮೂಲಕ ಆರೋಗ್ಯಕರ ಸಂತಾನವನ್ನು ಪಡೆಯಲು ನೆರವಾಗುತ್ತದೆ.


 • ಭಾವಪರವಶತೆಯನ್ನು ಹೆಚ್ಚಿಸುತ್ತದೆ!

  ಹಾಲಿನಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಡಿ ಇದ್ದು ಇದರ ಬಳಕೆಯಿಂದ ದೇಹದಲ್ಲಿ ಅಗತ್ಯ ಪ್ರಮಾಣದ ಸೆರೋಟೋನಿನ್ ಎಂಬ ಹಾರ್ಮೋನು ಉತ್ಪತ್ತಿಯಾಗುತ್ತದೆ. ಇದು ಭಾವಪರವಶತೆ, ಹಸಿವು ಮತ್ತು ನಿದ್ದೆಗೆ ಅಗತ್ಯವಾಗಿದೆ. ಹಾಲು ಕುಡಿಯುವ ಮೂಲಕ ಉತ್ತಮ ಪ್ರಮಾಣದ ಸೆರೋಟೋನಿನ್ ಲಭ್ಯವಾಗಿ ದೇಹದ ಜೀವರಾಸಾಯನಿಕ ಕ್ರಿಯೆಗಳು ಉತ್ತಮಗೊಳ್ಳುತ್ತವೆ. ಅಲ್ಲದೇ ಈ ಹಾರ್ಮೋನು ಮಹಿಳೆಯರ ತಿಂಗಳ ದಿನಗಳ ಮುನ್ನಾ ಅವಧಿಯಲ್ಲಿ ಅನುಭವಿಸುದ ದುಗುಡ (Premenstrual syndrome (PMS)), ಸುಸ್ತು ಮತ್ತು ಖಿನ್ನತೆಗಳನ್ನು ನಿವಾರಿಸುತ್ತದೆ.


 • ಮಿಶ್ರಣವೇನು?

  ಮದುವೆಯಲ್ಲಿ ದಣಿದಿರುವಂತಹ ದಂಪತಿಗೆ ಹಾಲು, ಬಾದಾಮಿ ಮತ್ತು ಕೇಸರಿಯು ಶಕ್ತಿ ನೀಡುವುದು. ಬಾದಾಮಿ ಹಾಗೂ ಹಾಲಿನಲ್ಲಿ ಹೆಚ್ಚಿನ ಪ್ರೋಟೀನ್ ಇರುವ ಕಾರಣದಿಂದಾಗಿ ಇದು ದೇಹಕ್ಕೆ ಶಕ್ತಿ ನೀಡುವುದು. ಪ್ರೋಟೀನ್ ದೇಹದಲ್ಲಿ ಹಾರ್ಮೋನುಗಳಾಗಿರುವ ಟೆಸ್ಟೊಸ್ಟೆರಾನ್ ಮತ್ತು ಈಸ್ಟ್ರೋಜನ್ ನ್ನು ಉತ್ಪತ್ತಿ ಮಾಡುವುದು. ಇದು ಲೈಂಗಿಕ ಕ್ರಿಯೆಯ ಅನುಭವವನ್ನು ಉತ್ತಮಪಡಿಸುವುದು.


 • ದೇಹದಲ್ಲಿ ನೀರಿನ ಕೊರತೆಯನ್ನು ನೀಗಿಸುತ್ತದೆ

  ಹಾಲಿನಲ್ಲಿ ಉತ್ತಮ ಪ್ರಮಾಣದ ನೀರಿನ ಕಣಗಳಿವೆ. ಆದರೆ ಹಾಲಿನ ಬದಲಿಗೆ ನೀರನ್ನೇ ಕುಡಿಯಬಹುದಲ್ಲಾ, ಆದರೆ ರಾತ್ರಿ ಹೊತ್ತು ನೀರು ತಕ್ಷಣವೇ ಕರುಳುಗಳಿಂದ ಹೀರಲ್ಪಟ್ಟು ಬಳಿಕ ನೀರಿನ ಅಗತ್ಯಬಿದ್ದರೆ ನೀರಡಿಕೆಯ ಮೂಲಕ ಹೆಚ್ಚಿನ ನೀರನ್ನು ಕುಡಿಯಲು ಮೆದುಳು ಎಚ್ಚರಿಸಿ ಸೂಚನೆ ನೀಡುತ್ತದೆ. ಆದರೆ ಹಾಲು ಕುಡಿದು ಮಲಗಿದರೆ ಈ ಹಾಲಿನಲ್ಲಿನ ನೀರು ನಿಧಾನವಾಗಿ ಹೀರಲ್ಪಟ್ಟು ರಾತ್ರಿಯಿಡೀ ಯಾವುದೇ ತೊಂದರೆ ಕೊಡದೇ ದೇಹಕ್ಕೆ ನೀರಿನ ಸೌಲಭ್ಯವನ್ನು ಒದಗಿಸುತ್ತದೆ. ಆರೋಗ್ಯವಂತ ವ್ಯಕ್ತಿಗೆ ಪ್ರತಿನಿತ್ಯ ಕನಿಷ್ಟ ಆರು ಲೋಟ ನೀರಿನ ಅಗತ್ಯವಿದೆ. ಆದರೆ ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ನೀರು ಕುಡಿಯುವುದಕ್ಕಿಂತ ಉತ್ತಮ.


 • ಕಾಮೋತ್ತೇಜಕ

  ಹಾಲು ಮತ್ತು ಅದಕ್ಕೆ ಹಾಕುವಂತಹ ಇತರ ಕೆಲವು ಸಾಮಗ್ರಿಗಳು ಕಾಮೋತ್ತೇಜಕವೆಂದು ಪರಿಗಣಿಸಲಾಗಿದೆ. ಇದು ಕಾಮಾಸಕ್ತಿಯನ್ನು ಕೆರಳಿಸುವುದು. ಹಾಲು, ಕೇಸರಿ ಮತ್ತು ಬಾದಾಮಿ ಚೂರುಗಳು ದೇಹಕ್ಕೆ ಶಕ್ತಿ ನೀಡಿ, ಕಾಮಾಸಕ್ತಿ ಹೆಚ್ಚಿಸುವುದು.
ಹಿಂದಿನ ಅಂದರೆ 90ರ ದಶಕದ ಮೊದಲ ಸಿನಿಮಾಗಳನ್ನು ನೋಡಿದರೆ ಆಗ ನಿಮಗೆ ಮದುವೆಯಾದ ಮೊದಲ ರಾತ್ರಿಗೆ ಹೂವಿನಿಂದ ಅಲಂಕಾರಗೊಂಡಿರುವ ಮಂಚದ ಮೇಲೆ ಮಲಗಿರುವಂತಹ ಮದುಮಗನಿಗೆ ಮದುಮಗಳು ಲೋಟದಲ್ಲಿ ಹಾಲನ್ನು ಹಿಡಿದುಕೊಂಡು ಬರುವುದನ್ನು ತೋರಿಸಲಾಗುತ್ತಿತ್ತು. ಇಂದಿನ ಸಿನಿಮಾಗಳಲ್ಲಿ ಇದೆಲ್ಲವೂ ಮಾಯವಾಗಿಬಿಟ್ಟಿದೆ!

ಅದೆಲ್ಲವನ್ನು ಬಿಡಿ, ನಾವಿಲ್ಲಿ ಸಿನಿಮಾದ ಬಗ್ಗೆ ಚರ್ಚೆ ಮಾಡಲು ಹೊರಟಿರುವುದಲ್ಲ. ಇಲ್ಲಿ ಭಾರತೀಯ ಸಂಪ್ರದಾಯದಂತೆ ಮೊದಲ ರಾತ್ರಿಯ ದಿನ ಮದುಮಗನಿಗೆ ಮದುಮಗಳು ಹಾಲು ತಂದುಕೊಡುವಳು. ನಮ್ಮಲ್ಲಿರುವ ಕೆಲವೊಂದು ಸಂಪ್ರದಾಯಗಳಿಗೆ ಯಾವುದೇ ರೀತಿಯ ಕಾರಣಗಳು ಇರುವುದಿಲ್ಲ. ಆದರೆ ಮೊದಲ ರಾತ್ರಿ ಹಾಲು ನೀಡುವುದಕ್ಕೆ ತನ್ನದೇ ಆಗಿರುವ ಕಾರಣಗಳು ಇವೆ. ಈ ಜನಪ್ರಿಯ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣಗಳು ಇವೆ. ಈ ಕಾರಣಗಳು ಏನು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

   
 
ಹೆಲ್ತ್