Back
Home » ಇತ್ತೀಚಿನ
ವಾಟ್ಸ್ಆಪ್, ಫೇಸ್‌ಬುಕ್ ಬಳಕೆದಾರರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ!!
Gizbot | 15th Oct, 2018 12:25 PM

ಸರ್ಕಾರಿ ಇಲಾಖೆಗಳ ಗೌಪ್ಯ ಮಾಹಿತಿ ಸೇರಿದಂತೆ, ಸರ್ಕಾರಿ ಆದೇಶಗಳು ಹಾಗೂ ಪ್ರಮುಖ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸರ್ಕಾರಕ್ಕೆ ಮುಜುಗರ ತಂದಿದೆ. ಹೀಗಾಗಿ, ಅನಧಿಕೃತವಾಗಿ ಸರ್ಕಾರಿ ಮಾಹಿತಿಗಳನ್ನು ಜಾಲತಾಣಗಳಲ್ಲಿ ಪ್ರಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ರಾಜ್ಯ ಸೈಬರ್ ಕ್ರೈಮ್ ಇಲಾಖೆ ಮುಂದಾಗಿದೆ.

ಸರ್ಕಾರಿ ಆದೇಶ, ಟಿಪ್ಪಣಿ ಹಾಳೆ, ಪತ್ರಗಳು, ಗೌಪ್ಯ ಮಾಹಿತಿ ಹಾಗೂ ಇತರೆ ದಾಖಲೆಗಳನ್ನು ಹಿರಿಯ ಅಧಿಕಾರಿಗಳ ಒಪ್ಪಿಗೆ ಇಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸೈಬರ್ ಕ್ರೈಂ ನಿಯಮಾನುಸಾರ ವಾಟ್ಸ್‌ಆಪ್‌ ಅಡ್ಮಿನ್‌ಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸೈಬರ್ ಕ್ರೈಮ್ ಎಚ್ಚರಿಕೆ ನೀಡಿದೆ.

ಯಾವುದೇ ಆದೇಶಗಳು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಧಿಕೃತವಾಗಿ ಹೊರಡಿಸುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ನೀಡುವುದು ಸರಿಯಲ್ಲ. ಇದು ದುರ್ಬಳಕೆಯಾಗುವ ಜತೆಗೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯೂ ಇದೆ. ಕಡತಗಳಲ್ಲಿನ ಆದೇಶ ಅಥವಾ ಗೌಪ್ಯ ಮಾಹಿತಿ ಸಾಮಾಜಿಕ ಜಾಲತಾಣಕ್ಕೆ ಹಾಕುವುದು ಕಾನೂನಿಗೆ ವಿರುದ್ಧವಾದುದು ಎಂದಿದ್ದಾರೆ.

ಹಾಗಾಗಿ, ಅನುಮತಿ ಇಲ್ಲದೇ ಆದೇಶ, ಟಿಪ್ಪಣಿ ಹಾಳೆ, ಪತ್ರಗಳು ಮತ್ತು ಗೌಪ್ಯ ಮಾಹಿತಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿರುವ ಬಗ್ಗೆ ಇಲಾಖೆಗೆ ದೂರು ಬಂದಿದೆ. ಹಾಗಾಗಿ, ವಾಟ್ಸ್ಆಪ್, ಫೇಸ್‌ಬುಕ್ ಸೇರಿದಂತೆ ಎಲ್ಲಾ ಜಾಲತಾಣಗಳಲ್ಲಿ ಇಂತಹುಗಳನ್ನು ಪ್ರಕಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕಾರಿಗಳು ಅಥವಾ ಸಿಬ್ಬಂದಿ ಹೊರತುಪಡಿಸಿ ಬೇರ್ಯಾರು ಕೂಡ ಸರ್ಕಾರದ ಆದೇಶ ಅಥವಾ ಗೌಪ್ಯ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಕೆಲವೊಂದು ಮಾಹಿತಿ ತೀರ ಗೌಪ್ಯವಾದುದರಿಂದ ಅಧಿಕಾರಿಗಳು ಕಾಪಾಡಿಕೊಳ್ಳಬೇಕು. ಇಂಥ ಮಾಹಿತಿ ನೀಡಲು ಪ್ರತ್ಯೇಕ ವ್ಯವಸ್ಥೆ ಇದೆ ಎಂದು ಇಲಾಖೆ ನೌಕರರಿಗೆ ಸಲಹೆಯನ್ನು ನೀಡಿದೆ.

ಓದಿರಿ: ಚೀನಾದಲ್ಲಿ ಓಡಲಿರುವ 4000 ಕಿ.ಮಿ ವೇಗದ 'ಫ್ಲೈಯಿಂಗ್ ಟ್ರೈನ್'!..ಹೇಗಿದೆ ಗೊತ್ತಾ?!

   
 
ಹೆಲ್ತ್