Back
Home » ಇತ್ತೀಚಿನ
ನಾಳೆ ಲಾಂಚ್‌ ಆಗಲಿದೆ ಮಧ್ಯಮ ಬೆಲೆಯ ಹಾನರ್‌ 8‍X..! ಸ್ಮಾರ್ಟ್‌ಫೋನ್‌ ಪ್ರಿಯರನ್ನು ಸೆಳೆಯುತ್ತಾ..?
Gizbot | 15th Oct, 2018 09:31 PM
 • ಡಿಸ್‌ಪ್ಲೇ

  ಹಾನರ್‌ 8‍X ಸ್ಮಾರ್ಟ್‌ಫೋನ್ 6.5 ಇಂಚಿನ ಸಂಪೂರ್ಣ HD+ ಡಿಸ್‌ಪ್ಲೇ ಹೊಂದಿದ್ದು, 1080 x 2340 ಪಿಕ್ಸೆಲ್‌ ರೆಸಲ್ಯೂಷನ್ ಹೊಂದಿದೆ. ಹಾಗೂ 19.5:9 ನೋಚ್‌ ಮಾದರಿಯ ಡಿಸ್‌ಪ್ಲೇ ಹೊಂದಿದೆ.


 • ಕಾರ್ಯನಿರ್ವಹಣೆ

  ಹಾನರ್‌ 8‍X ಸ್ಮಾರ್ಟ್‌ಫೋನ್ ಆಂಡ್ರಾಯ್ಡ್‌ 8.1 ಒರಿಯೋ ಆಪರೇಟಿಂಗ್ ಸಿಸ್ಟಮ್ ಮೂಲಕ ಕಾರ್ಯನಿರ್ವಹಿಸುತ್ತದೆ. ಮತ್ತು ಹುವಾವೆಯ ಇತ್ತೀಚಿನ HiSilicon Kirin 710 ಪ್ರೊಸೆಸರ್‌ನ್ನು ಹೊಂದಿದ್ದು, 4GB RAM + 64GB, 6GB RAM + 64GB ಮತ್ತು 6GB RAM + 128GB ಆವೃತ್ತಿಗಳಲ್ಲಿ ಲಭ್ಯವಿರುವ ಸಾಧ್ಯತೆಯಿದೆ.


 • ಕ್ಯಾಮೆರಾ

  ಕ್ಯಾಮೆರಾ ವಿಭಾಗಕ್ಕೆ ಬಂದರೆ ಹಾನರ್‌ 8‍X ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು, 20MP ಪ್ರಾಥಮಿಕ ಸೆನ್ಸಾರ್‌ ಹಾಗೂ 2MP ಸೆಕೆಂಡರಿ ಸೆನ್ಸಾರ್‌ ಒಳಗೊಂಡಿದ್ದು, AI ಮೋಡ್‌ನ್ನು ಬೆಂಬಲಿಸುತ್ತಿವೆ. ಮುಂಭಾಗದಲ್ಲಿ 16MP ಕ್ಯಾಮೆರಾ ಹೊಂದಿದ್ದು, ಬೊಕ್ಕೆ ಮೋಡ್‌ ಫೀಚರ್‌ನ್ನು ನೀಡುತ್ತಿದೆ.


 • ಬ್ಯಾಟರಿ ಮತ್ತೀತರ ಫೀಚರ್ಸ್

  ಹಾನರ್‌ 8‍X ಸ್ಮಾರ್ಟ್‌ಫೋನ್ 3750mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದ್ದು, 4G, VoLTE, 3G, ವೈ-ಫೈ, ಬ್ಲೂಟೂತ್ ಮತ್ತು GPS ಸಂಪರ್ಕ ಆಯ್ಕೆಗಳನ್ನು ನೀಡುತ್ತದೆ.


 • ಬೆಲೆ ಎಷ್ಟು?

  ಮೂರು ವಿಭಿನ್ನ ಸ್ಟೊರೇಜ್ ಆವೃತ್ತಿಗಳಲ್ಲಿ ಚೀನಾದಲ್ಲಿ ಲಭ್ಯವಾಗುತ್ತಿರುವ ಹಾನರ್‌ 8‍X ಸ್ಮಾರ್ಟ್‌ಫೋನ್ ಬೆಲೆ 4GB+64GB (CNY 1,399) 14,700 ರೂ., 6GB+64GB (CNY 1,599) 16,800 ರೂ. ಮತ್ತು 6GB+128GB (CNY 1,899) 20,000 ರೂ.ಗೆ ದೊರೆಯಬಹುದು.
ಭಾರತೀಯ ಮೊಬೈಲ್‌ ಮಾರುಕಟ್ಟೆಗೆ ಮತ್ತೊಂದು ಸ್ಮಾರ್ಟ್‌ಫೋನ್‌ ಪ್ರವೇಶ ನೀಡುತ್ತಿದ್ದು, ಹುವಾಯಿಯ ಉಪ ಬ್ರ್ಯಾಂಡ್ ಆಗಿರುವ ಹಾನರ್ ಸಂಸ್ಥೆಯು ತನ್ನ ಮಿಡ್ ರೇಂಜ್ ಸ್ಮಾರ್ಟ್‌ಫೋನ್ ಹಾನರ್ 8X ನ್ನು ಭಾರತದಲ್ಲಿ ನಾಳೆ ಬಿಡುಗಡೆಗೊಳಿಸಲಿದೆ.

ಹಾನರ್‌ 7X ಯಶಸ್ಸಿನ ಮುಂದುವರೆದ ಭಾಗವಾಗಿರುವ ಹಾನರ್ 8Xನ್ನು ನವದೆಹಲಿಯಲ್ಲಿ ನಾಳೆ ಬೆಳಿಗ್ಗೆ 11.30ಕ್ಕೆ ಬಿಡುಗಡೆಗೊಳಿಸಲಾಗುತ್ತಿದೆ. ಹೀಗಾಗಲೇ ಚೀನಾದಲ್ಲಿ ಕಳೆದ ತಿಂಗಳು ಹಾನರ್ 8‍X ಮತ್ತು ಹಾನರ್ 8X MAX ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದ ಕಂಪನಿ ಈಗ ಭಾರತಕ್ಕೆ ಕಾಲಿಟ್ಟಿದೆ.

   
 
ಹೆಲ್ತ್