Back
Home » ಇತ್ತೀಚಿನ
ಎಲ್ಲದಕ್ಕೂ ಗೂಗಲ್‌ ಒಂದೇ ಅಲ್ಲ..! ಅದಕ್ಕೂ ಮಿಗಿಲಾದಿದ್ದಿದೆ ನೋಡಿ..!
Gizbot | 16th Oct, 2018 10:00 AM
 • www.class-central.com

  ನೀವು ಹೊಸತನ್ನು ಕಲಿಯಲು ಹುಡುಕುತ್ತಿದ್ದೀರಾ..? ಆಗಿದ್ರೇ, ನಿಮಗೆ ಇಂಟರ್‌ನೆಟ್‌ ಯಾವತ್ತೂ ಮೋಸ ಮಾಡಲ್ಲ. ಅದರಲ್ಲೂ, ಉಚಿತವಾದ Massive Open Online Courses (MOOC)ಗಳಿಗೆ ಬಂದಾಗ www.class-central.com ಹೆಚ್ಚು ಉಪಯುಕ್ತವಾಗುತ್ತದೆ. ಇದು ಕಂಪ್ಯೂಟರ್‌ ಸೈನ್ಸ್‌, ವಾಣಿಜ್ಯ, ಆರೋಗ್ಯ ಮತ್ತು ಮಾನವೀಕ ವಿಷಯಗಳಿಗೆ ಸಂಬಂಧಿಸಿದ ಸಾಕಷ್ಟು ಮಾಹಿತಿಯನ್ನು ಹೊಂದಿದೆ.

  ನಿಮಗೆ ಸರಿಯೆನಿಸುವ ಕೋರ್ಸ್‌ಗಳನ್ನು ನೀವು ಇಲ್ಲಿ ಆಯ್ದುಕೊಳ್ಳಬಹುದು. ಸ್ಟಾನ್‌ಫೋರ್ಡ್‌ ವಿವಿ, MIT, ಹಾರ್ವರ್ಡ್‌ ವಿವಿ, ಜಾರ್ಜಿಯಾ ಟೆಕ್‌, ಜಾನ್ಸ್‌ ಹಾಪ್ಕಿನ್ಸ್‌ ವಿವಿ, IIT (ಮುಂಬೈ, ಚೆನ್ನೈ ಮತ್ತು ಕಾನ್ಪುರ್‌), IIM ಬೆಂಗಳೂರಿನಂತಹ 700ಕ್ಕೂ ಹೆಚ್ಚು ವಿವಿಗಳು ಹಾಗೂ ಸಂಸ್ಥೆಗಳ ಕೋರ್ಸ್‌ಗಳನ್ನು ಕವರ್ ಮಾಡುತ್ತಿದೆ. MOOC ದೂರ ಶಿಕ್ಷಣವನ್ನು ಪ್ರಚಾರ ಮಾಡುತ್ತಿದ್ದು, ನಿಮಗೆ ಇಷ್ಟವಾದ ವಿಷಯವನ್ನು ಸರ್ಚ್‌ ಬಾರ್‌ನಲ್ಲಿ ಟೈಪ್‌ ಮಾಡಿ ಸಾಕು. ನಿಮಗೆ ಸರಿ ಎನಿಸುವ ಉಚಿತ ಆನ್‌ಲೈನ್‌ ಕೋರ್ಸ್‌ಗಳನ್ನು ಮತ್ತು ಆ ಸಮಯದಲ್ಲಿ ಲಭ್ಯವಿರುವ ಟಾಪ್‌ 50 ಕೋರ್ಸ್‌ಗಳನ್ನು ತೋರಿಸುತ್ತದೆ.

  ಇಲ್ಲಿ ಉಚಿತವಾಗಿ ಸೈನ್‌ಅಪ್‌ ಆಗಿ ಅಕೌಂಟ್‌ ಹೊಂದಬಹುದು. ಮತ್ತು ನಿಮ್ಮ ಜ್ಞಾನದ ಹಸಿವನ್ನು ತೀರಿಸಿಕೊಳ್ಳಲು MOOCಯ ಸರ್ಚ್‌ ಇಂಜಿನ್‌ moocse.com ನ್ನು ಭೇಟಿ ನೀಡಬಹುದು.


 • www.justfreebooks.info

  ನೀವು ಉಚಿತ ಇ-ಬುಕ್‌ಗಳನ್ನು ಹುಡುಕುತ್ತಿದ್ದರೆ, ಈ ಸರ್ಚ್‌ ಇಂಜಿನ್‌ನಲ್ಲಿ ನೀವು ಫಿಕ್ಷನ್‌, ನಾನ್‌ ಫಿಕ್ಷನ್‌, ಆಡಿಯೋ ಪುಸ್ತಕಗಳು, ಪಠ್ಯಪುಸ್ತಕಗಳನ್ನು ಉಚಿತವಾಗಿಯೇ ನಿಮ್ಮ ಕಿಂಡಲ್‌, ನೋಟ್‌ ಅಥವಾ ಟ್ಯಾಬ್ಲೆಟ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

  gutenberg.org, wikibooks.org ಮತ್ತು archive.orgಯಂತಹ ಉಚಿತ ಡಿಜಿಟಲ್‌ ಪುಸ್ತಕಗಳನ್ನು ನೀಡುವ 700 ಕ್ಕೂ ಹೆಚ್ಚು ವೆಬ್‌ಸೈಟ್‌ಗಳಿಂದ ಈ ಸರ್ಚ್‌ ಇಂಜಿನ್‌ ಹುಡುಕುತ್ತದೆ. ನೀವು ಇಲ್ಲಿ ಪುಸ್ತಕದ ಹೆಸರು, ಲೇಖಕ ಅಥವಾ ಪುಸ್ತಕದ ತಿರುಳನ್ನು ಟೈಪ್‌ ಮಾಡಿದರೆ ಸಾಕು ನಿಮಗೆ ಬೇಕಾದ ಪುಸ್ತಕ ಲಭ್ಯವಾಗುವುದರಲ್ಲಿ ಅನುಮಾನವಿಲ್ಲ.

  ಅದಲ್ಲದೇ, ಬೆಸ್ಟ್‌ ಫ್ರೀ ಇಬುಕ್ಸ್‌ ಎಂಬ ಆಯ್ಕೆಯನ್ನು ಕ್ಲಿಕ್ ಅಥವಾ ಬ್ರೌಸ್‌ ಮಾಡಿದರೆ ನಿಮಗೆ ಅಪರಾಧ - ರಹಸ್ಯ, ಪ್ರೀತಿ - ಪ್ರಣಯ, ಹಾರರ್‌, ವೈಜ್ಞಾನಿಕ, ಸಾಹಸ, ಮಕ್ಕಳ ಪುಸ್ತಕಗಳು, ಐತಿಹಾಸಿಕ ಕಾದಂಬರಿ, ಕಾಲ್ಪನಿಕ, ಕವಿತೆ, ತತ್ವಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮತ್ತೀತರ ಪುಸ್ತಕಗಳು ನಿಮಗೆ www.justfreebooks.info ನಲ್ಲಿ ಸಿಗಲಿವೆ.


 • www.listennotes.com

  ಲಿಸನ್‌ನೋಟ್ಸ್‌ ಪೋಡ್‌ಕಾಸ್ಟ್‌ಗಳ ಸರ್ಚ್‌ ಇಂಜಿನ್‌ ಆಗಿದ್ದು, ಈ ಸರ್ಚ್‌ ಇಂಜಿನ್‌ ಡಾಟಾಬೇಸ್‌ ಬರೋಬ್ಬರಿ 3,00,000 ಪೋಡ್‌ಕಾಸ್ಟ್‌ ಚಾನಲ್‌ಗಳ ಲಿಂಕ್‌ಗಳನ್ನು ಹಾಗೂ 1,80,00,000 (1.8 ಕೋಟಿ) ಸಂಚಿಕೆಗಳನ್ನು ಹೊಂದಿರುವುದು ವಿಶೇಷ. ಇಲ್ಲಿ ನೀವು ಕೀವರ್ಡ್‌ಗಳ ಹುಡುಕಾಟಕ್ಕಿಂತಲೂ ಟ್ರೆಂಡಿಂಗ್‌ ಸರ್ಚ್‌ ವರ್ಡ್‌ಗಳಿಂದ ಹುಡುಕಬಹುದು ಅಥವಾ ವೆಬ್‌ಸೈಟ್‌ ಆಯ್ಕೆ ಮಾಡಿಕೊಂಡು ಸಂಚಿಕೆಗಳನ್ನು ನೋಡಬಹುದು.
  ಅದಲ್ಲದೇ ಕ್ರೀಡೆ, ವಾಣಿಜ್ಯ, ಶಿಕ್ಷಣ ಮತ್ತು ಹಾಸ್ಯ ಎಂದು ವರ್ಗಿಕರಿಸಿ ನೀವು ಉತ್ತಮವಾದ ಪೋಡ್‌ಕಾಸ್ಟ್‌ಗಳನ್ನು ನೋಡಬಹುದಾಗಿದ್ದು, ಅದಲ್ಲದೇ ನೀವು ಪ್ರತ್ಯೇಕವಾದ ವಿಡಿಯೋ ಡೌನ್‌ಲೋಡ್‌ ಮಾಡಲು, ಚಾನಲ್‌ಗಳನ್ನು ಸಬ್‌ಸ್ಕ್ರೈಬ್‌ ಮಾಡಲು www.listennotes.com ಅವಕಾಶವನ್ನು ಕಲ್ಪಿಸಿದೆ.


 • search.creativecommons.org

  ಕ್ರಿಯೇಟಿವ್‌ ಕಾಮನ್ಸ್‌ ವೆಬ್‌ಸೈಟ್‌ ನಿಮಗೆ Europenaದಂತಹ ಸ್ವತಂತ್ರ ವೆಬ್‌ಸೈಟ್‌ಗಳ ಮೂಲಕ ಸರ್ಚ್‌ ಮಾಡಲು ಸಾಮಾನ್ಯ ಇಂಟರ್‌ಫೆಸ್‌ ಒದಗಿಸುತ್ತದೆ. ಇದು ಪುಸ್ತಕಗಳು, ಸಂಗೀತ, ಕಲಾಕೃತಿಗಳು ಮತ್ತು ಛಾಯಾಚಿತ್ರಗಳು ಸೇರಿದಂತೆ 50 ಮಿಲಿಯನ್‌ಗೂ ಹೆಚ್ಚು ಡಿಜಿಟೈಸ್ ಮಾಡಿದ ಮಾಹಿತಿ ಸಂಗ್ರಹ ತಾಣವಾಗಿದೆ. ಒಪನ್‌ ಕ್ಲಿಪ್‌ ಆರ್ಟ್‌ ಲೈಬ್ರರಿಗೆ ಫ್ಲಿಕರ್, ಫೋಟೋಗಳಿಗಾಗಿ ವಿಕಿ ಮೀಡಿಯಾ ಕಾಮನ್ಸ್ ಮತ್ತು ಪಿಕ್ಸಾಬೆ, ಸಂಗೀತಕ್ಕಾಗಿ ಜಾಮೆಂಡೊ, ccMixter ಮತ್ತು ಸೌಂಡ್‌ಕ್ಲೌಡ್‌ ವೆಬ್‌ಸೈಟ್‌ಗಳನ್ನು search.creativecommons.org ನೋಡಬಹುದು.


 • www.everystockphoto.com

  www.everystockphoto.com ವೆಬ್‌ಸೈಟ್‌ ನಿಮ್ಮ ಪ್ರೊಜೆಕ್ಟ್‌ ಅಥವಾ ಪ್ರೆಸೆಂಟೇಷನ್‌ಗಳಲ್ಲಿ ಉಪಯೋಗಿಸಲು ನಿಮಗೆ ಉಚಿತ ಫೋಟೋಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಇದು Flickr, freerangestock, imageafter, morgueFile, NASA, Photl, RGBStock, stock.xchng, Wikimedia Commons ಮತ್ತು Wikipedia ದಲ್ಲಿ ಫೋಟೋಗಳನ್ನು ಪಟ್ಟಿ ಮಾಡುತ್ತದೆ ಮತ್ತು ಲೈಸನ್ಸ್‌ ಮಾಹಿತಿಯನ್ನು ಸಹ ನೀಡುತ್ತದೆ.


 • www.fontsquirrel.com

  ನೀವು ಡಿಸೈನರ್‌ ಆಗಿದ್ದರೆ, ನಿಮ್ಮ ಬ್ರೌಸರ್‌ನಲ್ಲಿ www.fontsquirrel.com ಬುಕ್‌ಮಾರ್ಕ್‌ ಆಗಬೇಕಿರುವುದು ಖಂಡಿತ. ನಿಮಗೆ ಇಂಟರ್‌ನೆಟ್‌ನಲ್ಲಿ ದೊರೆಯುವ ಉತ್ತಮ ಫಾಂಟ್‌ಗಳನ್ನು ನಿಮಗೆ ಹುಡುಕಿ ನೀಡುತ್ತದೆ. ಇಲ್ಲಿರುವ ಹೆಚ್ಚಿನ ಫಾಂಟ್‌ಗಳನ್ನು ವ್ಯವಹಾರಿಕ ಉದ್ದೇಶಕ್ಕಾಗಿ ಉಚಿತವಾಗಿ ಬಳಸಬಹುದಾಗಿದೆ. ಇದರ ಜತೆ ನೀವು fontsearchengine.com ವೆಬ್‌ಸೈಟ್‌ನ್ನು ಬಳಸಬಹುದು.


 • genius.com

  ನಿಮಗೆ ಯಾವುದೇ ಹಾಡಿನ ಲಿರೀಕ್ಸ್‌ ಮರೆತಿದ್ದರೆ ಅಥವಾ ಹಾಡಿನ ಅರ್ಥ ತಿಳಿದುಕೊಳ್ಳಬೇಕೆಂದರೆ genius.com ಕ್ರೌಡ್‌ಸೋರ್ಸಡ್‌ ಜಾಲತಾಣಕ್ಕೆ ಭೇಟಿ ನೀಡಬಹುದು. ಈ ವೆಬ್‌ಸೈಟ್‌ನ ಡಾಟಾಬೇಸ್‌ನಲ್ಲಿ 1.7 ಮಿಲಿಯನ್ ಹಾಡುಗಳು, ವಿಡಿಯೋಗಳೊಂದಿಗೆ ಇವೆ ಮತ್ತು ಲಿರಿಕಲ್‌ ಹಾಡುಗಳು ಸಹ ದೊರೆಯುತ್ತವೆ. ಇದರಲ್ಲಿ ಕೇವಲ ಪಾಶ್ವಿಮಾತ್ಯ ಹಾಡುಗಳಲ್ಲದೆ ಮಹಮದ್ ರಫಿ, ಲತಾ ಮಂಗೇಶ್ಕರ್‌, ಕಿಶೋರ್ ಕುಮಾರ್ ಮತ್ತು ಎ.ಆರ್‌.ರೆಹಮಾನ್‌ರಂತಹ ಭಾರತೀಯ ಕಲಾವಿದರ ಹಾಡುಗಳು ದೊರೆಯುತ್ತವೆ.


 • www.allrecipes.com

  ನಿಮಗೆ ತರಹೇವಾರಿ ಅಡುಗೆ ಮಾಡಿ ಮನೆಯವರಿಗೆ, ಸ್ನೇಹಿತರಿಗೆ ಉಣಬಡಿಸಿ ಅನ್ನಪೂರ್ಣೇಶ್ವರಿ ಎನಿಸಿಕೊಳ್ಳಬೇಕೆಂದರೆ www.allrecipes.com ಒಂದು ಉತ್ತಮ ತಾಣವಾಗಿದೆ. ಇಲ್ಲಿ ವಿಶ್ವದಾದ್ಯಂತ ಇರುವ ರೆಸೀಪಿಗಳ ಟ್ಯುಟೋರಿಯಲ್‌ ಲಭ್ಯವಿದ್ದು, ನೀವು ಕಲಿತು ಅಡುಗೆ ಮಾಡಬಹುದಾಗಿದೆ. ಭಾರತದ ಅನೇಕ ಖಾದ್ಯಗಳು ಸಹ ದೊರೆಯುತ್ತವೆ. ಒಂದ್ಸಲ ಟ್ರೈ ಮಾಡಿ ನೋಡಿ.
ಆನ್‌ಲೈನ್‌ ಜಗತ್ತಿನಲ್ಲಿ ನೆಟ್ಟಿಗರಿಗೆ ಎಲ್ಲವೂ ಗೂಗಲ್‌ ಆಗಿರುವುದು ಗೊತ್ತೇ ಇದೆ. ಏನೇ ಬೇಕೆಂದರೂ ಗೂಗಲ್‌ನಲ್ಲಿ ಹುಡುಕುವುದು ನಮ್ಮೆಲ್ಲರ ಜಾಯಮಾನವಾಗಿದೆ. ವರ್ಲ್ಡ್‌ ವೈಡ್‌ ವೆಬ್‌ನಲ್ಲಿ ಗೂಗಲ್‌ ಒಂದೇ ಹುಡುಕಾಟದ ತಾಣವೆಂಬಂತೆ ಆಗಿದೆ. ಆದರೆ, ಗೂಗಲ್‌ನಲ್ಲಿ ಸಿಗದ ಅನೇಕ ಮಾಹಿತಿಗಳು ನಿಮಗೆ ಬೇರೆ ವೆಬ್‌ ತಾಣಗಳಲ್ಲಿ ಸಿಗುತ್ತವೆ.

ಹೌದು, ನೀವು ಹುಡುಕುವ ವಿಶಿಷ್ಟ ಮಾಹಿತಿಯು ಗೂಗಲ್‌ನಲ್ಲಿ ಸಿಗದಿದ್ದಾಗ ಅದರ ಬಗ್ಗೆ ಉಪಯುಕ್ತ ಮಾಹಿತಿಯನ್ನು ಕೆಲವು ವಿಶಿಷ್ಟ ಸರ್ಚ್‌ ಇಂಜಿನ್‌ಗಳು ನೀಡುತ್ತಿವೆ. ಇವು ನಿಜಕ್ಕೂ ಗೂಗಲ್‌ಗೆ ಪರ್ಯಾಯವಾಗಿರುವುದಂತೂ ಸುಳ್ಳಲ್ಲ. ಸಂಗೀತ, ಆನ್‌ಲೈನ್‌ ಕೋರ್ಸ್‌ಗಳಿಗೆ, ರೆಸಿಪಿ ಸೇರಿದಂತೆ ಅನೇಕ ವಿಷಯಗಳಿಗೆ ಪ್ರತ್ಯೇಕ ಸರ್ಚ್‌ ಇಂಜಿನ್‌ಗಳುಂಟು ಇಲ್ಲಿ ಗೂಗಲ್‌ಗಿಂತ ಚೆನ್ನಾಗಿ ಮಾಹಿತಿ ಸಿಗುವುದು ಖಂಡಿತ ಎಂದು ತಜ್ಞರು ಹೇಳುತ್ತಾರೆ. ಆಗಿದ್ರೇ, ಗೂಗಲ್‌ಗೆ ಕೆಲವೊಂದು ವಿಷಯಗಳಲ್ಲಿ ಪರ್ಯಾಯ ಯಾವುವು..? ಎಂಬುದನ್ನು ಮುಂದೆ ನೋಡಿ.

   
 
ಹೆಲ್ತ್