Back
Home » ಗಾಸಿಪ್
ಮತ್ತೆ ಡೈರೆಕ್ಷನ್ ಗೆ ಸಿದ್ಧವಾದ ಉಪ್ಪಿ, ಸಂಕ್ರಾಂತಿಗೆ ಕೊಡ್ತಾರೆ ಬಂಪರ್.!
Oneindia | 26th Oct, 2018 03:57 PM
 • ಡೈರೆಕ್ಷನ್ ಕಡೆ ಆಸಕ್ತಿ ತೋರಿದ ಉಪ್ಪಿ

  'ಉಪ್ಪಿ ರುಪ್ಪಿ', 'ಐ ಲವ್ ಯೂ' ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಉಪೇಂದ್ರ ಅವರು ಈಗ ಡೈರಕ್ಷನ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಇಂತಹದೊಂದು ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತೋ ಕಾದು ನೋಡಬೇಕಿದೆ.

  ಮತ್ತೆ ಹಳೆ ಸ್ಟೈಲ್ ನಲ್ಲಿ ಬಂದ ರಿಯಲ್ ಸ್ಟಾರ್


 • ಸಂಕ್ರಾಂತಿಗೆ ಬಂಪರ್.!

  ಈ ವಿಷ್ಯವನ್ನ ಖುದ್ದು ಉಪೇಂದ್ರ ಅವರೇ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಘೋಷಣೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಬಟ್, ಯಾವ ರೀತಿ ಸಿನಿಮಾ ಮಾಡಲಿದ್ದಾರೆ, ಯಾವಾಗ ಆರಂಭ, ಎಂಬ ಇನ್ನಿತರ ಪ್ರಶ್ನೆಗಳು ಈಗ ಕಾಡುತ್ತಿದೆ. ಇನ್ನು ಈ ವಿಷ್ಯದ ಬಗ್ಗೆ ಅಭಿಮಾನಿಗಳು ಕೂಡ ಥ್ರಿಲ್ ಆಗಿದ್ದಾರೆ. ಈ ಸುದ್ದಿ ನಿಜವಾಗಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.

  ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ಉಪೇಂದ್ರ


 • ಉಪ್ಪಿ-2 ನಂತರ...?

  2015ರಲ್ಲಿ ಬಿಡುಗಡೆಯಾಗಿದ್ದ ಉಪ್ಪಿ-2 ಸಿನಿಮಾ, ರಿಯಲ್ ಸ್ಟಾರ್ ನಿರ್ದೇಶನದ ಕೊನೆಯ ಸಿನಿಮಾ. ಈ ಚಿತ್ರ ಬಿಡುಗಡೆಯಾಗಿ ಮೂರು ವರ್ಷ ಕಳೆಯುತ್ತಾ ಬಂದಿದೆ. ಅದಕ್ಕೂ ಮುಂಚೆ 2010ರಲ್ಲಿ 'ಸೂಪರ್' ಸಿನಿಮಾ ಮಾಡಿದ್ದರು. ಅಲ್ಲಿಗೆ ಐದು ವರ್ಷ ಅಂತರದ ನಂತರ 'ಉಪ್ಪಿ-2' ಆಗಿತ್ತು. ಈಗ ಮೂರು ವರ್ಷ ಆಗಿದೆ. ಬಹುಶಃ ಸ್ಟಾರ್ಟ್ ಮಾಡ್ತಾರೆ ಅಥವಾ ಬರಿ ಅಂತೆ-ಕಂತೆನಾ.?

  ವಿವಾದಾತ್ಮಕ 'ಹಿಂದೂ' ಚಿತ್ರವನ್ನ ಉಪೇಂದ್ರ ಮಾಡಲೇ ಇಲ್ಲ ಯಾಕೆ.?


 • ಉಪ್ಪಿ ನಿರ್ದೇಶನದ ಚಿತ್ರಗಳು.?

  1991 ರಲ್ಲಿ 'ತರ್ಲೆ ನನ್ ಮಗ', 1993 ರಲ್ಲಿ 'ಶ್', 1995ರಲ್ಲಿ 'ಓಂ', 1995 ರಲ್ಲಿ 'ಆಪರೇಷನ್ ಅಂತ', 1998ರಲ್ಲಿ 'ಸ್ವಸ್ತಿಕ್', 1998ರಲ್ಲಿ 'ಎ', 1999ರಲ್ಲಿ 'ಉಪೇಂದ್ರ', 2010ರಲ್ಲಿ 'ಸೂಪರ್' ಹಾಗೂ 2015ರಲ್ಲಿ 'ಉಪ್ಪಿ 2', ಹೀಗೆ ಇಲ್ಲಿಯವರೆಗೂ ಸೂಪರ್ ಹಿಟ್ ಸಿನಿಮಾಗಳನ್ನೇ ನಿರ್ದೇಶನ ಮಾಡಿದ್ದಾರೆ. ಹೀಗಾಗಿ, ಉಪ್ಪಿ ಡೈರೆಕ್ಷನ್ ಅಂದ್ರೆ ಎಲ್ಲಾ ಅಭಿಮಾನಿಗಳು ಕಾದು ಕುಂತಿರುತ್ತಾರೆ.

  'ಓಂ' ಚಿತ್ರದ ಓಂಕಾರ ಹಾಡಿನ ಹಿಂದಿದೆ ಈ ಕುತೂಹಲಕಾರಿ ಕಥೆ
ರಿಯಲ್ ಸ್ಟಾರ್ ಉಪೇಂದ್ರ ಸದ್ಯ ಪ್ರಜಾಕೀಯದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ತಯಾರಿ ಮಾಡ್ತಿದ್ದಾರೆ. ಈ ಮಧ್ಯೆ ಸಿನಿಮಾಗಳನ್ನ ಕೂಡ ಮ್ಯಾನೇಜ್ ಮಾಡ್ತಿದ್ದಾರೆ.

ಇದೆಲ್ಲಾ ಏನೇ ಬೆಳವಣಿಗೆ ಆದ್ರೂ, ಉಪ್ಪಿ ಫ್ಯಾನ್ಸ್ ಗೆ ರಿಯಲ್ ಥ್ರಿಲ್ಲ್, ಖುಷಿ ಕೋಡೋದು ಮಾತ್ರ ಉಪ್ಪಿ ನಿರ್ದೇಶನ ಮಾಡಿದಾಗ. ಉಪ್ಪಿ-2 ಚಿತ್ರದ ನಂತರ ಮತ್ತೆ ಯಾವ ಚಿತ್ರವನ್ನ ಉಪೇಂದ್ರ ಡೈರೆಕ್ಷನ್ ಮಾಡಿಲ್ಲ. ನಿರ್ದೇಶನ ಮಾಡಬೇಕು ಎಂದುಕೊಳ್ಳುವಷ್ಟರಲ್ಲಿ ಪ್ರಜಾಕೀಯಕ್ಕೆ ಚಾಲನೆ ನೀಡಿದ್ದರು. ಅಲ್ಲಿಗೆ ಉಪ್ಪಿ ಡೈರೆಕ್ಷನ್ ಆಸೆಯನ್ನ ಅಭಿಮಾನಿಗಳು ಬಿಟ್ಟುಬಿಟ್ಟಿದ್ದರು.

ಡಾ ರಾಜ್ ಗಾಗಿ ಉಪೇಂದ್ರ ಬರೆದಿದ್ದ ಹಾಡು ನಿಂತು ಹೋದ ಕಥೆ

ಆದ್ರೀಗ, ಥ್ರಿಲ್ಲಿಂಗ್ ವಿಷ್ಯವೊಂದು ಹೊರಬಿದ್ದಿದೆ. ರಿಯಲ್ ಸ್ಟಾರ್ ಮತ್ತೆ ಡೈರೆಕ್ಟರ್ ಕ್ಯಾಪ್ ಹಾಕ್ತಿದ್ದಾರಂತೆ. ಹೀಗೊಂದು ಸುದ್ದಿ ಈಗ ಸಾಮಾಜಿಕ ಜಾಲತಾಣ ಮತ್ತು ಅವರ ಆಪ್ತ ಅಭಿಮಾನಿ ಬಳಗದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಷ್ಟಕ್ಕೂ, ಉಪ್ಪಿಯ ಡೈರೆಕ್ಷನ್ ಸಿನಿಮಾ ಯಾವುದು.? ಯಾವಾಗ ಆರಂಭ.? ಮುಂದೆ ಓದಿ......

   
 
ಹೆಲ್ತ್