Back
Home » ಆರೋಗ್ಯ
ಮೆಂತೆ ಕಾಳುಗಳನ್ನು ಹಾಕಿ ಕುದಿಸಿದ ನೀರು ಕುಡಿದರೆ,ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
Boldsky | 30th Oct, 2018 12:11 PM
 • ಮೆಂತೆಯ ಇತಿಹಾಸ

  ಕ್ರಿ.ಪೂ. ಒಂದನೇ ಶತಮಾನದಲ್ಲಿ ರೋಮನ್ನರು ವೈನ್ ತಯಾರಿಸುವ ವೇಳೆ ಮೆಂತೆಕಾಳನ್ನು ಬಳಸುತ್ತಲಿದ್ದರು. ಆದರೆ ಭಾರತದಲ್ಲಿ ತುಂಬಾ ಇತಿಹಾಸಕ್ಕೂ ಮೊದಲೇ ಇದನ್ನು ಬಳಸಲಾಗುತ್ತಿತ್ತು. ಇದರ ಎಲೆಗಳು ಮತ್ತು ಕಾಳುಗಳು ಭಾರತದ ವಿವಿಧ ಭಾಗಗಳಲ್ಲಿ ಖಾದ್ಯಗಳಲ್ಲಿ ಬಳಸಲಾಗುತ್ತಿತ್ತು. ಪಶ್ವಿಮ ಬಂಗಾಳದಲ್ಲಿ ಮೆಂತೆಕಾಳುಗಳನ್ನು ಪಾಂಚ್ ಪೊರೊನ್ ಎಂದು ಬಳಸಲಾಗುತ್ತಿತ್ತು. ಭಕ್ಷ್ಯಗಳಿಗೆ ಒಗ್ಗರಣೆ ನೀಡುವ ಐದು ಸಾಂಬಾರ ಪದಾರ್ಥಗಳಲ್ಲಿ ಇದು ಕೂಡ ಒಂದಾಗಿತ್ತು. ಇದು ತುಂಬಾ ಸುವಾಸನೆ ನೀಡುತ್ತಲಿತ್ತು. ದಾಲ್ ಹಾಗೂ ಚಟ್ನಿಗೆ ಒಗ್ಗರಣೆ ನೀಡಲು ಇದನ್ನು ಬಳಸಿದಾಗ ಹೆಚ್ಚಿನ ರುಚಿ ಹಾಗೂ ಸುವಾಸನೆಯು ಸಿಗುತ್ತಲಿತ್ತು. ದಕ್ಷಿಣ ಭಾರತದಲ್ಲಿ ಮೆಂತ್ಯೆಯನ್ನು ಇಡಿಯಾಗಿ ಅಥವಾ ಹುಡಿ ಮಾಡಿ ಬಳಸಲಾಗುತ್ತದೆ. ಹೆಚ್ಚಾಗಿ ಇದನ್ನು ಉಪ್ಪಿನಕಾಯಿಯಲ್ಲಿ ಬಳಸಲಾಗುತ್ತದೆ.


 • ಆಧುನಿಕ ಅದ್ಭುತದ ಕಾಳು

  ಮೆಂತೆಕಾಳು ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಲಭ್ಯವಿರುವುದು ಮತ್ತು ಇದು ಸಾಂಪ್ರದಾಯಿಕ ಔಷಧಿಯು ಹೌದು. ಆದರೆ ಇತ್ತೀಚಿನ ಸಮಯದಲ್ಲಿ ಮೆಂತೆಕಾಳಿನಿಂದ ಸಿಗುವಂತಹ ಆರೋಗ್ಯ ಲಾಭಗಳಿಂದಾಗಿ ಇದನ್ನು ಇನ್ನಷ್ಟು ಜನರು ತಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ.


 • ಮೆಂತೆ ಕಾಳನ್ನು ಹೇಗೆ ಸೇವಿಸಬೇಕು?

  ಮೆಂತೆ ಕಾಳನ್ನು ತುಂಬಾ ಪರಿಣಾಮಕಾರಿಯಾಗಿ ಸೇವನೆ ಮಾಡುವ ವಿಧಾನವೆಂದರೆ ಇದನ್ನು ನೀರಿನಲ್ಲಿ ಕುದಿಸಬೇಕು. ಇದು ಕಾಳುಗಳನ್ನು ಮೆತ್ತಗಾಗಿಸುವುದು ಮತ್ತು ಪೋಷಕಾಂಶಗಳನ್ನು ಬಿಡುಗಡೆ ಮಾಡುವುದು. ಇದರಿಂದಾಗಿ ಅತಿಯಾಗಿರುವ ಕಹಿ ಕಡಿಮೆಯಾಗಿ ತಿನ್ನಲು ಸುಲಭವಾಗುವುದು. ನಿಮಗೆ ಆರಂಭದಲ್ಲಿ ಇದು ಕಷ್ಟವಾಗಬಹುದು. ಆದರೆ ಇದರ ಬಳಿಕ ಇದು ಅಭ್ಯಾಸವಾಗಿ ಹೋಗಬಹುದು.

  Most Read: ಕೂದಲು ಉದುರುವ ಸಮಸ್ಯೆಗೆ 'ಮೆಂತೆ ಹೇರ್ ಪ್ಯಾಕ್'


 • ನೀರಿನಲ್ಲಿ ನೆನೆಸಿಡಿ

  ಮೆಂತೆಯಲ್ಲಿ ಹೀರಿಕೊಳ್ಳುವ ಖನಿಜಾಂಶಗಳು ಮತ್ತು ನಾರಿನಾಂಶವು ಇರುವ ಕಾರಣದಿಂದಾಗಿ ಇದನ್ನು ನೀರಿನಲ್ಲಿ ನೆನೆಸಿಡಲು ತಿಳಿಸಲಾಗುತ್ತದೆ.


 • ಮೆಂತೆನೀರನ್ನು ತಯಾರಿಸಲು ಎರಡು ವಿಧಾನಗಳಿವೆ

  ಎರಡು ಲೋಟ ನೀರಿನಲ್ಲಿ ಎರಡು ಚಮಚ ಮೆಂತೆಕಾಳುಗಳನ್ನು ರಾತ್ರಿ ವೇಳೆ ನೆನೆಸಿಡಿ.

  ಫ್ಲಾಸ್ಕ್ ಗೆ ಎರಡು ಚಮಚ ಮೆಂತೆಕಾಳುಗಳನ್ನು ಹಾಕಿ. ಇದಕ್ಕೆ ಎರಡು ಲೋಟ ಕುದಿಸಿದ ಬಿಸಿ ನೀರು ಹಾಕಿ. ಬಾಯಿ ಮುಚ್ಚಿ ಮತ್ತು ರಾತ್ರಿಯಿಡಿ ಹಾಗೆ ನೆನೆಯಲಿ. ಈ ನೀರನ್ನು ನೀವು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಮೆಂತೆಕಾಳುಗಳನ್ನು ಜಗಿದು ತಿನ್ನಿ. ಎರಡನೇ ವಿಧಾನವು ತುಂಬಾ ಸರಳ ಹಾಗೂ ಆರೋಗ್ಯಕಾರಿ. ಮೆಂತೆಕಾಳುಗಳು ಕಹಿಯಾಗಿದ್ದರೂ ಇದು ಬಳಿಕ ನಿಮಗೆ ಅಭ್ಯಾಸವಾಗುವುದು. ಕಾಫಿ ಮತ್ತು ಚಾ ಕೂಡ ಸಕ್ಕರೆ ಹಾಕದೆ ಇದ್ದರೆ ಕಹಿಯಾಗಿರುವುದು. ಆದರೂ ನಾವು ಇದನ್ನು ಕುಡಿಯುವುದಿಲ್ಲವೇ? ಮೆಂತೆನೀರನ್ನು ಕುಡಿಯುವ ಆರೋಗ್ಯ ಲಾಭಗಳು


 • ಮಧುಮೇಹಿಗಳಿಗೆ ತುಂಬಾ ಒಳ್ಳೆಯದು

  ಮೆಂತ್ಯೆಕಾಳು ಸಕ್ಕರೆ ಹೀರುವಿಕೆಯನ್ನು ನಿಧಾನಗೊಳಿಸುವುದು ಹಾಗೂ ಇನ್ಸುಲಿನ್ ನ್ನು ಉತ್ತೇಜಿಸುವುದು. ಮೆಂತೆಕಾಳಿನ ಬಿಸಿ ನೀರನ್ನು ಮಧುಮೇಹಿಗಳು ಸೇವನೆ ಮಾಡಿದರೆ ಇದರಿಂದ ಹೆಚ್ಚಿನ ಲಾಭ ಪಡೆದುಕೊಳ್ಳಬಹುದು. ಮೆಂತ್ಯೆಯನ್ನು ಹುಡಿ ಮಾಡಿಕೊಂಡು ಇಡ್ಲಿ, ದೋಸೆ ಅಥವಾ ಬೇರೆ ಭಕ್ಷ್ಯಗಳಿಗೆ ಹಾಕಬಹುದು.

  Most Read: ನಿಮ್ಮ ನಿದ್ದೆಯನ್ನು ಹಾಳು ಮಾಡುವ ಆಹಾರಗಳಿವು!- ಆದಷ್ಟು ರಾತ್ರಿ ಹೊತ್ತು ಇವುಗಳನ್ನೆಲ್ಲಾ ತಿನ್ನಬೇಡಿ


 • ಜೀರ್ಣಕ್ರಿಯೆ ಹೆಚ್ಚಿಸುವುದು

  ಮೆಂತೆಕಾಳುಗಳಲ್ಲಿ ಗೋಂದಿನ ಅಂಶವಿದ್ದು, ಇದು ನೀರಿನಲ್ಲಿ ನೆನೆಸಿದ ಬಳಿಕ ಅಂಟಿನ ರೂಪ ಪಡೆಯುವುದು. ಇದು ಹೊಟ್ಟೆ ಹಾಗೂ ಕರುಳಿಗೆ ಪದರ ಮತ್ತು ಶಮನ ನೀಡುವುದು. ಆಮ್ಲೀಯ ಹಿಮ್ಮುಖ ಹರಿವು ಇರುವ ವ್ಯಕ್ತಿಗಳಿಗೆ ಮೆಂತೆಕಾಳು ಈ ಗುಣದಿಂದಾಗಿ ತುಂಬಾ ಪ್ರಯೋಜನಕಾರಿ. ನೀರಿನಲ್ಲಿ ಹೀರಿಕೊಳ್ಳುವ ನಾರಿನಾಂಶವು ಇರುವ ಮೆಂತೆ ಯು ಮಲಬದ್ಧತೆ ನಿವಾರಣೆ ಮಾಡುವುದು. ಯಾಕೆಂದರೆ ಇದರಲ್ಲಿ ಉರಿಯೂತ ಶಮನಕಾರಿ ಗುಣವಿದೆ. ಮೆಂತೆಕಾಳು ಮತ್ತು ನೀರು ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಅಲ್ಸರೇಟಿವ್ ಕೊಲೈಟಿಸ್ ನಿವಾರಣೆಯಾಗುವುದು.


 • ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು

  ಮೆಂತ್ಯೆಕಾಳಿನ ನೀರನ್ನು ಬಿಸಿಯಾಗಿ ಸೇವಿಸಿದರೆ ಆಗ ಅದು ದೇಹದಲ್ಲಿರುವ ವಿಷಕಾರಿ ಅಂಶವನ್ನು ಹೊರಹಾಕುವುದು. ಬೆಳಗ್ಗೆ ಎದ್ದ ಕೂಡಲೇ ಇದನ್ನು ಕುಡಿದರೆ ಅದು ವಿಷವನ್ನು ಹೊರಹಾಕುವುದು. ಕಿಡ್ನಿಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಿ, ಕಿಡ್ನಿ ಕಲ್ಲನ್ನು ನಿವಾರಿಸುವುದು.


 • ಸುಂದರ ಚರ್ಮಕ್ಕಾಗಿ

  ಸುಂದರ ಚರ್ಮವು ಪ್ರತಿಯೊಬ್ಬರಿಗೂ ಬೇಕು. ಇದಕ್ಕಾಗಿ ನೀವು ಸ್ವಲ್ಪ ಕಹಿಯಾಗಿರುವಂತಹ ಮೆಂತೆನೀರನ್ನು ಕುಡಿಯಿರಿ. ಇದು ಜೀರ್ಣಕ್ರಿಯೆಗೆ ಸಹಕರಿಸುವುದು ಮತ್ತು ವಿಷಕಾರಿ ಅಂಶವನ್ನು ಹೊರಹಾಕುವ ಮೂಲಕ ಕಾಂತಿಯುತ, ಆರೋಗ್ಯಕಾರಿ ಮತ್ತು ಕಲೆಯಿಲ್ಲದೆ ಇರುವ ಚರ್ಮವನ್ನು ನೀಡುವುದು. ಕೆಲವರು ತಮ್ಮ ಸೌಂದರ್ಯವರ್ಧಕದಲ್ಲಿ ಇದನ್ನು ಬಳಸುವರು.


 • ತೂಕ ಇಳಿಸಿಕೊಳ್ಳಿ

  ದೇಹದಲ್ಲಿ ನೀರು ನಿಲ್ಲುವಂತಹ ಸಮಸ್ಯೆಯನ್ನು ನಿವಾರಣೆ ಮಾಡಲು ಎರಡು ಲೋಟ ಮೆಂತ್ಯೆಕಾಳಿನ ಬಿಸಿ ನೀರನ್ನು ಕುಡಿಯಬೇಕು. ಇದರಿಂದ ಹೊಟ್ಟೆ ಉಬ್ಬರ ಉಂಟಾಗದು, ಬಯಕೆ ಕೂಡ ಕಡಿಮೆ ಮಾಡುವುದು. ಆಹಾರ ತಜ್ಞರ ಪ್ರಕಾರ ಈ ನೀರನ್ನು ದಿನದಲ್ಲಿ ಎರಡು ಸಲ ಸೇವಿಸಬೇಕು.


 • ಉರಿಯೂತ ಶಮನಕಾರಿ

  ಮೆಂತೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಸಂಧಿವಾತ, ದೀರ್ಘಕಾಲದ ಕೆಮ್ಮು, ಬಾಯಿಯ ಹುಣ್ಣು ಇತ್ಯಾದಿಗಳನ್ನು ನಿವಾರಿಸುವುದು.

  Most Read: ಮೊಟ್ಟೆ ತಿಂದ ಕೂಡಲೇ ಹಾಲು ಕುಡಿಯಬಹುದೇ? ಇದರಿಂದ ಆರೋಗ್ಯಕ್ಕೆ ಸಮಸ್ಯೆ ಇದೆಯೇ?


 • ಹೃದಯದ ಆರೋಗ್ಯ ಕಾಪಾಡುವುದು

  ಮೆಂತೆನೀರನ್ನು ಕುಡಿಯುವ ಜತೆಗೆ ನೀವು ಅದನ್ನು ಬಾಯಿಗೆ ಹಾಕಿಕೊಂಡು ಜಗಿದು ತಿನ್ನಬೇಕು. ಇದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಕಾಯಿಲೆಗಳು ದೂರವಿರುವಂತೆ ಮಾಡುವುದು.


 • ನಾರಿಯರ ಸಖಿ

  ಮೆಂತೆಕಾಳಿನಲ್ಲಿ ಇರುವಂತಹ ಡೈಸ್ಜೆಜಿನ್ ಎನ್ನುವ ಅಂಶವು ಋತುಚಕ್ರದ ಸೆಳೆತ ಕಡಿಮೆ ಮಾಡಲು ನೆರವಾಗುವುದು ಮತ್ತು ಬಾಣಂತಿ ಮಹಿಳೆಯರಲ್ಲಿ ಹೆಚ್ಚು ಹಾಲು ಉತ್ಪತ್ತಿಯಾಗುವಂತೆ ಮಾಡುವುದು.


 • ಪ್ರಕೃತಿ ತಾಯಿಯ ವಿಧಾನಗಳೇ ತುಂಬಾ ವಿಚಿತ್ರ

  ಮೆಂತೆಕಾಳಿನಲ್ಲಿ ಇರುವಂತಹ ಆರೋಗ್ಯ ಲಾಭಗಳ ಬಗ್ಗೆ ನಿಮಗೆ ಈಗ ತಿಳಿದಿದೆ ತಾನೇ? ಮೆಂತೆಕಾಳಿನ ನೀರನ್ನು ಕುಡಿದು ನೀವು ಆರೋಗ್ಯ ಕಾಪಾಡಿಕೊಳ್ಳಬಹುದು. ಸಾವಯವವಾಗಿ ಬೆಳೆಸಿರುವಂತಹ ಮೆಂತೆಕಾಳುಗಳನ್ನು ನೀವು ಖರೀದಿಸಿ ಬಳಸಿಕೊಂಡರೆ ತುಂಬಾ ಒಳ್ಳೆಯದು.
ಮೆಂತೆ ಕಾಳುಗಳನ್ನು ತಿಂದರೆ ಅದು ತುಂಬಾ ಕಹಿ ಎನ್ನುವ ಕಾರಣಕ್ಕಾಗಿ ಹೆಚ್ಚಿನವರು ಇದನ್ನು ಕಡೆಗಣಿಸುವರು. ಆದರೆ ಇದರಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ.

ಮೆಂತೆಕಾಳುಗಳನ್ನು ಹಿಂದಿನಿಂದಲೂ ನಮ್ಮ ಹಿರಿಯರು ಆಹಾರ ಪದಾರ್ಥಗಳಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಇದನ್ನು ಎಣ್ಣೆಯಲ್ಲಿ ಹುರಿದಾಗ ತುಂಬಾ ಸುವಾಸನೆ ನೀಡುವುದು. ಆದರೆ ಕಹಿಯಾಗಿರುವಂತಹ ಮೆಂತ್ಯೆಯು ತನ್ನಲ್ಲಿ ನೂರಾರು ಆರೋಗ್ಯ ಲಾಭಗಳನ್ನು ಅಡಗಿಸಿಕೊಂಡಿದೆ.

   
 
ಹೆಲ್ತ್